Subscribe to Gizbot

ಐಫೋನ್ 8 ಕುರಿತ ಮತ್ತೊಂದು ಫೋಟೋ ಲೀಕ್!

Written By: Lekhaka

ಮುಂದಿನ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿರುವ ಆಪಲ್ ಐಫೋನ್ 8 ರ ಮತ್ತೊಂದು ರೂಮರ್ ಸುದ್ಧಿ ಹೊರ ಬಿದಿದ್ದು, ಐಫೋನ್ 8 ರ ಡಿಸ್ ಪ್ಲೇ ಅಸೆಂಬಲ್ ಪೋಟೋವೊಂದು ಲೀಕ್ ಆಗಿದೆ. ಇದು ಸದ್ಯ ಐಫೋನ್ ಪ್ರಿಯ ಕಾತುರತೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಐಫೋನ್ 8 ಕುರಿತ ಮತ್ತೊಂದು ಫೋಟೋ ಲೀಕ್!

ಆಪಲ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಐಫೋನ್ 8 ಅನ್ನು ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಈ ಫೋನಿಗೆ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಲಾಗಿದೆ. ಸದ್ಯ ಲೀಕ್ ಆಗಿರುವ ಫೋಟೋದಲ್ಲಿ ಫ್ರಂಟ್ ಕ್ಯಾಮೆರಾ ಮತ್ತು ಇರಿಸ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.

ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿ ಫೋನ್ ತೆಗೆದುಕೊಳ್ಳುವ ಸಲುವಾಗಿ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದ್ದು, ಇಲ್ಲದೇ ಈ ಫ್ಲಾಷ್ ಲೈಟ್ ಮಲ್ಟಿ ಕಲರ್ ನಲ್ಲಿ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

ಇದಲ್ಲದೇ ಕ್ಯಾಮೆರಾ ದೊಂದಿಗೆ ಇರಿಸ್ ಸ್ಕ್ಯಾನರ್ ಅನ್ನು ಎಡಭಾಗದಲ್ಲಿ ಕಾಣಬಹುದಾಗಿದ್ದು. ಇದೊಂದು ಫುಲ್ ಸ್ಕ್ರಿನ್ ಡಿಸ್ ಪ್ಲೇ ಯಾಗಿದೆ. ಮೂಲಗಳ ಪ್ರಕಾರ ಐಫೋನ್ 8ನಲ್ಲಿ ಡಿಸ್ ಪ್ಲೇ ಡಾಮಿನೆಟ್ ಆಗಿರಲಿದೆ.

ಯುಎಸ್‌ಬಿ ಕೇಬಲ್ ಮೂಲಕನೂ ಹ್ಯಾಕ್ ಮಾಡ್ತಾರೆ!!

ಇದು ಬ್ರಿಜಿಲ್ ಲೆಸ್ ಡಿಸ್ ಪ್ಲೇಯಾಗಲಿದ್ದು, ಆಂಡ್ರಾಯ್ಡ್ ಗಳಲ್ಲಿ ಇದೇ ಮಾದರಿಯ ಡಿಸ್ ಪ್ಲೇಯನ್ನು LG ಮತ್ತು ಸ್ಯಾಮ್ ಸಂಗ್ ಟಾಪ್ ಎಂಡ್ ಫೋನ್ ಗಳಲ್ಲಿ ಕಾಣಬಹುದಾಗಿದೆ.

ಒಟ್ಟಿನಲ್ಲಿ ಈ ಫೋನ್ ಸಾಕಷ್ಟು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬರಲಿದ್ದು, ವಿವಿಧ ರೀತಿಯ ಹೊಸ ಬಣ್ಣಗಳಲ್ಲಿಯೂ ದೊರೆಯಲಿದೆ. ಐಫೋನ್ ಪ್ರಿಯರಿಗೆ ಮತ್ತಷ್ಟು ಹತ್ತಿರವಾಗಲಿದೆ.

Source

English summary
The display assembly clearly reveals that the iPhone 8 will arrive with a full-screen design.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot