ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಿಗ್‌ ಶಾಕ್‌! ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

|

ಭಾರತದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳ ಅಬ್ಬರದ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಗ್ಗದ ಬೆಲೆಯ ಪ್ಲಾನ್‌ಗಳನ್ನು ಪರಿಚಯಿಸುವ ಮೂಲಕ ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುತ್ತಾ ಬಂದಿದೆ. ಆದರೆ ಇದೀಗ ಬಿಎಸ್ಎನ್‌ಎಲ್‌ ಟೆಲಿಕಾಂ ತನ್ನ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ. ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ಪರಿಚಯಿಸಿದ್ದ ಹೊಸ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಸ್ಥಗಿತಗೊಳಿಸಲು ಮುಂದಾಗಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಇತ್ತೀಚಿಗಷ್ಟೇ ಪರಿಚಯಿಸಿದ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಒಂದನ್ನು ಸ್ಟಾಪ್‌ ಮಾಡಲು ಮುಂದಾಗಿದೆ. ವಿಶೇಷ ಪ್ರಯೋಜನಗಳ ಮೂಲಕ ಗಮನಸೆಳೆದಿದ್ದ ಈ ಪ್ಲಾನ್‌ ಸ್ಥಗಿತಗೊಳಿಸುತ್ತಿರುವುದು ಹಲವು ಬಳಕೆದಾರರಿಗೆ ನಿರಾಸೆ ಮೂಡಿಸುವುದಂತೂ ಸತ್ಯ. ಇನ್ನು ಈ ಬ್ರಾಡ್‌ಬ್ಯಾಂಡ್‌ ಇದೇ ಡಿಸೆಂಬರ್‌ 14ರಿಂದ ಸ್ಥಗಿತವಾಗಲಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂ ಸ್ಟಾಪ್‌ ಮಾಡುತ್ತಿರುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಯಾವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌ 775ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಸ್ಥಗಿತ!

ಬಿಎಸ್‌ಎನ್‌ಎಲ್‌ 775ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಸ್ಥಗಿತ!

BSNL ಟೆಲಿಕಾಂ ಇದೇ ಡಿಸೆಂಬರ್ 14 ರಿಂದ 775ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌ ಸ್ಟಾಪ್‌ ಮಾಡಲಿದೆ. ಇನ್ನು ಈ ಪ್ಲಾನ್‌ 150 Mbps ಡೇಟಾ ವೇಗ ಹೊಂದಿರುವ 2000GB ಡೇಟಾ ಪ್ರಯೋಜನವನ್ನು ನೀಡಲಿದೆ. ಇದು 75 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದಲ್ಲದೆ ಹೆಚ್ಚುವರಿಯಾಗಿ, ಈ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್, ಲಯನ್ಸ್‌ಗೇಟ್, ಶೆಮರೂ, ಹಂಗಾಮಾ, ಸೋನಿಲೈವ್‌, ZEE5, ವೂಟ್‌ ಮತ್ತು Yupp ಟಿವಿಯಿಂದ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು OTT ಪ್ಲಾನ್ ಪ್ರಯೋಜನಗಳನ್ನು ನೀಡಲಿದೆ. ಸದ್ಯ ಈ ಪ್ಲಾನ್‌ ಸೀಮಿತ ಅವಧಿಗೆ ಬಿಡುಗಡೆಯಾಗಿದ್ದ ಕಾರಣಕ್ಕೆ ಇದೀಗ ಸ್ಥಗಿತವಾಗಲಿದೆ ಎಂದು ಹೇಳಲಾಗಿದೆ.

ಬಿಎಸ್‌ಎನ್‌ಎಲ್‌

ಇನ್ನು ಇದೇ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್‌ 775 ರೂ ಪ್ಲಾನ್ ಜೊತೆಗೆ 275ರೂ. ಬೆಲೆಯ ಪ್ಲಾನ್‌ ಅನ್ನು ಕೂಡ ಪರಿಚಯಿಸಿತ್ತು. ಈ ಪ್ಲಾನ್‌ ಈಗಲೂ ಮುಂದುವರೆದಿದೆ. ಇನ್ನು ಈ ಪ್ಲಾನ್‌ 75 ದಿನಗಳವರೆಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಜೊತೆಗೆ 3300GB (3.3TB) ಡೇಟಾವನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ಇಂಟರ್‌ನೆಟ್‌ ಮಿತಿ ಬಳಕೆಯ ನಂತರ ಡೇಟಾ ವೇಗವನ್ನು 4 Mbps ಗೆ ಕಡಿಮೆ ಮಾಡಲಾಗಿದೆ. ಆದರಿಂದ ಒಂದು ವೇಳೆ ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ರೀಚಾರ್ಜ್‌ ಮಾಡಬೇಕೆಂದು ಕೊಂಡರೆ 775ರೂ. ಬದಲಿಗೆ 275ರೂ. ಪ್ಲಾನ್‌ ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಇದಲ್ಲದೆ ಬಿಎಸ್‌ಎನ್‌ಎಲ್‌ ಹೊಂದಿರುವ ಇತರೆ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ವಿವರ ಇಲ್ಲಿದೆ.

ಬಿಎಸ್‌ಎನ್‌ಎಲ್‌ 499ರೂ. ಫೈಬರ್ ಬೇಸಿಕ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಫೈಬರ್ ಬೇಸಿಕ್ ಪ್ಲ್ಯಾನ್

ಬಿಎಸ್ಎನ್ಎಲ್ 499ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು 40 Mbps ಇಂಟರ್ನೆಟ್ ವೇಗವನ್ನು 3.3TB FUP ಡೇಟಾದೊಂದಿಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಪಡೆದಿದೆ. ನಿಗದಿತ FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4 Mbps ಗೆ ಇಳಿಕೆಯಾಗುತ್ತದೆ. ಇದ್ರಲ್ಲಿ, ಬಳಕೆದಾರರು ಮೊದಲ ತಿಂಗಳ ಬಾಡಿಗೆಯಲ್ಲಿ 500ರೂ. ವರೆಗಿನ 90% ರಿಯಾಯಿತಿಯನ್ನು ಸಹ ಪಡೆಯುತ್ತಾರೆ.

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 TB (3,300 GB) ವರೆಗೆ 30 Mbps ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 Mbps ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

Best Mobiles in India

English summary
BSNL will soon discontinue the Rs 775 broadband plan

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X