CES 2022: ನೋಕಿಯಾದಿಂದ ಮತ್ತೆ ನಾಲ್ಕು ಬಜೆಟ್ ಹೊಸ ಫೋನ್ ಅನಾವರಣ!

|

ಮೊಬೈಲ್‌ ಕ್ಷೇತ್ರದಲ್ಲಿ ದಿಗ್ಗಜನಾಗಿ ಮೆರೆದ ಜನಪ್ರಿಯ ನೋಕಿಯಾ ಸಂಸ್ಥೆಯು ಆಂಡ್ರಾಯ್ಡ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಇಂದಿಗೂ ತನ್ನ ಸ್ಥಾನ ಉಳಿಸಿಕೊಂಡಿದೆ. ನೋಕಿಯಾ ಸಂಸ್ಥೆಯು ಈಗ ಹೊಸದಾಗಿ ನೋಕಿಯಾ C100, ನೋಕಿಯಾ C200, ನೋಕಿಯಾ G100 ಮತ್ತು ನೋಕಿಯಾ G400 ಹೆಸರಿನ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ನೋಕಿಯಾ HMD ಗ್ಲೋಬಲ್ CES 2022 ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದೆ.

ಕಾಣಿಸಿಕೊಂಡಿದ್ದು

ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯು ನೂತನವಾಗಿ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಪ್ರದರ್ಶನ ಮಾಡಿದೆ. ಈ ನಾಲ್ಕು ಹೊಸ ಫೋನ್‌ಗಳಲ್ಲಿ ಎರಡು C ಸರಣಿಯಲ್ಲಿ ಕಾಣಿಸಿಕೊಂಡಿದ್ದು, ಮತ್ತೆರಡು ಫೋನ್‌ಗಳು G ಸರಣಿಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಹೊಸ ನೋಕಿಯಾ C100 ಮತ್ತು ನೋಕಿಯಾ C200 ಫೋನ್‌ಗಳು ಆರಂಭಿಕ ವೇರಿಯಂಟ್‌ ಮಾದರಿಯಲ್ಲಿ ಫೀಚರ್ಸ್‌ಗಳನ್ನು ಒಳಗೊಂಡಿವೆ. ನೋಕಿಯಾ G100 ಮತ್ತು ನೋಕಿಯಾ G400 ಬಜೆಟ್‌ ಮಾದರಿಯ ಸೌಲಭ್ಯಗಳನ್ನು ಪಡೆದಿವೆ. ಹಾಗಾದರೇ ನೋಕಿಯಾ C100, ನೋಕಿಯಾ C200, ನೋಕಿಯಾ G100 ಮತ್ತು ನೋಕಿಯಾ G400 ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

CES ಕಾರ್ಯಕ್ರಮ

CES ಕಾರ್ಯಕ್ರಮ

CES (Consumer Electronics Show) - ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ಶೋ ಕಾರ್ಯಕ್ರಮವು ಹೊಸ ಸ್ಮಾರ್ಟ್‌ ಗ್ಯಾಡ್ಜೆಟ್ಸ್‌ಗಳಿಗೆ ವೇದಿಕೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷವು ಹೊಸ ಡಿವೈಸ್‌ಗಳು ಅನಾವರಣ ಆಗುತ್ತವೆ.

ನೋಕಿಯಾ C100 ಮತ್ತು ನೋಕಿಯಾ C200 ಫೀಚರ್ಸ್‌

ನೋಕಿಯಾ C100 ಮತ್ತು ನೋಕಿಯಾ C200 ಫೀಚರ್ಸ್‌

ನೋಕಿಯಾ C100 ಮತ್ತು ನೋಕಿಯಾ C200 ಫೋನ್‌ಗಳು ಮೀಡಿಯಾ ಟೆಕ್ ಹಿಲಿಯೋ A22 (MediaTek Helio A22) ಚಿಪ್‌ಸೆಟ್‌ ಪ್ರೊಸೆಸರ್‌ನ ಪವರ್ ಒಳಗೊಂಡಿವೆ. ನೋಕಿಯಾ C200 ದೊಡ್ಡದಾದ 6.1 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ದೊಂದಿಗೆ ಬರುತ್ತದೆ. ಹಾಗೆಯೇ ಈ ಎರಡೂ ಫೋನ್‌ಗಳು 3 GB RAM ಜೊತೆಗೆ 32 GB ಆಂತರಿಕ ಸಂಗ್ರಹಣೆಯ ಸಾಮರ್ಥ್ಯ ದೊಂದಿಗೆ ಬರುತ್ತದೆ. ಇದರೊಂದಿಗೆ ನೋಕಿಯಾ C100 ಮತ್ತು ನೋಕಿಯಾ C200 ಫೋನ್‌ಗಳು 4,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿವೆ.

ನೋಕಿಯಾ G100 ಫೀಚರ್ಸ್‌

ನೋಕಿಯಾ G100 ಫೀಚರ್ಸ್‌

ನೋಕಿಯಾ G100 ಸ್ಮಾರ್ಟ್‌ಫೋನ್ 6.5 ಇಂಚಿನ HD + ಡಿಸ್‌ಪ್ಲೇ ಯನ್ನು ಹೊಂದಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 615 SoC (Qualcomm Snapdragon 615 SoC) ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಚಾಲಿತವಾಗಿದೆ. ಹಾಗೆಯೇ ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಅಪ್‌ ರಚನೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನಿನಲ್ಲಿ ಪವರ್ ಬಟನ್‌ನಲ್ಲಿ ಕೆಪಾಸಿಟಿವ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಂಯೋಜಿಸಲಾಗಿದೆ. ಅಲ್ಲದೇ ಈ ಫೋನ್ 5,000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ನೋಕಿಯಾ G400 ಫೀಚರ್ಸ್‌

ನೋಕಿಯಾ G400 ಫೀಚರ್ಸ್‌

ನೋಕಿಯಾ G400 ಸ್ಮಾರ್ಟ್‌ಫೋನ್ ಇದು ಪ್ರಸ್ತುತ ಕಂಪನಿಯ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಕೊಡುಗೆಗಳಲ್ಲಿ ಒಂದಾಗಿದೆ. ಈ ಫೋನ್ 120 Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಸಾಮರ್ಥ್ಯ ದೊಂದಿಗೆ ಬರುತ್ತದೆ. ಹಾಗೆಯೇ ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 480 5G SoC (Qualcomm Snapdragon 480 5G SoC) ಪ್ರೊಸೆಸರ್‌ದ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಲ್ಲದೇ 6 GB RAM ಅನ್ನು 128 GB ಆಂತರಿಕ ಸಂಗ್ರಹಣೆ ಯೊಂದಿಗೆ ಜೋಡಿಸಲಾಗಿದೆ. ಇದು ಸೆಕೆಂಡರಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ತೃತೀಯ ಮ್ಯಾಕ್ರೋ ಲೆನ್ಸ್ ಜೊತೆಗೆ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ ವನ್ನು ಒಳಗೊಂಡಿರುವ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಅಪ್‌ ನೊಂದಿಗೆ ಬರುತ್ತದೆ.

Best Mobiles in India

English summary
CES 2022: Nokia Launches Four new Budget Smartphones. Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X