ವಿದೇಶಿ ಮೊಬೈಲ್ ಕಂಪೆನಿಗಳು ಭಾರತೀಯರ ಕಾಲಿನ ಕೆಳಗೆ ಬಿದ್ದಿದ್ದು ಹೇಗೆ?

|

ಮೊದಲಿನಂತೆ ಒಂದು ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು 50,000 ರೂಪಾಯಿ ಪಾವತಿಸಬೇಕಾಗಿದ್ದ ಕಾಲ ಹೊರಟು ಹೋಯ್ತು. ದಿನ ಕಳೆದಂತೆ ಹೊಸಹೊಸ ತಂತ್ರಜ್ಞಾನಗಳು ಮತ್ತು ವೈಶಿಷ್ಟ್ಯತೆಗಳು ಕಡಿಮೆ ಬೆಲೆಯ ಫೋನ್ ಗಳಲ್ಲೂ ಗ್ರಾಹಕರನ್ನು ತಲುಪುವಂತಾಗಿದೆ. ಈಗ ಕೇವಲ 10 ರಿಂದ 20 ಸಾವಿರಕ್ಕೆ ಮೊಬೈಲ್‌ಗಳು ಭಾರತೀಯರ ಕಾಲಿನ ಕೆಳಗೆ ಬಂದುಬೀಳುತ್ತಿವೆ.

ಟಾಪ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳಾದ ಶಿಯೋಮಿ, ಓಪ್ಪೋ, ಒನ್ ಪ್ಲಸ್, ವಿವೋ ಹಾಗೂ ಸ್ಯಾಮ್ ಸಂಗ್ ಕೂಡ ಈಗ ಟಾಪ್-ಎಂಡ್ ವೈಶಿಷ್ಟ್ಯತೆಗಳಿರುವ ಫೋನ್ ಗಳನ್ನು ಮಧ್ಯಮ-ರೇಂಜ್ ನ ಬೆಲೆಗೆ ಮಾರಾಟ ಮಾಡುತ್ತಿವೆ. ಗ್ರಾಹಕರ ಬೇಡಿಕೆ ಮತ್ತು ಕಾಂಪಿಟೇಷನ್ ಹೆಚ್ಚುತ್ತಿದ್ದಂತೆ ಬೆಲೆಯಲ್ಲಿಯೂ ಸಹ ಕಂಪೆನಿಗಳೂ ಕೂಡ ಕಾಂಪ್ರಮೈಸ್ ಆಗಲು ಮುಂದಾಗಿವೆ.

ವಿದೇಶಿ ಮೊಬೈಲ್ ಕಂಪೆನಿಗಳು ಭಾರತೀಯರ ಕಾಲಿನ ಕೆಳಗೆ ಬಿದ್ದಿದ್ದು ಹೇಗೆ?

ಹೈ-ಸ್ಪೀಡ್ ಪ್ರೊಸೆಸರ್, ಉತ್ತಮ ಮೆಮೊರಿ, ಉತ್ತಮ ಕ್ಯಾಮರಾಗಳು ,ಪವರ್ ಫುಲ್ ಆಗಿರುವ ಬ್ಯಾಟರಿ ಹೀಗೆ ಹಲವು ವೈಶಿಷ್ಟ್ಯತೆಗಳಿರುವ ಫೋನೇ ಕೇವಲ 15,000 ರೂಪಾಯಿಗೆ ಗ್ರಾಹಕರ ಕೈಸೇರುವಂತಿದೆ. ಅದಕ್ಕಿಂತ ಹೆಚ್ಚೆಂದೆ 25,000 ರೂ.ಅಷ್ಟೇ.! ಇದಕ್ಕೆ ಪ್ರಮುಖ ಕಾರಣವೆಂದರೆ ಶಿಯೋಮಿ, ಒನ್ ಪ್ಲಸ್, ಓಪೋ ಮತ್ತು ವಿವೋಗಳು ದೇಶದಲ್ಲಿ ನೀಡುತ್ತಿರುವ ಭರ್ಜರಿ ಸ್ಪರ್ಧೆ.

ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ!

ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ!

ಕೇವಲ ಎರಡು ವರ್ಷದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ಉಂಟಾಗಿದೆ. ಚೀನಾದ ಶಿಯೋಮಿ, ಒನ್ ಪ್ಲಸ್, ಓಪೋ ಮತ್ತು ವಿವೋ ಕಂಪೆನಿಗಳು ಭಾರತಕ್ಕೆ ಎಂಟ್ರಿ ನೀಡಿದ ನಂತರ ಈಗ ಸ್ಯಾಮ್‌ಸಂಗ್ ಕೂಡ ಭಾರತೀಯರಿಗೆ ತಲೆಬಾಗಿದೆ. ಹೊಸದಾಗಿ ಬಿಡುಗಡೆಯಾದ ಮೊಬೈಲ್ ಬೆಲೆ ನಿಗದಿಯಾಗಲು ಈಗ ಪೈಪೋಟಿ ಏರ್ಪಟ್ಟಿದೆ. ಹಾಗಾಗಿ, ಭಾರತೀಯರಿಗೆ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಮೊಬೈಲ್‌ಗಲು ಭಾರತೀಯರ ಕೈಸೇರುತ್ತಿವೆ.

ಭಾರತದಲ್ಲಿ ಬೆಲೆ ಕಡಿಮೆಯಾಗಿದ್ದೇಗೆ?

ಭಾರತದಲ್ಲಿ ಬೆಲೆ ಕಡಿಮೆಯಾಗಿದ್ದೇಗೆ?

ಭಾರತೀಯ ಗ್ರಾಹಕರನ್ನು ಸೆಳೆಯಲು ಮೊಬೈಲ್ ತಯಾರಿಕಾ ಕಂಪೆನಿಗಳು ಹೊಸ ಸೂತ್ರವನ್ನು ಅಳವಡಿಸಿಕೊಂಡಿವೆ. ಅತೀ ಹೆಚ್ಚು ವೈಶಿಷ್ಟ್ಯೆತೆಗಳಿರುವ ಫೋನನ್ನು ಮಧ್ಯಮ ರೇಂಜಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಕಂಪೆನಿಗೆ ಒಟ್ಟಾರೆ ಸರಾಸರಿ ಆದಾಯವು ಹೆಚ್ಚುತ್ತದೆ ಎಂಬ ಅಭಿಪ್ರಾಯವನ್ನು ಮೊಬೈಲ್‌ ಕಂಪೆನಿಗಳು ಹೊಂದಿವೆ. ಇದರಿಂದ ಬ್ರ್ಯಾಂಡ್ ಕಂಪೆನಿಗಳು ಮೊಬೈಲ್ ಬೆಲೆಯನ್ನು ಕಡಿಮೆ ಮಾಡಬೇಕಾಗಿ ಬಂತು ಎಂದು ತಜ್ಞರು ಹೇಳುತ್ತಾರೆ.

ಭಯದಲ್ಲಿವೆ ಮೊಬೈಲ್ ಕಂಪೆನಿಗಳು!

ಭಯದಲ್ಲಿವೆ ಮೊಬೈಲ್ ಕಂಪೆನಿಗಳು!

ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ಉಂಟಾಗಿರುವದರಿಂದ ಮೊಬೈಲ್ ಬ್ರ್ಯಾಂಡ್ ಗಳೂ ಕೂಡ ಕಾಂಪೋನೆಂಟ್ ವಿಚಾರದಲ್ಲಿ ಹೆಚ್ಚು ಜಾಗೃತಿ ವಹಿಸುತ್ತಿದೆ ಮತ್ತು ಕಡಿಮೆ ಬೆಲೆಯಲ್ಲೇ ಉತ್ತಮ ಮೊಬೈಲ್‌ಗಳನ್ನು ಗ್ರಾಹಕರಿಗೆ ಕೊಡುವ ಉದ್ದೇಶವನ್ನು ಹೊಂದುತ್ತಿವೆ. ಇದರಿಂದ ಮಾರುಕಟ್ಟೆಯಲ್ಲಿನ ಸ್ಪರ್ಧೆಯು ಮಧ್ಯಮ ರೇಂಜಿನಲ್ಲೇ ಬೆಸ್ಟ್ ಮೊಬೈಲ್ ಗಳು ಗ್ರಾಹಕರ ಕೈ ಸೇರಲು ಕಾರಣವಾಗುತ್ತಿದೆ.

ಮಿಡ್‌ರೇಂಜ್ ಆಯ್ತು ಮೊಬೈಲ್ ಮಾರುಕಟ್ಟೆ!

ಮಿಡ್‌ರೇಂಜ್ ಆಯ್ತು ಮೊಬೈಲ್ ಮಾರುಕಟ್ಟೆ!

ಭಾರತದ ಮೊಬೈಲ್ ಮಾರುಕಟ್ಟೆ ಈಗ ಮಧ್ಯಮವರ್ಗದವರಿಗೆ ಸೇರಿದ್ದಾಗಿದೆ. ಮೊದಲೆಲ್ಲ 4000 MAh ಬ್ಯಾಟರಿ ಮತ್ತು 6ಜಿಬಿ ಮೆಮೊರಿ ಇರುವ ಫೋನ್ ಗಳು ಕೇವಲ ಹೈ-ಎಂಡ್ ಮೊಬೈಲ್ ಗಳಾಗಿರುತ್ತಿದ್ದವು. ಇತ್ತೀಚೆಗೆ ಬರುತ್ತಿರುವ ಮಿಡ್ ರೇಂಜ್ ಫೋನ್ ಮತ್ತು ಹೈ ಎಂಡ್ ಫೋನ್ ಎರಡರಲ್ಲೂ ಕೂಡ ಕ್ಯಾಮರಾ ಕ್ವಾಲಿಟಿ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಹೀಗೆ ಹಲವು ವ್ಯತ್ಯಾಸಗಳನ್ನು ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಗಮನಿಸಬಹುದಾಗಿದೆ.

ಪ್ರಮುಖ ವ್ಯತ್ಯಾಸ ಯಾವುದು ಗೊತ್ತಾ?

ಪ್ರಮುಖ ವ್ಯತ್ಯಾಸ ಯಾವುದು ಗೊತ್ತಾ?

ಗ್ರಾಹಕರ ಆಯ್ಕೆಗೆ ಅನುಗುಣವಾಗಿ ತಯಾರಿಕಾ ಕಂಪೆನಿಗಳು ಬದಲಾಗುತ್ತಿರುವ ಸ್ಪಷ್ಟವಾಗಿ ಮಾರುಕಟ್ಟೆಯ ಇತಿಹಾಸವನ್ನು ಗಮನಿಸಿದರೆ ತಿಳಿದುಬರುತ್ತದೆ. ಮೊದಲೆಲ್ಲ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ನ್ನು ಕೇವಲ 45,000 ಮತ್ತು ಅದಕ್ಕಿಂತ ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಕೆಲವು ಬ್ರ್ಯಾಂಡ್ ಗಳು 20,000-30,000 ರುಪಾಯಿ ಬೆಲೆಯ ಹ್ಯಾಂಡ್ ಸೆಟ್ ನಲ್ಲೂ ಕೂಡ ಇದನ್ನು ಪರಿಚಯಿಸಿದೆ.

ಭಾರತೀಯರಿಗೆ ಈಗ ಹೆಚ್ಚಿನ ಬುದ್ಧಿವಂತಿಕೆ ಇದೆ.

ಭಾರತೀಯರಿಗೆ ಈಗ ಹೆಚ್ಚಿನ ಬುದ್ಧಿವಂತಿಕೆ ಇದೆ.

ಭಾರತೀಯರು ಈಗ ಹೆಚ್ಚು ಆಲೋಚಿಸಿ ಖರೀದಿಸಲು ಮುಂದಾಗುತ್ತಾರೆ. ಮೆಮೊರಿ, ಪ್ರೊಸೆಸರ್, ಸಿಸ್ಟಮ್ ಆನ್-ಚಿಪ್ (ಸಾಕೆಟ್) , ಕ್ಯಾಮರಾಗಳು, ಡಿಸ್ಪ್ಲೇ ಯ ರೀತಿ, ಹೀಗೆ ಅಪ್ ಗ್ರೇಡ್ ಆಗಿರುವ ಮೊಬೈಲ್ ಗಳ ಖರೀದಿಗೆ ಗ್ರಾಹಕರು ಕೂಡ ಮನಸ್ಸು ಮಾಡುತ್ತಾರೆ ಜೊತೆಗೆ ಬಜೆಟ್ ಫ್ರೆಂಡ್ಲಿಯಾಗಿರುವ ಮೊಬೈಲ್ ಗಳನ್ನು ಖರೀದಿಸಲು ಇಚ್ಛಿಸುತ್ತಾರೆ. ಅದರಲ್ಲಿ ಹೆಚ್ಚು ವೈಶಿಷ್ಟ್ಯತೆಗಳಿರಬೇಕು ಎಂದು ಕೂಡ ಬಯಸುತ್ತಾರೆ. ಇವೆಲ್ಲವುಗಳಿಂದ ವಿದೇಶಿ ಮೊಬೈಲ್ ಕಂಪೆನಿಗಳು ಭಾರತೀಯರ ಕಾಲಿನ ಕೆಳಗೆ ಬಂದು ಬಿದ್ದಿವೆ.

Best Mobiles in India

English summary
Is buying a mobile from the India cheaper than world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X