2017ರಲ್ಲಿ ನಡೆದ ಸೈಬರ್ ದಾಳಿಗಳ ಕುರಿತ ಸಂಪೂರ್ಣ ಮಾಹಿತಿ

By Lekhaka
|

2017ರಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ. ಆದರೆ ಕೆಲವು ಆಟ್ಯಾಕ್ ಗಳು ಜಾಗತಿಕವಾಗಿ ಸದ್ದು ಮಾಡಿದ್ದು, ವಿವಿಧ ರಾಷ್ಟ್ರಗಳು ನಡುಗುವಂತೆ ಮಾಡಿದವು. ಇವುಗಳ ಕುರಿತು ಮಾಹಿತಿಯನ್ನು ಒಟ್ಟಾಗಿ ನೀಡುವ ಪ್ರಯತ್ನ ಇದಾಗಿದೆ.

2017ರಲ್ಲಿ ನಡೆದ ಸೈಬರ್ ದಾಳಿಗಳ ಕುರಿತ ಸಂಪೂರ್ಣ ಮಾಹಿತಿ

ಜಾಗತಿಕವಾಗಿ ನಡೆದ ಹಲವು ಸೈಬರ್ ಆಟ್ಯಾಕ್ಸ್ ಗಳಲ್ಲಿ ಭಾರತವೂ ಬಲಿಪಶುವಾಗಿದ್ದು, ಇಲ್ಲಿನ ಅನೇಕ ಕಂಪ್ಯೂಟರ್ ಗಳು ವೈರಸ್ ದಾಳಿಗೆ ಸಿಲುಕಿದ್ದವು ಎನ್ನಲಾಗಿದೆ ಈ ದಾಳಿಗಳ ಕುರಿತ ಮಾಹಿತಿಯೂ ಇಲ್ಲಿದೆ.

ವಾನಾ ಕ್ರೈ:

ವಾನಾ ಕ್ರೈ:

ಇತಿಹಾಸದಲ್ಲಿ ಅತೀ ದೊಡ್ಡ ಸೈಬರ್ ದಾಳಿ ಎನ್ನುವ ಕುಖ್ಯಾತಿಗೆ ವಾನಾ ಕ್ರೈ ಪಾತ್ರವಾಗಿದ್ದು, ಭಾರತ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ಈ ದಾಳಿಯಿಂದ ಸಂಕಷ್ಟಕ್ಕೆ ಗುರಿಯಾಗಿದ್ದವು ಎನ್ನಲಾಗಿದೆ. ಭಾರತದ ಪ್ರಮುಖ ವಾಣಿಜ್ಯ ನಗರಿಗಳು ಈ ದಾಳಿಗೆ ತುತ್ತಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದವು.

ಇದು ಹಳೇಯ ಮಾದರಿಯ ಮೈಕ್ರೋಸಾಫ್ಟ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಕಂಪ್ಯೂಟರ್ ಗಳ ಮೇಲೆ ದಾಳೀ ಮಾಡಿದ್ದ ವೈರಸ್ ಆಗಿದ್ದು, ವಿಶ್ವದ ಮಿಲಿಯನ್ ಗಟ್ಟಲೇ ಕಂಪ್ಯೂಟರ್ ಗಳು ಈ ದಾಳಿಗೆ ಸಿಲುಕಿದ್ದವು.

ಪಿಟ್ಯಾ:

ಪಿಟ್ಯಾ:

ಪಿಟ್ಯಾ ರಾಮ್ ವೇರ್ ದಾಳಿಗೆ ಸಿಲುಕಿದ ಪ್ರಮುಖ ರಾಷ್ಟಗಳಲ್ಲಿ ಭಾರತವು ಒಂದು ಎನ್ನಲಾಗಿದೆ. ಈ ಸೈಬರ್ ದಾಳಿಯಿಂದ ಏಷ್ಯಾದ ರಾಷ್ಟ್ರಗಳು ಹೆಚ್ಚಿನ ನಷ್ಟವನ್ನು ಅನುಭವಿಸಿದ್ದವು ಎನ್ನಲಾಗಿದೆ. ಇದು ಕಂಪ್ಯೂಟರ್ ಗಳಲ್ಲಿದ್ದ ಸಂಪೂರ್ಣ ಡೇಟಾವನ್ನು ಹಾಳು ಮಾಡುವುದಲ್ಲದೇ ಡಿಲಿಟ್ ಮಾಡುತ್ತಿತ್ತು. ಹೆಚ್ಚಿನ ಪ್ರಮಾಣದ ನಷ್ಟವನ್ನು ಮಾಡಿತ್ತು ಎನ್ನಲಾಗಿದೆ.

5 ಆಪ್‌ ರೂಪಿಸಿ ವಿಶ್ವದ ಗಮನ ಸೆಳೆದ 13ರ ಬಾಲಕ!..ಫೇಸ್‌ಬುಕ್‌, ಆಪಲ್‌ ಫಿದಾ!!5 ಆಪ್‌ ರೂಪಿಸಿ ವಿಶ್ವದ ಗಮನ ಸೆಳೆದ 13ರ ಬಾಲಕ!..ಫೇಸ್‌ಬುಕ್‌, ಆಪಲ್‌ ಫಿದಾ!!

BSNL ಮಾಲ್ವೇರ್ ಆಟ್ಯಾಕ್:

BSNL ಮಾಲ್ವೇರ್ ಆಟ್ಯಾಕ್:

ಸರ್ಕಾರಿ ಒಡೆತನದ ಕರ್ನಾಟಕ ವೃತ್ತದ BSNL ಸಹ ಸೈಬರ್ ದಾಳೀಗೆ ತುತ್ತಾಗಿತ್ತು. ಸುಮಾರು 60000 ಮಾಡೋಮ್ ಗಳು ಹಾಳಾಗಿತ್ತು ಎನ್ನಲಾಗಿದೆ. ಯೂಸರ್ ನೇಮ್ ಪಾಸ್ ವರ್ಡ್ ಗಳನ್ನು ಹ್ಯಾಕ್ ಮಾಡಲಾಗಿತ್ತು. ಇದಕ್ಕಾಗಿ ಎಲ್ಲಾ ಬಳೆದಾರರಿಗೂ ತನ್ನ ಯೂಸರ್ ನೇಮ್ ಪಾಸ್ ವರ್ಡ್ ಗಳನ್ನು ಬದಲಾಯಿಸಿಕೊಳ್ಳಲು ಮನವಿಯನ್ನು ಮಾಡಲಾಗಿತ್ತು.

ಡೇಟಾ ಬ್ರೀಚ್:

ಡೇಟಾ ಬ್ರೀಚ್:

ದೇಶದ ಅತೀ ದೊಡ್ಡ ಗ್ರಾಹಕ ಸೇವೆಯನ್ನು ನೀಡುತ್ತಿರುವ ಜೊಮಟೋ ಬಳಕೆ ಮಾಡಿಕೊಳ್ಳುತ್ತಿರುವ 7.7 ಮಿಲಿಯನ್ ಬಳಕೆದಾರರ ಮಾಹಿತಿಯನ್ನು ಕಳ್ಳತನ ಮಾಡಲಾಗಿತ್ತು. ಇದನ್ನು ಟಾರ್ಕ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಹ ಇಡಲಾಗಿತ್ತು. ಇದಲ್ಲದೇ ಜಿಯೋ ಬಳಕೆದಾರರ ಮಾಹಿತಿಯನ್ನು ಸಹ ಕಳ್ಳತನ ಮಾಡಲಾಗಿತ್ತು.

ಮಿರೈ ಬೊಟ್ ನೆಟ್ ಮಾಲ್ ವೇರ್:

ಮಿರೈ ಬೊಟ್ ನೆಟ್ ಮಾಲ್ ವೇರ್:

ಇದಲ್ಲದೇ ಸಣ್ಣ ಸಣ್ಣ ಪ್ರಮಾಣದಲ್ಲಿ ಒಟ್ಟಾಗಿ ದಾಳಿಯನ್ನು ಮಾಡಿದ್ದ ಮಿರೈ ಹೆಚ್ಚಿನ ಸದ್ದು ಮಾಡಿತ್ತು. ಸುಮಾರು 2.5 ಮಿಲಿಯನ್ ಯುನಿಟ್ ಗಳು ಈ ದಾಳಿಗೆ ಸಿಲುಕಿ ನಲುಗಿದ್ದವು. ಇದು ಬಳಕೆದಾರರ ಇಂಟರ್ ನೆಟ್ ಸೇವೆಯನ್ನು ಹಿಡಿದಿಡುವ ಕಾರ್ಯವನ್ನು ಮಾಡುವುದಲ್ಲದೇ ಮಾಹಿತಿಯನ್ನು ಕದಿಯುವ ಕಾರ್ಯವನ್ನು ಮಾಡಿತ್ತು.

Best Mobiles in India

English summary
India witnessed more than 27,000 cybersecurity threat incidents in the first half of 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X