ಜಿಯೋ ಮತ್ತು ಸರ್ಕಾರದ ವಿರುದ್ಧ ತಿರುಗಿಬಿದ್ದ BSNL!..ಸೇವೆ ಸ್ಥಗಿತದ ಭೀತಿ!!

|

ಕೇಂದ್ರ ಸರಕಾರ ಖಾಸಗಿ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋಗೆ ನೆರವಾಗುತ್ತಿದ್ದು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಅನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿ ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜಿಯೋದಿಂದಾಗಿ ಇಡೀ ಟೆಲಿಕಾಂ ಉದ್ಯಮ ಸಂಕಷ್ಟದಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಜಿಯೋಗೆ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ. ಜಿಯೋದಿಂದ ಇಡೀ ಟೆಲಿಕಾಂ ಉದ್ಯಮ ಸಂಕಷ್ಟದಲ್ಲಿದೆ. ಪ್ರತಿಸ್ಪರ್ಧಿಗಳನ್ನು ನಿರ್ಮೂಲನೆ ಮಾಡಲು ಜಿಯೋ ಯೋಜನೆ ರೂಪಿಸಿದೆ. ಜೊತೆಗೆ ಜಿಯೋಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ಗೆ ಸರಕಾರ 4ಜಿ ತರಂಗಾಂತರಗಳನ್ನೂ ನೀಡಲಿಲ್ಲ ಎಂದು BSNL ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಜಿಯೋ ಮತ್ತು ಸರ್ಕಾರದ ವಿರುದ್ಧ ತಿರುಗಿಬಿದ್ದ BSNL!..ಸೇವೆ ಸ್ಥಗಿತದ ಭೀತಿ!!

ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್‌ ಬಲಪಡಿಸುವ ಬದಲಾಗಿ ಸರ್ಕಾರವೇ ಸರ್ಕಾರಿ ಸಂಸ್ಥೆಯನ್ನು ದುರ್ಬಲಗೊಳಿಸುತ್ತಿರುವುದು ಖಂಡನೀಯ.ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಸವಲತ್ತುಗಳನ್ನು ನೀಡುವ ಬದಲು ಬಿಎಸ್‌ಎನ್‌ಎಲ್‌ ಬಲಪಡಿಸಿ ಎಂದು ನೌಕರರು ಆಗ್ರಹಿಸಿ ಡಿ.3ರಿಂದ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

4ಜಿ ತರಂಗಾಂತರಗಳನ್ನು ಬಿಎಸ್‌ಎನ್‌ಎಲ್‌ಗೆ ಒದಗಿಸಬೇಕು ಎಂಬ ಬೇಡಿಕೆಗೆ ಸರಕಾರ ಕಿವಿಗೊಟ್ಟಿಲ್ಲ. ಹೀಗಾಗಿ ಸ್ಪರ್ಧೆಯಲ್ಲಿ ಬಿಎಸ್‌ಎನ್‌ಎಲ್‌ ಹಿಂದುಳಿಯಬೇಕಾಯಿತು. ಇದಲ್ಲದೆ, ಜಿಯೋಯಿಂದಾಗಿ ಈಗಾಗಲೇ ಏರ್‌ಸೆಲ್‌, ಟಾಟಾ ಟೆಲಿ ಸರ್ವೀಸಸ್‌, ರಿಲಯನ್ಸ್‌ ಕಮ್ಯುನಿಕೇಶನ್‌ಗಳು ಮುಚ್ಚಿವೆ ಎಂದು ನೌಕರರ ಸಂಘ ಎಯುಎಬಿ ಮಾಧ್ಯಮಗಳಿಗೆ ತಿಳಿಸಿದೆ.

ಜಿಯೋ ಮತ್ತು ಸರ್ಕಾರದ ವಿರುದ್ಧ ತಿರುಗಿಬಿದ್ದ BSNL!..ಸೇವೆ ಸ್ಥಗಿತದ ಭೀತಿ!!

ಇನ್ನು ಬಹುತೇಕ ಬಿಎಸ್‌ಎನ್‌ಎಲ್‌ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಬಿಎಸ್‌ಎನ್‌ಎಲ್‌ ಸೇವೆಯಲ್ಲಿಯೂ ವ್ಯತ್ಯಯವಾಗಿರುವ ಬಗ್ಗೆ ಬಿಎಸ್‌ಎನ್‌ಎಲ್‌ ನೌಕರರು ತಿಳಿಸಿದ್ದಾರೆ. ಇತರೆ ಸರ್ಕಾರಿ ಕಾರ್ಖಾನೆಗಳು ಹಾಗೂ ಸಂಸ್ಥೆಗಳಂತೆ ಬಿಎಸ್‌ಎನ್‌ಎಲ್‌ ಮುಚ್ಚಿಹೋಗುವ ಮುನ್ನ ನಾವು ಎಚ್ಚೆತ್ತಿಕೊಳ್ಳಬೇಕು ಎಂದು BSNL ನೌಕರರು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
Blaming Reliance Jio for financial woes of the telecom sector, employee unions of BSNL on Wednesday alleged that the government was favouring the latest entrant over other firms and said they will go on an indefinite strike from December 3. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X