ಪಾಸ್‌ವರ್ಡ್‌ ವಿಚಾರದಲ್ಲಿ ಎಚ್ಚರಿಕೆ ಇರಲಿ!...ಈ ತಪ್ಪನ್ನು ಎಂದಿಗೂ ಮಾಡಬೇಡಿ

|

ಮೊನ್ನೆಯಷ್ಟೇ ಒಂದು ವರದಿ ಬಿಡುಗಡೆಯಾಗಿತ್ತು. ಅದೇನೆಂದರೆ ಭಾರತದವರು ತುಂಬಾ ಸುಲಭವಾದ ಪಾಸ್‌ವರ್ಡ್‌ಗಳನ್ನು ಇಟ್ಟುಕೊಂಡು ಹ್ಯಾಕರ್ಸ್‌ಗಳಿಗೆ ಅನುವು ಮಾಡಿಕೊಡುತ್ತಿದ್ದಾರೆ ಎಂದು. ಅಂದರೆ ಭಾರತೀಯರು 12345678, password, Bigbasket , pass@123 ಹಾಗೂ abcd1234 ಸೇರಿದಂತೆ ಇನ್ನಿತರೆ ಸುಲಭವಾದ ಪಾಸ್‌ವರ್ಡ್‌ಗಳನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ಹಾಗಿದ್ರೆ, ಯಾವ ರೀತಿಯ ಪಾಸ್‌ವರ್ಡ್‌ಗಳನ್ನು ರಚಿಸಿಕೊಂಡು ನಿಮ್ಮ ಖಾತೆ ಹಾಗೂ ಡಿವೈಸ್‌ಗಳನ್ನು ರಕ್ಷಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ ನೋಡಿ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಇಂದು ನಾವು ಎಲ್ಲಾ ರೀತಿಯ ದಾಖಲಾತಿಗಳನ್ನು ಇರಿಸಿಕೊಂಡಿರುತ್ತೇವೆ. ಅದರಲ್ಲೂ ನಮಗೆ ಅತ್ಯಗತ್ಯವಾದ ಆಪ್‌ಗಳ ಮೂಲಕ ಬ್ಯಾಂಕಿಂಗ್‌ ವ್ಯವಹಾರವನ್ನೂ ಮಾಡುತ್ತೇವೆ. ಅದಷ್ಟೇ ಅಲ್ಲದೆ, ಹಲವಾರು ಸಾಮಾಜಿಕ ಪ್ಲಾಟ್‌ಫಾರ್ಮ್‌ ಕೂಡ ಬಳಕೆ ಮಾಡುತ್ತೇವೆ. ಅಂದಮೇಲೆ ಇವುಗಳಿಗೆಲ್ಲಾ ಪಾಸ್‌ವರ್ಡ್‌ ಕಡ್ಡಾಯವಾಗಿದೆ. ಪರಿಣಾಮ ಹೆಚ್ಚು ಖಾತೆ ಇರುವುದರಿಂದ ಸುಲಭವಾಗಲಿ ಎಂದು ಕೆಲವರು ಸರಳವಾದ ಪಾಸ್‌ವರ್ಡ್‌ ರಚಿಸಿದರೆ ಇನ್ನೂ ಕೆಲವರು ಒಂದೇ ಪಾಸ್‌ವರ್ಡ್‌ ಅನ್ನು ಎಲ್ಲಾ ಖಾತೆಗೆ ರಚಿಸಿರುತ್ತಾರೆ. ಹೀಗಾಗಿ ಈ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ, ಪಾಸ್‌ವರ್ಡ್‌ ವಿಚಾರದಲ್ಲಿ ಏನು ಮಾಡಬೇಕು?, ಏನು ಮಾಡಬಾರದು ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ನೋಡಿ.

ಪಾಸ್‌ವರ್ಡ್‌ ವಿಷಯದಲ್ಲಿ ಸಾಮಾನ್ಯವಾಗಿ ಸಂಭವಿಸುವ ತಪ್ಪುಗಳು

ಪಾಸ್‌ವರ್ಡ್‌ ವಿಷಯದಲ್ಲಿ ಸಾಮಾನ್ಯವಾಗಿ ಸಂಭವಿಸುವ ತಪ್ಪುಗಳು

ಸಾಮಾನ್ಯವಾಗಿ ಬಹುಪಾಲು ಮಂದಿ '123456', 'qwerty', ಅಥವಾ 'abcdef' ನಂತಹ ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್ ಅನ್ನು ರಚಿಸಿಕೊಳ್ಳುತ್ತಾರೆ. ಹಾಗೆಯೇ ಜನ್ಮದಿನ, ವಾರ್ಷಿಕೋತ್ಸವಗಳು ಅಥವಾ ಇತರೆ ದಿನಾಂಕಗಳನ್ನು ಪಾಸ್‌ವರ್ಡ್‌ಗಳಾಗಿ ರಚಿಸುವುದು ಇನ್ನೂ ಅಪಾಯದ ಕೆಲಸ. ಇದಿಷ್ಟೇ ಅಲ್ಲದೆ, ಪಾಸ್‌ವರ್ಡ್ ಅನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುವುದು, ಪಾಸ್‌ವರ್ಡ್‌ಗಳನ್ನು ನಿಯಮಿತವಾಗಿ ಬದಲಾಯಿಸದೇ ಇರುವುದು ಬೇರೆಯವರು ನಿಮ್ಮ ಡಿವೈಸ್‌ಗಳ ಒಳಗೆ ಸುಳಿಯಲು ಮಾಡಿಕೊಡುವ ಹೆದ್ದಾರಿ ಎಂದೇ ಭಾವಿಸಬೇಕಾಗುತ್ತದೆ.

ಪಾಸ್‌ವರ್ಡ್‌ ರಚನೆ ಸಂದರ್ಭ ನೀವು ಮಾಡಲೇಬಾರದ ಕೆಲಸ

ಪಾಸ್‌ವರ್ಡ್‌ ರಚನೆ ಸಂದರ್ಭ ನೀವು ಮಾಡಲೇಬಾರದ ಕೆಲಸ

 • ಸಾಮಾನ್ಯವಾಗಿ 'password' ಪದವನ್ನು ಕೆಲವು ಜನರು ‘P@ssw0rd' ಅಥವಾ 'PAssW0rd' ಎಂಬಿತ್ಯಾದಿ ಶೈಲಿಯಲ್ಲಿ ರಚಿಸಿಕೊಳ್ಳುತ್ತಾರೆ. ಇದು ಯಾವುದೇ ಕಾರಣಕ್ಕೂ ಸುರಕ್ಷಿತವಲ್ಲ. ಕೆಲವರಂತೂ 'password' ಎಂದೇ ರಚಿಸಿಕೊಳ್ಳುತ್ತಾರೆ.
  • ಬಹುಪಾಲು ಮಂದಿ 'morning', 'flowers', friends' , ಸೇರಿದಂತೆ ಇನ್ನಿತರೆ ಸಾಮಾನ್ಯ ಪದಗಳನ್ನು ಪಾಸ್‌ವರ್ಡ್‌ಗಳನ್ನಾಗಿ ಬಳಕೆ ಮಾಡುತ್ತಾರೆ. ಈ ರೀತಿಯ ತಪ್ಪನ್ನು ಎಂದಿಗೂ ಮಾಡಬೇಡಿ.
   • ಮೊದಲೇ ಹೇಳಿದಂತೆ ನಿಮ್ಮ ಎಲ್ಲಾ ಖಾತೆಗಳಿಗೆ ಒಂದೇ ರೀತಿಯ ಪಾಸ್‌ವರ್ಡ್ ಅನ್ನು ಬಳಸಬೇಡಿ. ಇದರಿಂದ ಹ್ಯಾಕರ್‌ ಅಥವಾ ಸ್ಮಾರ್ಟ್‌ಫೋನ್‌ ಕದ್ದವರಿಗೆ ತುಂಬಾನೆ ಅನುಕೂಲ ಮಾಡಿಕೊಟ್ಟ ಹಾಗಾಗುತ್ತದೆ.
    • ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ಗಳನ್ನು ಶೇರ್‌ ಮಾಡಿಕೊಳ್ಳಬೇಡಿ. ಹಾಗೆಯೇ ನಿಮ್ಮ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಬರೆದುಕೊಳ್ಳವುದು ಅಥವಾ ಪಿಸಿ ಪಕ್ಕದಲ್ಲಿ ಎಲ್ಲೋ ಬರೆದಿಡುವ ಅಭ್ಯಾಸವನ್ನು ಕೈಬಿಡಿ.
     • ಪಾಸ್‌ವರ್ಡ್‌ ರಚನೆಯಲ್ಲಿ 111111, abc123, ಅಥವಾ 654321, asdfghjkl, qwerty ನಂತಹ ಪಾಸ್‌ವರ್ಡ್‌ಗಳನ್ನು ರಚಿಸಬೇಡಿ. ಇವು ಹ್ಯಾಕರ್‌ಗಳಿಗೆ ಸುಲಭವಾಗಿ ಪತ್ತೆಯಾಗುವ ಪಾಸ್‌ವರ್ಡ್‌ ಆಗಿವೆ.
      • ಪಾಸ್‌ವರ್ಡ್‌ನ ಆರಂಭದಲ್ಲಿ ಅಥವಾ ಕೊನೆಯಲ್ಲಿ @,!, 0, ಇತ್ಯಾದಿ ವಿಶೇಷ ಅಕ್ಷರಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬೇಡಿ. ಹಾಗೆಯೇನಿಮ್ಮ ಜನ್ಮದಿನಾಂಕ, ನಿವಾಸ ಅಥವಾ ಕುಟುಂಬದ ಸದಸ್ಯರ ಹೆಸರುಗಳಂತಹ ವೈಯಕ್ತಿಕ ಮಾಹಿತಿಯನ್ನು ಪಾಸ್‌ವರ್ಡ್‌ ರಚಿಸುವಾಗ ಸೇರಿಸಬೇಡಿ.
      • ಹಾಗಿದ್ರೆ ಯಾವ ರೀತಿಯ ಪಾಸ್‌ವರ್ಡ್‌ ರಚಿಸಬೇಕು?

       ಹಾಗಿದ್ರೆ ಯಾವ ರೀತಿಯ ಪಾಸ್‌ವರ್ಡ್‌ ರಚಿಸಬೇಕು?

       • ನೀವು ಎರಡು ಅಥವಾ ಹೆಚ್ಚಿನ ಒಂದಕ್ಕೊಂದು ಸಂಬಂಧವಿಲ್ಲದ ಪದಗಳಿಂದ ದೀರ್ಘ ಪಾಸ್‌ವರ್ಡ್‌ಗಳನ್ನು ರಚಿಸಬೇಕಿದೆ. ಉದಾಹರಣೆಗೆ ಹೇಳುವುದಾದರೆ '6MonkeysRLooking^ 'ಎಂಬ ಶೈಲಿಯಲ್ಲಿ ಅಥವಾ ವಿಶೇಷ ಅಕ್ಷರಗಳನ್ನು ಬಳಕೆ ಮಾಡಿಕೊಂಡು ಪಾಸ್‌ವರ್ಡ್‌ ರಚಿಸಿ.
        • ಪಾಸ್‌ವರ್ಡ್‌ ರಚಿಸುವ ವೇಳೆ ಕನಿಷ್ಠ ಎಂಟು ಅಕ್ಷರಗಳಷ್ಟು ಉದ್ದವಿದೆಯೇ ಎಂಬುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕಿದೆ. ಈ ವೇಳೆ ದೊಡ್ಡಕ್ಷರ ಮತ್ತು ಸಣ್ಣ ಅಕ್ಷರಗಳು, ಅಂಕಿಗಳು ಮತ್ತು ಚಿಹ್ನೆಗಳ ಮಿಶ್ರಣವನ್ನು ಬಳಕೆ ಮಾಡಿ.
         • ನಿಮಗೆ ಮಾತ್ರ ಅರ್ಥವಾಗುವ ವಿಲಕ್ಷಣ ಪದಗಳನ್ನು ಪಾಸ್‌ವರ್ಡ್‌ ರಚಿಸುವ ವೇಳೆ ಬಳಕೆ ಮಾಡಿದರೆ ಒಳಿತು. ಜೊತೆಗೆ ಪಾಸ್‌ವರ್ಡ್‌ಗಳನ್ನು ಪಾಸ್‌ವರ್ಡ್ ನಿರ್ವಾಹಕದಲ್ಲಿ ಎನ್‌ಕ್ರಿಪ್ಟ್ ಮಾಡುವ ಮೂಲಕ ಸುರಕ್ಷಿತವಾಗಿರಿಸಿಕೊಳ್ಳಿ.
          • ಯಾವುದೇ ಪಾಸ್‌ವರ್ಡ್‌ ರಚಿಸುವಾಗ ಸಂಖ್ಯೆಗಳು ಮತ್ತು ಅಕ್ಷರಗಳು ಅದರಲ್ಲಿ ಇವೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಅಲ್ಲಿಗೆ ಸೇರಿಸಿ ಹೊಸ ಪಾಸ್‌ವರ್ಡ್‌ ರಚಿಸಿ.
           • ಕೆಲವು ಖಾತೆಗಳಲ್ಲಿ ಎರಡು ಹಂತದ ದೃಢೀಕರಣ ಇದೆ, ಇದನ್ನು ಕಡ್ಡಾಯವಾಗಿ ಪಾಲನೆ ಮಾಡಿ. ಇದರಿಂದ ನಿಮ್ಮ ಡಿವೈಸ್‌ ಅಥವಾ ಖಾತೆಗಳನ್ನು ಭದ್ರವಾಗಿರಿಸಿಕೊಳ್ಳಬಹುದು.

Best Mobiles in India

English summary
Create Strong passwords and safe your smart device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X