BSNL, ಏರ್‌ಟೆಲ್‌, ವಿ, ಜಿಯೋ 447ರೂ. ಪ್ಲ್ಯಾನ್: ಪ್ರಯೋಜನಗಳೆನು?.ಯಾವುದು ಬೆಸ್ಟ್?

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ರಿಲಾಯನ್ಸ್‌ ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅವುಗಳಲ್ಲಿ ಪ್ರೀಪೇಯ್ಡ್‌ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸೇರಿವೆ. ಆದರೆ ಕಡಿಮೆ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ 447ರೂ. ಬೆಲೆಯ ಪ್ಲ್ಯಾನ್‌ ಬಹುತೇಕ ಬಳಕೆದಾರರನ್ನು ಆಕರ್ಷಿಸಿದೆ.

ಯೋಜನೆ

ಹೌದು, ಬಿಎಸ್‌ಎನ್‌ಎಲ್‌, ಜಿಯೋ ಮತ್ತು ವಿ ಟೆಲಿಕಾಂ ಸಂಸ್ಥೆಗಳು 447ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ಆಯ್ಕೆ ಹೊಂದಿವೆ. ಅದೇ ರೀತಿ ಈ ಮೂರು ಟೆಲಿಕಾಂಗಳ 447ರೂ. ಯೋಜನೆಗೆ ಹೋಲಿಕೆಯಾಗಿ ಏರ್‌ಟೆಲ್‌ ಟೆಲಿಕಾಂ 456ರೂ. ಪ್ಲ್ಯಾನ್‌ ಹೊಂದಿದೆ. ಈ ಪ್ಲ್ಯಾನ್‌ಗಳು ಅಧಿಕ ಡೈಲಿ ಡೇಟಾ, ಬಿಗ್ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿ ಸೌಲಭ್ಯಗಳು ಸಿಗಲಿವೆ. ಆದರೂ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಬಿಎಸ್‌ಎನ್‌ಎಲ್‌, ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್ 447ರೂ. ಪ್ಲ್ಯಾನಿನಲ್ಲಿ ಯಾವುದು ಯೋಗ್ಯ? ಒಟ್ಟಾರೇ ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್ 447ರೂ. ಪ್ರೀಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್ 447ರೂ. ಪ್ರೀಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್ ಟೆಲಿಕಾಂ 447ರೂ ಯೋಜನೆಯನ್ನು 60 ದಿನಗಳ ಮಾನ್ಯತೆಯೊಂದಿಗೆ ಪಟ್ಟಿ ಮಾಡಿದೆ ಮತ್ತು ಈ ಯೋಜನೆಯೊಂದಿಗೆ ಸಂಗ್ರಹಿಸಲಾದ ಡೇಟಾ 100 ಜಿಬಿ ಆಗಿದೆ. ಇದು ಎಸ್‌ಟಿವಿ ಆಗಿದ್ದು ಅದು ಮೇಲಿನ ಯೋಜನೆಗಳಂತೆಯೇ ಇರುತ್ತದೆ. ಈ ಯೋಜನೆಗಳೊಂದಿಗೆ ದೈನಂದಿನ ಡೇಟಾ ಮಿತಿ ಇಲ್ಲ ಎಂದು ಅರ್ಥ. ಚಂದಾದಾರರು ದಿನಕ್ಕೆ 100 ಎಸ್‌ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳ ಜೊತೆಗೆ ಇರೋಸ್ ನೌ ಮನರಂಜನಾ ಸೇವೆಗಳನ್ನು ಸಹ ಪಡೆಯುತ್ತಾರೆ.

ಜಿಯೋ 447ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 447ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂನ 447ರೂ ಯೋಜನೆಯಲ್ಲಿ ಒಟ್ಟು 60 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದೆ. ಈ ಅವಧಿಗೆ ಒಟ್ಟು 100 ಜಿಬಿ ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಅನಿಯಲಿತ ವಾಯಿಸ್ ಕರೆ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್‌ಗಳ ಪ್ರಯೋಜನ ಸಿಗಲಿದೆ.

ವೊಡಾಫೋನ್‌-ಐಡಿಯಾ 447 ರೂ. ಪ್ರಿಪೇಯ್ಡ್‌ ಪ್ಲ್ಯಾನ್‌

ವೊಡಾಫೋನ್‌-ಐಡಿಯಾ 447 ರೂ. ಪ್ರಿಪೇಯ್ಡ್‌ ಪ್ಲ್ಯಾನ್‌

ವೊಡಾಫೋನ್‌ ಐಡಿಯಾದ ಹೊಸ 447 ರೂ,ಗಳ ಪ್ರಿಪೇಯ್ಡ್‌ ಪ್ಲ್ಯಾನ್‌ 50GB ಬೃಹತ್ ಡೇಟಾವನ್ನು ಯಾವುದೇ ಡೈಲಿ ಲಿಮಿಟ್‌ ಇಲ್ಲದೆ ನೀಡುತ್ತದೆ. ಈ ಪ್ಲ್ಯಾನ್‌ ಎಲ್ಲಾ ನೆಟ್‌ವರ್ಕ್‌ಗಳಿಗೆ ಟ್ರೂಲಿ ಅನ್‌ಲಿಮಿಟೆಡ್‌ ಕರೆಗಳನ್ನು ಮತ್ತು ದಿನಕ್ಕೆ 100 SMS ಸಂದೇಶಗಳ ಪ್ರಯೋಜನ ಹೊಂದಿದೆ. ಇನ್ನು ಈ ಪ್ಲ್ಯಾನ್‌ 60 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಚಲನಚಿತ್ರಗಳು, ಮೂಲ ವಿಷಯ, ಲೈವ್ ಟಿವಿ ಮತ್ತು ಸುದ್ದಿ ವಿಷಯವನ್ನು ಹೊಂದಿರುವ ವಿ ಚಲನಚಿತ್ರಗಳು ಮತ್ತು ಟಿವಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

ಏರ್‌ಟೆಲ್ 456ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್ 456ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್ 456ರೂ. ಪ್ರೀಪೇಯ್ಡ್‌ ಯೋಜನೆ ಒಟ್ಟು 50GB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.

Best Mobiles in India

English summary
BSNL Rs 447 Prepaid Plan Offers 100GB Data: What Airtel, Jio and Vi offer at Same Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X