Subscribe to Gizbot

ಶಿಯೋಮಿಗೆ ನಡುಕ ಹುಟ್ಟಿಸಿದ ಥಾಮ್ಸನ್ ಸ್ಮಾರ್ಟ್‌TV: ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡುವುದು ಪಕ್ಕಾ..!

Written By:

ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಮುಂದಿರುವ ಥಾಮ್ಸನ್‌ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಸ್ಮಾರ್ಟ್‌ ಟಿವಿಯನ್ನು ಲಾಂಚ್ ಮಾಡಿದೆ. ಗುರುವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಸ್ಮಾರ್ಟ್‌ ಟಿವಿ ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬದಲಾಗುತ್ತಿರುವ ಟಿವಿ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನ ಸ್ಪರ್ಧೆಯನ್ನು ಹೆಚ್ಚಿಸಿದೆ.

ಥಾಮ್ಸನ್ ಸ್ಮಾರ್ಟ್‌TV: ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡುವುದು ಪಕ್ಕಾ..!

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ತನ್ನ ಸ್ಮಾರ್ಟ್‌ ಟಿವಿಗಳನ್ನು ಪರಿಚಯ ಮಾಡಿದೆ. ಇದೇ ಮಾದರಿಯಲ್ಲಿ ವಿಯೂ (VU) ಸಹ ಉತ್ತಮ ಟಿವಿಗಳನ್ನು ಲಾಂಚ್ ಮಾಡಿದೆ. ಇದರೊಂದಿಗೆ ಮೈಕ್ರೋಮ್ಯಾಕ್ಸ್ ಸಹ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಥಾಮ್ಸನ್‌ ಸಹ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಶಿಯೋಮಿಯ ಮಾದರಿಯಲ್ಲಿ ಕಡಿಮೆ ದರಕ್ಕೆ ಉತ್ತಮ ಟಿವಿಯನ್ನು ನೀಡುತ್ತಿದೆ.

ಓದಿರಿ: ತೇಜ್‌ನಲ್ಲಿ ಕಾಸು ಬರ್ತಿಲ್ವಾ: ಭೀಮ್ ಆಪ್‌ ಬಳಸಿ ಭರ್ಜರಿ ಕ್ಯಾಷ್ ಬ್ಯಾಕ್ ಪಡೆಯಿರಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ:

ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ:

ಈ ಸ್ಮಾರ್ಟ್ ಟಿವಿಗಳು ಆನ್‌ಲೈನ್‌ ಮೂಲಕವೇ ಬಹು ಜನರನ್ನು ತಲುಪುವ ಕಾರ್ಯವನ್ನು ಥಾಮ್ಸನ್‌ ಮಾಡುತ್ತಿದೆ. ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಏಪ್ರಿಲ್ 13 ರಿಂದ ಥಾಮ್ಸನ್‌ ಎಲ್ಇಡಿ ಸ್ಮಾರ್ಟ್‌ ಟಿವಿ ಮಾರಾಟವಾಗುತ್ತಿದೆ.

ಉಚಿತ ನೆಟ್‌ಫ್ಲಿಕ್ಸ್:

ಉಚಿತ ನೆಟ್‌ಫ್ಲಿಕ್ಸ್:

ಮಾರುಕಟ್ಟೆಯಲ್ಲಿ ಶಿಯೋಮಿ ತಂತ್ರವನ್ನು ಅನುಸರಿಸುತ್ತಿರುವ ಥಾಮ್ಸನ್‌, ತನ್ನ ಸ್ಮಾರ್ಟ್‌ಟಿವಿ ಬಳಕೆದಾರರಿಗೆ ಉಚಿತವಾಗಿ ನೆಟ್‌ಫ್ಲಿಕ್ಸ್, ಯೂಟ್ಯೂಬ್‌ ಸೇರಿ ಬೇಕಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಮೂರು ಮಾದರಿ:

ಮೂರು ಮಾದರಿ:

ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದರೆ ಮಾತ್ರವೇ ಹೆಚ್ಚಿನ ಬಳಕೆದಾರರನ್ನು ಸೆಳೆಯಬಹುದು ಎಂಬುದನ್ನು ಅರಿತಿರುವ ಥಾಮ್ಸನ್‌, 32 ಇಂಚಿನ ಥಾಮ್ಸನ್‌ ಎಲ್ಇಡಿ ಸ್ಮಾರ್ಟ್‌ ಟಿವಿಯನ್ನು ರೂ. 13,490ಕ್ಕೆ ಮಾರಾಟ ಮಾಡುತ್ತಿದೆ. ಇದೇ ಮಾದರಿಯಲ್ಲಿ 40 ಇಂಚಿನ 40 B9 ಎಲ್ಇಡಿ ಸ್ಮಾರ್ಟ್‌ ಟಿವಿಯನ್ನು 19,999ಕ್ಕೆ ನೀಡುತ್ತಿದೆ. ಇದರೊಂದಿಗೆ 43 ಇಂಚಿನ UHD 4K ಗುಣಮಟ್ಟದ ಎಲ್ಇಡಿ ಸ್ಮಾರ್ಟ್‌ ಟಿವಿಯನ್ನು ರೂ. 27,999ಕ್ಕೆ ಪರಿಚಯಿಸಿದೆ.

ಟಾಪ್ ಎಂಡ್ ಟಿವಿ:

ಟಾಪ್ ಎಂಡ್ ಟಿವಿ:

LG IPS ಪ್ಯಾನೆಲ್‌ ಹೊಂದಿರುವ 43 ಇಂಚಿನ UHD 4K ಗುಣಮಟ್ಟದ ಟಿವಿಯೂ 3840 x 2160 ಪಿಕ್ಸೆಲ್ ರೆಸೊಲ್ಯುಶನ್‌ ಹೊಂದಿದೆ ಹಾಗೂ HDR ಸೇವೆಯೂ ಇದರಲ್ಲಿ ಲಭ್ಯವಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್‌ ಆವೃತ್ತಿಯನ್ನು ಕಾರ್ಯನಿರ್ವಹಿಸುವ ಈ ಟಿವಿಯಲ್ಲಿ, 1.4GHz ಡುಯಲ್‌ಕೋರ್‌ ಎ53 ಪ್ರೊಸೆಸರ್‌ ಅನ್ನು ನೋಡಬಹುದಾಗಿದೆ.

1GB RAM/8GB ROM:

1GB RAM/8GB ROM:

43 ಇಂಚಿನ UHD 4K ಟಿವಿಯಲ್ಲಿ 1GB RAM ಮತ್ತು 8 GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, ಇದರಲ್ಲಿ 10 ವ್ಯಾಟ್‌ ಸ್ಪೀಕರ್‌ಗಳನ್ನು ಅಳವಡಿಸಲಾಗಿದ್ದು, 3 HDMI ಪೋರ್ಟ್‌ ಹಾಗೂ 2 USB ಪೋರ್ಟ್‌ ಪೋರ್ಟ್ ಅನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ ಒಂದು SD ಕಾರ್ಡ್‌ ಪೋರ್ಟ್‌ ಕೂಡಾ ನೀಡಲಾಗಿದೆ.

How to read deleted WhatsApp messages - GIZBOT KANNADA
40 ಇಂಚಿನ ಸ್ಮಾರ್ಟ್‌ ಟಿವಿ:

40 ಇಂಚಿನ ಸ್ಮಾರ್ಟ್‌ ಟಿವಿ:

40 ಇಂಚಿನ ಸ್ಮಾರ್ಟ್‌ ಟಿವಿ ಸ್ಯಾಮ್‌ಸಂಗ್ LED ಪ್ಯಾನೆಲ್ ಹೊಂದಿದ್ದು ಇದು 1920 x 1080 ಪಿಕ್ಸೆಲ್ ಗುಣಮಟ್ಟವನ್ನು ಹೊಂದಿದ್ದು, ಆಂಡ್ರಾಯ್ಡ್ ಲಾಲಿಪಪ್ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದೆ. ಉಳಿದ ವೈಶಿಷ್ಟ್ಯಗಳು 43 ಇಂಚಿನ ಟಿವಿಯಲ್ಲಿರುವಂತೆಯೇ ಇದೆ. 32 ಇಂಚಿನ ಟಿವಿ 1366x 768 ಪಿಕ್ಸೆಲ್ ಹೊಂದಿದೆ ಹಾಗೂ 20 ವ್ಯಾಟ್‌ ಸೌಂಡ್‌ ಔಟ್‌ಪುಟ್‌ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Thomson Launches 3 Smart TV Models in India: Price, Specifications, Features. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot