ಮುಗಿತು ಜಿಯೋ-ಏರ್‌ಟೆಲ್ ಕಥೆ: ಬರುತ್ತಿದೆ ಚಾಟ್ ಸಿಮ್ 2, ಡೇಟಾ, ಕರೆಗೆ ಮಿತಿ ಇಲ್ಲ, ಫುಲ್ Free..!

  ದೇಶದಲ್ಲಿ ಜಿಯೋ ಉಚಿತ ಸೇವೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿಯೇ ಮೂಗಿನ ಮೇಲೆ ಬೆರಳು ಇಟ್ಟವರು ಹಲವು ಮಂದಿ, ಆದರೆ ಜಿಯೋವನ್ನು ಮೀರಿಸುವ ಸೇವೆಯೊಂದು ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಲಾಂಚ್ ಆಗಲಿದೆ ಎನ್ನಾಗಿದೆ. ಈಗಾಗಲೇ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ ಚಾಟ್ ಸಿಮ್ ತನ್ನ ಮುಂದಿನ ತಲೆ ಮಾರಿನ ಚಾಟ್ ಸಿಮ್ 2 ಬಿಡುಗಡೆ ಮಾಡಲು ಮುಂದಾಗಿದೆ.

  ಇದು ಎರಡನೇ ತಲೆ ಮಾರಿನ ಚಾಟ್ ಸಿಮ್ ಆಗಲಿದ್ದು, ಇದು ಬಳಕೆದಾರರಿಗೆ ವಾರ್ಷಿಕ ಪ್ಲಾನ್‌ಗಳನ್ನು ನೀಡಲಿದ್ದು, ಬಳಕೆದಾರರಿಗೆ ಯಾವುದೇ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಮಿತಿಯನ್ನು ವಿಧಿಸುವುದಿಲ್ಲ ಎನ್ನಲಾಗಿದೆ. ದೇಶದಲ್ಲಿ ಒಂದು GB ಡೇಟಾ ಸಲುತ್ತಿಲ್ಲ ಎನ್ನುವವರಿಗೆ ಇದು ಸರಿಯಾದ ಪರಿಹಾರವಾಗಿದೆ.

  ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಟೈಮ್ ವೆಸ್ಟ್ ಮಾಡ್ಬೇಡಿ: ಈ ಆಪ್‌ ನಿಂದ ತಿಂಗಳಿಗೆ ರೂ.2,50,000 ಆದಾಯ ಗಳಿಸಿ.! ಹೇಗೆ.?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಯಾವುದೇ ಮಿತಿಯಿಲ್ಲ

  ಚಾಟ್ ಸಿಮ್ 2 ಬಳಕೆದಾರರಿಗೆ ಯಾವುದೇ ಮಿತಿ ಇಲ್ಲದೇ ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ. ಇದಲ್ಲದೇ ರೋಮಿಂಗ್ ಚಾರ್ಜ್‌ಗಳು ಸಹ ಇದರಲ್ಲಿ ಇಲ್ಲ ಎನ್ನಲಾಗಿದೆ. ಇದಲ್ಲದೇ ವೈ-ಫೈ ಕನೆಕ್ಟಿವಿಯ ಮೇಲೆಯೂ ಯಾವುದೇ ದರಗಳನ್ನು ವಿಧಿಸುವುದಿಲ್ಲ. ಉಚಿತವಾಗಿ ಕರೆಗಳನ್ನು ಮಾಡಬಹುದಾಗಿದೆ.

  165 ದೇಶಗಳಲ್ಲಿ ಕಾರ್ಯಚರಣೆ:

  ಚಾಟ್ ಸಿಮ್ ಒಟ್ಟು 165 ದೇಶಗಳಲ್ಲಿ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದ್ದು, ಒಂದು ಬಾರಿ ವಾರ್ಷಿಕ ಸೇವೆಯನ್ನು ಪಡೆದುಕೊಂಡರೆ ಸಾಕು, ಬಳಕೆದಾರರು ಯಾವುದೇ ಮಿತಿ ಇಲ್ಲದೇ ಉಚಿತ ಕರೆ ಮಾಡುವ ಮತ್ತು ಹಲವು ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡುವ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ.

  ಹಲವು ಆಪ್‌:

  ವಾಟ್ಸ್‌ಆಪ್, ಫೇಸ್ಬುಕ್ ಮೆಸೆಂಜರ್, ವಿಚಾಟ್, ಟೆಲಿಗ್ರಾಮ್, ಲೈನ್ ಆಪ್‌ಗಳನ್ನು ಯಾವುದೇ ಮಿತಿ ಇಲ್ಲದೇ ಬಳಕೆ ಮಾಡಿಕೊಳ್ಳಲು ಅವಕಾವನ್ನು ನೀಡಲಾಗಿದೆ. ಅಲ್ಲದೇ ಇದರಲ್ಲಿ ಮೇಸೆಜ್, ವೀಡಿಯೊ, ಫೋಟೋಗಳನ್ನು ಬಳಕೆದಾರರು ಸೆಂಡ್ ಮಾಡಬಹುದು.

  ಎಲ್ಲಾ ಫೋನ್‌ಗಳಿಗೂ:

  ಈ ಚಾಟ್ ಸಿಮ್ 2 ಆಪಲ್, ವಿಂಡೋಸ್ ಮತ್ತು ಆಂಡ್ರಾಯ್ಡ್ ಫೋನಿನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ. ಅಲ್ಲದೇ ಯಾವುದೇ ಗಾತ್ರದಲ್ಲಿಯಾದರು ಬಳಕೆ ಮಾಡಿಕೊಳ್ಳಬಹುದಾಗಿದೆ.

  ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
  ಶೀಘ್ರ ಭಾರತಕ್ಕೂ

  ಶೀಘ್ರ ಭಾರತಕ್ಕೂ

  ದೇಶದಲ್ಲಿ ಮೊಬೈಲ್ ಮಾರುಕಟ್ಟೆಯು ವಿಸ್ತಾರವಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿಯೂ ತನ್ನ ಸೇವೆಯನ್ನು ಆರಂಭಿಸುವ ಯೋಜನೆಯನ್ನು ಚಾಟ್ ಸಿಮ್ ರೂಪಿಸಿದೆ ಎನ್ನಲಾಗಿದೆ.

  ನಿಮಗೆ ದೃಷ್ಟಿಭ್ರಮೆ ಉಂಟುಮಾಡುವ ಅತ್ಯದ್ಬುತ 10 ಚಿತ್ರಗಳಿವು!!

  ಫೋಟೋಗ್ರಫಿ ಎಂಬುದು ಎಲ್ಲರಿಗೂ ಒಲಿಯುವಂತಹ ಕಲೆಯಲ್ಲ. ಸರಿಯಾದ ಬೆಳಕು, ಸರಿಯಾದ ಫೋಕಸ್ ಎಲ್ಲವನ್ನು ಸೆಟ್ ಮಾಡಿಕೊಳ್ಳುವವರಿಗೂ ಸಹ ಅದ್ಬುತ ಚಿತ್ರಗಳನ್ನು ಸಾಧ್ಯವಾಗದೆ ಇರಬಹುದು, ಇವೆಲ್ಲವಕ್ಕಿಂತ ಹೆಚ್ಚಾಗಿ ಪೋಟೋಗ್ರಫಿ ಮಾಡುವವನಿಗೆ ತಾಳ್ಮೆ, ಏಕಾಗ್ರತೆ ಮತ್ತು ಕ್ರಿಯೆಟಿವಿಟಿ ಇದ್ದರೆ ಮಾತ್ರ ಅವನು ಅದ್ಬುತ ಚಿತ್ರಗಳನ್ನು ತೆಗೆಯಬಲ್ಲ.!!

  ಇಂತಹ ಫೋಟೊಗ್ರಫಿ ಶೇಷ ಕಲೆಯನ್ನು ಹೊಂದಿರುವ ಹಲವರು ನಮ್ಮ ಜತೆ ಇದ್ದಾರೆ. ಅವರಲ್ಲಿ ಕೆಲವರು ತಮ್ಮ ಕ್ಯಾಮೆರಾ ಲೆನ್ಸ್ ಟಿಲ್ಟ್ ಮಾಡಿ ದೃಷ್ಟಿಭ್ರಮೆ ಉಂಟುಮಾಡುವ ಚಿತ್ರಗಳನ್ನು ಚಿತ್ರಿಸಿ ನಮಗೆ ಆಶ್ಚರ್ಯ ಮೂಡಿಸುತ್ತಾರೆ.! ಹಾಗಾಗಿ, ಇಂತಹ ಫೋಟೊಗಳನ್ನು ನೀವು ಒಂದು ಬಾರಿ ನೋಡಿದರೆ ಸಾಕಾಗುವುದಿಲ್ಲ.!!

  ಹಾಗಾಗಿ, ಎಲ್ಲರಿಗೂ ದೃಷ್ಟಿಭ್ರಮೆಯನ್ನು ಉಂಟುಮಾಡುವ ಹಲವು ಚಿತ್ರಗಳನ್ನು ನಾವು ಹುಡುಕಿದ್ದೇವೆ.! ಹಾಗಾದರೆ, ನಮಗೆ ದೃಷ್ಟಿಭ್ರಮೆಯನ್ನು ಉಂಟುಮಾಡುವ ಟಾಪ್ 10 ಚಿತ್ರಗಳು ಯಾವುವು? ನಿಜವಾಗಿಯೂ ಒಮ್ಮೆಲೇ ಫೋಟೊವನ್ನು ಅರ್ಥೈಸಿಕೊಳ್ಳುವ ಯೋಚನಾ ಶಕ್ತಿ ನಿಮಗಿದೆಯೇ? ಎಂಬುದನ್ನು ಮುಂದಿನ ಚಿತ್ರಗಳಲ್ಲಿ ತಿಳಿಯಿರಿ.!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 1

  ಈ ನಾಯಿ ಸಂಪೂರ್ಣವಾಗಿ ಗೊಂದಲದಲ್ಲಿದೆ ಅಲ್ಲವೇ!?

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 2

  ಚಿತ್ರವನ್ನು ಚಿತ್ರಿಸುವವನಿಗಿಂತ ಕುಳಿತಿರುವ ವ್ಯಕ್ತಿಗೆ ಅವಾರ್ಡ್ ನೀಡಬೇಕು.!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 3

  ತಲೆಚಿಟ್ಟುಹಿಡಿದು ಚೀರುವ ತರಂಗಗಳು ಇವಲ್ಲ.!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 4

  ನೀರಿನಲ್ಲಿ ಕುಳಿತವರನ್ನು ಹೀಗೂ ಚಿತ್ರಿಸಬಹುದು!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 5

  ನಿಜವಾಗಿಯೂ ಮೆದುಳಿಗೆ ಕೆಲಸ ನೀಡುವ ಚಿತ್ರವಿದು!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 6

  ಗೋಡೆಯ ಹಿಂದೆ ಇದ್ದಾರೆ ಎಂದುಕೊಳ್ಳಬೇಡಿ!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 8

  ಭೂಮಿಯ ತುದಿಯಲ್ಲಿ ಕುಳಿತಿರುವ ಫೀಲ್ ಅವನಿಗಿದೆ.!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 9

  ಮೂರರಿಂದ ನಾಲ್ಕುಸಲ ನೋಡದೆ ಅರ್ಥವಾಗುವ ಚಿತ್ರವಿದು. ಅಲ್ಲವೆ?

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 9

  ಚಿತ್ರಕಾರನ ಕ್ರಿಯೇಟಿವಿಗೊಂದು ಸಲಾಮ್!!

  ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 9

  ಪಾಪ. ಕಾಪಾಡಕ್ಕೆ ಆಗ್ಲಿಲ್ಲಾ!..ನನ್ನ ನಂಬಿ ಪ್ಲೀಸ್!!

  ರಾತ್ರೋರಾತ್ರಿ ಇಂಟರ್‌ನೆಟ್‌ನಲ್ಲಿ ಜಗತ್ಪ್ರಸಿದ್ದರಾದವರು ಈ 7 ಜನರು!!

  ಪ್ರತಿಯೋರ್ವರಿಗೂ ನಾನು ಇಡೀ ವಿಶ್ವದಲ್ಲಿಯೇ ಗುರುತಿಸಿಕೊಳ್ಳುವಂತಹ ಸೆಲೆಬ್ರಿಟಿ ವ್ಯಕ್ತಿ ನಾನಾಗಿರಬೇಕು ಎಂಬ ಆಸೆ ಇರುತ್ತದೆ.! ಆದರೆ, ಈ ಜಗತ್ತು ಸಾಧಕರಿಗೆ ಮಾತ್ರ ಸೆಲೆಬ್ರಿಟಿ ಎಂಬ ಪಟ್ಟವನ್ನು ನೀಡುತ್ತದೆ.! ಅದಾಗ್ಯೂ ಸಹ ವಿಶ್ವದಲ್ಲಿ ಕೆಲವರು ರಾತ್ರೋರಾತ್ರಿ ಜಗತ್ಪ್ರಸಿದ್ದವಾದವರಿದ್ದಾರೆ. ಒಂದೇ ದಿನದಲ್ಲಿ ಎಲ್ಲಾ ಮೀಡಿಯಾಗಳಲ್ಲಿ ಸ್ಥಾನ ಪಡೆದಿದ್ದಾರೆ.!!

  ಇನ್ನು ಕಳೆದ ಎರಡು ದಿನಗಳಿಂದಲೂ ಕೇರಳದ 'ಪ್ರಿಯ ವಾರಿಯರ್' ಎಂಬ ಯುವತಿಯದ್ದೇ ಸುದ್ದಿ. ಕೇವಲ ಒಂದು ವೀಡಿಯೋದಿಂದ ಇಡೀ ಭಾರತೀಯರ ಮನ ಗೆದ್ದಿರುವ ಯುವತಿ ಇಂದು ನ್ಯಾಶನಲ್ ಕ್ರಷ್ ಆಗಿದ್ದಾರೆ.! ಒಂದೇ ದಿನದಲ್ಲಿ ಪ್ರಿಯ ವಾರಿಯರ್ ಮುಖ ಭಾರತೀಯರಿಗೆಲ್ಲ ಚಿರಪರಿಚಿತವಾದಂತಿದೆ ಎಂದರೆ ಇದಕ್ಕೆ ಇಂಟರ್‌ನೆಟ್ ಅಗಾಧತೆ ಕಾರಣ ಎನ್ನಬಹುದು!

  ಓದಿರಿ: ಶಿಯೋಮಿ 'ರೆಡ್‌ ಮಿ ನೋಟ್ 5' ಮಾರಾಟದ ದಿನಾಂಕ ಫಿಕ್ಸ್!!..ಖರೀದಿಗೆ ಬಂಪರ್ ಆಫರ್!!

  ಹಾಗಾಗಿ, 'ಪ್ರಿಯ ವಾರಿಯರ್' ಯುವತಿಯಂತೆ ವಿಶ್ವದಲ್ಲಿ ಮತ್ತು ಭಾರತದಲ್ಲಿ ರಾತ್ರೋರಾತ್ರಿ ಜಗತ್ಪ್ರಸಿದ್ದವಾಗಿರುವ ಸೆಲಬ್ರಿಟಿಗಳನ್ನು ನಾವು ಪರಿಚಯಿಸಿಕೊಡುತ್ತೇವೆ.! ಬಹುಬೇಕ ಸೆಲೆಬ್ರಿಟಿ ಪಟ್ಟವನ್ನು ಹೊಂದಿರುವವರು ಯಾರಾರು ಮತ್ತು ಅವರು ಅಷ್ಟು ಬೇಗ ಸೆಲೆಬ್ರಿಟಿಯಾಗಲು ಕಾರಣಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  1. ಪ್ರಿಯಾ ವಾರಿಯರ್

  ತನ್ನ ಮೊದಲ ಮಲಯಾಳಂ ಚಿತ್ರ' ಒರು ಅದಾರ್ ಲವ್' ಸಿನಿಮಾದಲ್ಲಿ ಪ್ರಿಯಾ ವಾರಿಯರ್ ಅವರು ನಟಿಸಿರುವ 30-ಸೆಕೆಂಡ್ ಕ್ಲಿಪ್ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ರಾತ್ರೋರಾತ್ರಿ ಜಗತ್ಪ್ರಸಿದ್ದವಾಗುವಂತೆ ಮಾಡಿದೆ. ಇಡೀ ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ 2.5 ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಪಡೆದ ಮೊದಲ ಸೆಲೆಬ್ರಿಟಿ ಈಗ ಪ್ರಿಯಾ ವಾರಿಯರ್!!

  2. ಸೈಮಾ ಹುಸೇನ್ ಮಿರ್

  ರಯೀಸ್ ಸಿನಿಮಾದ ಪ್ರಮೋಷನ್ ವೇಳೆ ಶಾರೂಕ್ ಖಾನ್ ಅವರು ಒಂದು ಸೆಲ್ಫಿಯನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟಿಸಿದ್ದರು. ಶಾರೂಕ್ ತೆಗೆದ ಈ ಸೆಲ್ಫಿ ಚಿತ್ರದಲ್ಲಿ ಕಾಣಿಸಿದ ಹುಡುಗಿಯೋರ್ವಳು ಭಾರೀ ಹೆಸರು ಗಳಿಸಿದಳು. ಶ್ರೀನಗರದ ಎಸ್ಐಡಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ ಸೈಮಾ ಹುಸೇನ್ ಮಿರ್ ಒಂದೇ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದಳು.!!

  3 ಆರ್ಶಿದ್ ಖಾನ್!!

  ಮನುಷ್ಯನ ಎರಡು ಕಣ್ಣುಗಳು ಜನರನ್ನು ಹೇಗೆ ಸೆಳೆಯಬಲ್ಲವು ಎಂಬುದಕ್ಕೆ ಆರ್ಶಿದ್ ಖಾನ್ ಎಂಬ ಯುವಕ ಉದಾಹರಣೆಯಾದಲು. 'ಹಾಟ್ ಚಾಯ್ ವಾಲ' ಎಂದು ಹೆಸರಾದ ಆರ್ಶಿದ್ ಖಾನ್ ತನ್ನ ನೀಲಿಗಣ್ಣುಗಳಿಂದ ಪಾಕಿಸ್ತಾನದ ಮನೆಮನೆಗೂ ಪರಿಚಯವಾದನು. ಇವನ ಕಣ್ಣುಗಳನ್ನು ನೋಡಿ ಇಡೀ ವಿಶ್ವವೇ ಖುಷಿಪಟ್ಟಿತು ಎನ್ನಬಹುದು.!!

  4. ನೇಪಾಳಿ ಹುಡುಗಿ.!!

  ನೇಪಾಳಿ ಛಾಯಾಗ್ರಾಹಕ ರೂಪ್ಚಂದ್ರ ಮಹಾಜನ್ ಅವರು ಕ್ಲಿಕ್ ಮಾಡಿದ ನೇಪಾಳಿ ಹುಡುಗಿ ಫೋಟೊ ಇಡೀ ಏಷ್ಯಾದ ಗಮನ ಸೆಳೆಯಿತು ಎನ್ನಬಹುದು. ತರಕಾರಿ ಬುಟ್ಟಿಯನ್ನು ಫೋನಿನಲ್ಲಿ ಮಾತನಾಡುತ್ತಿದ್ದ ಹುಡುಗಿಯ ಸೌದಂರ್ಯ ಎಲ್ಲರನ್ನು ಸೆಳೆಯದೇ ಇರಲು ಸಾಧ್ಯವಿಲ್ಲ. ಆದರೆ, ಈ ಫೋಟೋದ ಹುಡುಗಿ ಇಲ್ಲಿಯವರೆಗೂ ಯಾರು ಎಂಬುದು ತಿಳಿದಿಲ್ಲ.!!

  5. ಡಾ. ಮೈಕ್

  ದಿ ಹೆಲ್ತಿ ಬಾಡಿ ಅಂಡ್ ಮೈಂಡ್ ಎಂಬ ಅಡಿಬರಹದೊಂದಿಗೆ ಡಾ. ಮೈಕ್ ಎಂಬುವವರು ಹಂಚಿಕೊಂಡ ಚಿತ್ರ ಹೆಂಗಳೆಯರ ಮನಗೆದ್ದಿತು. ಡಾ. ಮೈಕ್ ಅವರ ಮೊದಲ ಚಿತ್ರವೇ 2.6 ದಶಲಕ್ಷ ಫಾಲೋವರ್ಸ್ ಅನ್ನು ಅವರಿಗೆ ನೀಡಿತು ಎಂದರೆ ಈ ಸುರಸುಂದರಾಂಗ ಡಾಕ್ಟರ್ ಎಷ್ಟು ಹುಡುಗಿಯರ ಮನಗೆದ್ದರೋ.!!

  6. ಒಮರ್ ಬೊರ್ಕಾನ್ ಅಲ್ ಗಾಲಾ

  ಅತ್ಯಂತ ಸುಂದರ ಮನುಷ್ಯ ಎಂದು ಕರೆಯಲ್ಪಟ್ಟ ಸೌದಿ ಅರೇಬಿಯಾ 'ಒಮರ್ ಬೊರ್ಕಾನ್ ಅಲ್ ಗಾಲಾ' ಇಡೀ ವಿಶ್ವದ ಗಮನ ಸೆಳೆದರು. ತಮ್ಮ ಒಂದೇ ಒಂದು ಲುಕ್‌ನಿಂದ ಮೊದಲ 48 ಗಂಟೆಗಳಲ್ಲಿ ಫೇಸ್‌ಬುಕ್ ಮೂಲಕ 8,00,000ಕ್ಕೂ ಫಾಲೋವರ್ಸ್ ಅನ್ನು ಸೆಳೆದರು ಎಂದರೆ ಅವರ ಫೋಟೊ ಇನ್ನೆಷ್ಟು ವೈರೆಲ್ ಆಗಿರಬಹುದು ಎಂಬುದನ್ನು ನೋಡಬಹುದು.!!

  7. ಮಧುರಾ ಹನಿ

  ಲಂಡನ್ ಒಲಿಂಪಿಕ್ಸ್ ಉದ್ಘಾಟನಾ ಮೆರವಣಿಗೆಯಲ್ಲಿ ಭಾರತೀಯ ಕ್ರೀಡಾಪಟುಗಳೊಂದಿಗೆ ಪರೇಡ್‌ನಲ್ಲಿ ಹೆಜ್ಜೆಹಾಕಿದ ಕೆಂಪು ಮತ್ತು ನೀಲಿ ಬಣ್ಣದ ಡ್ರೆಸ್ ಯುವತಿ ಕ್ಷಣಾರ್ಧದಲ್ಲಿ ಮೀಡಿಯಾಗಳಲ್ಲಿ ಜಾಗ ಪಡೆದರು. ಯಾವುದೇ ಅನುಮತಿಯಿಲ್ಲದೆ ಕ್ರೀಡಾಪಟುಗಳೊಂದಿಗೆ ಹೆಜ್ಜೆ ಹಾಕಿದ ಮಧುರಾ ಹನಿ ಕುರಿತು ವಿಚಾರಣೆ ಕೂಡ ಶುರುವಾಯಿತು.!!

  ಓದಿರಿ: ಶಿಯೋಮಿ 'ರೆಡ್‌ ಮಿ ನೋಟ್ 5' ಮಾರಾಟದ ದಿನಾಂಕ ಫಿಕ್ಸ್!!..ಖರೀದಿಗೆ ಬಂಪರ್ ಆಫರ್!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  ChatSim 2 With Unlimited Internet Access and Messaging. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more