ಎರಡನೇ ಎಕ್ಸಪೀರಿಯನ್ಸ್ ಸೆಂಟರ್ ತೆರೆಯಲು ಮುಂದಾದ ಕೂಲ್ ಪ್ಯಾಡ್

By Lekhaka
|

ಭಾರತೀಯ ಮಾರುಕಟ್ಟೆಯಲ್ಲಿ ನಿಧಾನವಾಗಿ ನೆಲೆ ಕಂಡುಕೊಳ್ಳುತ್ತಿರುವ ಚೀನಾ ಮೂಲದ ಮತ್ತೊಂದು ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಕೂಲ್ ಪ್ಯಾಡ್ ಭಾರತದಲ್ಲಿ ತನ್ನ ಗ್ರಾಹಕರಿಗಾಗಿ ಎರಡನೇ ಎಕ್ಸಪೀರಿಯನ್ಸ್ ಸೆಂಟರ್ ಅನ್ನು ತೆರೆದಿದೆ ಎನ್ನಲಾಗಿದೆ. ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಮೂಲಕ ಜನರನ್ನು ತಲುಪುತ್ತಿರುವ ಕೂಲ್ ಪ್ಯಾಡ್ ಮತ್ತಷ್ಟು ಜನರನ್ನು ತಲುಪುವ ಪ್ರಯತ್ನಕ್ಕೆ ಕೈ ಹಾಕಿದೆ.

ಎರಡನೇ ಎಕ್ಸಪೀರಿಯನ್ಸ್ ಸೆಂಟರ್ ತೆರೆಯಲು ಮುಂದಾದ ಕೂಲ್ ಪ್ಯಾಡ್

ಈಗಾಗಲೇ ಸ್ಪರ್ಧೆಯಲ್ಲಿರುವ ಶಿಯೋಮಿ ಮತ್ತು ವಿವೋ ಸ್ಮಾರ್ಟ್ ಫೋನ್ ಗಳು ಆಫ್ ಲೈನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವಂತೆ ಕೂಲ್ ಪ್ಯಾಡ್ ಸಹ ತನ್ನ ವ್ಯವಹಾರವನ್ನು ಆಫ್ ಲೈನ್ ಮಾರುಕಟ್ಟೆಗೆ ವರ್ಗಹಿಸಲು ಮುಂದಾಗಿದೆ.

ರಾಜಧಾನಿ ದೆಹಲಿಯಲ್ಲಿ ಒಂದು ಎಕ್ಸಪೀರಿಯನ್ಸ್ ಸೆಂಟರ್ ತೆಗೆದಿರುವ ಕೂಲ್ ಪ್ಯಾಡ್ ಮತ್ತೊಂದನ್ನು ದಕ್ಷಿಣಭಾರತದಲ್ಲಿ ಅಂದರೆ ಹೈದ್ರಾಬಾದ್ ನಲ್ಲಿ ಓಪನ್ ಮಾಡಿದೆ ಈ ಮೂಲಕ ಗ್ರಾಹಕರು ಈ ಸೆಂಟರ್ ಗಳಿಗೆ ಭೇಟಿ ನೀಡಿ ಕೂಲ್ ಪ್ಯಾಡ್ ಸ್ಮಾರ್ಟ್ ಫೋನ್ ಗಳು ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ.

ದುಬಾರಿ ಐಪೋನ್ X ಗಿಂತಲೂ ದುಬಾರಿ ಈ ಫೋನಿನ ಸೆಫ್ಟಿ ಕೇಸ್..!!

ಈಗಾಗಲೇ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯೂ ತೀವ್ರಗತಿಯಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇದರ ಲಾಭವನ್ನು ಪಡೆಯುವ ಸಲುವಾಗಿ ಈ ಕಂಪನಿಯೂ ತನ್ನ ಎಕ್ಸಪೀರಿಯನ್ಸ್ ಸೆಂಟರ್ ಅನ್ನು ತೆರೆಯಲು ಮುಂದಾಗಿದೆ ಎನ್ನಲಾಗಿದೆ.

ಇದಲ್ಲದೇ ಈ ಮಾದರಿಯ ಎಕ್ಸಪೀರಿಯನ್ಸ್ ಸೆಂಟರ್ ಗಳ್ನು ದೇಶದ ವಿವಿಧ ಭಾಗದಲ್ಲಿ ತೆರೆಯಲು ಕೂಲ್ ಪ್ಯಾಡ್ ಮುಂದಾಗಲಿದೆ. ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಿದೆ ಎನ್ನುವ ಮಾತು ಕೇಳಿ ಬಂದಿದೆ.

Most Read Articles
Best Mobiles in India

Read more about:
English summary
After Delhi, Coolpad has opened its second service center in Hyderabad in the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X