ಟ್ವಿಟ್ಟರ್‌, ಫೇಸ್‍ಬುಕ್ ಇನ್‍ಸ್ಟಾಗ್ರಾಂಗಳಿಂದ ದೂರವಿರುವ ಸೆಲೆಬ್ರಿಟಿಗಳು ಇವರು!!..ಕಾರಣ ಏನು?

|

ಸಾಮಾಜಿಕ ಜಾಲತಾಣಗಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇದಕ್ಕೆ ಸೆಲೆಬ್ರಿಟಿಗಳು ಸಹ ಹೊರತಾಗಿಲ್ಲ. ಸೆಲೆಬ್ರಿಟಗಳು ಕೂಡ ತಮ್ಮದೇ ಒಂದು ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಂಡು ಲಕ್ಷಾಂತಹ ಹಿಂಬಾಲಕರನ್ನು ಹೊಂದುತ್ತಾರೆ. ಇನ್ನು ಇವರ ಜಿಮ್‌ ಸೆಲ್ಫೀ, ಟ್ರಾವೆಲ್, ಫುಡ್ ಹ್ಯಾಬಿಟ್ ಈ ಎಲ್ಲದರ ಅಪ್‌ಡೇಟ್ ಪಡೆಯುವ ಮೂಲಕ ಅಭಿಮಾನಿಗಳು ಸಂಭ್ರಮಪಡುತ್ತಾರೆ.

ನಿಜ ಹೇಳಬೇಕೆಂದರೆ ಸಿನಿಮಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಲಕಳೆಯುವುದೇ ಸಿನಿಮಾ ಪ್ರೊಮೋಷನ್‍ಗೂ ಜಾಲತಾಣವೇ ವೇದಿಕೆ ಆಗಿರುವುದರಿಂದ. ಆದರೆ, ಬಹುತೇಕ ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವುದು ಖಂಡಿತಾ ಇಷ್ಟವಿಲ್ಲವಂತೆ. ಸೆಲೆಬ್ರಿಟಿ ಆಗಿರುವುದೇ ಇದಕ್ಕೆ ಕಾರಣ ಸಹ ಎನ್ನುತ್ತಾರೆ ಹಲವು ಸೆಲೆಬ್ರಿಟಿಗಳು.

ಟ್ವಿಟ್ಟರ್‌, ಫೇಸ್‍ಬುಕ್ ಇನ್‍ಸ್ಟಾಗ್ರಾಂಗಳಿಂದ ದೂರವಿರುವ ಸೆಲೆಬ್ರಿಟಿಗಳು ಇವರು!!

ಸೆಲೆಬ್ರಿಟಿ ಆಗಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ 'ಏನಾದರೂ ವ್ಯಕ್ತಪಡಿಸಿದರೆ, ಅದಕ್ಕೆ ಹತ್ತು ದೃಷ್ಟಿಕೋನಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ, ಟ್ವಿಟ್ಟರ್‌, ಫೇಸ್‍ಬುಕ್ ಇನ್‍ಸ್ಟಾಗ್ರಾಂ ಎಲ್ಲವೂ ಅವರಿಂದ ದೂರ ಉಳಿದಿದ್ದೀವಿ ಎಂದು ಸೆಲೆಬ್ರಿಟಿಗಳೇ ಹೇಳುತ್ತಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಸೆಲೆಬ್ರಿಟಿಗಳ ಪಟ್ಟಿಯನ್ನು ನಾವು ನಿಮಗೆ ನಿಡುತ್ತಿದ್ದೇವೆ.

ಐಶ್ವರ್ಯ ಬಚ್ಚನ್!!

ಐಶ್ವರ್ಯ ಬಚ್ಚನ್!!

ವಿಶ್ವಸುಂದರಿ ಪಟ್ಟದ ಜೊತೆ ನಟನೆಯಲ್ಲಿ ವಿಶ್ವವನ್ನೇ ಗೆದ್ದ ಕರ್ನಾಟಕದ ಮಗಳು ಐಶ್ವರ್ಯ ರೈ(ಬಚ್ಚನ್) ಅವರು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಾರೆ. ಅವರ ಮಾವ ಅಮಿತಾಭ್ ಬಚ್ಚನ್ ಹಾಗೂ ಪತಿ ಅಭಿಷೇಕ್ ಸದಾ ಸಾಮಾಜಿಕ ತಾಣಗಳಲ್ಲಿ ಬ್ಯುಸಿಯಾಗಿದ್ದರೂ ಸಹ ಐಶ್ವರ್ಯ ರೈ ಮಾತ್ರ ಇವುಗಳಿಂದೆಲ್ಲ ದೂರ ಇದ್ದಾರೆ. ಏಕೆ ಹೀಗೆ ಎಂದರೆ ‘ನನಗೆ ತಂತ್ರಜ್ಞಾನದಲ್ಲಿ ಅಷ್ಟೆಲ್ಲ ಆಸಕ್ತಿಯಿಲ್ಲ. ಆದ್ದರಿಂದ ಇವುಗಳೆಡೆಗೂ ನಾನು ಯೋಚಿಸಿಲ್ಲ' ಎಂದು ಐಶ್ವರ್ಯ ರೈ ಹೇಳುತ್ತಾರೆ.

ರಣಬೀರ್ ಕಪೂರ್!!

ರಣಬೀರ್ ಕಪೂರ್!!

ಬಾಲಿವುಡ್‌ನಲ್ಲಿ ಮೋಸ್ಟ್ ಸ್ಮಾರ್ಟ್‌ ಮ್ಯಾನ್ ಎಂದೇ ಕರೆಸಿಕೊಳ್ಳುವ ರಣಬೀರ್ ಕಪೂರ್ ಅವರರು ಸಹ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಾರೆ. ತಂದೆ ರಿಷಿ ಕಪೂರ್ ಅವರೇ ಸದಾ ಟ್ವಿಟ್ಟರ್‌ನಲ್ಲಿ ಬ್ಯುಸಿಯಾಗಿದ್ದರೂ ಸಹ ರಣಬೀರ್ ಮಾತ್ರ ಇವುಗಳಿಂದ ಮಾರುದ್ದ ದೂರವಿದ್ದಾರೆ. ಸಾಮಾಜಿಕ ಜಾಲತಾಣಗಳೆಲ್ಲವೂ ತಲೆನೋವು. ನನ್ನ ಚಿತ್ರಗಳ ಮೂಲಕವೇ ಅಭಿಮಾನಿಗಳೊಂದಿಗೆ ಮಾತಾಡುತ್ತೇನೆ ಎಂದು ನೇರವಾಗಿಯೇ ಹೇಳುತ್ತಾರೆ ಕಪೂರ್ ಜೂನಿಯರ್.

ಸೈಫ್ ಅಲಿ ಖಾನ್!!

ಸೈಫ್ ಅಲಿ ಖಾನ್!!

ಬಾಲಿವುಡ್ ದಿಗ್ಗಜರಲ್ಲಿ ಓರ್ವರಾಗಿರುವ ಸೈಫ್ ಅಲಿ ಖಾನ್ ಅವರು ಕೂಡ ಸಾಮಾಜಿಕ ತಾಣಗಳಿಂದ ದೂರವೇ ಉಳಿದಿದ್ದಾರೆ. ಟ್ವಿಟ್ವರ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಸ್ನಾಪ್‍ಚಾಟ್ ಇವೆಲ್ಲದರಿಂದ ಇವರು ದೂರವಿದ್ದಾರೆ. ಹಾಗಂತ, ಅವರು ಸಾಮಾಜಿಕ ತಾಣಗಳ ವಿರುದ್ಧವೂ ಇಲ್ಲ. ನಾವು ನೀಡುವ ಹೇಳಿಕೆ ಕೆಲವೊಮ್ಮೆ ತಿರುಚಿ ದೊಡ್ಡದು ಎನ್ನಿಸಿಬಿಡುತ್ತದೆ. ಅದು ನನ್ನ ಅಭಿಮಾನಿಗಳಿಗೂ ಇಷ್ಟವಾಗದೇ ಇರಬಹುದು. ಇಂಥ ವಿವಾದಗಳು ನನಗೇಕೆ ಎಂದೇ ಇವುಗಳಿಂದ ದೂರವಿದ್ದೇನೆ' ಎಂದು ಖಾನ್ ಹೇಳಿಕೊಂಡಿದ್ದಾರೆ.

ಇಮ್ರಾನ್ ಖಾನ್!

ಇಮ್ರಾನ್ ಖಾನ್!

ಬಾಲಿವುಡ್‌ನ ‘ಚಾಕೊಲೇಟ್ ಬಾಯ್' ಎಂದೇ ಕರೆಸಿಕೊಳ್ಳುವ ಇಮ್ರಾನ್ ಖಾನ್ ಅವರು, ‘ನನ್ನ ಖಾಸಗಿ ಜೀವನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ನನಗಿಷ್ಟವಿಲ್ಲ' ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ತಾಣಗಳಿಂದ ಅಭಿಮಾನಿಗಳಿಗೆ ಹತ್ತಿರವಾಗುವ ಅವಶ್ಯಕತೆ ಇಮ್ರಾನ್ ಖಾನ್ ಅವರಿಗೆ ಇಲ್ಲವಂತೆ. ಟ್ವಿಟ್ಟರ್‌ನಲ್ಲಿ ಖಾತೆ ತೆರೆದರೂ ಅದರಿಂದ ಕಿರಿಕಿರಿಯೇ ಹೆಚ್ಚಾಗಿ ಡಿಆಕ್ಟಿವೇಟ್ ಮಾಡಿದೆ ಎನ್ನುತ್ತಾರೆ ಇಮ್ರಾನ್ ಖಾನ್.

ರಾಣಿ ಮುಖರ್ಜಿ!

ರಾಣಿ ಮುಖರ್ಜಿ!

ರಾಣಿ ಮುಖರ್ಜಿ ಹೆಸರಿನಲ್ಲಿ ಹತ್ತಾರು ಖಾತೆಗಳು ನಿಮಗೆ ಸೋಶಿಯಲ್ ಮಿಡಿಯಾದಲ್ಲಿ ಸಿಗುತ್ತವೆ. ಆದರೆ, ಆದರೆ ‘ಅವ್ಯಾವೂ ನನ್ನದಲ್ಲ; ಫೇಕ್. ನಾನು ಯಾವುದೇ ಸಾಮಾಜಿಕ ಜಾಲತಾಣಗಳ ಖಾತೆ ಹೊಂದಿಲ್ಲ. ನನಗೆ ಅವಶ್ಯಕತೆ ಎನ್ನಿಸಿಲ್ಲ ಎಂದು ರಾಣಿ ಮುಖರ್ಜಿ ಹೇಳಿದ್ದಾರೆ. ಖಾಸಗಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯ ನೀಡುವ ಪೈಕಿ ನಟಿ ರಾಣಿ ಮುಖರ್ಜಿಯೂ ಒಬ್ಬರಂತೆ. ಖಾಸಗಿ ಜೀವನ ಖಾಸಗಿಯಾಗಿಯೇ ಇರಬೇಕು' ಎಂದು ಅವರು ಅಭಿಪ್ರಾಯಪಡುತ್ತಾರೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಕಂಗನಾ ರಣೌತ್

ಕಂಗನಾ ರಣೌತ್

ತನ್ನ ನಟನೆಯಿಂದಲೇ ಬಾಲಿವುಡ್‌ನಲ್ಲಿ ಪ್ರಖ್ಯಾತಿ ಗಳಿಸಿದ ಬೋಲ್ಡ್ ಹಾಗೂ ಪ್ರತಿಭಾವಂತ ನಟಿ ಕಂಗನಾ ರಣೌತ್ ಅವರು ಸಹ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಾರೆ. 'ಸಾಮಾಜಿಕ ಜಾಲತಾಣಗಳು ಏಕಾಂತತೆಯನ್ನು ಬಿಂಬಿಸಿಕೊಳ್ಳುವ ತಾಣವಾಗುತ್ತಿವೆ. ನನಗೆ ಇದರ ಅಗತ್ಯವಿಲ್ಲ. ನನ್ನ ಖಾಸಗೀತನವನ್ನು ನಾನಷ್ಟೇ ಅನುಭವಿಸಬೇಕಲ್ಲವೇ?" ಎಂದು ಪ್ರರ್ಶನಿಸುತ್ತಾರೆ. ಹಾಗಾಗಿಯೇ, ಜಾಲತಾಣಗಳ ಗೋಜಿಗೆ ಹೋಗಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

Best Mobiles in India

English summary
There are definitely perks and risks associated with using social media. People are able to get. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X