ಶೀಘ್ರದಲ್ಲೇ ಕ್ಲಬ್‌ಹೌಸ್‌ ಸೇರಲಿದೆ ಅಚ್ಚರಿಯ ಫೀಚರ್ಸ್‌!

|

ಕ್ಲಬ್‌ಹೌಸ್‌ ಜನಪ್ರಿಯ ಆಡಿಯೋ ಸೊಶೀಯಲ್‌ ಮೀಡಿಯಾ ಎನಿಸಿಕೊಂಡಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಸೊಶೀಯಲ್‌ ಮೀಡಿಯಾ ವಲಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಲಭ್ಯವಾದ ನಂತರ ಕ್ಲಬ್‌ಹೌಸ್‌ ಹೆಚ್ಚಿನ ಜೆನಪ್ರಿಯತೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಕ್ಲಬ್‌ಹೌಸ್‌ ಹೊಸ ಮಾದರಿಯ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಕ್ಲಬ್‌ಹೌಸ್ ಹೊಸ ಇನ್-ರೂಮ್ ಗೇಮಿಂಗ್ ಫೀಚರ್ಸ್‌ ಅನ್ನು ಸೇರಿಸಲು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

ಕ್ಲಬ್‌ಹೌಸ್‌

ಹೌದು, ಕ್ಲಬ್‌ಹೌಸ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇನ್‌-ರೂಮ್‌ ಗೇಮಿಂಗ್‌ ಫೀಚರ್ಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇದರಲ್ಲಿ "ವೈಲ್ಡ್ ಕಾರ್ಡ್ಸ್" ಎಂಬ ಗೇಮ್‌ ಅನ್ನು ಪ್ರಾರಂಭಿಸುವ ಬಗ್ಗೆ ಕ್ಲಬ್‌ಹೌಸ್‌ ಕೂಡ ದೃಢಪಡಿಸಿದೆ. ಈ ಗೆಮ್‌ ಮೂಲಕ ಜನರು ಪರಸ್ಪರ ಚೆನ್ನಾಗಿ ತಿಳಿದುಕೊಳ್ಳಲು ಸಂಭಾಷಣೆಗಳನ್ನು ಉತ್ತೇಜಿಸುವುದಕ್ಕೆ ಸೂಕ್ತವಾದ ಪ್ರಶ್ನೆಗಳ ಸರಣಿಯನ್ನು ಹೊಂದಿರಲಿದೆ. ಹಾಗಾದ್ರೆ ಕ್ಲಬ್‌ಹೌಸ್‌ನ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಲಬ್‌ಹೌಸ್‌

ಕ್ಲಬ್‌ಹೌಸ್‌ ಅಪ್ಲಿಕೇಶನ್‌ ಸದ್ಯದಲ್ಲೇ ಇನ್‌ ರೂಮ್‌ ಗೇಮಿಂಗ್‌ ಫೀಚರ್ಸ್‌ ಪರಿಚಯಿಸಿದೆ. ಇದು ಕ್ಲಬ್‌ಹೌಸ್‌ನ ಡೀಫಾಲ್ಟ್ ಸ್ಕ್ರೀನ್‌ನಲ್ಲಿರುವ "+ ಸ್ಟಾರ್ಟ್‌ ಎ ರೂಮ್‌" ಬಟನ್ ಕ್ಲಿಕ್ ಮಾಡುವ ಮೂಲಕ ನೀವು ಕ್ಲಬ್‌ಹೌಸ್‌ನಲ್ಲಿ ಗೇಮ್‌ ಅನ್ನು ಪ್ರಾರಂಭಿಸಬಹುದು. ಇದರ ನಂತರ, "ಗೇಮ್ಸ್" ಕ್ಲಿಕ್ ಮಾಡಬೇಕಾಗುತ್ತದೆ. ಇದರಲ್ಲಿ ವೈಲ್ಡ್ ಕಾರ್ಡ್ಸ್‌ ಗೇಮ್‌ ಲಭ್ಯವಾಗಲಿದೆ. ಪ್ರಸ್ತುತ ವೈಲ್ಡ್‌ ಕಾರ್ಡ್ಸ್‌ ಗೇಮ್‌ ಲಭ್ಯವಿರುವ ಏಕೈಕ ಗೇಮ್‌ ಆಗಿರುವುದರಿಂದ, ನಿಮಗೆ ಆ ಆಯ್ಕೆಯನ್ನು ಮಾತ್ರ ನೀಡಲಾಗುತ್ತದೆ.

ಕ್ಲಬ್‌ಕೌಸ್‌

ಇನ್ನು ಕ್ಲಬ್‌ಕೌಸ್‌ ನಲ್ಲಿ ಒಮ್ಮೆ ನೀವು ವೈಲ್ಡ್ ಕಾರ್ಡ್ಸ್‌ ಆಯ್ಕೆಯನ್ನು ಆರಿಸಿದರೆ, ನಿಮ್ಮನ್ನು ಬೇರೆ ಸ್ಕ್ರೀನ್‌ಗೆ ಕರೆದೊಯ್ಯಲಾಗುತ್ತದೆ. ಅದರಲ್ಲಿ ನಿಮಗೆ "ಸ್ಟಾರ್ಟ್ ರೂಮ್" ಬಟನ್‌ನೊಂದಿಗೆ ಪ್ರಾಂಪ್ಟ್ ಮಾಡಲಾಗುತ್ತದೆ. ಒಮ್ಮೆ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ನೀವು ಹೆಚ್ಚಿನ ಜನರನ್ನು ಸೇರಿಸಲು ಮತ್ತು ಅವರೊಂದಿಗೆ ಗೇಮ್‌ ಅನ್ನು ಆಡಬಹುದಾದ ರೂಮ್‌ಗೆ ಸೇರಿಸಲಾಗುತ್ತದೆ. ಈ ಗೇಮ್‌ನಲ್ಲಿ ಜನರನ್ನು ಕೇಳಲಾಗುವ ಪ್ರಶ್ನೆಗಳ ಪಟ್ಟಿಯನ್ನು ಒದಗಿಸುತ್ತದೆ.

ಕ್ಲಬ್‌ಹೌಸ್‌ನಲ್ಲಿ ಓಪನ್‌ ರೂಮ್‌ ಅನ್ನು ಪ್ರಾರಂಭಿಸುವುದು ಹೇಗೆ?

ಕ್ಲಬ್‌ಹೌಸ್‌ನಲ್ಲಿ ಓಪನ್‌ ರೂಮ್‌ ಅನ್ನು ಪ್ರಾರಂಭಿಸುವುದು ಹೇಗೆ?

ಹಂತ:1 ಕ್ಲಬ್ ಹೌಸ್ ಆಪ್ ತೆರೆಯಿರಿ.
ಹಂತ:2 ಅಪ್ಲಿಕೇಶನ್‌ ಹೋಮ್‌ಪೇಜ್‌ನಲ್ಲಿರುವ +ರೂಂ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಸಬ್‌ ಮೆನುವಿನಿಂದ ಕ್ಲಬ್‌ ಆಯ್ಕೆಯನ್ನು ಆರಿಸಿ. ನೀವು ಬಯಸಿದಲ್ಲಿ ನೀವು ಒಂದು ವಿಷಯವನ್ನು ಕೂಡ ಸೇರಿಸಬಹುದು.
ಹಂತ:4 ಲೆಟ್ಸ್ ಗೋ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 + ಬಟನ್ ಕ್ಲಿಕ್ ಮಾಡುವ ಮೂಲಕ ಮತ್ತು ನಿಮ್ಮ ಸ್ನೇಹಿತರನ್ನು ಪಿಂಗ್ ಮಾಡುವ ಮೂಲಕ ನೀವು ಈಗ ಜನರನ್ನು ಆಹ್ವಾನಿಸಬಹುದು.

ನಿಮ್ಮ ಕ್ಲಬ್‌ಗಳಿಂದ ರೂಮ್ಸ್‌ಗಳನ್ನು ಪ್ರಾರಂಭಿಸುವುದು ಹೇಗೆ?

ನಿಮ್ಮ ಕ್ಲಬ್‌ಗಳಿಂದ ರೂಮ್ಸ್‌ಗಳನ್ನು ಪ್ರಾರಂಭಿಸುವುದು ಹೇಗೆ?

ಹಂತ:1 ಕ್ಲಬ್ ಹೌಸ್ ಆಪ್ ತೆರೆಯಿರಿ.
ಹಂತ:2 ಅಪ್ಲಿಕೇಶನ್‌ ಮುಖಪುಟದಲ್ಲಿರುವ + ರೂಂ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಸಬ್‌ ಮೆನುವಿನಿಂದ ಕ್ಲಬ್ ಅನ್ನು ಆಯ್ಕೆ ಮಾಡಿ. ನೀವು ಬಯಸಿದಲ್ಲಿ ನೀವು ಒಂದು ವಿಷಯವನ್ನು ಕೂಡ ಸೇರಿಸಬಹುದು.
ಹಂತ:4 ಕೊಠಡಿಯನ್ನು ತೆರೆಯಲು ಲೆಟ್ಸ್ ಗೋ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಸಂದರ್ಶಕರಿಗೆ ಮತ್ತು ಲಿಂಕ್ ಹಂಚಿಕೊಳ್ಳಲು ಕೊಠಡಿಯನ್ನು ತೆರೆಯಲು ನೀವು ಮೂರು ಚುಕ್ಕೆಗಳ ಆಯ್ಕೆಯನ್ನು ಕ್ಲಿಕ್ ಮಾಡಬಹುದು. + ಬಟನ್ ಕ್ಲಿಕ್ ಮಾಡುವ ಮೂಲಕ ಮತ್ತು ನಿಮ್ಮ ಸ್ನೇಹಿತರನ್ನು ಪಿಂಗ್ ಮಾಡುವ ಮೂಲಕ ನೀವು ಈಗ ಹೆಚ್ಚಿನ ಜನರನ್ನು ಆಹ್ವಾನಿಸಬಹುದು.

Most Read Articles
Best Mobiles in India

English summary
Clubhouse introduces games to make conversations more interesting

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X