'ರೆಡ್‌ ಮಿ ನೋಟ್ 5 ಪ್ರೊ' VS 'ಮಿ ಎ2'!..ಕನ್‌ಫ್ಯೂಸ್ ಆಗದಂತೆ ಖರೀದಿಸಲು ನೀವಿದನ್ನು ಓದಲೇಬೇಕು!!

|
Buy Xiaomi Mi A2 and get 4500GB Jio data

ಭಾರತದಲ್ಲಿ ಇಂದು ಅತಿಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್ ರೆಡ್‌ ಮಿ ನೋಟ್ 5 ಪ್ರೊ ನೆನ್ನೆಯವರೆಗೂ ಮೊಬೈಲ್ ಖರೀದಿದಾರರ ನಂ 1 ಆಯ್ಕೆಯಾಗಿತ್ತು. ಆದರೆ, ನೆನ್ನೆ ಶಿಯೋಮಿಯ ಮತ್ತೊಂದು ಮೆಗಾಫೋನ್ 'ಮಿ ಎ2' ಬಿಡುಗಡೆಯಾದ ನಂತರ ಈಗ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ಮಾತ್ರ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು, ಭಾರತೀಯ ಮಧ್ಯಮವರ್ಗದ ಜನರಿಗೆ ಹೇಳಿ ಮಾಡಿಸಿದಂತೆ ಮೊಬೈಲ್ ಮಾರುಕಟ್ಟೆಯಲ್ಲಿ ಬೀಡುಬಿಟ್ಟಿರುವ 'ರೆಡ್‌ ಮಿ ನೋಟ್ 5 ಪ್ರೊ' ಫೋನ್‌ಗೆ ಅದೇ ಮೊಬೈಲ್ ಕಂಪೆನಿಯ 'ಮಿ ಎ2' ಸ್ಮಾರ್ಟ್‌ಫೋನ್ ಸೆಡ್ಡು ಹೊಡೆಯುತ್ತಿದೆ. ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿಯೂ ಕೂಡ ವ್ಯತ್ಯಾಸವಿಲ್ಲದಿರುವುದು ಗ್ರಾಹಕರಿಗೆ ಮೊಬೈಲ್ ಕೊಳ್ಳಲು ಕನ್‌ಫ್ಯೂಸ್ ಆದಂತಿದೆ.

'ರೆಡ್‌ ಮಿ ನೋಟ್ 5 ಪ್ರೊ' VS 'ಮಿ ಎ2'!..ಯಾವ ಸ್ಮಾರ್ಟ್‌ಫೋನ್ ಬೆಸ್ಟ್?

ಹಾಗಾಗಿ, ಇಂದಿನ ಲೇಖನದಲ್ಲಿ 'ರೆಡ್‌ ಮಿ ನೋಟ್ 5 ಪ್ರೊ' ಸ್ಮಾರ್ಟ್‌ಫೋನ್ ಮತ್ತು ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸಬಹುದು ಎಂಬುದನ್ನು ತಿಳಿಯಲು ಬಯಸಿದ್ದೇವೆ. ಹಾಗಾದರೆ, 'ರೆಡ್‌ ಮಿ ನೋಟ್ 5 ಪ್ರೊ' VS ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಬೆಸ್ಟ್ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

'ರೆಡ್‌ ಮಿ ನೋಟ್ 5 ಪ್ರೊ ಬೆಲೆ

'ರೆಡ್‌ ಮಿ ನೋಟ್ 5 ಪ್ರೊ ಬೆಲೆ

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯುತ್ತಿರುವ 'ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 4GB/64GB ಮತ್ತು 6GB/64GB ಆವೃತ್ತಿ ಗಳಲ್ಲಿ ಖರೀದಿಸಲು ಲಭ್ಯವಿದೆ. 6GB/64GB ಆವೃತ್ತಿ ಸ್ಮಾರ್ಟ್‌ಪೋನ್ ಬೆಲೆ 16,999ರೂ.ಗಳಾಗಿದ್ದರೆ, 4GB/64GB ಆವೃತ್ತಿ ಸ್ಮಾರ್ಟ್‌ಪೋನ್ ಬೆಲೆ 14,999 ರೂಪಾಯಿಗಳಾಗಿವೆ.

ಶಿಯೋಮಿ 'ಮಿ ಎ2' ಬೆಲೆ?

ಶಿಯೋಮಿ 'ಮಿ ಎ2' ಬೆಲೆ?

ಇನ್ನು ನೆನ್ನೆಯಷ್ಟೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಬಿಡುಗಡೆಯಾಗಿದೆ. 4 GB RAM ಮತ್ತು 64 GB ಆವೃತ್ತಿಯ ಸ್ಮಾರ್ಟ್‌ಫೋನ್ ಬೆಲೆ ರೂ.16,999ಕ್ಕೆ ರೂ.ಗಳಾಗಿದ್ದು, ಶೀಘ್ರವೇ 6GB RAM / 128 GB ಆವೃತ್ತಿಯೂ ಲಾಂಚ್ ಆಗಲಿದೆ.

'ರೆಡ್‌ ಮಿ ನೋಟ್ 5 ಪ್ರೊ ಡಿಸ್‌ಪ್ಲೇ!

'ರೆಡ್‌ ಮಿ ನೋಟ್ 5 ಪ್ರೊ ಡಿಸ್‌ಪ್ಲೇ!

ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 18: 9 ಆಕಾರ ಅನುಪಾತದಲ್ಲಿ 15.2cm (5.99 ಇಂಚಿನ) FHD + ಡಿಸ್‌ಪ್ಲೇಯನ್ನು ಹೊಂದಿದೆ 2.5 ಡಿ.ಕರ್ವ್ಡ್ ಗ್ಲಾಸ್ ನಿಂದ ರಕ್ಷಿಸಲ್ಪಟ್ಟಿದೆ. 1080*2160 ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇ ಇದಾಗಿರುವುದರಿಂದ ವೀಡಿಯೋ ಮತ್ತು ಗೇಮಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಶಿಯೋಮಿ 'ಮಿ ಎ2' ಡಿಸ್‌ಪ್ಲೇ

ಶಿಯೋಮಿ 'ಮಿ ಎ2' ಡಿಸ್‌ಪ್ಲೇ

ಇನ್ನು ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಯೂನಿಬಾಡಿ ಮೆಟಲ್ ಡಿಸೈನ್‌ನೊಂದಿಗೆ ಸದ್ಯದ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತ 5.99 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದೆ. FHD+ ಗುಣಮಟ್ಟ ಡಿಸ್‌ಪ್ಲೇ ಇದಾಗಿದ್ದು, ಭಾರತದಲ್ಲಿ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ ಹೊಂದಿರುವ ಮೊದಲ ಫೋನ್ ಇದಾಗಿದೆ.

ಶಿಯೋಮಿ 'ಮಿ ಎ2' ಪ್ರೊಸೆಸರ್!

ಶಿಯೋಮಿ 'ಮಿ ಎ2' ಪ್ರೊಸೆಸರ್!

ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನಿನಲ್ಲಿ 2.2GHz ವೇಗ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಚಿಪ್ ಸೆಟ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಗೂಗಲ್ ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿಯೇ ಆಂಡ್ರಾಯ್ಡ್ ಒನ್ OS ಅನ್ನು ಇದರಲ್ಲಿ ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಶಿಯೋಮಿಯ ಕೇಲವು ಆಪ್‌ಗಳು ಸಹ ಲಭ್ಯವಿವೆ.

'ರೆಡ್‌ ಮಿ ನೋಟ್ 5 ಪ್ರೊ ಪ್ರೊಸೆಸರ್!

'ರೆಡ್‌ ಮಿ ನೋಟ್ 5 ಪ್ರೊ ಪ್ರೊಸೆಸರ್!

ಇನ್ನು ರೆಡ್‌ಮಿ ನೋಟ್ 5 ಪ್ರೊ ಆಂಡ್ರಾಯ್ಡ್ 8 ಒರಿಯೋ MIUI 9.5 ಸ್ನಾಪ್ ಡ್ರಾಗನ್ 636 soc ಪ್ರೊಸೆಸರ್‌ನಿಂದ ಕಾರ್ಯನಿರ್ವಹಣೆ ನೀಡಲಿದೆ. ಆಂಡ್ರಾಯ್ಡ್ ಒನ್ OS ಈ ಸ್ಮಾರ್ಟ್‌ಪೋನಿನಲ್ಲಿ ಇಲ್ಲದಿದ್ದರೂ ಕೂಡ RAM ಮತ್ತು ಪ್ರೊಸೆಸರ್ ವಿಷಯದಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಕೂಡ ಶಕ್ತಿಶಾಲಿಯಾಗಿದೆ ಎಂದು ಹೇಳಬಹುದು.

ಶಿಯೋಮಿ 'ಮಿ ಎ2' ಕ್ಯಾಮೆರಾ?

ಶಿಯೋಮಿ 'ಮಿ ಎ2' ಕ್ಯಾಮೆರಾ?

ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ 12 MP + 20 MP ಸಾಮರ್ಥ್ಯದಲ್ಲಿ ಡ್ಯುಯಲ್ ರಿಯಲ್ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 20 MP ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ವೇಳೆಯಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಹಾಗೂ ಎರಡು ಕಡೆಗಳಲ್ಲಿಯೂ ಆಟೋ HDR ಆಯ್ಕೆಯನ್ನು ಕಾಣಬಹುದಾಗಿದೆ. ಬೋಕೆ ಮೋಡ್ ಅನ್ನು ಕಾಣಬಹುದಾಗಿದೆ.

'ರೆಡ್‌ ಮಿ ನೋಟ್ 5 ಪ್ರೊ' ಕ್ಯಾಮೆರಾ?

'ರೆಡ್‌ ಮಿ ನೋಟ್ 5 ಪ್ರೊ' ಕ್ಯಾಮೆರಾ?

ಇನ್ನು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 12+5MP ಸಾಮರ್ಥ್ಯದ ಎರಡು ರಿಯಲ್ ಕ್ಯಾಮೆರಾಗಳು ಹಾಗೂ 20MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನಗಳು ಈ ಸ್ಮಾರ್ಟ್‌ಫೋನಿನಲ್ಲಿ ಇದ್ದರೂ, ಕ್ಯಾಮೆರಾ ವಿಷಯದಲ್ಲಿ 'ಮಿ ಎ2' ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಬೆಸ್ಟ್ ಎಂದು ಹೇಳಬಹುದು.

ಶಿಯೋಮಿ 'ಮಿ ಎ2' ಇತರೆ ಫೀಚರ್ಸ್?

ಶಿಯೋಮಿ 'ಮಿ ಎ2' ಇತರೆ ಫೀಚರ್ಸ್?

ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನಿನಲ್ಲಿ 3000mAh ಸಾಮರ್ಥ್ಯದ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ಗಾಗಿ ಕ್ವಿಕ್ ಚಾರ್ಜರ್ ತಂತ್ರಜ್ಞಾನವಿದೆ. ಇನ್ನುಳಿದಂತೆ ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಹೊಂದಿರಬಹುದಾದ ಬಹುತೇಕ ಎಲ್ಲಾ ಸಾಮಾನ್ಯ ಫೀಚರ್ಸ್ ಸ್ಮಾರ್ಟ್‌ಪೋನಿನ ಬೆಲೆಯನ್ನು ಹೆಚ್ಚಿಸಿದೆ. ಇಯರ್ ಫೋನ್ ಜಾಕ್ ಇಲ್ಲದಿರುವುದು ಆಶ್ಚರ್ಯಮೂಡಿಸಿದೆ.

'ರೆಡ್‌ ಮಿ ನೋಟ್ 5 ಪ್ರೊ'

'ರೆಡ್‌ ಮಿ ನೋಟ್ 5 ಪ್ರೊ'

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 5V/2A ಚಾರ್ಜಿಂಗ್ ಸಾಮರ್ಥ್ಯದ 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಕೊರತೆಯಾಗಿದ್ದ ಫುಲ್ ಸ್ಕ್ರಿನ್ ಡಿಸ್‌ಪ್ಲೇ ಆಯ್ಕೆಯನ್ನು ರೆಡ್‌ಮಿ ನೋಟ್ 5 ಪ್ರೋ ಬಳಕೆದಾರರು ಸದ್ಯ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಇತರೆ ಎಲ್ಲಾ ಸಾಮಾನ್ಯ ಫೀಚರ್ಸ್ ಅನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಖರೀದಿಸಲು ಯಾವ ಫೋನ್ ಬೆಸ್ಟ್?

ಖರೀದಿಸಲು ಯಾವ ಫೋನ್ ಬೆಸ್ಟ್?

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಮತ್ತು ಶಿಯೋಮಿ 'ಮಿ ಎ2' ಎರಡೂ ಸ್ಮಾರ್ಟ್‌ಪೋನ್‌ಗಳು ನಾವು ನೀಡುವ ಬೆಲೆಗೆ ಯೋಗ್ಯವಾದ ಫೋನ್‌ಗಳಾಗಿವೆ. ಕ್ಯಾಮೆರಾ ಮತ್ತು ಪ್ರೊಸೆಸರ್ ವಿಷಯದಲ್ಲಿ ಶಿಯೋಮಿ 'ಮಿ ಎ2' ಸ್ಮಾರ್ಟ್‌ಪೋನ್ ಖರೀದಿಸಲು ಒಲವು ತೋರಬಹುದಾದರೆ, ಬ್ಯಾಟರಿ ಶಕ್ತಿ ಮತ್ತು ಬಳಕೆದಾರರ ಅನುಭವದ ದೃಷ್ಟಿಯಲ್ಲಿ ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಖರೀದಿಸಲು ಯೋಗ್ಯವಾಗಿದೆ. ಎರಡೂ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಲು ಇಚ್ಚಿಸದವರಿಗೆ "ವಾಟರ್ ಪ್ರೂಫ್" ಕೊರತೆ ಮಾತ್ರ ಸಿಗಲಿದೆ.

Best Mobiles in India

English summary
ಭಾರತದಲ್ಲಿ ಇದು ಅತಿಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್ ರೆಡ್‌ ಮಿ ನೋಟ್ 5 ಪ್ರೊ ನೆನ್ನೆಯವರೆಗೂ ಮೊಬೈಲ್ ಖರೀದಿದಾರರ ನಂ 1 ಆಯ್ಕೆಯಾಗಿತ್ತು. ಆದರೆ, ನೆನ್ನೆ ಶಿಯೋಮಿಯ ಮತ್ತೊಂದು ಮೆಗಾಫೋನ್ 'ಮಿ ಎ2' ಬಿಡುಗಡೆಯಾದ ನಂತರ ಈಗ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ಮಾತ್ರ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಹೌದು, ಭಾರತೀಯ ಮಧ್ಯಮವರ್ಗದ ಜನರಿಗೆ ಹೇಳಿ ಮಾಡಿಸಿದಂತೆ ಮೊಬೈಲ್ ಮಾರುಕಟ್ಟೆಯಲ್ಲಿ ಬೀಡುಬಿಟ್ಟಿರುವ 'ರೆಡ್‌ ಮಿ ನೋಟ್ 5 ಪ್ರೊ' ಫೋನ್‌ಗೆ ಅದೇ ಮೊಬೈಲ್ ಕಂಪೆನಿಯ 'ಮಿ ಎ2' ಸ್ಮಾರ್ಟ್‌ಫೋನ್ ಸೆಡ್ಡು ಹೊಡೆಯುತ್ತಿದೆ.ಭಾರತದಲ್ಲಿ ಇದು ಅತಿಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್ ರೆಡ್‌ ಮಿ ನೋಟ್ 5 ಪ್ರೊ ನೆನ್ನೆಯವರೆಗೂ ಮೊಬೈಲ್ ಖರೀದಿದಾರರ ನಂ 1 ಆಯ್ಕೆಯಾಗಿತ್ತು. ಆದರೆ, ನೆನ್ನೆ ಶಿಯೋಮಿಯ ಮತ್ತೊಂದು ಮೆಗಾಫೋನ್ 'ಮಿ ಎ2' ಬಿಡುಗಡೆಯಾದ ನಂತರ ಈಗ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ಮಾತ್ರ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.compare xiaomi mi a2 vs redmi note 5 pro. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X