ರಾಜ್ಯದಲ್ಲಿ ಮೊದಲ BSNL 4ಜಿ ಟವರ್‌ ಉದ್ಘಾಟನೆ!..ಜಿಯೋಗೆ ಟಾಂಗ್ ನೀಡಿದ ಸಚಿವರು!!

ರಾಜ್ಯದ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ವೇಗದ ಡೇಟಾ ಸಂಪರ್ಕ ಕಲ್ಪಿಸಲಾಗುವುದು ಎಂದು ಸಿನ್ಹಾ ತಿಳಿಸಿದ್ದಾರೆ.!

|

ಕರ್ನಾಟಕ ರಾಜ್ಯದಲ್ಲಿ ರಾಜ್ಯದ ಮೊಟ್ಟ ಮೊದಲ ಬಿಎಸ್‌ಎನ್‌ಎಲ್ 4ಜಿ ಮೊಬೈಲ್‌ ಟವರ್‌ ಉದ್ಘಾಟನೆಯಾಗಿದೆ. ಶಿವಮೊಗ್ಗ ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ರಾಜ್ಯದ ಮೊಟ್ಟ ಮೊದಲ 4ಜಿ ಮೊಬೈಲ್‌ ಟವರ್‌ ಅನ್ನು ಕೇಂದ್ರ ರೈಲ್ವೆ ಮತ್ತು ಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಅವರು ಉದ್ಘಾಟಿಸಿದ್ದಾರೆ.!!

ರಾಜ್ಯದ ಮೊಬೈಲ್‌ ಬಳಕೆದಾರರಲ್ಲಿ ಬಿಎಸ್ಎನ್‌ಎಲ್‌ ಶೇ.14 ಪಾಲು ಹೊಂದಿದ್ದು, ಈ ವರ್ಷದ ಕೊನೆಯ ವೇಳೆಗೆ 534 ಹೊಸ 4ಜಿ ಮೊಬೈಲ್‌ ಟವರ್‌ಗಳನ್ನು ಕರ್ನಾಟಕ ರಾಜ್ಯದಲ್ಲಿ ಅಳವಡಿಸಲಾಗುವುದು. ಈ ಮೂಲಕ ರಾಜ್ಯದ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ವೇಗದ ಡೇಟಾ ಸಂಪರ್ಕ ಕಲ್ಪಿಸಲಾಗುವುದು ಎಂದು ಸಿನ್ಹಾ ತಿಳಿಸಿದ್ದಾರೆ.!

ರಾಜ್ಯದಲ್ಲಿ ಮೊದಲ BSNL 4ಜಿ ಟವರ್‌ ಉದ್ಘಾಟನೆ!..ಜಿಯೋಗೆ ಟಾಂಗ್ ನೀಡಿದ ಸಚಿವರು!!

ರಿಲಯನ್ಸ್ ಜಿಯೋ ಬಂದ ಬಳಿಕ ಉಳಿದೆಲ್ಲಾ ಖಾಸಗಿ ಮೊಬೈಲ್‌ ಸಂಪರ್ಕಗಳ ಸಂಖ್ಯೆ ಕಡಿತಗೊಂಡರೆ ಸರ್ಕಾರಿ ಟೆಲಿಕಾಂ ಬಿಎಸ್‌ಎನ್‌ಎಲ್‌ ಗ್ರಾಹಕರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೆ ಬಿಎಸ್‌ಎನ್‌ಎಲ್‌ ನೀಡುತ್ತಿರುವ ಉತ್ತಮ ಸೇವೆಯೇ ಕಾರಣ ಎಂದು ಕೇಂದ್ರ ಸಚಿವ ಮನೋಜ್‌ ಸಿನ್ಹಾ ಅವರು ಬಿಎಸ್‌ಎನ್‌ಎಲ್‌ ಅನ್ನು ಕೊಂಡಾಡಿ ಜಿಯೋಗೆ ಟಾಂಗ್ ನೀಡಿದ್ದಾರೆ.!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಬಿಎಸ್‌ಎನ್‌ಎಲ್‌ ರಾಜ್ಯದಲ್ಲಿ ಈ ವರ್ಷ 2000 ಕೋಟಿ ರೂ. ಅದಾಯವನ್ನು ತಂದುಕೊಡುವ ನಿರೀಕ್ಷೆಯನ್ನು ಇಡಲಾಗಿದೆ. ರಾಜ್ಯದಲ್ಲಿ ಒಟ್ಟು 2,790 ಟೆಲಿಫೋನ್‌ ಎಕ್ಸ್‌ಚೇಂಚ್‌ಗಳು, 11 ಲಕ್ಷ ಸ್ಥಿರ ದೂರವಾಣಿ ಸಂಪರ್ಕ, 3.5 ಲಕ್ಷ ಬ್ರಾಡ್‌ಬ್ಯಾಂಡ್‌ ಸಂಪರ್ಕ ಹಾಗೂ 70 ಲಕ್ಷ ಮೊಬೈಲ್‌ ಸಂಪರ್ಕಗಳಿದ್ದು ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಅವರು ಹೇಳಿದರು.!

ರಾಜ್ಯದಲ್ಲಿ ಮೊದಲ BSNL 4ಜಿ ಟವರ್‌ ಉದ್ಘಾಟನೆ!..ಜಿಯೋಗೆ ಟಾಂಗ್ ನೀಡಿದ ಸಚಿವರು!!

ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್‌ ಇಂಡಿಯಾ ಘೋಷಣೆ ಬಳಿಕ ಬಿಎಸ್‌ಎನ್‌ಎಲ್‌ ತಂತ್ರಜ್ಞಾನವನ್ನು ಉನ್ನತೀಕರಿಸಲಾಗುತ್ತಿದೆ. ಮೊಬೈಲ್‌ ಡೇಟಾ ಗುಣಮಟ್ಟ ಮತ್ತು ವೇಗ ಹೆಚ್ಚಿಸುವ ತಂತ್ರಜ್ಞಾನಗಳನ್ನು ಬಿಎಸ್‌ಎನ್‌ಎಲ್‌ ಕೂಡ ಹೊಂದುತ್ತಿದೆ. ಇದರಿಂದ ಖಾಸಗಿ ಸಂಸ್ಥೆಗಳ ಪ್ರಬಲ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಬಹುದು ಎಂದರು.!!

ಓದಿರಿ: ವಾಟ್ಸ್‌ಆಪ್ ಪೇಮೆಂಟ್ ಸೇವೆಗೆ ಸಿಕ್ಕಿತು ಮತ್ತೊಂದು ಪ್ರಮುಖ ಅಪ್‌ಡೆಟ್!!

Best Mobiles in India

English summary
The first 4G mobile tower of the State-owned Bharat Sanchar Nigam Ltd. (BSNL) in Karnataka. to know more this visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X