ರಿಲಾಯನ್ಸ್, ವೋಡಾಫೋನ್‌ನೊಂದಿಗೆ ಬಿಎಸ್‌ಎನ್‌ಎಲ್ 2ಜಿ ಒಪ್ಪಂದ

By Shwetha
|

ಬಿಎಸ್‌ಎನ್‌ಎಲ್ ಸಂಸ್ಥೆಯು ರಿಲಾಯನ್ಸ್ ಜಿಯೊ ಮತ್ತು ವೊಡಾಫೋನ್‌ನೊಂದಿಗೆ 2ಜಿ ರೋಮಿಂಗ್ ಒಪ್ಪಂದಕ್ಕೆ ಈ ತಿಂಗಳಿನಲ್ಲಿ ಸಹಿ ಮಾಡಲಿದೆ. 2ಜಿ ಇಂಟಾ ಸರ್ಕಲ್ ರೋಮಿಂಗ್ ಒಪ್ಪಂದಕ್ಕಾಗಿ ನಾವು ರಿಲಾಯನ್ಸ್ ಜಿಯೊ ಮತ್ತು ವೋಡಾಫೋನ್‌ನೊಂದಿಗೆ ಸಹಿ ಹಾಕಲಿದ್ದೇವೆ ಎಂಬುದಾಗಿ ಬಿಎಸ್‌ಎನ್‌ಎಲ್ ಚೇರ್‌ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅನುಮಪ್ ಶ್ರೀವಾಸ್ತವ ತಿಳಿಸಿದ್ದಾರೆ.

ಒಪ್ಪಂದದ ಪ್ರಕಾರವಾಗಿ, ರಿಲಾಯನ್ಸ್ ಜಿಯೊ ಮತ್ತು ವೋಡಾಫೋನ್ ಗ್ರಾಹಕರು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ಪ್ರವೇಶವನ್ನು ಪಡೆದುಕೊಳ್ಳಲಿದ್ದಾರೆ. ಹಳ್ಳಿ ಪ್ರದೇಶಗಳಲ್ಲೂ ಬಿಎಸ್‌ಎನ್‌ಎಲ್ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದ್ದು ಕಡಿಮೆ ಹೂಡಿಕೆ ಹಿಂಪಡೆಯುವಿಕೆ ಆಧಾರದಲ್ಲಿ ಕಂಪೆನಿಯ ಮೇಲೆ ಹಣ ಹೂಡಿದ್ದಾರೆ. ಒಪ್ಪಂದ ಒಮ್ಮೆ ಪೂರ್ಣಗೊಂಡಲ್ಲಿ, ಬಿಎಸ್‌ಎನ್‌ ಗ್ರಾಹಕರೂ ಕೂಡ ರಿಲಾಯನ್ಸ್ ಜಿಯೊ ಮತ್ತು ವೋಡಾಫೋನ್ ನೆಟ್‌ವರ್ಕ್‌ಗಳಿಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಬೇಸ್ ಸ್ಟೇಶನ್‌ಗಳ ಪೈಕಿ ಬಿಎಸ್‌ಎನ್‌ಎಲ್ ದೇಶದಲ್ಲಿ ಎರಡನೆಯ ಸ್ಥಾನವನ್ನು ಅಲಂಕರಿಸಿದೆ. ಇದು 1.42 ಲಕ್ಷಗಳಲ್ಲಿದ್ದು ಇನ್ನು 21,000 ಮೊಬೈಲ್ ಟವರ್‌ಗಳನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿದೆ.

#1

#1

ಸದ್ಯದಲ್ಲಿಯೇ 3 ಜಿ ಇಂಟ್ರಾ ಸರ್ಕಲ್ ರೋಮಿಂಗ್ ಒಪ್ಪಂದಕ್ಕೆ ನಾವು ಸಹಿ ಮಾಡಲಿದ್ದು ಇತರ ಸ್ಪರ್ಧಿಗಳಿಗೆ ಸ್ಪರ್ಧೆಯನ್ನು ಒಡ್ಡಲಿದ್ದೇವೆ. ನಾವು 3ಜಿ ರೋಮಿಂಗ್ ಒಪ್ಪಂದ ದರಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಸರಕಾರಿ ಸಂಸ್ಥೆಯಾಗಿದ್ದು, ಎಲ್ಲಾ ಕಂಪೆನಿಗಳಿಗಾಗಿ ಸಮಾನ ದರಗಳನ್ನು ವಿಧಿಸಲಿದ್ದೇವೆ ಎಂಬುದಾಗಿ ಶ್ರೀವಾಸ್ತವ ತಿಳಿಸಿದ್ದಾರೆ.

#2

#2

ತಮ್ಮ ಟೆಲಿಕಾಮ್ ವಲಯಗಳಲ್ಲಿ 3 ಜಿ ಸ್ಪೆಕ್ಟ್ರಮ್ ಹೊಂದದೇ ಇರುವ ಏರ್‌ಟೆಲ್, ವೋಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ಈ ಮೂರೂ ಸಂಸ್ಥೆಗಳ ಬಳಕೆದಾರರು ಒಬ್ಬರು ಇನ್ನೊಬ್ಬರ ನೆಟ್‌ವರ್ಕ್ ಅನ್ನು ಬಳಸುವ ನೀತಿಗೆ ಟೆಲಿಕಾಮ್ ವಲಯವು ನಿಷೇಧವನ್ನು ಹೇರಿದೆ.

#3

#3

3 ಜಿ ಐಸಿಆರ್ ಒಪ್ಪಂದದ ಪ್ರಕಾರವಾಗಿ, ಬಿಎಸ್‌ಎನ್ಎಲ್ ಕಾನೂನುಗಳನ್ನು ಪಾಲಿಸಲಿದೆ. ಸಾರ್ವಜನಿಕ ಸಂಸ್ಥೆಯೂ ಟೆಲಿಕಾಮ್ ಪ್ರಮುಖ ಭಾರತಿ ಏರ್‌ಟೆಲ್‌ನೊಂದಿಗೆ ಎರಡು ವಲಯಗಳಾದ ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಸ್ಪೆಕ್ಟ್ರಮ್ ಹಂಚಿಕೆ ಕುರಿತು ಚರ್ಚೆಗಳನ್ನು ನಡೆಸಿದೆ.

#4

#4

ಮೂರು ವಲಯಗಳಲ್ಲಿ ಸ್ಪೆಕ್ಟ್ರಮ್ ಹಂಚಿಕೆ ಕುರಿತು ಏರ್‌ಟೆಲ್‌ನೊಂದಿಗೆ ನಾವು ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ನಮ್ಮ ಮಾತುಕಥೆ ಪೂರ್ಣವಾದಲ್ಲಿ, ಈ ಮೂರು ವಲಯಗಳಲ್ಲಿ ಸ್ಪೆಕ್ಟ್ರಮ್ ಅನ್ನು ಜಾರಿಗೊಳಿಸಲಿದ್ದೇವೆ ಎಂಬುದು ಶ್ರೀವಾಸ್ತವ ಮಾತಾಗಿದೆ.

#5

#5

ಈ ಸ್ಪೆಕ್ಟ್ರಮ್ ಮೂಲಕ ತನ್ನ ಗ್ರಾಹಕರಿಗೆ 4ಜಿ ಸೇವೆಗಳನ್ನು ನೀಡಲು ಬಿಎಸ್‌ಎನ್‌ಎಲ್‌ಗೆ ಸಾಧ್ಯವಾಗಲಿದೆ. ಪ್ರಸ್ತುತ 2 ಜಿ ಸೇವೆಗಳನ್ನು ಏರ್‌ವೇವ್ಸ್ ಮೂಲಕ ನೀಡುತ್ತಿದೆ.

#6

#6

ಬಿಎಸ್‌ಎನ್‌ಎಲ್‌ನೊಂದಿಗೆ ನಾವು ಪ್ರಾಥಮಿಕ ಮಾತುಕತೆಗಳನ್ನು ಮಾತ್ರವೇ ನಡೆಸಿದ್ದು, ಇನ್ನೂ ಇದು ಮುಂದುವರಿದ ಹಂತವನ್ನು ತಲುಪಿಲ್ಲ ಎಂಬುದು ಏರ್‌ಟೆಲ್ ಅಧಿಕೃತ ವಲಯದಿಂದ ತಿಳಿದು ಬಂದಿರುವುದಾಗಿದೆ.

#7

#7

ಸ್ಪೆಕ್ಟ್ರಮ್ ಹಂಚಿಕೆಗಾಗಿ ಬಿಎಸ್‌ಎನ್‌ಎಲ್ ಎಂದಿಗೂ ಪಾರದರ್ಶಕ ಪ್ರಕ್ರಿಯೆಯನ್ನು ನಡೆಸುತ್ತಿದ್ದು ಇದೇ ಮಾದರಿಯು ಎಲ್ಲಾ ಆಪರೇಟರ್‌ಗಳಿಗೂ ದೊರೆಯಲಿದೆ.

#8

#8

ಸ್ಪೆಕ್ಟ್ರಮ್ ಹಂಚಿಕೆಯಿಂದಾಗಿ ಉತ್ತಮ ಗುಣಮಟ್ಟದ ಮೊಬೈಲ್ ಸೇವೆಗಳನ್ನು ಒದಗಿಸುವುದರೊಂದಿಗೆ ವೈರ್‌ಲೆಸ್ ಬ್ಯಾಂಡ್ ವಿಡ್ತ್ ಸಾಮರ್ಥ್ಯವನ್ನು ಹೆಚ್ಚಿಸಲು ಕೂಡ ಇದು ಸಹಾಯ ಮಾಡುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ? </a><br /><a href=ಭಾರತದ ಗ್ರಾಮೀಣ ಭಾಗಕ್ಕೂ ಹೈಟೆಕ್ ವೈಫೈ
ಮೊಬೈಲ್‌ ನೆಟ್ವರ್ಕ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸಫರ್‌ ಮಾಡುವುದು ಹೇಗೆ?" title="ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?
ಭಾರತದ ಗ್ರಾಮೀಣ ಭಾಗಕ್ಕೂ ಹೈಟೆಕ್ ವೈಫೈ
ಮೊಬೈಲ್‌ ನೆಟ್ವರ್ಕ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸಫರ್‌ ಮಾಡುವುದು ಹೇಗೆ?" loading="lazy" width="100" height="56" />ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?
ಭಾರತದ ಗ್ರಾಮೀಣ ಭಾಗಕ್ಕೂ ಹೈಟೆಕ್ ವೈಫೈ
ಮೊಬೈಲ್‌ ನೆಟ್ವರ್ಕ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸಫರ್‌ ಮಾಡುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
State-owned BSNL is in advanced talks with Reliance Jio and Vodafone for signing a 2G roaming agreement this month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X