ಜಿಮೇಲ್‌ ಬಳಸಬೇಡಿ: ಸರ್ಕಾರಿ ನೌಕರರಿಗೆ ನಿರ್ದೇಶನ

Posted By:

ಅಮೆರಿಕದ ಸೈಬರ್‌ ಪತ್ತೆದಾರಿಕೆಗೆ ತುತ್ತಾಗದಂತೆ ಭಾರತ ಸರ್ಕಾರ ಎಚ್ಚೆತ್ತುಕೊಂಡಿದ್ದು, ತನ್ನೆಲ್ಲಾ ಸರ್ಕಾರಿ ನೌಕರರಿಗೆ ಜಿ ಮೇಲ್‌ನಂತ ಇಮೇಲ್‌ ಬಳಕೆಯ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ.

ಈ ಸಂಬಂಧ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸರ್ಕಾರದ ಐದು ಲಕ್ಷ ನೌಕರರಿಗೆ ಜಿಮೇಲ್‌ ಬಳಸದಂತೆ ಔಪಚಾರಿಕ ಸೂಚನೆ ನೀಡಿದ್ದು, ಸರ್ಕಾರದ ನಿಯಂತ್ರಣ ಹೊಂದಿರುವ ಎನ್‌ಐಸಿ(National Informatics Centree) ಸಿದ್ದಪಡಿಸಿರುವ ಇ ಮೇಲ್‌ ಸೇವೆಗಳನ್ನು ಬಳಸುವಂತೆ ನಿರ್ದೇಶನ ನೀಡಿದೆ.

ಜಿಮೇಲ್‌ ಬಳಸಬೇಡಿ: ಸರ್ಕಾರಿ ನೌಕರರಿಗೆ ನಿರ್ದೇಶನ

ಈ ನಿರ್ದೇಶನ ಸರ್ಕಾರಿ ಮಾಹಿತಿಗಳನ್ನು ಕಳುಹಿಸುವ ಮೇಲ್‌ಗಳಿಗೆ ಮಾತ್ರ ಅನ್ವಯವಾಗಲಿದ್ದು, ನೌಕರರ ಖಾಸಗಿ ವ್ಯವಹಾರಗಳಿಗೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸ್ಪಷ್ಟಪಡಿಸಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ ಎಸ್ ಎ) ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಇತ್ತೀಚಿಗೆ ಅಮೆರಿಕ ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮಾಹಿತಿಯನ್ನು ಕದಿಯುತ್ತಿದೆ ಎಂದು ಆಧಾರ ಸಮೇತ ಬಹಿರಂಗ ಪಡಿಸಿದ್ದ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಎಚ್ಚೆತ್ತುಕೊಂಡಿದ್ದು ತನ್ನ ನೌಕರರಿಗೆ ಅಮೆರಿಕದಲ್ಲಿ ಸರ್ವರ್‌ ಹೊಂದಿರುವ ಕಂಪೆನಿಗಳ ಇಮೇಲ್‌ ಬಳಕೆಯನ್ನು ಬಳಸದಂತೆ ನಿರ್ದೇಶಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot