ಸ್ಮಾರ್ಟ್‌ಫೋನ್‌ ಖರೀದಿಸುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!

|

ಪ್ರಸ್ತುತ ಬಜೆಟ್‌ ಬೆಲೆಯ ವರ್ಗದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳ ಆಯ್ಕೆ ಲಭ್ಯವಿದೆ. ಅದಾಗ್ಯೂ, ಮೊಬೈಲ್‌ ಮಾರುಕಟ್ಟೆ ಹಲವು ನೂತನ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಸಾಗಿವೆ. ಇನ್ನು ನೂತನ ಫೋನ್‌ಗಳು ಒಂದಿಲ್ಲೊಂದು ಅಪ್‌ಡೇಟ್‌ ಆಯ್ಕೆಗಳೊಂದಿಗೆ ಗಮನ ಸೆಳೆಯುತ್ತವೆ. ಇನ್ನು ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆಗಳು ಬಜೆಟ್‌ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ಗಳ ಫೋನ್‌ಗಳ ಆಯ್ಕೆ ಹೊಂದಿವೆ. ಇನ್ನು ನೂತನ ಫೋನ್‌ ಖರೀದಿಸುವ ಗ್ರಾಹಕರು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಲೇಬೇಕು.

ಕ್ಯಾಮೆರಾ

ಮಾರುಕಟ್ಟೆಯಲ್ಲಿ ಬಜೆಟ್‌ ದರದಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗೆಯೇ ನೂತನವಾಗಿ ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಗ್ರಾಹಕರು ಹೆಚ್ಚಿನ ಬ್ಯಾಟರಿ, ತ್ರಿವಳಿ ಕ್ಯಾಮೆರಾ ಮತ್ತು ಅಧಿಕ RAM ನಂತಹ ಫೀಚರ್ಸ್‌ಗಳನ್ನು ಗಮನಿಸುತ್ತಾರೆ. ನೀವೇನಾದರೂ ಹೊಸದೊಂದು ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನಿನಲ್ಲಿದ್ದರೆ, ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ಕೆಲವು ಅಂಶಗಳನ್ನು ನೀವು ಮರೆಯದೆ ಗಮನಿಸಿ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಕ್ಯಾಮೆರಾ ಆಯ್ಕೆ ಬಗ್ಗೆ ಗಮನಿಸಿ

ಕ್ಯಾಮೆರಾ ಆಯ್ಕೆ ಬಗ್ಗೆ ಗಮನಿಸಿ

ಸಾಮಾನ್ಯವಾಗಿ ಫೋನ್ ಖರೀದಿ ಮಾಡುವಾಗ ಗ್ರಾಹಕರು ಕ್ಯಾಮೆರಾ ಬಗ್ಗೆ ಗಮನಿಸುತ್ತಾರೆ. ಆದ್ರೆ, ಕೇವಲ ಕ್ವಾಡ್‌ ಕ್ಯಾಮೆರಾ ಇದೆ ಎಂದು ಖರೀದಿಸುವುದು ಉತ್ತಮ ನಿರ್ಧಾರವಲ್ಲ. ಇಂಥಹ ತಪ್ಪು ಮಾಡಬೇಡಿ. ಬದಲಿಗೆ ಆ ಫೋನ್ ಕ್ಯಾಮೆರಾ ಎಷ್ಟು ಮೆಗಾ ಪಿಕ್ಸಲ್‌ ಸೆನ್ಸಾರ್ ಆಯ್ಕೆ ಒಳಗೊಂಡಿದೆ. ಅವುಗಳ ಗುಣಮಟ್ಟ ಎಷ್ಟು, ಹಾಗೆಯೇ ಕ್ಯಾಮೆರಾದಲ್ಲಿ ಯಾವೆಲ್ಲಾ ಆಯ್ಕೆಗಳಿವೆ ಎನ್ನುವುದನ್ನು ಗಮನಿಸುವುದು ಬಹು ಮುಖ್ಯ. ಬಹುತೇಕ ಫೋನ್‌ಗಳು ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಟೆಲಿಫೋಟೋ ಲೆನ್ಸ್ ಅಥವಾ ಮ್ಯಾಕ್ರೋ ಲೆನ್ಸ್ ಜೊತೆಗೆ ಪ್ರಾಥಮಿಕ ಲೆನ್ಸ್ ಇರುತ್ತದೆ. ಜೊತೆಗೆ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಪಡೆದಿವೆ.

ಡಿಸ್‌ಪ್ಲೇ ಆಯ್ಕೆ ಬಗ್ಗೆ ಗಮನಿಸಿ

ಡಿಸ್‌ಪ್ಲೇ ಆಯ್ಕೆ ಬಗ್ಗೆ ಗಮನಿಸಿ

ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಆಯ್ಕೆಯು ತುಂಬಾ ಮಹತ್ವದ್ದು, ಇದು ಫೋನಿನ ಅತ್ಯಂತ ನಿರ್ಣಾಯಕ ಭಾಗಗಳಲ್ಲಿ ಒಂದಾಗಿದೆ. FHD+ ಪ್ಯಾನೆಲ್‌ (2220 × 1080 ಪಿಕ್ಸಲ್ ರೆಸಲ್ಯೂಶನ್‌) ಆಗಿರುತ್ತದೆ. ಹಾಗೂ HD+ (1366 × 768 ಪಿಕ್ಸಲ್ ರೆಸಲ್ಯೂಶನ್) ಹೊಂದಿರುತ್ತದೆ. ಇದರ ಜೊತೆಗೆ ಸ್ಕ್ರೀನ್‌ ರೀಫ್ರೇಶ್ ರೇಟ್, ಡಿಸ್‌ಪ್ಲೇ ಗುಣಮಟ್ಟವನ್ನು ನೀವು ಗಮನಿಸುವುದು ಅಗತ್ಯ.

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಇರಲಿ

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಇರಲಿ

ಸ್ಮಾರ್ಟ್‌ಫೋನ್‌ ದೀರ್ಘ ಬಾಳಿಕೆಗೆ ಅದರ ಬ್ಯಾಟರಿಯೇ ಕಾರಣ. ಹೀಗಾಗಿ ಇತ್ತೀಚಿಗಿನ ನೂತನ ಫೋನ್‌ಗಳು ಹೆಚ್ಚಿನ ಬ್ಯಾಟರಿ ಸಾಮರ್ಥ್ಯದ ಆಯ್ಕೆ ಯೊಂದಿಗೆ ಕಾಣಿಸಿಕೊಳ್ಳುತ್ತಿವೆ. ಅದಾಗ್ಯೂ ನೀವು ಖರೀದಿಸುವ ಹೊಸ ಫೋನಿನಲ್ಲಿ 5,000mAh ಅಥವಾ 6000mAh ಬ್ಯಾಟರಿ ಆಯ್ಕೆ ಲಭ್ಯತೆ ಬಗ್ಗೆ ಗಮನಿಸಿ. ಜೊತೆಗೆ ವೇಗದ ಚಾರ್ಜಿಂಗ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು ಇದ್ದರೇ ಉತ್ತಮ. ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರುವ ಬಗ್ಗೆಯೂ ತಪ್ಪದೇ ಅರಿಯಿರಿ.

ಅಪ್‌ಡೇಟ್‌ ಓಎಸ್‌ ಇದ್ರೆ, ಸೂಪರ್

ಅಪ್‌ಡೇಟ್‌ ಓಎಸ್‌ ಇದ್ರೆ, ಸೂಪರ್

ಫೋನಿನಲ್ಲಿ (OS) ಆಪರೇಟಿಂಗ್ ಸಿಸ್ಟಮ್‌ ಕೆಲಸ ತುಂಬಾ ಮುಖ್ಯವಾಗಿದ್ದು, ಹೀಗಾಗಿ ಚಾಲ್ತಿ ಇರುವ ಅಪ್‌ಡೇಟ್ ಓಎಸ್‌ ಫೋನ್ ಆಯ್ಕೆ ಉತ್ತಮ. ಸದ್ಯ ಆಂಡ್ರಾಯ್ಡ್‌ 12 ಓಎಸ್ ಬಳಕೆಯಲ್ಲಿದ್ದು, ಅದಾಗ್ಯೂ ನೀವು ಆಂಡ್ರಾಯ್ಡ್‌ 12 ಓಎಸ್‌ ಇರುವ ಫೋನ್ ಖರೀದಿಸುವುದಾದರೇ ನಂತರದಲ್ಲಿ ಆ ಓಎಸ್‌ ಅಪ್‌ಡೇಟ್‌ ಸೌಲಭ್ಯ ಪಡೆದಿರುವ ಬಗ್ಗೆ ಗಮನ ನೀಡಿ.

ಪ್ರೊಸೆಸರ್‌ ಸಾಮರ್ಥ್ಯ ಹೆಚ್ಚಿರಲಿ

ಪ್ರೊಸೆಸರ್‌ ಸಾಮರ್ಥ್ಯ ಹೆಚ್ಚಿರಲಿ

ಪ್ರೊಸೆಸರ್‌ ಸ್ಮಾರ್ಟ್‌ಫೋನಿನ ಹೃದಯ ಭಾಗ ಇದ್ದಂತೆ. ಮಲ್ಟಿಟಾಸ್ಕ್ ಕೆಲಸಗಳು ಸುಲಲಿತವಾಗಿ ನಡೆಯಲು ವೇಗದ ಪ್ರೊಸೆಸರ್ ಸಾಮರ್ಥ್ಯ ಅಗತ್ಯ. ಹೀಗಾಗಿ ಫೋನ್ ಖರೀದಿಸುವಾಗ ಹೆಚ್ಚಿನ ವೇಗದ ಹಾಗೂ ಇತ್ತೀಚಿಗಿನ ಹೊಸ ಪ್ರೊಸೆಸರ್‌ ಇರುವ ಸ್ಮಾರ್ಟ್‌ಫೋನ್‌ ಖರೀದಿಸಿ. ಮೀಡ್‌ರೇಂಜ್‌ ದರದಲ್ಲಿ ಸ್ನ್ಯಾಪ್‌ಡ್ರಾಗನ್ 700 ಪ್ರೊಸೆಸರ್ ಸರಣಿ ಹಾಗೂ ಮೀಡಿಯಾ ಟೆಕ್‌ ಡೈಮೆನ್ಸಿಟಿ 700/ 800 ಚಿಪ್‌ಸೆಟ್‌ ಆಯ್ಕೆಗಳು ಲಭ್ಯ.

ಇತರೆ ಕೆಲವು ಫೀಚರ್ಸ್‌ ಬಗ್ಗೆಯೂ ಗಮನ ನೀಡಿ

ಇತರೆ ಕೆಲವು ಫೀಚರ್ಸ್‌ ಬಗ್ಗೆಯೂ ಗಮನ ನೀಡಿ

ನೀವು ಖರೀದಿಸುವ ಸ್ಮಾರ್ಟ್‌ಫೋನ್‌ನಲ್ಲಿ ಗೊರಿಲ್ಲಾ ಗ್ಲಾಸ್‌ ಇದೆಯಾ, ಸ್ಟೀರಿಯೋ ಸ್ಪೀಕರ್‌, ವಾಯರ್‌ಲೆಸ್‌ ಚಾರ್ಜಿಂಗ್‌ ಇದೆಯಾ ಹಾಗೂ IP67 ವಾಟರ್‌ ರೆಸಿಸ್ಟೆನ್ಸ್ ಸೌಲಭ್ಯಗಳಂತಹ ಆಯ್ಕೆಗಳು ಇದ್ದರೆ ಉತ್ತಮ.

Best Mobiles in India

English summary
Consider These Few Things while buying a new Mobile in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X