ಶೀಘ್ರವೆ ಜಿಯೋ, ಏರ್‌ಟೆಲ್ ಎಲ್ಲವನ್ನು ಹಿಂದಿಕ್ಕಲಿದೆ ನಮ್ಮ BSNL ನೆಟ್‌ವರ್ಕ್!!..ಏಕೆ ಗೊತ್ತಾ?

8ರಿಂದ 10 ಸೇವೆಗಳಲ್ಲಿ ಕಾಣಿಸುವ ಸಮಸ್ಯೆಗಳನ್ನು ಮೊದಲೇ ಪತ್ತೆಮಾಡಿ ಪರಿಹರಿಸುವ ತಂತ್ರಜ್ಞಾನವನ್ನು ಬಿಎಸ್‌ಎನ್‌ಎಲ್ ಟೆಲಿಕಾಂ ಅಳವಡಿಸಿಕೊಂಡಿದೆ.

|

ಸ್ಥಿರ ದೂರವಾಣಿ, ಮೊಬೈಲ್‌, ಬ್ರಾಡ್‌ಬ್ಯಾಂಡ್‌ ಸೇರಿ 8ರಿಂದ 10 ಸೇವೆಗಳಲ್ಲಿ ಕಾಣಿಸುವ ಸಮಸ್ಯೆಗಳನ್ನು ಮೊದಲೇ ಪತ್ತೆಮಾಡಿ ಪರಿಹರಿಸುವ ತಂತ್ರಜ್ಞಾನವನ್ನು ಬಿಎಸ್‌ಎನ್‌ಎಲ್ ಟೆಲಿಕಾಂ ಅಳವಡಿಸಿಕೊಂಡಿದೆ. ಈ ತಂತ್ರಜ್ಞಾನದಿಂದ ಸಹಾಯದಿಂದ ಬಿಎಸ್‌ಎನ್‌ಎಲ್ ಸೇವೆ ಇತರ ಟೆಲಿಕಾಂಗಳಿಗಿಂತ ಮೇಲ್ದರ್ಜಿಗೇರಲಿದೆ.!!

ಹೌದು, ಇಂತಹದೊಂದು ನೂತನ ತಂತ್ರಜ್ಞಾನವನ್ನು ಸಂವಹನ ಮತ್ತು ರೈಲ್ವೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಅವರು ಬೆಂಗೂರಿನಲ್ಲಿ ಉದ್ಘಾಟಿಸಿ ಭವಿಷ್ಯದಲ್ಲಿ ಬಿಎಸ್‌ಎನ್‌ಎಲ್ ಅತ್ಯುತ್ತಮ ಸೇವೆ ನೀಡಲಿದೆ ಎಂದರು. ಜೊತೆಗೆ ಕರ್ನಾಟಕದಲ್ಲಿ ಭಾರಿ ಬಂಡವಾಳ ಹೂಡುವುದಾಗಿ ತಿಳಿಸಿದ್ದರು.! ಹಾಗಾದರೆ, ಏನಿದು ತಂತ್ರಜ್ಞಾನ? ಇದರಿಂದ ಆಗುವ ಉಪಯೋಗಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ನೂತನ ತಂತ್ರಜ್ಞಾನ?

ಏನಿದು ನೂತನ ತಂತ್ರಜ್ಞಾನ?

8ರಿಂದ 10 ಸೇವೆಗಳಲ್ಲಿ ಕಾಣಿಸುವ ಸಮಸ್ಯೆಗಳನ್ನು ಮೊದಲೇ ಪತ್ತೆಮಾಡಿ ಪರಿಹರಿಸುವ ತಂತ್ರಜ್ಞಾನವನ್ನು ಬಿಎಸ್‌ಎನ್‌ಎಲ್ ಹೊರತಂದಿದ್ದು, ಎನ್‌ಎಂಎಸ್‌ (ನೆಟ್‌ವರ್ಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌)-ಬ್ರಾಡ್‌ ಬ್ಯಾಂಡ್‌ ಮತ್ತು ಎನ್‌ಎಂಎಸ್‌-ಎಂಪಿಎಲ್ಎಸ್ (ಮಲ್ಟಿಪ್ರೋಟೊಕಾಲ್ ಲೇಬಲ್‌ ಸ್ವಿಚ್ಚಿಂಗ್) ತಂತ್ರಜ್ಞಾನ ಇವಾಗಿವೆ.!!

ಜಿಯೋ, ಏರ್‌ಟೆಲ್ ಮೀರಿಸಲಿದೆ  BSNL!!

ಜಿಯೋ, ಏರ್‌ಟೆಲ್ ಮೀರಿಸಲಿದೆ BSNL!!

ಬಿಎಸ್‌ಎನ್‌ಎಲ್‌ ಸಂಪರ್ಕ ಜಾಲ ಸರಾಗವಾಗುತ್ತಿಲ್ಲ ಎನ್ನುವ ಸಾಮಾನ್ಯ ದೂರಿದೆ. ಆದರೆ, ಎನ್‌ಎಂಎಸ್‌ ಬ್ರಾಡ್‌ ಬ್ಯಾಂಡ್‌ ಮತ್ತು ಎನ್‌ಎಂಎಸ್‌-ಎಂಪಿಎಲ್ಎಸ್ ತಂತ್ರಜ್ಞಾನಗಳಿಂದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ನಲ್ಲಿ ಇನ್ಮುಂದೆ ಸಮಸ್ಯೆಗಳು ಕಾಣಿಸದಂತೆ ತಡೆಯಬಹುದು ಎನ್ನಲಾಗಿದೆ.!!

2 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್!

2 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್!

ಡಿಜಿಟಲ್‌ ಇಂಡಿಯಾ ಯೋಜನೆ ಯಶಸ್ವಿಗೊಳಿಸುವ ಪ್ರಮುಖ ಹೊಣೆಗಾರಿಕೆ ನಿಗಮದ ಮೇಲಿದೆ. ಈಗಾಗಲೇ ದೇಶದ 1 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಒದಗಿಸಲಾಗಿದೆ. ಎರಡನೇ ಹಂತದಲ್ಲಿ 2 ಲಕ್ಷ ಹಳ್ಳಿಗಳಿಗೆ ಸಂಪರ್ಕ ವಿಸ್ತರಿಸುವ ಗುರಿ ಯನ್ನು ಬಿಎಸ್‌ಎನ್‌ಎಲ್ ಹೊಂದಿರುವುದಾಗಿ ಮನೋಜ್‌ ಸಿನ್ಹಾ ಹೇಳಿದರು.!!

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ರಾಜ್ಯಕ್ಕಾಗಿ 1500 ಕೋಟಿ ವಿನಿಯೋಗ!!

ರಾಜ್ಯಕ್ಕಾಗಿ 1500 ಕೋಟಿ ವಿನಿಯೋಗ!!

ತಾಂತ್ರಿಕ ಪರಿಣತಿ ಬಳಸಿಕೊಂಡು ನಿಗಮದ ಕೀರ್ತಿ ಪತಾಕೆ ಹಾರಿಸಬೇಕು. ಈ ನಿಟ್ಟಿನಲ್ಲಿ ಕೇರಳ ಮತ್ತು ಉತ್ತರಪ್ರದೇಶದಲ್ಲಿ ನಿಗಮ ಅತ್ಯುತ್ತಮ ಸಾಧನೆ ತೋರಿದ್ದು, ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ ದೂರ ಸಂಪರ್ಕ ಸೇವೆಗಳನ್ನು ಮೇಲ್ದರ್ಜೆಗೇರಿಸಲು ಸುಮಾರು 1500 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಸಿನ್ಹಾ ತಿಳಿಸಿದರು.!!

ದಿನಕ್ಕೆ 1GB ಡೇಟಾ ಸಾಲದಿದ್ದರೆ ಗೂಗಲ್‌ನ ಈ ಹೊಸ ಆಪ್ ಇನ್‌ಸ್ಟಾಲ್ ಮಾಡಿ!!..ಯಾಕೆ?ದಿನಕ್ಕೆ 1GB ಡೇಟಾ ಸಾಲದಿದ್ದರೆ ಗೂಗಲ್‌ನ ಈ ಹೊಸ ಆಪ್ ಇನ್‌ಸ್ಟಾಲ್ ಮಾಡಿ!!..ಯಾಕೆ?

Best Mobiles in India

English summary
BSNL plans to replace the existing telephone exchanges with Internet Protocol-based next generation network switches.to know more visit to kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X