ಫೇಸ್‌ಬುಕ್ ಬಳಕೆದಾರರಿಗೆ ಬಿಎಸ್‌ಎನ್‌ಎಲ್ ಅದ್ಭುತ ಕೊಡುಗೆ

By Shwetha
|

ಇಂಟರ್ನೆಟ್ ಸಂಪರ್ಕವಿಲ್ಲದೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಅನ್ನು ಪ್ರವೇಶಿಸುವ ಹೊಸದೊಂದು ಸ್ಕೀಮ್ ಅನ್ನು ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಪ್ರಸ್ತುಪಡಿಸಿದೆ.

ತಂತ್ರಜ್ಞಾನ ಅರ್ಥದಲ್ಲಿ ಈ ವ್ಯವಸ್ಥೆಗೆ ಸಾಥ್ ನೀಡಿದ್ದು ಯುಎಸ್‌ಎಸ್‌ಡಿ ಆಗಿದೆ ಅಂದರೆ ರಚನಾ ರಹಿತ ಪೂರಕ ಸೇವಾ ಡೇಟಾ ತಂತ್ರಜ್ಞಾನ (ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡೇಟಾ ಟೆಕ್ನೋಲಜಿ). ರೂ 4 ಕ್ಕೆ ಯಾವುದೇ ಇಂಟರ್ನೆಟ್ ಸೌಲಭ್ಯವಿಲ್ಲದೆ ನೀವು ಫೇಸ್‌ಬುಕ್ ಅನ್ನು ಪಡೆಯಬಹುದು, ಮತ್ತು ರೂ 10 ಅನ್ನು ನೀಡಿ ವಾರಗಳಿಗೆ ಈ ಸೇವೆಯನ್ನು ವಿಸ್ತರಿಸಬಹುದು. ಬ್ಯುಸಿನೆಸ್ ಲೈನ್ ಪ್ರಕಾರ ಈ ಸೇವೆಯ ತಿಂಗಳ ಮೊಬಲಗು ರೂ. 20 ಆಗಿದೆ.

ಇಂಟರ್ನೆಟ್ ಸಂಪರ್ಕವಿಲ್ಲದೆ ಫೇಸ್‌ಬುಕ್ ಪ್ರವೇಶ

ಈ ಸ್ಕೀಮ್ ಅನ್ನು ನೈಜ ರೂಪಕ್ಕೆ ತರಲು ಬಿಎಸ್‌ಎನ್‌ಎಲ್ ಇಟಿಯೋಪಿಯಾ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ವಾಸವಿರುವ ಚಂದಾದಾರರಿಗೆ ಮಾತ್ರವೇ ಈ ಸೌಲಭ್ಯ ಸದ್ಯಕ್ಕೆ ದೊರೆಯಲಿದ್ದು ಬೇರೆ ಭಾಗಗಳಿಗೂ ತಿಂಗಳುಗಳಲ್ಲಿ ಈ ಸೇವೆಯನ್ನು ಸಂಸ್ಥೆ ಸಕ್ರಿಯಗೊಳಿಸಲಿದೆ.

ಟೆಲಿಕಾಂ ಆಪರೇಟರ್‌ಗಳು ತಮ್ಮ ಬಳಕೆದಾರರಿಗೆ ಎಚ್ಚರಿಕೆಗಳನ್ನು ಕಳುಹಿಸಲು ಸುಲಭವಾಗುವುದಕ್ಕಾಗಿ ಈ ಯೋಜನೆಯನ್ನು ಹೊರತಂದಿದ್ದು, ಇದರ ಪೂರ್ವಪಾವತಿ ಕರೆ-ಹಿಂಪಡೆಯುವಿಕೆ, ಸ್ಥಳ-ಆಧಾರಿತ ವಿಷಯ ಸೇವೆ ಮತ್ತು ಮೆನು -ಆಧಾರಿತ ಮಾಹಿತಿ ಸೇವೆಯ ಪ್ರಯೋಜನವನ್ನು ಅವರು ಬಳಸಿಕೊಳ್ಳಬಹುದು.

ತಮ್ಮ ಫೇಸ್‌ಬುಕ್ ಖಾತೆಗಳನ್ನು ಪ್ರವೇಶಿಸಲು, ಸ್ಟೇಟಸ್ ಸಂದೇಶಗಳನ್ನು ಪೋಸ್ಟ್ ಮಾಡಲು, ವೀಕ್ಷಿಸಲು, ಫ್ರೆಂಡ್ಸ್ ರಿಕ್ವೆಸ್ಟ್‌ಗೆ ಪ್ರತಿಕ್ರಿಯಿಸಲು, ಮುಂತಾದ ಕಾರ್ಯಗಳನ್ನು ಇಂಟರ್ನೆಟ್ ಸೌಲಭ್ಯವಿಲ್ಲದೆ ಈ ಸ್ಕೀಮ್ ಮೂಲಕ ಮಾಡಬಹುದಾಗಿದೆ. ಎಲ್ಲಾ ಪ್ರಕಾರದ ಹ್ಯಾಂಡ್‌ಸೆಟ್‌ಗಳಲ್ಲಿ ಈ ಸ್ಕೀಮ್ ಲಭ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X