ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಹೇಳಿಕೆ ನಿರ್ಬಂಧ?..ಚುನಾವಣಾ ಆಯೋಗ ಹೇಳಿದ್ದು ಹೀಗೆ!

|

ಚುನಾವಣೆ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿನ ವೈಯಕ್ತಿಕ ಮತ್ತು ಖಾಸಗಿ ಹೇಳಿಕೆ, ಬರಹಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಸಾಗರ್‌ ಸೂರ್ಯವಂಶಿ ಎಂಬ ವಕೀಲರೋರ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್‌) ಸಂಬಂಧಿಸಿದಂತೆ ಆಯೋಗವು ತನ್ನ ವಕೀಲರಿಂದ ಈ ಹೇಳಿಕೆಯನ್ನು ಸಲ್ಲಿಸಿದೆ.

ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಹೇಳಿಕೆ ನಿರ್ಬಂಧ?..ಚುನಾವಣಾ ಆಯೋಗ ಹೇಳಿದ್ದು ಹೀಗೆ!

ಚುನಾವಣೆಗೆ 48 ಗಂಟೆ ಮುಂಚಿತವಾಗಿ ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮತ್ತು ಖಾಸಗಿಯಾಗಿ ನೀಡುವ ರಾಜಕೀಯ ಹೇಳಿಕೆ, ಬರಹಗಳನ್ನು ನಿರ್ಬಂಧಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಆದರೆ, ಇದು ಅಸಾಧ್ಯ ಎಂಬುದಾಗಿ ಚುನಾವಣಾ ಆಯೋಗ ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಏಕೆ?

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಏಕೆ?

ಚುನಾವಣೆ ದಿನದ 48 ಗಂಟೆ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಅಥವಾ ರಾಜಕೀಯಕ್ಕೆ ಸಂಬಂಧಿಸಿದ ಜಾಹೀರಾತು, ರಾಜಕೀಯ ಉದ್ದೇಶಕ್ಕೆ ಹಣ ‍ಪಾವತಿಸಿ ಸಿದ್ಧಪಡಿಸಿದ ಬರಹ ಅಥವಾ ವಿಡಿಯೊಗಳನ್ನು ರಾಜಕಾರಣಿಗಳು, ರಾಜಕೀಯ ಪಕ್ಷಗಳು ಅಥವಾ ಯಾವುದೇ ವ್ಯಕ್ತಿಗಳು ಖಾಸಗಿಯಾಗಿ ಪ್ರಸಾರ ಮಾಡುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಲು ಆದೇಶಿಸುವಂತೆ ಪಿಐಎಲ್‌ನಲ್ಲಿ ಕೋರಲಾಗಿತ್ತು.

ಕಠಿಣ ಪರಿಶೀಲನೆಗೆ ಒಳಪಡಿಸಿ!

ಕಠಿಣ ಪರಿಶೀಲನೆಗೆ ಒಳಪಡಿಸಿ!

ಬ್ರಿಟನ್‌ ಮತ್ತು ಅಮೆರಿಕದಲ್ಲಿ ಸಾಮಾಜಿಕ ಜಾಲತಾಣಗಳ ಎಲ್ಲ ಬಗೆಯ ಜಾಹೀರಾತುಗಳನ್ನೂ ಕಠಿಣ ಪರಿಶೀಲನೆಗೆ ಒಳಪಡಿಸುವ ನೀತಿಗಳನ್ನು ಹೊಂದಿವೆ. ಹಾಗಾಗಿ, ರಾಜಕಾರಣಿಗಳು, ರಾಜಕೀಯ ಪಕ್ಷಗಳು ಅಥವಾ ಯಾವುದೇ ವ್ಯಕ್ತಿಗಳು ಖಾಸಗಿಯಾಗಿ ಪ್ರಸಾರ ಮಾಡದಂತೆ ಭಾರತದಲ್ಲೂ ಇಂತಹುದೇ ನೀತಿಯನ್ನು ಜಾರಿಗೆ ತರಬೇಕಾಗಿದೆ ಎಂದು ಅರ್ಜಿದಾರರ ವಕೀಲ ಅಭಿನವ್ ಚಂದ್ರಚೂಡ್ ವಾದಿಸಿದರು. ಇದಕ್ಕೆ ಉತ್ತರಿಸಿದ ಆಯೋಗದ ಪರ ವಕೀಲರು ಮರು ಪ್ರಶ್ನೆಯನ್ನು ಹಾಕಿದ್ದಾರೆ.

ವೈಯಕ್ತಿಕ ಹೇಳಿಕೆ, ಬರಹ ನಿಷೇಧ ಸಾಧ್ಯವಿಲ್ಲ!

ವೈಯಕ್ತಿಕ ಹೇಳಿಕೆ, ಬರಹ ನಿಷೇಧ ಸಾಧ್ಯವಿಲ್ಲ!

ಶುಕ್ರವಾರ ಬಾಂಬೆ ಹೈಕೋರ್ಟ್‌ನಲ್ಲಿ ಈ ಬಗ್ಗೆ ವಾದ ನಡೆಸಿದ ಚುನಾವಣಾ ಆಯೋಗದ ಪರ ವಕೀಲ ರಾಜಗೋಪಾಲ್‌ ಅವರು, ಮಾಧ್ಯಮಗಳಲ್ಲಿ ಹಣಕ್ಕಾಗಿ ಜಾಹೀರಾತು ಮತ್ತು ರಾಜಕೀಯ ಬರಹ ಪ್ರಕಟಿಸುವುದನ್ನು ಕಾಯ್ದೆಯಡಿ ನಿಷೇಧಿಸಲಾಗಿದೆ. ಆದರೆ, ಓರ್ವ ವ್ಯಕ್ತಿಯು ತನ್ನ ಪೋಸ್ಟ್‌ನಲ್ಲಿ ವಯಕ್ತಿಕವಾಗಿ ಪ್ರಶಂಸಿಸಿದರೆ ಆಯೋಗ ಅಂತಹವರನ್ನು ತಡೆಯಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ನಿರ್ಬಂಧಗಳಡಿ ಪೋಸ್ಟ್‌ಗಳು!

ನಿರ್ಬಂಧಗಳಡಿ ಪೋಸ್ಟ್‌ಗಳು!

ಮತದಾನಕ್ಕೆ ಹಿಂದಿನ ದಿನ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಜಾಹೀರಾತು ಮತ್ತು ಕಾಸಿಗಾಗಿ ರಾಜಕೀಯ ಬರಹ ಪ್ರಕಟಿಸುವುದನ್ನು ಸಹ ಈ ಕಾಯ್ದೆಯಡಿ ನಿಷೇಧಿಸಲಾಗಿದೆ. ರಾಜಕೀಯ ಜಾಹೀರಾತು ನೀಡುವುದು ಅಥವಾ ರಾಜಕೀಯವಾಗಿ ಪ್ರಚಾರ ನಡೆಸುವುದನ್ನು ನಿರ್ಬಂಧಿಸಿರುವ ನಿಯಮ ಜಾರಿಯಲ್ಲಿದೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳೂ ಸಹ ಈ ನಿರ್ಬಂಧಗಳಡಿ ಬರುತ್ತವೆ. ಆದರೆ, ವ್ಯಕ್ತಿಯೋರ್ವರ ವೈಯಕ್ತಿಕ ಹೇಳಿಕೆ, ಬರಹಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಿರ್ಬಂಧಿಸಿರುವ ನಿಯಮ ಜಾರಿಯಲ್ಲಿದೆ

ನಿರ್ಬಂಧಿಸಿರುವ ನಿಯಮ ಜಾರಿಯಲ್ಲಿದೆ

ಇನ್ನು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 126ರ ಪ್ರಕಾರ, ಈಗಾಗಲೇ ಚುನಾವಣೆ ದಿನಕ್ಕೆ 48 ಗಂಟೆ ಮುಂಚಿತವಾಗಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ರಾಜಕೀಯ ಜಾಹೀರಾತು ನೀಡುವುದು ಅಥವಾ ರಾಜಕೀಯವಾಗಿ ಪ್ರಚಾರ ನಡೆಸುವುದನ್ನು ನಿರ್ಬಂಧಿಸಿರುವ ನಿಯಮ ಜಾರಿಯಲ್ಲಿದೆ ಎಂದು ತಿಳಿಸಿದೆ ಪೀಠಕ್ಕೆ ಆಯೋಗವು ಸ್ಪಷ್ಟವಾಗಿ ತಿಳಿಸಿದೆ. ಆದರೆ, ಖಾಸಾಗಿಯಾಗಿ ನಿರ್ಬಂಧ ಬಹುತೇಕ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಎರಡೂ ಕಡೆಯುವರಿಗೆ ನಿರ್ದೇಶನ

ಎರಡೂ ಕಡೆಯುವರಿಗೆ ನಿರ್ದೇಶನ

ಇನ್ನು ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿದ ಕೋರ್ಟ್, ಮತದಾನದ ಆಸುಪಾಸಿನಲ್ಲಿ ಕಾಸಿಗಾಗಿ ರಾಜಕೀಯ ಬರಹ, ಹೇಳಿಕೆ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಯಂತ್ರಿಸುವ ವಿಧಾನಗಳ ಬಗ್ಗೆ ಸಲಹೆಗಳನ್ನು ಕೊಡುವಂತೆ ಎರಡೂ ಕಡೆಯುವರಿಗೆ ಮುಖ್ಯ ನ್ಯಾಯಮೂರ್ತಿ ನರೇಶ್‌ ಪಾಟೀಲ್‌ ಮತ್ತು ನ್ಯಾಯಮೂರ್ತಿ ಎನ್‌.ಎಂ.ಜಾಮದಾರ್ ಅವರಿದ್ದ ಪೀಠ ನಿರ್ದೇಶನ ನೀಡಿದೆ.

Best Mobiles in India

English summary
Can't stop political comments, posts by private individuals on social media: Election Commission of India to Bombay High Court.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X