ಗೂಗಲ್ ಪ್ಲೇ ಸ್ಟೋರ್‌ನಲ್ಲಿಯು ಬಂತು 'ಡಾರ್ಕ್‌ ಮೋಡ್'!..ಡಾರ್ಕ್ ಮೋಡ್ ಯಾಕೆ ಬೇಕು?

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ವಲಯದಲ್ಲಿ ಡಾರ್ಕ್ ಮೋಡ್ ಫೀಚರ್ ಸಾಕಷ್ಟು ಸದ್ದು ಮಾಡುತ್ತಿದೆ. ಹೊಸ ಆಂಡ್ರಾಯ್ಡ್‌ 10 ಓಎಸ್‌ ಆವೃತ್ತಿಯಲ್ಲಿ ಫೋನಿನಲ್ಲಿಯೇ ಡಾರ್ಕ್ ಮೋಡ್ ಫೀಚರ್ ಸೇರಿಕೊಂಡಿದೆ. ಹಾಗೆಯೇ ಕೆಲವು ಜನಪ್ರಿಯ ಆಪ್ಸ್‌ಗಳು ಡಾರ್ಕ್ ಮೋಡ್ ಸೌಲಭ್ಯವನ್ನು ಪರಿಚಯಿಸಿವೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ವಾಟ್ಸಪ್‌ ಬಹುನಿರೀಕ್ಷಿತ ಡಾರ್ಕ್ ಮೋಡ್ ಫೀಚರ್ ಅಳವಡಿಸಿಕೊಂಡಿದೆ. ಅದೇ ಹಾದಿಯಲ್ಲಿ ಇದೀಗ ಗೂಗಲ್ ಪ್ಲೇ ಸ್ಟೋರ್‌ ಸಹ ಡಾರ್ಕ್ ಮೋಡ್ ಫೀಚರ್‌ ಸೇರಿಸಿದೆ.

ಗೂಗಲ್ ಪೇ ಸ್ಟೋರ್‌

ಹೌದು, ಗೂಗಲ್ ಪೇ ಸ್ಟೋರ್‌ನಲ್ಲಿ ಕೆಲವು ಆಪ್ಸ್‌ಗಳು ಈಗಾಗಲೇ ಡಾರ್ಕ್ ಮೋಡ್ ಅಳವಡಿಕೆ ಮಾಡಿಕೊಂಡಿವೆ. ಇದೀಗ ಗೂಗಲ್ ಪ್ಲೇ ಸ್ಟೋರ್‌ ಸಹ ಡಾರ್ಕ್ ಮೋಡ್ ಫೀಚರ್‌ ಸೇರಿಸಿಕೊಂಡಿದೆ. ನೂತನ ಆಂಡ್ರಾಯ್ಡ್ 10 ಓಎಸ್‌ ಸೇರಿದಂತೆ ಎಲ್ಲ ಆವೃತ್ತಿಯ ಆಂಡ್ರಾಯ್ಡ್ ಓಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡಾರ್ಕ್ ಮೋಡ್ ಫೀಚರ್ ಸಕ್ರಿಯ ಮಾಡಿಕೊಳ್ಳಬಹುದಾಗಿದೆ ಎಂದು ಗೂಗಲ್ ಹೇಳಿದೆ. ಹಾಗಾದರೇ ಏನಿದು ಡಾರ್ಕ್ ಮೋಡ್‌ ಫೀಚರ್ ? ಡಾರ್ಕ್ ಮೋಡ್ ಫೀಚರ್ ಅಗತ್ಯತೆ ಏನಿದೆ ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ಡಾರ್ಕ್ ಮೋಡ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌

ಡಾರ್ಕ್ ಮೋಡ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌

ಹಲವು ಅಗತ್ಯ ಸೇವೆಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ಟೆಕ್ ದಿಗ್ಗಜನಾಗಿ ಗುರುತಿಸಿಕೊಂಡಿರುವ ಗೂಗಲ್ ಸಹ ಇದೀಗ ಡಾರ್ಕ್ ಮೋಡ್ ಫೀಚರ್‌ನತ್ತ ಒಲವು ನೀಡಿದೆ. ಅದರ ಪರಿಣಾಮವಾಗಿ ಅಪ್ಲಿಕೇಶನ್‌ಗಳ ತಾಣ ಗೂಗಲ್ ಪ್ಲೇ ಸ್ಟೋರ್‌ ಆಪ್‌ಗೆ ಡಾರ್ಕ್ ಮೋಡ್ ಆಯ್ಕೆಯನ್ನು ರೋಲ್‌ಔಟ್‌ ಮಾಡಿದೆ. ಈ ಆಯ್ಕೆಯಲ್ಲಿ ಡಾರ್ಕ್ ಮತ್ತು ಲೈಟ್ ಆಯ್ಕೆಗಳು ಇವೆ. ಎಲ್ಲ ಆಂಡ್ರಾಯ್ಡ್ ಓಎಸ್‌ ಫೋನ್‌ಗಳಿಗೂ ಸಫೋರ್ಟ್‌ ಇದೆ ಎಂದಿದೆ.

ಡಾರ್ಕ್ ಮೋಡ್ ಆನ್ ಮಾಡಲು ಹೀಗೆ ಮಾಡಿ

ಡಾರ್ಕ್ ಮೋಡ್ ಆನ್ ಮಾಡಲು ಹೀಗೆ ಮಾಡಿ

* ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್ ತೆರೆಯಿರಿ.

* ಗೂಗಲ್ ಪ್ಲೇ ಸ್ಟೋರ್‌ ಸೆಟ್ಟಿಂಗ್ ಆಯ್ಕೆ ತೆರೆಯಿರಿ.

* ಸೆಟ್ಟಿಂಗ್ ಲಿಸ್ಟ್‌ನಲ್ಲಿ ಥೀಮ್ ಆಯ್ಕೆ ಕ್ಲಿಕ್ಕ ಮಾಡಿ

* ಥೀಮ್‌ ಆಯ್ಕೆಯಲ್ಲಿ ಡಾರ್ಕ್ ಸೆಲೆಕ್ಟ್ ಮಾಡಿರಿ

ಏನಿದು ಡಾರ್ಕ್ ಮೋಡ್?

ಏನಿದು ಡಾರ್ಕ್ ಮೋಡ್?

ಇತ್ತೀಚಿಗೆ ಭಾರಿ ಟ್ರೆಂಡ್‌ನಲ್ಲಿರುವ ಡಾರ್ಕ್ ಮೋಡ್ ಫೀಚರ್ ಸ್ಮಾರ್ಟ್‌ಫೋನ್ ಹಾಗೂ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಸಹ ಕಾಣಿಸುತ್ತಿದೆ. ಡಾರ್ಕ್ ಮೋಡ್ ಅಂದರೇ ಫೋನಿನ ಸ್ಕ್ರೀನ್‌ ಬಿಳಿ ಪ್ರಖರತೆ ಬದಲಾಗಿ ಸ್ಕ್ರೀನ್ ಡಿಸ್‌ಪ್ಲೇ ಹಿನ್ನಲೆಯು ಕಪ್ಪು ವರ್ಣದಲ್ಲಿ ಕಾಣಿಸುತ್ತದೆ. ಸ್ಕ್ರೀನಿನ ಅತೀ ಬೆಳಕಿನ ಪ್ರಖರತೆಯು ಹಾಗೂ ಬ್ಲೂ ರೇ ಕಿರಣಗಳಿಂದ ಕಣ್ಣಿಗೆ ಉಂಟಾಗುವ ಹಾನಿ ತಗ್ಗಿಸಲು ಡಾರ್ಕ್ ಮೋಡ್ ನೆರವಾಗುತ್ತದೆ.

Most Read Articles
Best Mobiles in India

English summary
Google Play Store settings and then enable the Dark option in the Theme section.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X