CES 2023: ಸ್ಮಾರ್ಟ್‌ಟಿವಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸ್ಯಾಮ್‌ಸಂಗ್‌!

|

ಟೆಕ್‌ ವಲಯದ ಅತಿ ದೊಡ್ಡ ಈವೆಂಟ್‌ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2023ಕ್ಕೆ ಚಾಲನೆ ದೊರೆತಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಶೋನಲ್ಲಿ ವಿಶ್ವದ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮ ವಿವಿಧ ಮಾದರಿಯ ಡಿವೈಸ್‌ಗಳನ್ನು ಅನಾವರಣಗೊಳಿಸಲಿವೆ. ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದಕ್ಕೆ ಇದು ವಿಶ್ವದ ಅತಿದೊಡ್ಡ ವೇದಿಕೆಯಾಗಿದೆ. ಇದೇ ಶೋ ನಲ್ಲಿ ಇದೀಗ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಟಿವಿ ಸರಣಿಯನ್ನು ಅನಾವರಣಗೊಳಿಸಿದೆ.

CES 2023

ಹೌದು, CES 2023 ರಲ್ಲಿ, ಸ್ಯಾಮ್‌ಸಂಗ್ ಕಂಪೆನಿ ಹೊಸ QD-OLED, AI-ಚಾಲಿತ ನಿಯೋ QLED, ಮೈಕ್ರೋ LED, ಮತ್ತು OLED ಟಿವಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಸ್ಯಾಮ್‌ಸಂಗ್‌ ಪರಿಚಯಿಸಿರುವ ಹೊಸ ಸ್ಮಾರ್ಟ್‌ಟಿವಿಗಳ ಡಿಸ್‌ಪ್ಲೇ ಟೆಕ್ನಾಲಜಿಗಿಂತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ವರ್ಧಿತ ಚಿತ್ರ ಸಂಸ್ಕರಣೆಯ ಮೇಲೆ ಗಮನಹರಿಸಿದೆ. ಇದರಿಂದ ಉತ್ತಮ ವೀಕ್ಷಣೆಯ ಅನುಭವವನ್ನು ನೀಡಲಿದೆ ಎನ್ನಲಾಗಿದೆ. ಇನ್ನುಳಿದಂತೆ ಸ್ಯಾಮ್‌ಸಂಗ್‌ ಪರಿಚಯಿಸಿರುವ ಹೊಸ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ QD-OLED

ಸ್ಯಾಮ್‌ಸಂಗ್‌ QD-OLED

ಸ್ಯಾಮ್‌ಸಂಗ್‌ ಪರಿಚಯಿಸಿರುವ ಹೊಸ ಸ್ಮಾರ್ಟ್‌ಟಿವಿ ಸರಣಿಯಲ್ಲಿ ಸ್ಯಾಮ್‌ಸಂಗ್‌ QD-OLED ಟಿವಿಗಳು ಸೇರಿವೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು 2,000 ನೀಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿವೆ ಎನ್ನಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಗಳನ್ನು ಯಾವುದೇ ಆಂಗಲ್‌ನಿಂದ ನೋಡಿದರೂ ನೀವು ಅತ್ಯುತ್ತಮ ಫಿಕ್ಚರ್‌ ವಿಶ್ಯುಯಲ್ಸ್‌ ಅನ್ನು ನೋಡಲು ಸಾಧ್ಯವಾಗಲಿದೆ. ಇನ್ನು ಸ್ಯಾಮ್‌ಸಂಗ್‌ ಪರಿಚಯಿಸಿರುವ ಹೊಸ 4K QD-OLED ಸರಣಿಯ ಟಿವಿಗಳು 49-ಇಂಚಿನ, 55-ಇಂಚಿನ, 65-ಇಂಚಿನ ಮತ್ತು 77-ಇಂಚಿನ ಗಾತ್ರದ ಆಯ್ಕೆಗಳಲ್ಲಿ ಬರಲಿದೆ.

ಕಂಪೆನಿಯ

ಸ್ಯಾಮ್‌ಸಂಗ್‌ ಕಂಪೆನಿಯ QD-OLED ಸರಣಿಯ ಟಿವಿಗಳಲ್ಲಿ ಅಪ್‌ಗ್ರೇಡ್ ಮಾಡಿದ OLED ಹೈಪರ್ ಎಫಿಶಿಯೆಂಟ್ EL ಮೆಟೀರಿಯಲ್ ಅನ್ನು ಬಳಸಲಾಗಿದೆ. ಜೊತೆಗೆ ಇಂಟೆಲಿಸೆನ್ಸ್‌ AI ಅನ್ನು ಒಳಗೊಂಡಿರುವುದರಿಂದ ಈ ಟಿವಿಗಳ ಬ್ರೈಟ್‌ನೆಸ್‌ 2,000 ನಿಟ್ಸ್‌ಗಳವರೆಗೆ ತಲುಪುತ್ತದೆ. ಹೊಸ ಮಾದರಿಯ ತಂತ್ರಜ್ಞಾನ ಹೊಂದಿರುವ ಈ ಟಿವಿಗಳು LG ಕಂಪೆನಿಯ Mini-LED ಮತ್ತು OLED ಟಿವಿಗಳಿಗೆ ಪೈಪೋಟಿ ನೀಡಲಿದೆ ಎದು ಹೇಲಾಗಿದೆ.

ನಿಯೋ ಕ್ಯೂಎಲ್‌ಇಡಿ

ನಿಯೋ ಕ್ಯೂಎಲ್‌ಇಡಿ

ಸ್ಯಾಮ್‌ಸಂಗ್‌ ನ್ಯೂ ನಿಯೋ ಕ್ಯೂಎಲ್‌ಇಡಿ ಟಿವಿಗಳು ಸ್ಯಾಮ್‌ಸಂಗ್ ಕಂಪೆನಿ ಪರಿಚಯಿಸಿರುವ ಮತ್ತೊಂದು ಸ್ಮಾರ್ಟ್‌ಟಿವಿ ಸರಣಿಯಾಗಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ನ್ಯೂರಲ್ ಕ್ವಾಂಟಮ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಚಿತ್ರವನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ ಅನ್ನು ಬಳಸಲಿದೆ ಎಂದು ಹೇಳಲಾಗಿದೆ. ಜೊತೆಗೆ ಮೊದಲಿಗಿಂತ ಹೆಚ್ಚು ಕಾಂಟ್ರಾಸ್ಟ್, ಬ್ರೈಟ್‌ನೆಸ್ ಮತ್ತು ಕಲರ್‌ನೊಂದಿಗೆ ರಿಯಲ್‌ ಇಮೇಜ್‌ ತೋರಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ರಿಯಲ್‌ ಟೈಂ ಹೈ ಡೈನಾಮಿಕ್ ರೇಂಜ್ ಎಫೆಕ್ಟ್‌ಗಳನ್ನುಅನ್ವಯಿಸಲು ಅಲ್ಗಾರಿದಮ್‌ನೊಂದಿಗೆ ಜೋಡಿಸಲಾಗಿದೆ.

ನಿಯೋ

ಇನ್ನು ನಿಯೋ QLED ಸ್ಮಾರ್ಟ್‌ಟಿವಿಗಳಲ್ಲಿ ಸಾಮಾನ್ಯ SDR ವಿಷಯವು ಸ್ವಯಂಚಾಲಿತವಾಗಿ HDR ಆಗಿ ಪರಿವರ್ತನೆಯಾಗುತ್ತದೆ. ಇದು ಸ್ಮಾರ್ಟ್ ಹೋಮ್ ಪ್ಲಾಟ್‌ಫಾರ್ಮ್‌ಗಳು, ಅಪ್ಲಿಕೇಶನ್‌ಗಳು ಮತ್ತು ಡಿವೈಸ್‌ಗಳಿಗೆ ಹೊಸ ಉದ್ಯಮ ಮಾನದಂಡವಾದ ಮ್ಯಾಟರ್ ಅನ್ನು ಬೆಂಬಲಿಸುತ್ತದೆ. ಅಂದರೆ ಬಳಕೆದಾರರು ಸ್ಯಾಮ್‌ಸಂಗ್ ಟಿವಿಗೆ ಥರ್ಡ್‌ ಪಾರ್ಟಿ ಡಿವೈಸ್‌ಗಳನ್ನು ಸುಲಭವಾಗಿ ಕನೆಕ್ಟ್‌ ಮಾಡಬಹುದಾಗಿದೆ.

ಮೈಕ್ರೋ ಎಲ್‌ಇಡಿ

ಮೈಕ್ರೋ ಎಲ್‌ಇಡಿ

ಸ್ಯಾಮ್‌ಸಂಗ್ ಮೈಕ್ರೋ ಎಲ್‌ಇಡಿ ಟಿವಿ ಸರಣಿಯು 50 ಇಂಚುಗಳಿಂದ 140 ಇಂಚುಗಳವರಿಗಿನ ಸ್ಮಾರ್ಟ್‌ಟಿವಿಗಳನ್ನು ಹೊಂದಿದೆ.

ಸ್ಯಾಮ್‌ಸಂಗ್‌ OLED

ಸ್ಯಾಮ್‌ಸಂಗ್‌ OLED

ಸ್ಯಾಮ್‌ಸಂಗ್‌ ಕಂಪೆನಿಯ OLED ಸ್ಮಾರ್ಟ್‌ಟಿವಿ ಸರಣಿಯಲ್ಲಿ ಹೊಸದಾಗಿ 77-ಇಂಚಿನ OLED ಮಾದರಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಟಿವಿಗಳನ್ನು ಕಳೆದ ವರ್ಷ ಕೂಡ ಬಿಡುಗಡೆ ಮಾಡಿತ್ತು ಅನ್ನೊದು ಗಮನಿಸಬೇಕಾದ ವಿಚಾರ.

Best Mobiles in India

English summary
CES 2023: Samsung announced a new lineup of televisions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X