ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

By Suneel
|

ಏಲಿಯನ್ ಗಳು ಭೂಮಿಗೆ ಆಗಾಗ ಬಂದು ಹೋದ ಘಟನೆ ಕೇಳಿದ್ದೀರಿ. ಈ ಸಂಧರ್ಭಗಳಲ್ಲಿ ವಿಜ್ಞಾನಿಗಳು ಅವುಗಳ ಮೂಲ ಹುಡುವಲ್ಲಿ ಹಲವು ಪ್ರಯತ್ನಗಳನ್ನು ಮಾಡಿಯಾಯಿತು. ಪ್ರಯತ್ನಗಳು ಮಾತ್ರ ವಿಫಲವಾದವು. ಆದರೆ ಈಗ ಏಲಿಯನ್‌ ಮಾತ್ರವಲ್ಲದೇ ಇತರ ಯಾವುದೇ ಗ್ರಹದಲ್ಲಿನ ಜೀವ ವೈವಿದ್ಯ ಮತ್ತು ಜೀವನ ವಿಧಾನವನ್ನು ಕಂಡುಹಿಡಿಯಲು ನಾಸಾ 'ಕೆಮಿಕಲ್‌ ಲ್ಯಾಪ್‌ಟಾಪ್‌' ಎಂಬ ಹೊಸ ಡಿವೈಸ್ ಕಂಡುಹಿಡಿದಿದೆ.

ಓದಿರಿ: ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?

ಕೆಮಿಕಲ್‌ ಲ್ಯಾಪ್‌ಟಾಪ್‌, ಮಂಗಳ ಗ್ರಹ ಮತ್ತು ಯುರೋಪಾ ಗ್ರಹಗಳಂತಹ ಗ್ರಹಗಳಲ್ಲೂ ಸಹ ಜೀವಿ ವೈವಿಧ್ಯ ಕಂಡುಹಿಡಿಯುತ್ತದಂತೆ. ಅಲ್ಲದೇ ಏಲಿಯನ್‌ ಲೈಫ್‌‌ ಪತ್ತೆ ಹಚ್ಚುವುದು ಇದರ ಮುಖ್ಯಗುರಿಯಾಗಿದೆ. ಅದು ಹೇಗೆ ಸಾಧ್ಯ ಎಂಬುದನ್ನು ಗಿಜ್‌ಬಾಟ್‌ ಲೇಖನ ಓದಿ ತಿಳಿಯಿರಿ.

೧ ಕೆಮಿಕಲ್ ಲ್ಯಾಪ್‌ಟಾಪ್‌

೧ ಕೆಮಿಕಲ್ ಲ್ಯಾಪ್‌ಟಾಪ್‌

ನಾಸಾ ಅಮಿನೋ ಆಮ್ಲ ಮತ್ತು ಕೊಬ್ಬಿನ ಆಮ್ಲಗಳನ್ನು ಕಂಡುಹಿಡಿಯಲು ಹೊಸದಾಗಿ ಈಗ ಕೆಮಿಕಲ್ ಲ್ಯಾಪ್‌ಟಾಪ್‌ ಒಂದನ್ನು ಅಭಿವೃದ್ದಿಗೊಳಿಸುತ್ತಿದೆ.
ಚಿತ್ರ ಕೃಪೆ: www.nasa.gov

ಭೂಮಿಯ ಹೊರ ಜಗತ್ತಿನ ಜೀವನ.

ಭೂಮಿಯ ಹೊರ ಜಗತ್ತಿನ ಜೀವನ.

ಭೂಮಿ ಹೊರತು ಪಡಿಸಿ ಇತರ ಪ್ಲಾನೆಟ್‌ಗಳ ಜೀವನ ಶೈಲಿಯನ್ನು ತಿಳಿಯಲು ಕೆಮಿಕಲ್‌ ಲ್ಯಾಪ್‌ಟಾಪ್‌ ಉಪಯೋಗವಾಗಲಿದೆ.
ಚಿತ್ರ ಕೃಪೆ: www.nasa.gov

ನಾಸಾ ಜೆಟ್‌ ಪ್ರಪಲ್‌ಶನ್‌ ಲ್ಯಾಬೋರೇಟರಿ

ನಾಸಾ ಜೆಟ್‌ ಪ್ರಪಲ್‌ಶನ್‌ ಲ್ಯಾಬೋರೇಟರಿ

ಕೆಮಿಕಲ್ ಲ್ಯಾಪ್‌ಟಾಪ್ ಅನ್ನು ಸ್ಪೇಸ್‌ಗೆ ಕಳುಹಿಸಲಾಗುತ್ತಿದ್ದು, ತೀರ ಸೂಕ್ಷ್ಮ ಡಿವೈಸ್‌ ಆಗಿದೆ.ಸ್ಪೇಸ್‌ನಲ್ಲಿ ಇದು ಅಮಿನೋ ಆಮ್ಲ ಮತ್ತು ಕೊಬ್ಬಿನ ಆಮ್ಲಗಳನ್ನು ಅಲ್ಲಿ ಸಮೀಕ್ಷೆ ನಡೆಸಲಿದೆ ಎಂದು ನಾಸಾ ಜೆಪಿಎಲ್ ಪೆಲೋ ಜೆಸಿಕಾ ಕ್ರೀಮರ್ ಹೇಳಿದ್ದಾರೆ.
ಚಿತ್ರ ಕೃಪೆ: www.nasa.gov

ಮಂಗಳ ಮತ್ತು ಯುರೋಪಾ ಗ್ರಹಗಳಿಗೆ ಲ್ಯಾಪ್‌ಟಾಪ್‌

ಮಂಗಳ ಮತ್ತು ಯುರೋಪಾ ಗ್ರಹಗಳಿಗೆ ಲ್ಯಾಪ್‌ಟಾಪ್‌

ಸಂಶೋಧಕರು ಕೆಮಿಕಲ್‌ ಲ್ಯಾಪ್‌ಟಾಟ್‌ ಅನ್ನು ಮಂಗಳ ಮತ್ತು ಯುರೋಪಾ ಗ್ರಹಗಳಿಗೆ ಅಲ್ಲಿನ ಜೀವನ ಶೈಲಿಯನ್ನು ಅಧ್ಯಯನ ಮಾಡಲು ಕಳುಹಿಸುವಲ್ಲಿ ಭರವಸೆ ಇಟ್ಟಿದ್ದಾರೆ.
ಚಿತ್ರ ಕೃಪೆ: ನಾಸಾ

 ಕೆಮಿಕಲ್‌ ಲ್ಯಾಪ್‌ಟಾಪ್‌

ಕೆಮಿಕಲ್‌ ಲ್ಯಾಪ್‌ಟಾಪ್‌

ಈ ಕೆಮಿಕಲ್ ಲ್ಯಾಪ್‌ಟಾಪ್‌ ನಾವುಗಳು ದಿನನಿತ್ಯ ಬಳಸುತ್ತಿರುವ ಲ್ಯಾಪ್‌ಟಾಪ್‌ಗಳಂತೆ ಇದ್ದು ಆದರೆ ಇದು ಕೆಮಿಕಲ್‌ ಅನಾಲಿಸಿಸ್ ಮಾಡಲು ಮಾತ್ರ ಅರ್ಹವಾಗಿದೆ.
ಚಿತ್ರ ಕೃಪೆ: ನಾಸಾ

ಇತರ ಗ್ರಹಗಳ ಮಾಹಿತಿ.

ಇತರ ಗ್ರಹಗಳ ಮಾಹಿತಿ.

ಸಂಶೋಧಕರು, ಭೂಮಿಯ ಲೆಫ್ಟ್‌ಹ್ಯಾಂಡೆಡ್‌ ಅಮಿನೋ ಆಮ್ಲಗಳನ್ನು ಹೊಂದಿ ತನ್ನ ಇತಿಹಾಸ ರೂಪಿಸಿಕೊಂಡಿದೆ. ಹಾಗೆಯೇ ಸಕಾರಾತ್ಮಕವಾಗಿ ಇತರ ಗ್ರಹಗಳಲ್ಲಿ ರೈಟ್‌ ಹ್ಯಾಂಡೆಡ್ ಅಮಿನೋ ಆಮ್ಲಗಳಿಂದ ಇತಿಹಾಸ ಹೊಂದಿರುತ್ತದೆ ಎಂದು ಮಾದರಿ ರೂಪಿಸಿದ್ದಾರೆ.
ಚಿತ್ರ ಕೃಪೆ: ನಾಸಾ

ಇತರ ಗ್ರಹಗಳಲ್ಲೂ ಜೀವಿಗಳಿರುವ ಬಗ್ಗೆ ಸಾಕ್ಷಿ.

ಇತರ ಗ್ರಹಗಳಲ್ಲೂ ಜೀವಿಗಳಿರುವ ಬಗ್ಗೆ ಸಾಕ್ಷಿ.

ಮೇಲಿನ ಕಾರಣದಿಂದ ಇತರ ಗ್ರಹಗಳಲ್ಲೂ ಜೀವಿಗಳು ಇರುವ ಬಗ್ಗೆ ಶಂಕಿಸಬಹುದು ಎಂದು ಕ್ರೀಮರ್ ಹೇಳಿದ್ದಾರೆ.
ಚಿತ್ರ ಕೃಪೆ: ನಾಸಾ

ಇತರ ಗ್ರಹದಲ್ಲಿರುವ ಜೀವಿ ಪತ್ತೆ ಹೇಗೆ ?

ಇತರ ಗ್ರಹದಲ್ಲಿರುವ ಜೀವಿ ಪತ್ತೆ ಹೇಗೆ ?

ಇತರ ಗ್ರಹಗಳಲ್ಲಿನ ಕೊಬ್ಬಿನ ಆಮ್ಲಗಳನ್ನು ಲ್ಯಾಪ್‌ಟಾಪ್ ಯಾವಾಗ ಹುಡುಕಾಟ ನೆಡೆಸುತ್ತದೋ ಆಗ ವಿಜ್ಞಾನಿಗಳು ಹೈಡ್ರೋಕಾರ್ಬನ್‌ ಚೈನ್ ಮೇಲೆ ಆಸಕ್ತಿ ಹೊಂದಿ ಅದರ ಆದರದಲ್ಲಿ ಜೀವಿಗಳಿರುವ ಗುರುತನ್ನು ಕಂಡುಹಿಡಿಯುತ್ತಾರೆ ಎನ್ನಲಾಗಿದೆ.
ಚಿತ್ರ ಕೃಪೆ: ನಾಸಾ

ಏಲಿಯನ್‌ ಪತ್ತೆ ಹೇಗೆ ?

ಏಲಿಯನ್‌ ಪತ್ತೆ ಹೇಗೆ ?

ಅಮಿನೋ ಮತ್ತು ಕೊಬ್ಬಿನಾಮ್ಲಗಳು ಎರಡು ಸಹ ಜೀವನಕ್ಕೆ ಅಗತ್ಯವಾಗಿದ್ದು, ಅವುಗಳ ಪ್ರಮಾಣವನ್ನು ಕೆಮಿಕಲ್ ಲ್ಯಾಪ್‌ಟಾಪ್‌ ಅನ್ನು ಇತರ ಗ್ರಹಗಳಿಗೆ ಕಳುಹಿಸುವ ಮೂಲಕ ಅನಾಲಿಸಿಸ್ ಮಾಡಿ ಏಲಿಯನ್‌ ಪತ್ತೆಗೆ ಮುಂದಾಗಬಹುದು ಎನ್ನಲಾಗಿದೆ.
ಚಿತ್ರ ಕೃಪೆ: ನಾಸಾ

Best Mobiles in India

English summary
In a bid to find concrete evidence of life outside Earth, NASA is developing a 'chemical laptop' - the first portable, miniaturised laboratory built to detect both amino acids and fatty acids on other worlds.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X