Just In
- 13 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 14 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 15 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 17 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಿನವು 3GB ಡೇಟಾ ಬೇಕಿದ್ರೆ, ಯಾವ ಪ್ಲ್ಯಾನ್ ಬೆಸ್ಟ್?..ಇಲ್ಲಿದೆ ಮಾಹಿತಿ!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಸೇರಿದಂತೆ ಭಾರ್ತಿ ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳ ನಡುವೆ ಪೈಪೋಟಿ ಇದೆ. ಟೆಲಿಕಾಂ ಸಂಸ್ಥೆಗಳು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೊಂಬಾಟ್ ರೀಚಾರ್ಜ್ ಯೋಜನೆ ಗಳನ್ನು ಪರಿಚಯಿಸುತ್ತ ಸಾಗಿವೆ. ಆ ಪೈಕಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನದ ಯೋಜನೆಗಳು ಗ್ರಾಹಕರನ್ನು ಸೆಳೆಯುತ್ತವೆ. ಈ ನಿಟ್ಟಿನಲ್ಲಿ ಟೆಲಿಕಾಂ, ಏರ್‌ಟೆಕ್, ವಿ ಮತ್ತು ಜಿಯೋ ಕೆಲವು ಅತ್ಯುತ್ತಮ ಡೇಟಾ ಯೋಜನೆಗಳನ್ನು ಪರಿಚಯಿಸಿವೆ.

ಹೌದು, ಬಹುತೇಕ ಗ್ರಾಹಕರು ಪ್ರತಿದಿನ ಹೆಚ್ಚಿನ ಡೇಟಾ ಸೌಲಭ್ಯವನ್ನು ಬಯಸುತ್ತಾರೆ. ಡೇಟಾ ಪ್ರಿಯರಿಗೆ ಮುಖ್ಯವಾಗಿ 2GB ಗಿಂತ ಅಧಿಕ ಡೇಟಾ ಯೋಜನೆಗಳು ಹೆಚ್ಚು ಆಕರ್ಷಕ ಎನಿಸುತ್ತವೆ. ಏರ್‌ಟೆಕ್, ವಿ ಮತ್ತು ಜಿಯೋ ಮೂರು ಟೆಲಿಕಾಂಗಳು ನಿತ್ಯವು 3GB ಡೇಟಾ ಸೌಲಭ್ಯ ಒಳಗೊಂಡ ಪ್ಲ್ಯಾನ್‌ಗಳನ್ನು ಪಡೆದಿದ್ದು, ವ್ಯಾಲಿಡಿಟಿ ಹಾಗೂ ಪ್ರೈಸ್‌ಟ್ಯಾಗ್‌ನಲ್ಲಿ ಭಿನ್ನತೆ ಪಡೆದಿವೆ. ಹಾಗಾದರೇ ದಿನವು 3GB ಡೇಟಾ ಸೌಲಭ್ಯ ಪಡೆದ ಪ್ಲ್ಯಾನ್‌ಗಳ ಹಾಗೂ ಯಾವುದು ಬೆಸ್ಟ್ ಯೋಜನೆ ಎಂಬುದರ ಬಗ್ಗೆ ಮುಂದೆ ತಿಳಿಯೋಣ

ಏರ್‌ಟೆಲ್ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಹಾಗೂ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ವಿ ಟೆಲಿಕಾಂ 699ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ವಿ ಟೆಲಿಕಾಂನ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವೀಕೆಂಡ್ ಡೇಟಾ ರೋಲ್ ಓವರ್ ಪ್ರಯೋಜನ ಜೊತೆಗೆ ವಿ ಆಪ್ಸ್ ಸಹ ಲಭ್ಯವಾಗಲಿದೆ.

ಏರ್‌ಟೆಲ್ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್ ಪ್ಯಾನ್‌ಗಳಲ್ಲಿ ಒಂದಾಗಿರುವ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ, ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಜಿಯೋ 601ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 601ರೂ. ಪ್ರೀಪೇಯ್ಡ್ ಪ್ಲ್ಯಾನ್ ನಿಮಗೆ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಈ ಅವಧಿಯಲ್ಲಿ ನಿಮಗೆ ಪ್ರತಿದಿನ 3GB ಡೇಟಾ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆ ಪ್ರಯೋಜನ ನೀಡಲಿದೆ. ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ 6 GB ಡೇಟಾ ಸಿಗಲಿದ್ದು, ಹಾಗೆಯೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಸಹ ಲಭ್ಯವಾಗಲಿದೆ.

ಜಿಯೋದ 1199ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 1199ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470