ರೈಲ್ವೇ ನಿಲ್ದಾಣಗಳಲ್ಲಿ ಡೇಟಾ ಬಳಕೆ 4 ಪಟ್ಟು ಹೆಚ್ಚಳ...ಏಪ್ರೀಲ್ ನಲ್ಲಿ 7,100 ಟಿಬಿ ಡೇಟಾ ಯೂಸ್..!

  By Avinash
  |

  ಇತ್ತೀಚೆಗಷ್ಟೇ ಗೂಗಲ್ ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸಂಪರ್ಕ ನೀಡುವ ರೇಲ್ ವೈರ್ ಯೋಜನೆಯನ್ನು 400 ರೈಲ್ವೇ ನಿಲ್ದಾಣಗಳಲ್ಲಿ ಪೂರ್ಣಗೊಳಿಸಿತ್ತು. ಅದರಂತೆ ರೇಲ್ ವೈರ್ ಗೆ ಸಂಬಂಧಿಸಿದ ಅಚ್ಚರಿ ವರದಿಯೊಂದು ಹೊರ ಬಿದ್ದಿದ್ದು, ಕೇಳಿದರೆ ಹುಬ್ಬೇರಿಸುತ್ತೀರಿ.

  ಬಿಲ್ ಗೇಟ್ಸ್ ಕುರಿತ ಈ ಸಂಗತಿಗಳನ್ನು ತಿಳಿದುಕೊಂಡರೆ ಅಬ್ಬಾ ಎನ್ನುತ್ತಿರಿ..!

  ಹೌದು, ರೇಲ್ ವೈರ್ ಯೋಜನೆಯಲ್ಲಿ 370 ರೈಲ್ವೇ ನಿಲ್ದಾಣಗಳಲ್ಲಿ ಏಪ್ರೀಲ್ 2018ರಲ್ಲಿ ಕನಿಷ್ಠ 75 ಲಕ್ಷ ಬಳಕೆದಾರರು ವೈ-ಫೈ ಬಳಸಿದ್ದು, 7,100 ಟೆರಾಬೈಟ್ ಡೇಟಾವನ್ನು ಬಳಸಿರುವುದು ಅಚ್ಚರಿ ತಂದಿದೆ. ಈ 7,100 ಟೆರಾಬೈಟ್ ಡೇಟಾದಿಂದ 23 ಲಕ್ಷ ಹೈ ಡೆಫಿನಿಷನ್ ಸಿನಿಮಾಗಳನ್ನು ಆನ್ ಲೈನಿನಲ್ಲಿ ಸ್ಟ್ರೀಮ್ ಮಾಡಬಹುದು ಮತ್ತು 5000ದಿನಕ್ಕಾಗುವಷ್ಟು ಆಡಿಯೋ ಕೇಳಬಹುದಾಗಿದೆ ಎಂದರೆ ನೀವು ನಂಬಲೇಬೇಕು.

  ರೈಲ್ವೇ ನಿಲ್ದಾಣಗಳಲ್ಲಿ ಡೇಟಾ ಬಳಕೆ 4 ಪಟ್ಟು ಹೆಚ್ಚಳ..!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚಳ

  ರೇಲ್ ವೈರ್ ನ ಡೇಟಾ ಬಳಕೆ ಕಳೆದ ವರ್ಷಕ್ಕಿಂತ ನಾಲ್ಕುಪಟ್ಟು ಹೆಚ್ಚಾಗಿದೆ. 2017 ಮಾರ್ಚ್ ನಲ್ಲಿ 110 ರೈಲ್ವೇ ನಿಲ್ದಾಣಗಳಿಂದ 60 ಲಕ್ಷ ಬಳಕೆದಾರರು 1,600 ಟೆರಾ ಬೈಟ್ ಡೇಟಾವನ್ನು ಬಳಸಿದ್ದರು. ಅದಲ್ಲದೇ ಮೆಟ್ರೋ ಸಿಟಿಗಳಲ್ಲದ ನಗರಗಳಲ್ಲಿ ಡೇಟಾ ಬಳಕೆ ಹೆಚ್ಚಿದ್ದು, ಪುಣೆ, ಅಲಹಾಬಾದ್, ವಿಜಯವಾಡ ಮತ್ತು ವಿಶಾಕಪಟ್ಟಣದಲ್ಲಿ ಸರಾಸರಿ 10 ಸಾವಿರ ಬಳಕೆದಾರರು 2 ಟಿಬಿ ಡೇಟಾವನ್ನು ಬಳಸಿದ್ದಾರೆ.

  ದೊಡ್ಡ ಪ್ರಮಾಣದ ಡೇಟಾ ಹಸಿವು

  ಈ ವರದಿಯನ್ನು ರೇಲ್ ಟೆಲ್ ಮತ್ತು ಗೂಗಲ್ ಪ್ರಕಟಿಸಿದ್ದು, ಕಳೆದ ವಾರದಲ್ಲಿ 400 ರೈಲ್ವೇ ನಿಲ್ದಾಣಗಳಲ್ಲಿ ಉಚಿತ ಸಾರ್ವಜನಿಕ ವೈ-ಫೈ ನೀಡಿ ಯೋಜನೆಯನ್ನು ಯಶಸ್ವಿಗೊಳಿಸಲಾಗಿತ್ತು. "ರೇಲ್ ವೈರ್ ಯೋಜನೆಯು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಡೇಟಾ ಹಸಿವು ಇದೆ ಎಂಬ ನಂಬಿಕೆಯನ್ನು ಹುಸಿಗೊಳಿಸಿಲ್ಲ ದು ಗೂಗಲ್ ನ ನೆಕ್ಸ್ಟ್ ಬಿಲಿಯನ್ ಯೂಸರ್ಸ್ ಸಂಸ್ಥೆಯ ಕೆ.ಸೂರಿ ಹೇಳಿದ್ದಾರೆ.

  ಕಡಿಮೆ ಸಾಕ್ಷರತೆಯೂ ಡೇಟಾ ಬಳಕೆ ಹೆಚ್ಚಳಕ್ಕೆ ಪ್ರಮುಖ ಕಾರಣ

  ನ್ಯಾಸ್ಕಾಂನ ಉಪಾಧ್ಯಕ್ಷ ಪ್ರಶಾಂತ್ ರಾಯ್ ಹೇಳುವಂತೆ, ಇಂಟರ್ ನೆಟ್ ಭಾರತ ಮುಂದಿನ 300 ಮಿಲಿಯನ್ ಬಳಕೆದಾರರಿಗೆ ತೆರೆದುಕೊಳ್ಳಲಿದೆ. ಇವರು ಟೆಕ್ಸ್ಟ್ ಕಡಿಮೆ ಬಳಸಿ ಹೆಚ್ಚು ವಿಡಿಯೋಗಳನ್ನು ನೋಡುತ್ತಾರೆ, ಏಕೆಂದರೆ ಬಹಳಷ್ಟು ಜನಕ್ಕೆ ಇಂಗ್ಲಿಷ್ ಮಾತನಾಡುವುದಿಲ್ಲ ಮತ್ತು ಕಡಿಮೆ ಸಾಕ್ಷರತೆ ಹೊಂದಿರುವ ಜನರಾಗಿರುತ್ತಾರೆ. ಇವರು ವಾಟ್ಸ್ ಆಪ್ ಮೂಲಕ ಶೇರ್ ಮಾಡಲಾದ ಲಿಂಕ್ ಮತ್ತು ಯೂಟ್ಯೂಬ್ ನಿಂದ ವಿಡಿಯೋಗಳನ್ನು ನೋಡುತ್ತಾರೆ. ಆಡಿಯೋ ಕೇಳುತ್ತಾರೆ. ಮತ್ತು ವಿಡಿಯೋ ಚಾಟ್ ಸಹ ಮಾಡುತ್ತಾರೆ.

  ವಿಡಿಯೋ ನೋಡುವ ವಿಧಾನ ಬದಲು

  ಆದರೆ, ಇದಕ್ಕೂ ಮುಂಚೆ ವಿಡಿಯೋಗಳನ್ನು ಮೊಬೈಲ್ ಮೂಲಕ ಶೇರ್ ಮಾಡಿ ಅಥವಾ ತಮ್ಮ ಎಸ್ ಡಿ ಕಾರ್ಡ್ ನ ಮೂಲಕ ನೋಡುತ್ತಿದ್ದರು. ಆದರೆ, ಈಗ ಉಚಿತ ವೈ-ಫೈ ಅಥವಾ ಅಗ್ಗದ ಡೇಟಾ ಪ್ಲಾನ್ ಗಳ ಮೂಲಕ ವಿಡಿಯೋ ಡೌನ್ ಲೋಡ್ ಮಾಡಿ ನೋಡುತ್ತಾರೆ. ಆದ್ದರಿಂದ ಮೊದಲ 300 ಮಿಲಿಯನ್ ಬಳಕೆದಾರರಿಗಿಂತ ಇವರ ಡೇಟಾ ಬಳಕೆ ಹೆಚ್ಚಿರುತ್ತೆ ಎಂದು ಹೇಳಿದ್ದಾರೆ.

  ಮೊಬೈಲ್ ಗ್ರಾಹಕರಲ್ಲಿ ಶೇ.85 ರಷ್ಟು ಹೆಚ್ಚಳ

  ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ವರದಿಯಂತೆ ಮೆಟ್ರೋ ನಗರಗಳಲ್ಲಿ 2011 ರಿಂದ 2017ರವರೆಗಿನ ಅವಧಿಯಲ್ಲಿ ಶೇ.60ರಷ್ಟು ಮೊಬೈಲ್ ಗ್ರಾಹಕರು ಹೆಚ್ಚಾಗಿದ್ದಾರೆ. ಅದಲ್ಲದೇ ಈ ಅವಧಿಯಲ್ಲಿ ಇಡೀ ದೇಶಾದ್ಯಂತ ಸುಮಾರು ಶೇ.85 ರಷ್ಟು ಬಳಕೆದಾರರು ಹೆಚ್ಚಾಗಿರುವುದನ್ನು ಗಮನಿಸಬಹುದು.

  ಡೇಟಾ ಟ್ರಾಫಿಕ್ ನಲ್ಲಿ ವಿಡಿಯೋ ಸ್ಟ್ರೀಮಿಂಗ್ ಗೆ ಅಗ್ರ ಸ್ಥಾನ

  ಡೇಟಾ ಹಸಿವು ಭಾರತವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಇದರಲ್ಲಿ ಶೇ.70 ರಿಂದ 75ರಷ್ಟು ಮೊಬೈಲ್ ಡೇಟಾ ಟ್ರಾಫಿಕ್ ಅನ್ನು ವಿಡಿಯೋ ಸ್ಟ್ರೀಮಿಂಗ್ ಆಕ್ರಮಿಸಿಕೊಂಡಿದೆ ಎಂದು ಸಿಒಎಐ ಡೈರೆಕ್ಟರ್ ಜನರಲ್ ರಾಜನ್ ಎಸ್. ಮ್ಯಾಥ್ಯುಸ್ ಹೇಳಿದ್ದಾರೆ.

  ತಿಂಗಳಿಗೆ 14 ಎಕ್ಸಾಬೈಟ್ಸ್ ಡೇಟಾ ಬೇಕಾಗುತ್ತದೆ

  ಇದೇ ರೀತಿ ಮುಂದುವರೆದರೆ ಭಾರತವು ಮುಂದಿನ ಐದು ವರ್ಷಗಳಲ್ಲಿ ಒಂದು ತಿಂಗಳಿಗೆ 14 ಎಕ್ಸಾಬೈಟ್ಸ್ ಡೇಟಾವನ್ನು ಬಳಸುತ್ತದೆ. ಈ ಪ್ರಮಾಣ ಕಳೆದ ವರ್ಷದಲ್ಲಿ ತಿಂಗಳಿಗ್ಎ 1.3 ಎಕ್ಸಾಬೈಟ್ಸ್ ನಷ್ಟಿತ್ತು ಎಂದು ಹೇಳಿದ್ದಾರೆ.

  7,700 ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈಗೆ ಟೆಂಡರ್

  ರೇಲ್ ವೈರ್ ಯಶಸ್ವಿಯೊಂದಿಗೆ ರೇಲ್ ಟೆಲ್ ಉಳಿದ 7,700 ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಸಂಪರ್ಕ ನೀಡಲು ಟೆಂಡರ್ ಆಹ್ವಾನಿಸಿದ್ದು, ಭಾರತದಾದ್ಯಂತ ರೇಲ್ ವೈರ್ ಅನ್ನು ಬಳಕೆದಾರರು ಬಳಸಬಹುದು ಎಂದು ಹೇಳಲಾಗಿದೆ.

  ಶೇ.60 ರಷ್ಟು ಡೇಟಾ ಟ್ರಾಫಿಕ್ ಪೂರೈಸಲಿರುವ ವೈ-ಫೈ

  ಟೆಲಿಕಾಂ ರೆಗುಲೇಟರಿ ಆಥಾರಿಟಿ ಆಫ್ ಇಂಡಿಯಾ (ಟ್ರಾಯ್) ವರದಿಯಂತೆ ಸಾಮಾನ್ಯ ಬಳಕೆದಾರ ತಿಂಗಳಿಗೆ 2GB ಡೇಟಾವನ್ನು ಬಳಸುತ್ತಾರಂತೆ. ಆದರೆ, ನೋಕಿಯಾದ ವರದಿಯಂತೆ ವೈ-ಫೈ ನೆಟ್ ವರ್ಕ್ ಗಳಿಂದ ಡೇಟಾ ಬಳಕೆ ಪ್ರಮಾಣ 8.5GB ವರೆಗೂ ತಲುಪುತ್ತದೆ. ಏಪ್ರೀಲ್ ನಲ್ಲಿ ಪ್ರಕಟಗೊಂಡ ಟ್ರಾಯ್ ವರದಿಯಂತೆ 2021ರಲ್ಲಿ ಇಂಟರ್ ನೆಟ್ ಟ್ರಾಫಿಕ್ ಅನ್ನು ವೈ-ಫೈ ಶೇ.60ರಷ್ಟು ತುಂಬುತ್ತದೆ ಎಂದು ಹೇಳಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Data hunger growing, 4-fold spike in WiFi usage at 370 railway stations. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more