ಸ್ಮಾರ್ಟ್‌ಫೋನಿನಲ್ಲಿರುವ ಆಚ್ಚರಿಗಳು: ತಿಳಿದ್ದಿರೇ ನಿಮಗೆ ಲಾಭ

|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಹಲವು ಅಂಶಗಳ ಬಗ್ಗೆ ನಿಮಗೆ ಇದುವರೆಗೂ ತಿಳಿದಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತನ್ನ ಒಡಲಾಳದಲ್ಲಿ ಹಲವು ಆಚ್ಚರಿಯನ್ನು ಹೊಂದಿದೆ. ಅವುಗಳ ಬಗ್ಗೆ ನೀವು ಮಾಹಿತಿಯನ್ನು ಪಡೆದುಕೊಂಡರೆ ಮುಂದಿನ ದಿನದಲ್ಲಿ ನಿಮಗೆ ಸಹಾಯವಾಗಲಿದೆ.

ಸ್ಮಾರ್ಟ್‌ಫೋನಿನಲ್ಲಿರುವ ಆಚ್ಚರಿಗಳು: ತಿಳಿದ್ದಿರೇ ನಿಮಗೆ ಲಾಭ

ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿರುವ ಕೆಲವು ಸೆಟಿಂಗ್ಸ್ ನಿಮಗೆ ತುಂಬ ಸಹಾಯಕಾರಿಯಾಗಿದೆ. ಇವುಗಳ ಮೂಲಕ ನೀವು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದಾಗಿದೆ. ಅವುಗಳ ಕುರಿತ ಮಾಹಿತಿಯೂ ಇಲ್ಲಿದೆ.

ಓದಿರಿ: ಶಿಯೋಮಿಗೆ ನಡುಕ ಹುಟ್ಟಿಸಿದ ಥಾಮ್ಸನ್ ಸ್ಮಾರ್ಟ್‌TV: ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡುವುದು ಪಕ್ಕಾ..!

ಜಾಹೀರಾತು ತಡೆಯಬಹುದು:

ಜಾಹೀರಾತು ತಡೆಯಬಹುದು:

ಈಗಾಗಲೇ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹಲವು ಆಡ್‌ಗಳು ಕಾಣಿಸಿಕೊಳ್ಳುತ್ತಿರುವ ಸಂದರ್ಧದಲ್ಲಿ ಅವುಗಳಿಂದ ನೀವು ಕಿರಿಕಿರಿ ಅನುಭವಿಸುತ್ತಿದ್ದರೇ ಅವುಗಳನ್ನು ಬಾರದಂತೆ ಮಾಡಬಹುದು. ಇದಕ್ಕಾಗಿ ನೀವು ಸೆಟ್ಟಿಂಗ್> ಗೂಗಲ್ > ಆಡ್ಸ್ > ಆಡ್ಸ್ ಪರ್ಸನಲೈಸೇಶನ್ ಆಯ್ಕೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿದೆ.

ಆಟೋ ಆನ್/ಆಫ್:

ಆಟೋ ಆನ್/ಆಫ್:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಅನ್ನು ಯಾರು ಸಹ ಆಫ್ ಮಾಡುವುದೇ ಇಲ್ಲ. ಆದರೆ ನಿಮ್ಮ ಫೋನಿಗೂ ರೆಸ್ಟ್ ಅಗತ್ಯವಿರುವುದರಿಂದ ಸ್ಪಲ್ಪ ಸಮಯವಾದರು ಆಫ್ ಮಾಡುವುದು ಉತ್ತಮ. ನೀವು ಮಲಗುವ ಸಮಯದಲ್ಲಾದರು ಮಾಡಿ. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್ಸ್ ನಲ್ಲಿ ನಿಮ್ಮ ಫೋನ್ ಯಾವ ಸಮಯದಲ್ಲಿ ಆಫ್ ಆಗಿ ಯಾವಾಗ ಆನ್ ಆಗಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ.

ತಿಳಿಯದ ನಂಬರ್ ಬಂದ್:

ತಿಳಿಯದ ನಂಬರ್ ಬಂದ್:

ನಿಮ್ಮ ಸ್ಮಾರ್ಟ್‌ಫೋನ್ ಕಾಂಟೆಕ್ಸ್ ನಲ್ಲಿ ನೀವು ಅನ್‌ನೌನ್ ನಂಬರ್ ಗಳಿಂದ ಕರೆ ಬರದಂತೆ ಬ್ಲಾಕ್ ಮಾಡಿಕೊಳ್ಳಬಹುದು, ಅಲ್ಲದೇ ಸೆಲೆಕ್ಟೆಡ್ ನಂಬರ್ ನಿಂದ ಮಾತ್ರವೇ ಕರೆ ಬರುವಂತೆ ಮಾಡಿಕೊಳ್ಳಬಹುದು. ಜೊತೆಗೆ ಕೆಲವು ನಂಬರ್ ಗಳನ್ನು ಬ್ಲಾಕ್ ಸಹ ಮಾಡಬಹುದಾಗಿದೆ.

How to read deleted WhatsApp messages - GIZBOT KANNADA
ಗೆಸ್ಟ್ ಮೋಡ್:

ಗೆಸ್ಟ್ ಮೋಡ್:

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬೇರೆಯವರಿಗೆ ನೀಡಿದ ಸಂದರ್ಭದಲ್ಲಿ ಅದರಲ್ಲಿರುವ ಮಾಹಿತಿಯೂ ಯಾರಿಗೂ ತಿಳಿಯಬಾರದು ಎನ್ನುವ ಹಾಗಿದ್ದರೆ ನೀವು ಗೆಸ್ಟ್ ಮೋಡ್ ಬಳಕೆ ಮಾಡಿಕೊಳ್ಳಬಹುದು. ಗೆಸ್ಟ್ ಮೋಡ್ ನಲ್ಲಿ ಯಾವುದನ್ನು ತೋರಿಸಬೇಕು, ಯಾವುದು ಬೇಡ ಎಂಬುದನ್ನು ನೀವೇ ನಿರ್ಧರಿಸಬಹುದು.

Best Mobiles in India

English summary
Cool and hidden features of android phones. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X