Subscribe to Gizbot

ಕೂಲ್ ಪ್ಯಾಡ್ ನಿಂದ ಹೊಸ ಸ್ಮಾರ್ಟ್ ಫೋನ್ ಲಾಂಚ್: ಬೆಲೆ ಎಷ್ಟು..?

Written By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಹವಾ ಎಬ್ಬಿಸಿರುವ ಕೂಲ್ ಪ್ಯಾಡ್ ಹೊಸ ಸ್ಮಾರ್ಟ್ ಪೋನ್ ವೊಂದನ್ನು ಬಿಡುಗಡೆ ಮಾಡಿದ್ದು, ಕೂಲ್ ಪ್ಲೇ 6 ದುಬೈನಲ್ಲಿ ಲಾಂಚ್ ಆಗಿದೆ.

ಕೂಲ್ ಪ್ಯಾಡ್ ನಿಂದ ಹೊಸ ಸ್ಮಾರ್ಟ್ ಫೋನ್ ಲಾಂಚ್: ಬೆಲೆ ಎಷ್ಟು..?

ಅಮೆಜಾನ್ ನಲ್ಲಿ ಮಾತ್ರವೇ ದೊರೆಯುವ ಈ ಸ್ಮಾರ್ಟ್ ಫೋನಿನ ಬೆಲೆ ರೂ.14,999 ಆಗಿದ್ದು, ಮೆಟಲ್ ಬಾಡಿಯೊಂದಿಗೆ ಮುಂಭಾಗದಲ್ಲಿ 2.5D ಕರ್ವಡ್ ಗ್ಲಾಸ್ ಹೊಂದಿದೆ. ಹಿಂಭಾಗದ ಕ್ಯಾಮೆರಾ ಕೆಳಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.

ಈ ಪೋನಿನಲ್ಲಿ 13 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ವರ್ಟಿಕಲ್ ಆಗಿ ನೀಡಲಾಗಿದೆ. ಮುಂಭಾಗದಲ್ಲಿ 8MP ಕ್ಯಾನೆರಾವನ್ನು ಅಳವಡಿಸಲಾಗಿದೆ.

ಅಲ್ಲದೇ ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಇದರಲ್ಲಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿಲ್ಲ ಎನ್ನಲಾಗಿದೆ.

ವಾಟ್ಸಆಪ್ ಬಣ್ಣಕ್ಕೆ ಮರುಳಾಗಬೇಡಿ!!..ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ.!!

5.5 ಇಂದಿನ FHD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಸ್ನಾಪ್ ಡ್ರಾಗನ್ 635 ಪ್ರೋಸೆಸರ್ ಅಳವಡಿಸಲಾಗಿದೆ. 6GB RAM /64 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ 7.1.1ನಲ್ಲಿ ಇದು ಕಾರ್ಯನಿರ್ವಹಿಸಲಿದೆ.

ಇದರಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದ್ದು, ಬ್ಲಾಕ್ ಮತ್ತು ಗೊಲ್ಡ್ ಬಣ್ಣದಲ್ಲಿ ದೊರೆಯಲಿದೆ. ಸೆಪ್ಟೆಂಬರ್ 4 ರಿಂದ ಮಾರಾಟ ಆರಂಭವಾಗಲಿದೆ.

English summary
Coolpad Cool Play 6 with dual rear cameras has been launched in the Indian market at a price point of Rs. 14,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot