ಗೂಗಲ್‌ ಕ್ರೋಮ್‌ ಬಳಸುವ ಈ ಸ್ಟೋರಿ ಓದಿರಿ!

|

ಗೂಗಲ್‌ ಕ್ರೋಮ್‌ ಬಳಸುವವರಿಗೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಶಾಕಿಂಗ್‌ ನ್ಯೂಸ್‌ ನೀಡಿದೆ. ಸುಲಭವಾಗಿ ಬ್ರೌಸ್‌ ಮಾಡಬಹುದೆಂದು ಗೂಗಲ್‌ ಕ್ರೋಮ್‌ ಬಳಸುವ ಮಂದಿ ಈ ವರದಿಯನ್ನು ಗಮನಿಸಲೇಬೇಕಿದೆ. ಏಕೆಂದರೆ CERT-In ಪ್ರಕಾರ ಗೂಗಲ್‌ ಕ್ರೋಮ್‌ "ಹೆಚ್ಚಿನ ತೀವ್ರತೆ" ಎಂದು ವರ್ಗೀಕರಿಸಲಾದ ಅನೇಕ ದುರ್ಬಲತೆಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಇದರಿಂದ ನಿಮ್ಮ ಬ್ರೌಸಿಂಗ್‌ ಡೇಟಾ ಸುರಕ್ಷಿತವಲ್ಲ ಅನ್ನೊದು ಬಹಿರಂಗವಾಗಿದೆ.

ಕಂಪ್ಯೂಟರ್

ಹೌದು, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಗೂಗಲ್‌ ಕ್ರೋಮ್‌ ಸಾಕಷ್ಟು ದೋಷಗಳನ್ನು ಹೊಂದಿರುವುದಾಗಿ ಹೇಳಿದೆ. CERT-In ಸೈಬರ್ ಭದ್ರತಾ ಬೆದರಿಕೆಗಳನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆಯಾಗಿದೆ. ಇದರಿಂದ ಗೂಗಲ್‌ ಕ್ರೋಮ್‌ ಬಳಸುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಹಾಗಾದ್ರೆ CERT-In ಪ್ರಕಾರ ಗೂಗಲ್‌ ಕ್ರೋಮ್‌ ಹೊಂದಿರುವ ದೋಷ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಕ್ರೋಮ್

ಗೂಗಲ್‌ ಕ್ರೋಮ್ ವಿಶ್ವದಲ್ಲಿಯೇ ಹೆಚ್ಚು ಮಂದಿ ಬಳಸುವ ಬ್ರೌಸರ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿಯೂ ಕೂಡ ಹೆಚ್ಚಿನ ಜನರು ಬ್ರೌಸಿಂಗ್‌ ಮಾಡಲು ಗೂಗಲ್‌ ಕ್ರೋಮ್‌ ಬಳಸುತ್ತಾರೆ. ಏಕೆಂದರೆ ಇದು ಎಲ್ಲಾ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್‌ ಆಗಿರುತ್ತದೆ. ಒಂದು ವರದಿಯ ಪ್ರಕಾರ ಕ್ರೋಮ್ ಜಾಗತಿಕವಾಗಿ ಅತಿದೊಡ್ಡ ಬ್ರೌಸರ್ ಮಾರುಕಟ್ಟೆ ಪಾಲನ್ನು ಹೊಂದಿದೆ. ಆದರೆ ಗೂಗಲ್ ಕ್ರೋಮ್‌ನಲ್ಲಿ ಹಲವಾರು ದುರ್ಬಲತೆಗಳಿವೆ ಅನ್ನೊದನ್ನ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ವರದಿ ಮಾಡಿದೆ. ವರದಿ ಪ್ರಕಾರ ಇದು ಗುರಿಪಡಿಸಿದ ಸಿಸ್ಟಮ್‌ನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಹ್ಯಾಕರ್‌ಗಳಿಗೆ ಸುಲಭವಾಗಿ ಅವಕಾಶ ನೀಡಲಿದೆ.

ಹ್ಯಾಕರ್

ಇನ್ನು ಈ ದೋಷಗಳನ್ನು ಹ್ಯಾಕರ್ ಬಳಸಿಕೊಂಡು ಹ್ಯಾಕ್‌ ಮಾಡಿದರೆ ಕ್ರೋಮ್‌ ಬಳಕೆದಾರರು ಸಾಕಷ್ಟು ತೊಂದರೆ ಅನುಭವಿಸುವ ಸಾದ್ಯತೆಯಿದೆ. ಇನ್ನು ಸುರಕ್ಷಿತ ಬ್ರೌಸಿಂಗ್, ರೀಡರ್ ಮೋಡ್, ವೆಬ್ ಸರ್ಚ್‌, ಥಂಬ್‌ನೇಲ್ ಟ್ಯಾಬ್ ಸ್ಟ್ರಿಪ್, ಸ್ಕ್ರೀನ್ ಕ್ಯಾಪ್ಚರ್, ವಿಂಡೋ ಡೈಲಾಗ್, ಪಾವತಿಗಳು, ಪ್ರವೇಶಿಸುವಿಕೆ ಮತ್ತು ಬಿತ್ತರಿಸುವಿಕೆಯ ಕಾರಣದಿಂದಾಗಿ ಗೂಗಲ್‌ ಕ್ರೋಮ್‌ನಲ್ಲಿ ದುರ್ಬಲತೆಗಳು ಕಾಣಿಸಿಕೊಂಡಿವೆ. ಇದಲ್ಲದೆ ಆಂಗಲ್‌ನಲ್ಲಿ ಹೀಪ್ ಬಫರ್ ಓವರ್‌ಫ್ಲೋ; ಫುಲ್ ಸ್ಕ್ರೀನ್ ಮೋಡ್, ಸ್ಕ್ರಾಲ್, ಎಕ್ಸ್‌ಟೆನ್ಶನ್ಸ್ ಪ್ಲಾಟ್‌ಫಾರ್ಮ್ ಮತ್ತು ಪಾಯಿಂಟರ್ ಲಾಕ್‌ನಲ್ಲಿ ಸೂಕ್ತವಲ್ಲದ ಅನುಷ್ಠಾನದಿಂದ ಹ್ಯಾಕರ್‌ಗಳು ಸುಲಭವಾಗಿ ಪ್ರವೇಶಿಸಲು ಸಾಧ್ಯವಿದೆ.

ಗೂಗಲ್

ಆದರೆ, ಗೂಗಲ್ ಈಗಾಗಲೇ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿರುವುದರಿಂದ ಬಳಕೆದಾರರಿಗೆ ಯಾವುದೇ ತೊಂದರೆಯಿಲ್ಲ ಎನ್ನಲಾಗಿದೆ. ಆದರೆ ಹಿಂದಿನ ಗೂಗಲ್‌ ಕ್ರೋಮ್‌ ಬಳಸುತ್ತಿರುವವರು ಮಾತ್ರ ತೊಂದರೆಯಾಗಲಿದೆ. ಸದ್ಯ ಹೊಸ ಕ್ರೋಮ್ 98.0.4758.80/81/82 ಅಪ್‌ಡೇಟ್ ಅನ್ನು ಇತ್ತೀಚೆಗೆ ವಿಂಡೋಸ್‌ಗಾಗಿ ಮತ್ತು 98.0.4758.80 ಮ್ಯಾಕ್ ಮತ್ತು ಲಿನಕ್ಸ್ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ. ಈ ಅಪ್ಡೇಟ್‌ನಲ್ಲಿ ಹಲವಾರು ಪರಿಹಾರಗಳು ಮತ್ತು ಸುಧಾರಣೆಗಳನ್ನು ಪರಿಚಯಿಸಲಾಗಿದೆ. ಹೊಸ ಅಪ್‌ಡೇಟ್ 27 ಭದ್ರತಾ ಪರಿಹಾರಗಳನ್ನು ಸರಿಪಡಿಸುತ್ತದೆ ಎಂದು ಕ್ರೋಮ್‌ ಹೇಳಿಕೊಂಡಿದೆ.

ಗೂಗಲ್‌

ಇನ್ನು ಈ ವರದಿಯ ನಡುವೆ ಗೂಗಲ್‌ ಕ್ರೋಮ್‌ ಹೊಸ ಲೋಗೋ ಪರಿಚಯಿಸಿದೆ. ಈ ಲೋಗೋದಲ್ಲಿ ಪ್ರತಿ ಬಣ್ಣದ ನಡುವಿನ ಗಡಿಯನ್ನು ರೈಸಿಂಗ್‌ ಮಾಡಲಾಗಿದೆ. ಇದರಿಂದ ಲೋಗೋದಲ್ಲಿರುವ ಕೆಂಪು, ಹಳದಿ ಮತ್ತು ಹಸಿರು ಬಣ್ಣ ಈಗ ಸರಳವಾಗಿ ಸಮತಟ್ಟಾಗಿದೆ. ಇನ್ನು ಈ ಹೊಸ ಬದಲಾವಣೆಯಿಂದಾಗಿ ಇದೀಗ ಲೋಗೋದಲ್ಲಿರುವ ಬ್ಲೂ ಕಲರ್‌ ಸರ್ಕಲ್‌ ದೊಡ್ಡದಾಗಿ ಕಾಣಲಿದೆ. ಇದರಿಂದ ಲೋಗೋದಲ್ಲಿನ ಬಣ್ಣಗಳು ಹೆಚ್ಚು ಆಕರ್ಷಕವಾಗಿ ಕಾಣತ್ತವೆ. ಹಾಗಂತ ಗೂಗಲ್‌ ಕ್ರೋಮ್‌ನ ಮೇನ್‌ ಲೋಗೋ ಎಲ್ಲಾ ಸಿಸ್ಟಂಗಳಲ್ಲಿಯೂ ಒಂದೇ ರೀತಿ ಕಾಣಿಸುವುದಿಲ್ಲ ಬದಲಿಗೆ ಬಿನ್ನ ಮಾದರಿಯಲ್ಲಿ ಕಾಣಲಿದೆ.

ವಿಂಡೋಸ್‌

ಕ್ರೋಮ್‌ ಒಎಸ್‌ನಲ್ಲಿ, ಇತರ ಸಿಸ್ಟಂ ಐಕಾನ್‌ಗಳಿಗೆ ಪೂರಕವಾಗಿ ಲೋಗೋ ಹೆಚ್ಚು ವರ್ಣರಂಜಿತವಾಗಿ ಕಾಣುತ್ತದೆ. ಆದರೆ MacOS ನಲ್ಲಿ, ಲೋಗೋ ಸಣ್ಣ ನೆರಳನ್ನು ಹೊಂದಿರುತ್ತದೆ. ಇದು ಡಾಕ್‌ನಿಂದ "ಪಾಪಿಂಗ್ ಔಟ್" ಆಗುತ್ತಿರುವಂತೆ ಗೋಚರಿಸುತ್ತದೆ. ಇನ್ನು ವಿಂಡೋಸ್‌ 10 ಮತ್ತು 11 ಆವೃತ್ತಿಯು ಹೆಚ್ಚು ಡ್ರಾಮಾಟಿಕ್ ಗ್ರೇಡಿಯಂಟ್ ಅನ್ನು ಹೊಂದಿದೆ. ಇದರಿಂದ ಇತರ ವಿಂಡೋಸ್ ಐಕಾನ್‌ಗಳ ಶೈಲಿಯೊಂದಿಗೆ ಹೊಂದಿಕೊಳ್ಳುತ್ತದೆ. ಇದಲ್ಲದೆ ನೀವು ಕ್ರೋಮ್ ಕ್ಯಾನರಿ ಅನ್ನು ಬಳಸಿದರೆ ಹೊಸ ಐಕಾನ್ ಅನ್ನು ಕಾಣಬಹುದು. ಸದ್ಯ ಈ ಹೊಸ ಲೋಗೋ ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎನ್ನಲಾಗಿದೆ.

Best Mobiles in India

Read more about:
English summary
Chrome receives high severity vulnerability warning from government

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X