ಹೊಸ ಸ್ಮಾರ್ಟ್‌ಟಿವಿ ಅನಾವರಣ!..ಈ ಟಿವಿಗೆ ವಿದ್ಯುತ್ ಬೇಡವೇ ಬೇಡ!?

|

ಎಲೆಕ್ಟ್ರಾನಿಕ್ ಟ್ರೇಡ್ ಶೋ CES 2023 ಕಾರ್ಯಕ್ರಮದಲ್ಲಿ ಈಗಾಗಲೇ ಹಲವು ಅಚ್ಚರಿಯ ಡಿವೈಸ್‌ಗಳು ಅನಾವರಣ ಆಗಿವೆ. ಮುಖ್ಯವಾಗಿ ಕೆಲವು ಸ್ಮಾರ್ಟ್‌ ಟಿವಿ ಹಾಗೂ ಡಿಸ್‌ಪ್ಲೇ ಮಾದರಿಯ ಸಾಧನಗಳು ಗ್ರಾಹಕರು ಹುಬ್ಬೇರಿಸುವಂತಹ ಮಾಡಿವೆ. ಈ ಕಾರ್ಯಕ್ರಮದಲ್ಲಿ ಅನಾವರಣ ಆಗಿರುವ ಸ್ಮಾರ್ಟ್‌ಟಿವಿಯೊಂದು ನಿಜಕ್ಕೂ ಭಾರೀ ಅಚ್ಚರಿಯನ್ನು ಮೂಡಿಸಿದ್ದು, ಈ ಸ್ಮಾರ್ಟ್‌ ಟಿವಿಗೆ ವಿದ್ಯುತ್‌ ಬೇಡವೇ ಬೇಡ!.

ಎಲೆಕ್ಟ್ರಾನಿಕ್ ಟ್ರೇಡ್ ಶೋ

ಹೌದು, ಈ ವರ್ಷದ ಎಲೆಕ್ಟ್ರಾನಿಕ್ ಟ್ರೇಡ್ ಶೋ CES 2023 ಕಾರ್ಯಕ್ರಮವು ಜನವರಿ 5 ರಿಂದ ಪ್ರಾರಂಭವಾಗಿದ್ದು, ಜನವರಿ 8 ರಂದು ಮುಕ್ತಾಯವಾಗಿದೆ. ಈ ಎಲೆಕ್ಟ್ರಾನಿಕ್ ಟ್ರೇಡ್ ಶೋ ಕಾರ್ಯಕ್ರಮದಲ್ಲಿ 'ನೆಕ್ಸ್ಟ್‌ ಜೆನರೇಷನ್ ಸ್ಮಾರ್ಟ್‌ ಟಿವಿ' ಯೊಂದು (ಮುಂದಿನ ಪೀಳಿಗೆಯ) ಅನಾವರಣ ಆಗಿದ್ದು, ಈ ಟಿವಿಯು ನಿರಂತರ ವಿದ್ಯುತ್‌ ಬೇಡುವುದಿಲ್ಲ. ಈ ಟಿವಿಯು ಚಾರ್ಜಿಂಗ್ ಮಾದರಿಯ ಸೌಲಭ್ಯ ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ 30 ದಿನಗಳ ವರೆಗೂ ಟಿವಿ ವೀಕ್ಷಿಸಬಹುದಾಗಿದೆ ಎಂದು ಹೇಳಲಾಗಿದೆ. ಅಂದಹಾಗೆ ಈ ಟಿವಿಯು 55 ಇಂಚಿನ ಆಯ್ಕೆಯನ್ನು ಒಳಗೊಂಡಿದೆ.

ವಿದ್ಯುತ್

ಈ ಸ್ಮಾರ್ಟ್ ಟಿವಿ ವಾಯರ್‌ಲೆಸ್‌ ಆಗಿದ್ದು, ನಿರಂತರ ವಿದ್ಯುತ್ ಬಳಸುವುದಿಲ್ಲ. ಈ ಸ್ಮಾರ್ಟ್ ಟಿವಿ ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುವ ಸೌಲಭ್ಯ ಪಡೆದಿದ್ದು, 30 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅವಧಿಯನ್ನು ಹೊಂದಿದೆ. ಹೀಗಾಗಿ ನಿರ್ದಿಷ್ಟವಾಗಿ ಮಧ್ಯಂತರ ಅಥವಾ ಅಸ್ತಿತ್ವದಲ್ಲಿಲ್ಲದ ವಿದ್ಯುತ್ ಇರುವ ಸ್ಥಳಗಳಲ್ಲಿ, ಈ ಸ್ಮಾರ್ಟ್ ಟಿವಿ ಉತ್ತಮ ಬಳಕೆಯನ್ನು ಸಾಬೀತುಪಡಿಸಬಹುದು. ಹಾಗಾದರೆ ಮಾರುಕಟ್ಟೆಗೆ ಎಂಟ್ರಿ ಪಡೆದಿರುವ ಈ ಕುತೂಹಲಕಾರಿ ಟಿವಿಯ ಫೀಚರ್ಸ್‌ಗಳೇನು? ಇದರ ಬೆಲೆ ಎಷ್ಟು? ಹಾಗೂ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ನಿರಂತರ ವಿದ್ಯುತ್ ಅಗತ್ಯ ಇಲ್ಲ

ನಿರಂತರ ವಿದ್ಯುತ್ ಅಗತ್ಯ ಇಲ್ಲ

ಕೆಲವು ಪ್ರದೇಶದಲ್ಲಿ ಹೆಚ್ಚಾಗಿ ವಿದ್ಯುತ್ ಕಡಿತವಾಗುತ್ತವೆ ಹಾಗೂ ವಿದ್ಯುತ್ ಇಲ್ಲದಾಗಲೂ ಟಿವಿ ವೀಕ್ಷಿಸಲು ಈ ಸ್ಮಾರ್ಟ್ ಟಿವಿ ಅತ್ಯುತ್ತಮವಾಗಿದೆ. ಆರಂಭಿಕ ಚಾರ್ಜ್ ನಂತರ ಪುನರಾವರ್ತಿತ ಚಾರ್ಜಿಂಗ್ ಸಮಸ್ಯೆ ಅಲ್ಲ. ಈ ಸ್ಮಾರ್ಟ್ ಟಿವಿ 55 ಇಂಚಿನ ರೆಸಲ್ಯೂಶನ್‌ನಲ್ಲಿ ಕಂಟೆಂಟ್‌ ಡಿಸ್‌ಪ್ಲೇ ಮಾಡಬಹುದಾಗಿದೆ. ಈ ನೂತನ ಸ್ಮಾರ್ಟ್ ಟಿವಿ ವೈರ್‌ಲೆಸ್ ಆಗಿದೆ ಮತ್ತು ನಿರಂತರ ವಿದ್ಯುತ್ ಬಳಸುವುದಿಲ್ಲ.

ಬ್ಯಾಟರಿ ಬದಲಾಯಿಸಬಹುದು

ಬ್ಯಾಟರಿ ಬದಲಾಯಿಸಬಹುದು

ಬಿಸಿ-ಸ್ವಾಪ್ ಮಾಡಬಹುದಾದ (hot-swappable) ಬ್ಯಾಟರಿಯನ್ನು ಬಳಸಲಾಗಿದೆ. ಲ್ಯಾಪ್‌ಟಾಪ್‌ನಂತೆಯೇ, ಸ್ಮಾರ್ಟ್ ಟಿವಿಯ ಬ್ಯಾಟರಿಯನ್ನು ಅದರ ಹಿಂಭಾಗದಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ, ಬ್ಯಾಟರಿ ಡಿಸ್ಚಾರ್ಜ್ ಆಗುತ್ತಿದ್ದಂತೆ ಅದನ್ನು ತೆಗೆದುಹಾಕಬಹುದು. ಅಲ್ಲದೇ ಸುಲಭವಾಗಿ ರೀಚಾರ್ಜ್ ಸಹ ಮಾಡಬಹುದು. ಸಕ್ರಿಯ ಲೂಪ್ ವ್ಯಾಕ್ಯೂಮ್ ಸಿಸ್ಟಮ್ ಅನ್ನು ಸ್ಮಾರ್ಟ್ ಟಿವಿಗಳೊಂದಿಗೆ ಅಳವಡಿಸಲಾಗಿದೆ. ಹೀಗಾಗಿ ಈ ಟಿವಿಯು ತೆಳುವಾದ ರಚನೆಯಲ್ಲಿ ಕಾಣಿಸಿಕೊಂಡಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವ ಈ ಸ್ಮಾರ್ಟ್ ಟಿವಿಯು ಕನೆಕ್ಟರ್ ಅನ್ನು ಹೊಂದಿಲ್ಲ. ಇದು ಹಿಂತೆಗೆದುಕೊಳ್ಳುವ ಕ್ಯಾಮರಾ ವ್ಯವಸ್ಥೆಯ ರಚನೆಯನ್ನು ಪಡೆದಿದೆ. ಇದರ ಸಹಾಯದಿಂದ ಬಳಕೆದಾರರು ಕೆಲವು ಸನ್ನೆಗಳನ್ನು ಬಳಸಿಕೊಂಡು ಟಿವಿಯನ್ನು ಕಂಟ್ರೋಲ್ ಮಾಡಬಹುದಾಗಿದೆ. ಈ ಟಿವಿಗೆ ರಿಮೋಟ್ ಕಂಟ್ರೋಲ್ ಅಗತ್ಯವಿಲ್ಲ. ಬದಲಿಗೆ ಟಿವಿ ನಿಯಂತ್ರಿಸಲು ಟಚ್ ಕಂಟ್ರೋಲ್‌ ಮತ್ತು ವಾಯಿಸ್‌ ಕಮಾಂಡ್‌ ಆಯ್ಕೆ ಬಳಸಬಹುದು.

ಬೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಬೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಮಾರುಕಟ್ಟೆಯಲ್ಲಿ ಹೊಸ ಅಚ್ಚರಿ ಡಿವೈಸ್‌ ಎನಿಸಿಕೊಂಡಿರುವ ಈ ಸ್ಮಾರ್ಟ್‌ ಟಿವಿ ಬೆಲೆಯು 2,48,319 ರೂ. ಎನ್ನಲಾಗಿದೆ. ಅಂದಹಾಗೆ ಈ ಟಿವಿಯ ಮಾರಾಟವು 2023 ರಲ್ಲಿ ಅಂತ್ಯದೊಳಗೆ ಪ್ರಾರಂಭವಾಗುವ ಸಾಧ್ಯತೆ ಇದೆ.

Best Mobiles in India

English summary
CES 2023: Charge this Tv once and run without electricity for a month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X