ಗೂಗಲ್‌ ಟಿವಿಯೊಂದಿಗೆ ಹೊಸ ಕ್ರೋಮ್‌ಕಾಸ್ಟ್ ಲಾಂಚ್:..ಕಡಿಮೆ ಬೆಲೆಗೆ ಲಭ್ಯ!

|

ಗೂಗಲ್‌ ಕೇವಲ ಮಾಹಿತಿ ನೀಡಲಷ್ಟೇ ಅಲ್ಲದೆ ತನ್ನದೇ ಆದ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಹೆಚ್ಚು ಜನಪ್ರಿಯಗೊಂಡಿದೆ. ಈಗ ಗೂಗಲ್‌ ಟಿವಿಯೊಂದಿಗೆ ಹೊಸ ಕ್ರೋಮ್‌ಕಾಸ್ಟ್(Chromecast with Google TV (HD) ನ್ನು ಭಾರತದಲ್ಲಿ ಪರಿಚಯಿಸುತ್ತಿದೆ. ಜೊತೆಗೆ ಈ ಡಿವೈಸ್‌ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಗೂಗಲ್‌

ಗೂಗಲ್‌ ಕಂಪೆನಿ ಕಳೆದ ತಿಂಗಳು ಈ ಕ್ರೋಮ್‌ಕಾಸ್ಟ್ ಅನ್ನು ಪ್ರಪಂಚದ ಇತರೆ ಪ್ರಮುಖ 11 ದೇಶಗಳ ಜೊತೆಗೆ ಭಾರತದಲ್ಲೂ ಪರಿಚಯಿಸುವುದಾಗಿ ಮಾಹಿತಿ ನೀಡಿತ್ತು. ಅದರಂತೆ ಈಗ ಗೂಗಲ್‌ ಟಿವಿ ಜೊತೆಗೆ ಭಾರತದಲ್ಲಿ ಪರಿಚಯಿಸಿದೆ. ಅದೂ ಸಹ ಕಡಿಮೆ ಬೆಲೆಯಲ್ಲಿ.

ಕ್ರೋಮ್‌ಕಾಸ್ಟ್

ಹೌದು, ಈ ಗೂಗಲ್‌ ಕ್ರೋಮ್‌ಕಾಸ್ಟ್ ನ್ನು ಗೂಗಲ್‌ ಕಂಪನಿ ಪರಿಚಯಾತ್ಮಕ ಬೆಲೆ ಕೇವಲ 4,199 ರೂ. ಗಳಲ್ಲಿ ಖರೀದಿಗೆ ನೀಡಿದೆ. ಇದು ಈ ಹಿಂದೆ ಬಿಡುಗಡೆ ಮಾಡಲಾದ ಗೂಗಲ್‌ TV (4K) ಗಿಂತಲೂ ತುಂಬಾ ಅಗ್ಗವಾಗಿದೆ. ಇದು ಆಕರ್ಷಕ ನೋಟದಲ್ಲಿದ್ದು, ಶ್ವೇತ ವರ್ಣದಲ್ಲಿದೆ. ಹಾಗಿದ್ರೆ ಇದರ ಇತರೆ ಫೀಚರಸ್‌ಗಳೆನು? ಈ ಡಿವೈಸ್‌ ಎಲ್ಲಿ ಲಭ್ಯವಾಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಇದರ ವಿಶೇಷ ಫೀಚರ್ಸ್‌

ಇದರ ವಿಶೇಷ ಫೀಚರ್ಸ್‌

ಗೂಗಲ್‌ ಕ್ರೋಮ್‌ಕಾಸ್ಟ್ ತನ್ನದೇ ಆದ ವಿಭಿನ್ನ ಆಯ್ಕೆಗಳಿರುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಡಿವೈಸ್‌ ಗೂಗಲ್‌ ಟಿವಿ (HD) ಜೊತೆಗೆ ಗೂಗಲ್‌ ಕ್ರೋಮ್‌ಕಾಸ್ಟ್ 1080p ರೆಸಲ್ಯೂಶನ್ ಹಾಗೂ ಹೆಚ್‌ಡಿಆರ್‌ ಬೆಂಬಲದೊಂದಿಗೆ ಬರುತ್ತದೆ. ಬಿಳಿ ಬಣ್ಣದಲ್ಲಿ ಇರುವ ಈ ಸಾಧನ ತುಂಬಾ ಆಕರ್ಷಕ ನೋಟವನ್ನು ಒಳಗೊಂಡಿದೆ. ಇದರ ಜೊತೆಗೆ ನೀಡಲಾದ ರಿಮೋಟ್‌ ಸಹ ಬಿಳಿ ಬಣ್ಣದಿಂದ ಕೂಡಿದ್ದು, ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ.

ಯಾವೆಲ್ಲಾ ಆಪ್‌ಗಳಿಗೆ ಸಪೋರ್ಟ್‌ ಮಾಡಲಿದೆ

ಯಾವೆಲ್ಲಾ ಆಪ್‌ಗಳಿಗೆ ಸಪೋರ್ಟ್‌ ಮಾಡಲಿದೆ

ಈ ಕ್ರೋಮ್‌ಕಾಸ್ಟ್ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+, ಯುಟ್ಯೂಬ್, ಆಪಲ್ ಟಿವಿ ಸೇರಿದಂತೆ ಇತರ ಹಲವು ಸ್ಟ್ರೀಮಿಂಗ್ ಸೇವೆಗಳಿಗೆ ಬೆಂಬಲ ನೀಡುತ್ತದೆ. ಅಷ್ಟೇ ಅಲ್ಲದೆ ಗೂಗಲ್‌ ಪ್ಲೇ ಸ್ಟೋರ್‌ಗೂ ಎಂಟ್ರಿ ಕೊಡಬಹುದು. ಇದರಿಂದ ಕೆಲವು ಅಪ್ಲಿಕೇಶನ್‌ ಹಾಗೂ ಗೇಮ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಸ್ಟೋರೇಜ್‌ ಸಾಮರ್ಥ್ಯ ಹಾಗೂ ಇತರೆ

ಸ್ಟೋರೇಜ್‌ ಸಾಮರ್ಥ್ಯ ಹಾಗೂ ಇತರೆ

ಈ ಸ್ಮಾರ್ಟ್‌ ಡಿವೈಸ್‌ 8GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಇದರಲ್ಲಿ ಗೂಗಲ್‌ ಅಸಿಸ್ಟೆಂಟ್‌ ಸಹಾಯದಿಂದ ಆಪ್‌ಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಹಾಗೆಯೇ ಮಲ್ಟಿ ರೂಂ ಪ್ಲೇ ಬ್ಯಾಕ್‌ ಆಯ್ಕೆ ಇರುವ ನೆಸ್ಟ್ ಸ್ಪೀಕರ್‌ಗೂ (Nest speakers) ಬೆಂಬಲ ನೀಡಲಿದೆ. ಈ ಮೂಲಕ ನಿಮ್ಮ ಮನೆಯಲ್ಲಿ ನೆಸ್ಟ್ ಸ್ಪೀಕರ್‌ಗಳಿಂದ ಸಂಗೀತವನ್ನು ಪ್ಲೇ ಮಾಡಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್‌ ಡಿವೈಸ್‌ ಆಂಡ್ರಾಯ್ಡ್ ಮತ್ತು ಐಒಎಸ್‌ಗಳಿಗೂ ಬೆಂಬಲ ನೀಡಲಿದೆ. ಆಡಿಯೋ ವಿಷಯದಲ್ಲಿ ಇದು ಡಾಲ್ಬಿ ಡಿಜಿಟಲ್ ಮತ್ತು ಡಾಲ್ಬಿ ಆಟ್ಮಾಸ್ನಲ್ಲಿ ಮನರಂಜನೆ ನೀಡಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಗೂಗಲ್‌ ಟಿವಿ ಜೊತೆಗೆ ಕ್ರೋಮ್‌ಕಾಸ್ಟ್ ನ HD ಮಾದರಿಯು ಈ ಹಿಂದೆ ಬಿಡುಗಡೆಗೊಂಡ 4K ಮಾದರಿಗಿಂತ 2,200 ರೂ. ಕಡಿಮೆ ಬೆಲೆ ಇದೆ. ಹಾಗೆಯೇ ಗೂಗಲ್‌ ಟಿವಿ (4K) ನೊಂದಿಗೆ ಗೂಗಲ್‌ ಕ್ರೋಮ್‌ಕಾಸ್ಟ್ ಭಾರತದಲ್ಲಿ 6,399 ರೂ. ಬೆಲೆಗೆ ಮಾರಾಟ ಆಗುತ್ತಿದೆ. ಈಗ ನೂತನವಾಗಿ ಲಾಂಚ್‌ ಆಗಿರುವ ಈ ಹೆಚ್‌ಡಿ ಮಾಡೆಲ್‌ನ ಕ್ರೋಮ್‌ಕಾಸ್ಟ್ ಪರಿಚಯಾತ್ಮಕ ಬೆಲೆ 4,199 ರೂ. ಇದೆ. ಇದರ ಖರೀದಿಗೆ ನೀವು ಫ್ಲಿಪ್‌ಕಾರ್ಟ್‌ ತಾಣಕ್ಕೆ ಭೇಟಿ ನೀಡಬೇಕಿದೆ. ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಈ ಕ್ರೋಮ್‌ಕಾಸ್ಟ್‌ನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು.

Best Mobiles in India

English summary
Google has become popular not only for providing information but also for offering its own products. Here we have provided information about Chromecast with Google TV (HD).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X