'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾ ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಈ ಸ್ಟೋರಿ ಓದಿರಿ!

|

ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಈ ಸ್ಟೋರಿಯನ್ನು ನೀವು ಓದಲೇಬೇಕು. ನಿಜ ಇಡೀ ಭಾರತದಲ್ಲಿ ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಕಾಶ್ಮೀರಿ ಪಂಡಿತರ ಕುರಿತಾದ ಈ ಚಿತ್ರ ದೇಶದಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ಇದೇ ಕಾರಣಕ್ಕೆ ಎಲ್ಲರೂ ಕೂಡ ಈ ಸಿನಿಮಾವನ್ನು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಇದೇ ಜನಪ್ರಿಯತೆಯನ್ನು ನೆಪವಾಗಿಟ್ಟುಕೊಂಡಿರುವ ಸೈಬರ್‌ ಹ್ಯಾಕರ್ಸ್‌ ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಲಿಂಕ್‌ ಹೆಸರಿನಲ್ಲಿ ನಿಮ್ಮ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.

ದಿ ಕಾಶ್ಮೀರ್‌ ಫೈಲ್ಸ್‌

ಹೌದು, ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾವನ್ನು ಉಚಿತವಾಗಿ ನೋಡಲು ಲಿಂಕ್‌ ಕ್ಲಿಕ್‌ ಮಾಡಿ ಎನ್ನುವ ಸಂದೇಶವನ್ನು ಎಲ್ಲರೂ ನೋಡಿರುತ್ತೀರಿ. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಈ ಲಿಂಕ್‌ ಅನ್ನು ನೀವೇನಾದರೂ ಕ್ಲಿಕ್‌ ಮಾಡಿದರೆ ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಬೀಳೋದು ಗ್ಯಾರಂಟಿ. ಸದ್ಯ ವಾಟ್ಸಾಪ್‌ ಬಳಕೆದಾರರನ್ನು ದಾರಿ ತಪ್ಪಿಸುವ ಹೊಸ ದಾರಿಯಿಂದ ಈಗಾಗಲೇ ಅನೇಕ ಮಂದಿ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ನಕಲಿ ಲಿಂಕ್‌ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರನ್ನು ದಿ ಕಾಶ್ಮೀರ್‌ ಫೈಲ್ಸ್‌ ಹೆಸರಿನಲ್ಲಿ ಸೈಬರ್‌ ಹ್ಯಾಕರ್ಸ್‌ ದಾರಿ ತಪ್ಪಿಸುತ್ತಿದ್ದಾರೆ ಎನ್ನಲಾಗಿದೆ. ವಾಟ್ಸಾಪ್ ಬಳಕೆದಾರರನ್ನು ಬ್ಲಫ್ ಮಾಡಲು ಸೈಬರ್ ಅಪರಾಧಿಗಳು ಜನಪ್ರಿಯ ಚಲನಚಿತ್ರದ ಹೆಸರನ್ನು ಬಳಸುತ್ತಿದ್ದಾರೆ. ಜನಪ್ರಿಯ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ಉಚಿತವಾಗಿ ನೀಡುವುದಾಗಿ ಹೇಳಿಕೊಂಡು ಬಳಕೆದಾರರಿಗೆ ನಕಲಿ ಲಿಂಕ್‌ಗಳನ್ನು ಫಾರ್ವರ್ಡ್ ಮಾಡಲಾಗುತ್ತಿರುವ ಸಂದೇಶದ ಲಿಂಕ್‌ ಅನ್ನು ಪತ್ತೆಹಚ್ಚಲಾಗಿದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಫೋನ್‌ನಲ್ಲಿ ಮಾಲ್‌ವೇರ್ ಮತ್ತು ಮತ್ತಷ್ಟು ಹ್ಯಾಕರ್‌ ದಾಳಿಗಳಿಗೆ ಗುರಿಯಾಗುತ್ತಿದ್ದಾರೆ.

ವಾಟ್ಸಾಪ್

ಇನ್ನು ಈ ಈ ಹೊಸ ವಾಟ್ಸಾಪ್ ಹಗರಣದಿಂದ ಈಗಾಗಲೇ ಸಾಕಷ್ಟು ಮಂದಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೋಯ್ಡಾ) ರಣವಿಜಯ್ ಸಿಂಗ್ ಹೇಳಿದ್ದಾರೆ. ಈ ನಕಲಿ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಕಾಶ್ಮೀರ್‌ ಫೈಲ್ಸ್ ಚಲನಚಿತ್ರವನ್ನು ಪಡೆಯುವುದಿಲ್ಲ, ಬದಲಿಗೆ, ಸೈಬರ್ ಅಪರಾಧಿಗಳು ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಫೋನ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ಖಾಲಿ ಮಾಡಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.

ವಾಟ್ಸಾಪ್‌ನಲ್ಲಿ ಈ ರೀತಿಯ ಸ್ಕ್ಯಾಮ್‌ನಿಂದ ಸುರಕ್ಷಿತವಾಗಿರುವುದು ಹೇಗೆ?

ವಾಟ್ಸಾಪ್‌ನಲ್ಲಿ ಈ ರೀತಿಯ ಸ್ಕ್ಯಾಮ್‌ನಿಂದ ಸುರಕ್ಷಿತವಾಗಿರುವುದು ಹೇಗೆ?

* ವಾಟ್ಸಾಪ್‌ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಅಪರಿಚಿತ ವ್ಯಕ್ತಿಯಿಂದ ನಿಮ್ಮ ವಾಟ್ಸಾಪ್‌ ಖಾತೆಗೆ ಲಿಂಕ್ ಬಂದರೆ ಅದನ್ನು ಕ್ಲಿಕ್‌ ಮಾಡಲೇಬೇಡಿ.

* ಅಂತಹ ಲಿಂಕ್ ಅನ್ನು ತಿಳಿದಿರುವ ವ್ಯಕ್ತಿ ಶೇರ್‌ ಮಾಡಿದ್ದರೂ ಕೂಡ ಲಿಂಕ್ ಕಾನೂನುಬದ್ಧವಾಗಿದೆಯೇ ಎಂದು ಪರಿಶೀಲಿಸಲು ಬಳಕೆದಾರರು ಮೊದಲು ಆ ವ್ಯಕ್ತಿಯನ್ನು ಸಂಪರ್ಕಿಸಬೇಕು.

ಭಾರತದಲ್ಲಿ ವಾಟ್ಸಾಪ್‌ನಲ್ಲಿ ಫ್ಯಾಕ್ಟ್‌ ಚೆಕ್‌ ಮಾಡುವ ಟಿಪ್‌ಲೈನ್‌ಗಳು!

ಭಾರತದಲ್ಲಿ ವಾಟ್ಸಾಪ್‌ನಲ್ಲಿ ಫ್ಯಾಕ್ಟ್‌ ಚೆಕ್‌ ಮಾಡುವ ಟಿಪ್‌ಲೈನ್‌ಗಳು!

ಭಾರತದಲ್ಲಿ ವಾಟ್ಸಾಪ್‌ ಬಳಸುವವರು ತಮಗೆ ಬಂದ ವಿಷಯಗಳು ಅಸಲು ಇಲ್ಲವೇ ನಕಲಿ ಎಂದು ಮಾಹಿತಿಯನ್ನು ಪರಿಶೀಲಿಸಲು ಈ ಕೆಲಗಿನ ಟಿಪ್‌ಲೈನ್‌ಗಳನ್ನು ಬಳಸಬಹುದಾಗಿದೆ.
ಎಎಫ್‌ಪಿ: +91 95999 73984
ಬೂಮ್: +91 77009-06111 / +91 77009-06588
ಫ್ಯಾಕ್ಟ್ ಕ್ರೆಸೆಂಡೋ: +91 90490 53770
ಫ್ಯಾಕ್ಟ್ಲಿ: +91 92470 52470
ಇಂಡಿಯಾ ಟುಡೇ: +91 7370-007000
ನ್ಯೂಸ್‌ ಚೆಕ್ಕರ್‌: +91 99994 99044
ನ್ಯೂಸ್‌ ಮೊಬೈಲ್: +91 11 7127 9799
ಕ್ವಿಂಟ್‌ ವೆಬ್‌ಕ್ಯೂಫ್‌: +91 96436 51818
ದಿ ಹೆಲ್ತಿ ಇಂಡಿಯನ್‌ ಪ್ರಾಜೆಕ್ಟ್‌: +91 85078 85079
ವಿಶ್ವಸ್ ನ್ಯೂಸ್: +91 92052 70923 / +91 95992 99372
ಈ ಮೇಲಿನ ಟಿಪ್‌ಲೈನ್‌ಗಳನ್ನು ಬಳಸಿಕೊಳ್ಳುವ ಮೂಲಕ ನಿಮ್ಮ ವಾಟ್ಸಾಪ್‌ಗೆ ಬಂದಿರುವ ವಿಷಯದ ಅಸಲಿಯತೆ ಏನು ಅನ್ನೊದನ್ನ ಪರಿಶೀಲಿಸಬಹುದಾಗಿದೆ.

Most Read Articles
Best Mobiles in India

English summary
Cybercriminals are using name of a the Kashmir Files movie to bluff WhatsApp users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X