CES 2023: ಭಿನ್ನ ಗೇಮಿಂಗ್ ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ ಅನಾವರಣ ಮಾಡಿದ ಅಸುಸ್‌

|

ಅಸುಸ್‌ ಬಹುರಾಷ್ಟ್ರೀಯ ಕಂಪ್ಯೂಟರ್ ಮತ್ತು ಫೋನ್ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪೆನಿಯಾಗಿದ್ದು, ಆಕರ್ಷಕ ಹಾಗೂ ವಿಭಿನ್ನ ಫೀಚರ್ಸ್‌ ಇರುವ ಗ್ಯಾಜೆಟ್‌ಗಳನ್ನು ಅನಾವರಣ ಮಾಡುತ್ತದೆ. ಈ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭಾವ ಬೀರಿದ್ದು, ಇದರ ನಡುವೆ ಗೇಮಿಂಗ್‌ ವಲಯದಲ್ಲೂ ಅಗತ್ಯ ಡಿವೈಸ್‌ಗಳನ್ನು ಪರಿಚಯಿಸುವುದರ ಮೂಲಕ ಗೇಮ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ.

ಅಸುಸ್

ಹೌದು, ಅಸುಸ್ ಕಂಪೆನಿಯು ಸಿಇಎಸ್‌ 2023 ರ ಸಮಾರಂಭದಲ್ಲಿ ROG ಜೆಫಿರಸ್ M16, ಜೆಫಿರಸ್ G16, ಜೆಫೈರಸ್ G14, ROG ಫ್ಲೋ X13 ಹಾಗೂ ಫ್ಲೋ X13 ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಅನಾವರಣ ಮಾಡಿದ್ದು, ಒಂದಕ್ಕೊಂದು ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಅದರಂತೆ ಅಸುಸ್ ROG ಸ್ಟ್ರಿಕ್ಸ್ ಸ್ಕಾರ್‌ ಮತ್ತು ROG ಸ್ಟ್ರಿಕ್ಸ್ G ಸರಣಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನೂ ಅನಾವರಣ ಮಾಡಲಾಗಿದೆ. ಇದರಲ್ಲಿ ROG ಸ್ಟ್ರಿಕ್ಸ್ G22CH ಕಾಂಪ್ಯಾಕ್ಟ್ ಗೇಮಿಂಗ್ ಡೆಸ್ಕ್‌ಟಾಪ್ ಸಹ ಸೇರಿದೆ. ಇದರಲ್ಲಿ ಬಹುಪಾಲು 13 ನೇ ಜನ್ ಇಂಟೆಲ್‌ ಕೋರ್‌ i9 ಪ್ರೊಸೆಸರ್ ಮತ್ತು ಇತ್ತೀಚಿನ ಎನ್ವಿಡಿಯಾ RTX ಜಿಪಿಯು ಬಲದಿಂದ ಕೆಲಸ ಮಾಡಲಿವೆ.

ಅಸುಸ್‌ ROG ಸ್ಟ್ರಿಕ್ಸ್ ಸ್ಕಾರ್‌, ಸ್ಟ್ರಿಕ್ಸ್ G ಫೀಚರ್ಸ್‌

ಅಸುಸ್‌ ROG ಸ್ಟ್ರಿಕ್ಸ್ ಸ್ಕಾರ್‌, ಸ್ಟ್ರಿಕ್ಸ್ G ಫೀಚರ್ಸ್‌

ಅಸುಸ್‌ ROG ಸ್ಟ್ರಿಕ್ಸ್ ಸ್ಕಾರ್‌ ಸರಣಿಯ ಲ್ಯಾಪ್‌ಟಾಪ್‌ 16, 17 ಹಾಗೂ 18 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 2,560x1,660 ಪಿಕ್ಸೆಲ್‌ ರೆಸಲ್ಯೂಶನ್‌ ಜೊತೆಗೆ 240Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಅದರಲ್ಲೂ 18 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿರುವ ಮೊಟ್ಟಮೊದಲ ROG ಲ್ಯಾಪ್‌ಟಾಪ್ ಸಹ ಇದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು 13 ನೇ ಜನ್ ಇಂಟೆಲ್ ಕೋರ್ i9-13980HX ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಸ್ಕಾರ್‌ 17 ಇಂಚಿನ ಲ್ಯಾಪ್‌ಟಾಪ್‌ ಮಾತ್ರ AMD ರೈಜೆನ್ 9 ಜನ್ 4 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.

ROG

ಇದರಲ್ಲಿ ROG ಸ್ಟ್ರಿಕ್ಸ್ ಸ್ಕಾರ್‌ 18 ಹಾಗೂ ROG ಸ್ಟ್ರಿಕ್ಸ್ ಸ್ಕಾರ್‌ 16 64 GB RAM ಹಾಗೂ 4 TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಈ ಎರಡು ಲ್ಯಾಪ್‌ಟಾಪ್‌ಗಳಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6E (802.11ax) ಮತ್ತು ಬ್ಲೂಟೂತ್ ಆವೃತ್ತಿ 5.2 ಇದೆ.

ಸ್ಟ್ರಿಕ್ಸ್

ಹಾಗೆಯೇ ಸ್ಟ್ರಿಕ್ಸ್ ಸ್ಕಾರ್‌ 17 ಲ್ಯಾಪ್‌ಟಾಪ್‌ 17 ಇಂಚಿನ ಕ್ವಾಡ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದು 2,560x1,440 ಪಿಕ್ಸೆಲ್ ರೆಸಲ್ಯೂಶನ್‌ ಪಡೆದುಕೊಂಡಿದೆ. ಜೊತೆಗೆ 240 Hz ರಿಫ್ರೆಶ್ ರೇಟ್‌ ನೀಡಲಿದ್ದು, ಎನ್ವಿಡಿಯಾ ಜಿಫೋರ್ಸ್ RTX 4090 ಜಿಪಿಯು ಬಲದೊಂದಿಗೆ ಕೆಲಸ ಮಾಡಲಿದೆ. ಇದರೊಂದಿಗೆ 64 GB RAM ಹಾಗೂ 2 TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದೆ.

G  ಸರಣಿಯಲ್ಲಿನ ಡಿವೈಸ್‌ಗಳು

G ಸರಣಿಯಲ್ಲಿನ ಡಿವೈಸ್‌ಗಳು

ROG ಸ್ಟ್ರಿಕ್ಸ್ G ಸರಣಿಯಲ್ಲಿ ROG ಸ್ಟ್ರಿಕ್ಸ್ G16, ಸ್ಟ್ರಿಕ್ಸ್ G17, ಮತ್ತು ಸ್ಟ್ರಿಕ್ಸ್ G18 ಲ್ಯಾಪ್‌ಟಾಪ್‌ಗಳಿದ್ದು, ಇವು 16 ಮತ್ತು 18 ಇಂಚಿನ ವೇರಿಯಂಟ್‌ನಲ್ಲಿ ಲಭ್ಯ ಇವೆ. ಹಾಗೆಯೇ 13 ನೇ ಜನ್ ಇಂಟೆಲ್ ಕೋರ್ i9-13980HX ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಎನ್ವಿಡಿಯಾ ಜಿಫೋರ್ಸ್ RTX 4080 ಜಿಪಿಯು ಬಲ ಇವುಗಳಿಗಿದೆ. ಇದರೊಂದಿಗೆ 32 GB RAM ಹಾಗೂ 2 TB ವರೆಗೆ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿವೆ. ಹಾಗೆಯೇ ROG ಸ್ಟ್ರಿಕ್ಸ್ G17 ಮಾತ್ರ AMD ರೈಜೆನ್ 9 ಜನ್‌ 4 CPU ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು32 GB RAM ಹಾಗೂ 2 TB ಇಂಟರ್ನಲ್ ಸಾಮರ್ಥ್ಯ ಪಡೆದುಕೊಂಡಿದೆ.

ಅಸುಸ್‌ ROG ಜೆಫೈರಸ್ G14, ಜೆಫೈರಸ್ G16, ಜೆಫೈರಸ್ M16 ಫೀಚರ್ಸ್‌

ಅಸುಸ್‌ ROG ಜೆಫೈರಸ್ G14, ಜೆಫೈರಸ್ G16, ಜೆಫೈರಸ್ M16 ಫೀಚರ್ಸ್‌

ಅಸುಸ್‌ ತನ್ನ ಜನಪ್ರಿಯ ಜೆಫೈರಸ್ ಸರಣಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಸಹ ರಿಫ್ರೆಶ್ ಮಾಡಿದೆ. ಇದರಲ್ಲಿ ಅಸುಸ್‌ ROG ಜೆಫೈರಸ್ G16 ಲ್ಯಾಪ್‌ಟಾಪ್‌ 16 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು ಇದು 240Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಿದೆ. ಇದರೊಂದಿಗೆ 13 ನೇ ಜನ್‌ ಇಂಟೆಲ್ ಕೋರ್ i9-13900H ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 90Whr ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಲ್ಯಾಪ್‌ಟಾಪ್‌

ಅಸುಸ್‌ ROG ಜೆಫೈರಸ್ M16 ಲ್ಯಾಪ್‌ಟಾಪ್‌ 2,560x1,600 ಪಿಕ್ಸೆಲ್‌ ರೆಸಲ್ಯೂಶನ್‌ ಆಯ್ಕೆಯ ಕ್ವಾಡ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಇದು 240 Hz ರಿಫ್ರೆಶ್ ರೇಟ್‌ ನೀಡಲಿದೆ. ಹಾಗೆಯೇ 13ನೇ ಜನ್ ಇಂಟೆಲ್ ಕೋರ್ i9-13900H ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 64 GB RAM ಮತ್ತು 2TB ಯ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ.

ಅಸುಸ್‌ ROG ಜೆಫೈರಸ್ ಡ್ಯುವೋ 16 ಫೀಚರ್ಸ್‌

ಅಸುಸ್‌ ROG ಜೆಫೈರಸ್ ಡ್ಯುವೋ 16 ಫೀಚರ್ಸ್‌

ಅಸುಸ್‌ ROG ಜೆಫೈರಸ್ ಡ್ಯುವೋ 16 ಲ್ಯಾಪ್‌ಟಾಪ್ 16 ಇಂಚಿನ ಮಿನಿ LED ಪ್ಯಾನೆಲ್ ಮತ್ತು 4K ಟಚ್‌ಸ್ಕ್ರೀನ್ ಅನ್ನು ಒಳಗೊಂಡಿರುವ ಡ್ಯುಯಲ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಇದನ್ನು AMD ಮತ್ತು ಎನ್ವಿಡಿಯಾದ ಇತ್ತೀಚಿನ ಹಾರ್ಡ್‌ವೇರ್‌ನೊಂದಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಜೊತೆಗೆ ಈ ಲ್ಯಾಪ್‌ಟಾಪ್ AMD ರೈಜೆನ್ 9 ಜನ್‌ 4 ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದ್ದು, 64 GB RAM ಹಾಗೂ 4TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದೆ.

ಅಸುಸ್‌ ROG ಫ್ಲೋ X13, ROG ಫ್ಲೋ X16, ROG ಫ್ಲೋ Z13 ಫೀಚರ್ಸ್‌

ಅಸುಸ್‌ ROG ಫ್ಲೋ X13, ROG ಫ್ಲೋ X16, ROG ಫ್ಲೋ Z13 ಫೀಚರ್ಸ್‌

ಅಸುಸ್‌ನ ROG ಫ್ಲೋ X13 ಲ್ಯಾಪ್‌ಟಾಪ್‌ 13.4 ಇಂಚಿನ ಸ್ಕ್ರಾಚ್ ರೆಸಿಸ್ಟೆಂಟ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಡಿಸ್‌ಪ್ಲೇ ಹೊಂದಿದ್ದು, ಇದು AMD ರೈಜೆನ್ 9 ಜನ್‌ 4 CPU ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 75Whr ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ಅಸುಸ್‌

ಹಾಗೆಯೇ ಅಸುಸ್‌ ROG ಫ್ಲೋ X16 ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 240 Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ ಇದು 13 ನೇ ಜನ್‌ ಇಂಟೆಲ್‌ ಕೋರ್‌ i9-13900H ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 16GB RAM ಹಾಗೂ 2TB ಇಂಟರ್ನಲ್‌ ಆಯ್ಕೆ ಪಡೆದುಕೊಂಡಿದೆ.

ಅಸುಸ್

ಇನ್ನು ಅಸುಸ್ ROG ಫ್ಲೋ Z13 ಗೇಮಿಂಗ್ ಟ್ಯಾಬ್ಲೆಟ್ 13.4 ಇಂಚಿನ ಕ್ವಾಡ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಇದು 165Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ 13ನೇ ಜನ್‌ ಇಂಟೆಲ್‌ ಕೋರ್ i9-13900H ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 1.1 ಕೆಜಿ ಭಾರವಿದೆ.

Best Mobiles in India

English summary
CES 2023: unveiled of Asus ROG Gaming Laptops, Desktops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X