ನ್ಯೂಸ್‌ ಆಂಕರ್‌ಗಳ ಸ್ಥಾನಕ್ಕೂ ಬಂತು ಕುತ್ತು..! ಚೀನಾದಲ್ಲಿ ಲಾಂಚ್‌ ಆಯ್ತು ಆಂಕರ್‌ ರೋಬೋಟ್‌..!

|

ಇಷ್ಟು ದಿನ ನಾವೇ ಮೊದಲು, ನಮ್ಮಲ್ಲೇ ಮೊದಲು, ಬಿಗ್‌ ಎಕ್ಸ್‌ಕ್ಲೂಸಿವ್‌, ಬಿಗ್‌ ಸ್ಟೋರಿ ಎನ್ನುತ್ತಿದ್ದ ನ್ಯೂಸ್‌ ಆಂಕರ್‌ಗಳ ಕೆಲಸಕ್ಕೂ ಆಪತ್ತು ಬಂದಿದೆ. ಹೌದು, ಟೆಕ್ನಾಲಜಿ ಎಲ್ಲಾ ಕ್ಷೇತ್ರಗಳನ್ನೂ ಆವರಿಸುತ್ತಿದ್ದು, ಉದ್ಯೋಗ ಅವಕಾಶಗಳು ಕ್ಷೀಣಿಸುತ್ತಾ ಸಾಗಿದೆ. ಟೆಕ್ನಾಲಜಿಯ ಮುಂದುವರೆದ ಭಾಗವೊಂದು ನ್ಯೂಸ್‌ ಚಾನಲ್‌ಗಳಿಗೂ ಕಾಲಿಡುತ್ತಿದ್ದು, ಆಂಕರ್‌ಗಳು ಪರದಾಡುವ ಸಮಯ ಬಂದರೂ ಬರಬಹುದು.

ಹೌದು, ಚೀನಾದಲ್ಲಿ ಗುರುವಾರ ಸರ್ಕಾರಿ ಸ್ವಾಮ್ಯದ ಶಿನುವಾ ನ್ಯೂಸ್‌ ಏಜೇನ್ಸಿ ವಿಶ್ವದ ಮೊದಲ AI ಆಂಕರ್‌ನಿಂದ ಸುದ್ದಿಯನ್ನು ಓದಿಸಿದ್ದು, ಟಿವಿ ಮಾಧ್ಯಮದಲ್ಲಿ ಮಹತ್ತರ ಬದಲಾವಣೆಯ ಸೂಚನೆ ಸಿಕ್ಕಿದೆ. ಈ AI ಆಂಕರ್‌ ಇಂಗ್ಲಿಷ್‌ ಮತ್ತು ಚೀನಾ ಭಾಷೆಯಲ್ಲಿ ನಿರರ್ಗಳವಾಗಿ ಸುದ್ದಿಯನ್ನು ಓದಿದ್ದು, ಸುದ್ದಿ ನಿರೂಪಕರ ನಿದ್ದೆಗೆಡಿಸಿದೆ. ಹಾಗಾದ್ರೇ AI ನ್ಯೂಸ್‌ ಆಂಕರ್‌ ಹೇಗೆ ಕಾರ್ಯನಿರ್ವಹಿಸುತ್ತದೆ..? ಅದರ ವಿಶೇಷತೆಗಳೇನು..? ಮುಂದೆ ನೋಡಿ..

ಹೇಗಿರುತ್ತಾನೆ AI ಆಂಕರ್‌..?

ಹೇಗಿರುತ್ತಾನೆ AI ಆಂಕರ್‌..?

AI ಆಂಕರ್ ತದ್ರೂಪಿ ಮನುಷ್ಯನ ರೂಪವನ್ನು ಹೊಂದಿದ್ದು, ಮಾನವನ ಆಕಾರವನ್ನೇ ಹೋಲುತ್ತಾನೆ. ಇದು ಕೃತಕ ಬುದ್ಧಿಮತ್ತೆ ಬೆಂಬಲಿತ ರೋಬೋಟ್‌ ಆಗಿದೆ. AI ಆಂಕರ್‌ನಲ್ಲಿ ಸುದ್ದಿ ನಿರೂಪಕನಲ್ಲಿರುವ ಕನಿಷ್ಟ ಮುಖದ ಅಭಿವ್ಯಕ್ತಿಗಳು ಮತ್ತು ತುಟಿ ಚಲನೆಗಳು ಇದ್ದು, ಸುದ್ದಿಯನ್ನು ನಿರೂಪಕನಂತೆ ಸ್ಪಷ್ಟವಾಗಿ ಓದುತ್ತದೆ. ಸದ್ಯಕ್ಕೆ ಇಂಗ್ಲಿಷ್ ಮತ್ತು ಚೀನಾ ಭಾಷೆಯಲ್ಲಿ ಸುದ್ದಿಯನ್ನು AI ಆಂಕರ್‌ ಓದುತ್ತಿದೆ.

ಅಂತರ್ಜಾಲ ಸಮ್ಮೇಳನದಲ್ಲಿ ಬಿಡುಗಡೆ

ಅಂತರ್ಜಾಲ ಸಮ್ಮೇಳನದಲ್ಲಿ ಬಿಡುಗಡೆ

ಚೀನಾದ ವುಜೆನ್‌ನಲ್ಲಿ ಆಯೋಜಿಸಿದ್ದ ವಿಶ್ವ ಅಂತರ್ಜಾಲ ಸಮ್ಮೇಳನದಲ್ಲಿ ಶಿನೂವಾ ಈ AI ಆಂಕರ್‌ನ್ನು ಬಿಡುಗಡೆಗೊಳಿಸಿದೆ. ಸರ್ಚ್‌ ಇಂಜಿನ್‌ ಆಪರೇಟರ್‌ ಸೋಗು ಜತೆ ಶಿನೂವಾ ಈ ತಂತ್ರಜ್ಞಾನವನ್ನು ಗುರುವಾರ ಬಿಡುಗಡೆಗೊಳಿಸಿದೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ಸ್ವಯಂ ಪರಿಚಯ ಮಾಡಿಕೊಂಡ ವರ್ಚುವಲ್‌ ಆಂಕರ್‌

ಸ್ವಯಂ ಪರಿಚಯ ಮಾಡಿಕೊಂಡ ವರ್ಚುವಲ್‌ ಆಂಕರ್‌

ಶಿನೂವಾದ ಮೊದಲ ಇಂಗ್ಲಿಷ್‌ AI ಆಂಕರ್‌ ಸ್ವಯಂ ಪರಿಚಯ ಮಾಡಿಕೊಂಡಿದ್ದಲ್ಲದೇ, ತನ್ನ ಸಾಮರ್ಥ್ಯಗಳನ್ನು ವಿವರಿಸಿದೆ. AI ಆಂಕರ್‌ ಮುಖ ಮತ್ತು ಧ್ವನಿಯ ವಿನ್ಯಾಸವನ್ನು ಏಜೆನ್ಸಿಯ ಸುದ್ದಿ ನಿರೂಪಕ ಝಾಂಗ್‌ಝಾವ್‌ ಅವರನ್ನು ಆಧರಿಸಿ ರೂಪಿಸಲಾಗಿದೆ. ಇದು ಟೆಲೆಪ್ರಾಮ್ಟರ್‌ನಲ್ಲಿ ಬರುವ ಸುದ್ದಿಯನ್ನು ಓದುತ್ತದೆ.

ಟೆಕ್‌ ಲೋಕದ ಹೊಸ ಭರವಸೆ

AI ನ್ಯೂಸ್‌ ಆಂಕರ್‌ ದಣಿವರಿಯದೇ ಕೆಲಸ ಮಾಡುವ ಹಾಗೂ ಯಾವುದೇ ಅಡಚಣೆಗಳಿಲ್ಲದ ಸುದ್ದಿಯನ್ನು ಓದುವ ಭರವಸೆ ಟೆಕ್‌ ಲೋಕಕ್ಕೆ ಸಿಕ್ಕಿದೆ. ಇದರ ಜತೆ AI ಆಂಕರ್‌ ಮಾಹಿತಿಯನ್ನು ಸಂಗ್ರಹಿಸಿ ಸುದ್ದಿಯನ್ನು ಅಭಿವೃದ್ಧಿಪಡಿಸುತ್ತದೆ. ಲೈವ್‌ ಬ್ರಾಡ್‌ಕಾಸ್ಟಿಂಗ್‌ ವಿಡಿಯೋವನ್ನು ನೀಡುವುದನ್ನು ಕಲಿಯುತ್ತಿದ್ದಾನೆ. ಈ ವೃತ್ತಿಪರ ಸುದ್ದಿ ನಿರೂಪಕರು ಓದುವಂತೆ ನೈಸರ್ಗಿಕವಾಗಿ AI ಆಂಕರ್‌ನ್ನು ರೂಪಿಸಲಾಗಿದೆ ಎಂದು ಶಿನುವಾ ಹೇಳಿದೆ.

24/7 ಕೆಲಸ

24/7 ಕೆಲಸ

ಶಿನೂವಾ ಹೇಳುವಂತೆ AI ಆಂಕರ್‌ ಹೀಗಾಗಲೇ ಏಜೆನ್ಸಿಯ ರಿಪೋರ್ಟಿಂಗ್‌ ತಂಡದ ಸದಸ್ಯನಾಗಿದ್ದಾನಂತೆ. ಅವನು 24 ಗಂಟೆ ನಿರಂತರವಾಗಿ ಕೆಲಸವನ್ನು ಮಾಡುತ್ತಿದ್ದು, ನ್ಯೂಸ್‌ ವೆಬ್‌ಸೈಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ನ್ಯೂಸ್‌ ಪ್ರೊಡಕ್ಷನ್‌ ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ಸುದ್ದಿಯ ದಕ್ಷತೆಯನ್ನು ಹೆಚ್ಚಿಸಬಹುದಾಗಿದೆಯಂತೆ.

ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ

ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ

Ai ಆಂಕರ್‌ ಸೃಷ್ಟಿಸಿರುವ ದಿನದಿಂದಲೂ ಸುದ್ದಿಗಳನ್ನು ನಿರೂಪಿಸುತ್ತಿದೆ. ಆದರೆ, ಒಂದೇ ಧ್ವನಿಯಲ್ಲಿ ಯಾವುದೇ ಏರಿಳಿತವಿಲ್ಲದೇ, ಮುಖದಲ್ಲಿ ಭಾವನೆಗಳಿಲ್ಲದ ರೀತಿಯಲ್ಲಿ ನ್ಯೂಸ್‌ ಹೇಳುತ್ತಿತ್ತು. ಸದ್ಯ ಸ್ವಲ್ಪ ಅಭಿವೃದ್ಧಿಯಾಗಿದ್ದು, ಇನ್ನು ಅನೇಕ ಅಭಿವೃದ್ಧಿಗಳು AI ಆಂಕರ್‌ಗೆ ಬೇಕಾಗಿದ್ದು, ಮುಂದೊಂದು ದಿನ ವಿಶ್ವ ಟಿವಿ ಮಾಧ್ಯಮವನ್ನು AI ಆಂಕರ್‌ ಆಳಿದರೆ ಆಶ್ಚರ್ಯಪಡಬೇಕಿಲ್ಲ.

Best Mobiles in India

English summary
China’s Xinhua unveils the world’s first AI news anchor. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X