ಗೂಗಲ್ ಸಂಸ್ಥೆಗೆ ಬರೋಬ್ಬರಿ 1,137ರೂ. ಕೋಟಿ ದಂಡ ವಿಧಿಸಿದ ಸಿಸಿಐ!

|

ಗೂಗಲ್ ಕಂಪೆನಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಡಿವೈಸ್‌ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗ ಮಾಡಿಕೊಂಡಿದ್ದಕ್ಕೆ ಭಾರೀ ಬೆಲೆ ತೆತ್ತಿದೆ. ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಬರೋಬ್ಬರಿ 1,337.76 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ.

ಸ್ಪರ್ಧಾತ್ಮಕ ಆಯೋಗ

ದಂಡ ವಿಧಿಸಿರುವುದರ ಬಗ್ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ. 'ಆಂಡ್ರಾಯ್ಡ್ ಮೊಬೈಲ್ ಡಿವೈಸ್‌ ಮಾರ್ಕೆಟ್‌ನಲ್ಲಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಗೂಗಲ್‌ಗೆ 1,337.76 ಕೋಟಿಗಳ ವಿತ್ತೀಯ ದಂಡವನ್ನು CCI ವಿಧಿಸುತ್ತದೆ' ಎಂದು ಬರೆದುಕೊಂಡಿದೆ. ಹಾಗೆಯೇ ಈ ರೀತಿಯ ಅನ್ಯಾಯದ ವ್ಯವಹಾರಗಳನ್ನು ನಿಲ್ಲಿಸಬೇಕೆಂದು ಗೂಗಲ್‌ಗೆ ಸೂಚನೆ ನೀಡಿದೆ.

ಪಾವತಿ

ವಿಧಿಸಲಾದ ದಂಡವನ್ನು ಪಾವತಿ ಮಾಡಲು ಹಾಗೂ ಅಗತ್ಯವಿರುವ ಹಣಕಾಸು ವಿವರಗಳು ಮತ್ತು ಪೋಷಕ ದಾಖಲೆಗಳನ್ನು ಒದಗಿಸಲು ಗೂಗಲ್‌ಗೆ 30 ದಿನಗಳ ಸಮಯವನ್ನು ಸಿಸಿಐ ನೀಡಿದೆ. ಜೊತೆಗೆ ದಂಡದ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ, ಗೂಗಲ್‌ನ ವಿವಿಧ ಆದಾಯದ ಡೇಟಾ ಪಾಯಿಂಟ್‌ಗಳಲ್ಲಿ ವ್ಯಾಪಕ ಹಕ್ಕು ನಿರಾಕರಣೆಗಳನ್ನು ಗಮನಿಸಲಾಗಿದೆ ಎಂದು ಆಯೋಗವು ತಿಳಿಸಿದೆ.

ದಂಡ ಯಾಕಾಗಿ?

ದಂಡ ಯಾಕಾಗಿ?

ನ್ಯಾಯೋಚಿತ ವ್ಯಾಪಾರ ನಿಯಂತ್ರಕದ ಪ್ರಕಾರ ( fair trade regulator), ಗೂಗಲ್‌ ಕಂಪೆನಿಯು ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್ ಮತ್ತು ಇತರ ಪರವಾನಗಿಗಳನ್ನು ನೀಡುವ ಕೆಲಸ ಮಾಡುತ್ತದೆ. ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಸರ್ಚ್‌ ಅಪ್ಲಿಕೇಶನ್‌ಗಳು, ವಿಜೆಟ್ ಮತ್ತು ಕ್ರೋಮ್ ಬ್ರೌಸರ್‌ನಂತಹ ಪ್ರಮುಖ ಸರ್ಚ್‌ ಎಂಟ್ರಿ ಸೆಂಟರ್‌ಗಳನ್ನು ಡಿವೈಸ್‌ಗಳಲ್ಲಿ ಪೂರ್ವದಲ್ಲಿಯೇ ಸ್ಥಾಪಿಸಲು ಒತ್ತಡ ಹಾಕುತ್ತಿದ್ದು, ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಪ್ರಯೋಜನವನ್ನು ಈ ಮೂಲಕ ಪಡೆಯುತ್ತಿದೆ. ಇದೆಲ್ಲದರ ಜೊತೆಗೆ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿನ ಯೂಟ್ಯೂಬ್‌ ನಲ್ಲೂ ಸಹ ಈ ಈ ರೀತಿಯ ಪ್ರಾಬಲ್ಯದ ಮೇಲೆ ಆದಾಯವನ್ನು ಪಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಗೂಗಲ್‌

ಪ್ರಮುಖ ವಿಷಯ ಎಂದರೆ ಗೂಗಲ್‌ ಈಗಾಗಲೇ ನಿರ್ಮಾಣ ಮಾಡಿಕೊಂಡಿರುವ ಮಾರುಕಟ್ಟೆಯ ವ್ಯವಸ್ಥೆಯನ್ನು ಎಂದಿಗೂ ಇತರೆ ಸ್ಪರ್ಧಿಗಳು ಎದುರಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಹಾಗೆಯೇ ಗೂಗಲ್‌ನ ಪ್ರತಿಸ್ಪರ್ಧಿಗಳಿಗೆ ಈ ವಿಭಾಗದಲ್ಲಿ ಪ್ರವೇಶ ಪಡೆಯಲು ಭಾರೀ ಅಡೆತಡೆಗಳು ನಿರ್ಮಾಣ ಆಗಲಿವೆ. ವೆಬ್ ಅನಾಲಿಟಿಕ್ಸ್ ಸ್ಟ್ಯಾಟ್‌ಕೌಂಟರ್ ಮಾಹಿತಿ ಪ್ರಕಾರ ಭಾರತದಲ್ಲಿ 95.46% ಸ್ಮಾರ್ಟ್‌ಫೋನ್‌ಗಳು ಸೆಪ್ಟೆಂಬರ್ 2022 ರ ಹೊತ್ತಿಗೆ ಆಂಡ್ರಾಯ್ಡ್‌ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತವೆ. ಹಾಗೆಯೇ 4.09% ಆಪಲ್‌ನ ಐಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆಯಂತೆ.

ದೂರು ಯಾವಾಗ ದಾಖಲಾಗಿತ್ತು?

ದೂರು ಯಾವಾಗ ದಾಖಲಾಗಿತ್ತು?

ಆಂಡ್ರಾಯ್ಡ್‌ ಓಎಸ್‌ ಪರವಾನಗಿಗಳ ಪ್ರಮುಖ ಪೂರೈಕೆದಾರರಾಗಿರುವ ಗೂಗಲ್‌ನ ದುರ್ಬಳಕೆಯ ಕುರಿತು ಸಿಸಿಐ ಮೇ 2019 ರಲ್ಲಿ ತನಿಖೆಗೆ ಆದೇಶ ನೀಡಿತ್ತು. ಆದರೆ, ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಕೈಗೆಟುಕುವ ಹಾಗೆ ಮಾಡುವ ಮೂಲಕ ಹಾಗೂ ಇಂಟರ್ನೆಟ್‌ಗೆ ಸಂಪರ್ಕಿಸಲು ಆಂಡ್ರಾಯ್ಡ್‌ ಲಕ್ಷಾಂತರ ಭಾರತೀಯರನ್ನು ಸಕ್ರಿಯಗೊಳಿಸಿದೆ ಎಂದು ಗೂಗಲ್‌ ಉತ್ತರ ನೀಡಿತ್ತು. ಆದರೆ, ಈ ತನಿಖೆ ಮುಂದುವರೆದಂತೆ ಅಂದರೆ ಸೆಪ್ಟೆಂಬರ್ 2021 ರಲ್ಲಿ ಭಾರತದಲ್ಲಿನ ಪ್ರತಿಸ್ಪರ್ಧಿಗಳನ್ನು ಕಾನೂನುಬಾಹಿರವಾಗಿ ತುಳಿಯಲು ಗೂಗಲ್‌ ತನ್ನ ಪ್ರಾಬಲ್ಯ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಸಿಸಿಐ ಕಂಡುಕೊಂಡಿದೆ.

ಆಂಡ್ರಾಯ್ಡ್ ಓಪನ್ ಸೋರ್ಸ್

ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್ (AOSP) ಮೂಲಕ ಹೆಚ್ಚಿನ ಮೂಲ ಉಪಕರಣ ತಯಾರಕ ಕಂಪೆನಿಗಳು (OEM) ತಮ್ಮದೇ ಆದ ಆಂಡ್ರಾಯ್ಡ್ ಓಎಸ್‌ ಅನ್ನು ಅಭಿವೃದ್ಧಿಪಡಿಸಲು ಮುಂದಾದರೂ ಸಹ ಅದಕ್ಕೆ ಗೂಗಲ್‌ನಿಂದ ಆಂಡ್ರಾಯ್ಡ್‌ ಪರವಾನಿಗಿಯನ್ನು ಪಡೆಯಬೇಕಿತ್ತು. ಈ ವೇಳೆ ಗೂಗಲ್‌ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುವ ಬಗ್ಗೆ ಒತ್ತಡ ನಿರ್ಮಾಣ ಮಾಡಲಾಗುತ್ತಿತ್ತು. ಉದಾಹರಣೆಗೆ ಪ್ಲೇ ಸ್ಟೋರ್‌, ಸೆಕ್ಯೂರಿಟಿ ಅಪ್‌ಡೇಟ್‌, ಹಾಗೂ ಪ್ಲೇ ಪ್ರೊಟೆಕ್ಸ್‌ ಇದರಲ್ಲಿ ಸಾಮಾನ್ಯವಾಗಿ ಇರುತ್ತಿದ್ದವು. ಇವುಗಳನ್ನು ಮೂಲ ಉಪಕರಣ ತಯಾರಕ ಕಂಪೆನಿಗಳು ಏನಾದರೂ ತೆಗೆದು ಹಾಕಿದರೆ ಭಾರೀ ಸಂಕಷ್ಟವನ್ನೇ ಎದುರಿಸಬೇಕಾಗಿತ್ತು.

ಯುಎಸ್‌

ಇದಕ್ಕೂ ಸಹ ನಿದರ್ಶನ ಇದ್ದು, ಯುಎಸ್‌ ಸರ್ಕಾರದ ಆದೇಶದಂತೆ ಗೂಗಲ್‌ ಮೇ 2019 ರಲ್ಲಿ ಹವಾಯ್ ಪರವಾನಗಿಯನ್ನು ಅಮಾನತು ಮಾಡಿತ್ತು. ಆಗ ಅದರ ಷೇರು ದಾಖಲೆ ಮಟ್ಟದಲ್ಲಿ ಇಳಿದಿತ್ತು. ಹೀಗೆ ಹಲವಾರು ರೀತಿಯಲ್ಲಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಹೊತ್ತಿರುವ ಗೂಗಲ್ ಈಗ ಸಿಸಿಐನ ಹದ್ದಿನ ಕಣ್ಗಾವಲಿನಲ್ಲಿದೆ.

Best Mobiles in India

English summary
Google has paid a heavy pnalty for abusing its dominance in the Android smartphone device segment. Competition Commission of India (CCI) has imposed a fine of Rs 1,337.76 crore on Google.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X