2999 ರೂ. ಟ್ಯಾಬ್ಲೆಟ್‌ ಕೊಂಡರೆ 1 ವರ್ಷ ಇಂಟರ್ನೆಟ್‌ ಉಚಿತ

By Suneel
|

ಸ್ಮಾರ್ಟ್‌ ಟ್ಯಾಬ್ಲೆಟ್‌ ಕೇವಲ 2999 ರೂಪಾಯಿಗೆ ಸಿಗುತ್ತದೆ ಅಂದ್ರೆ ಬಹುಶಃ ಎಲ್ಲರಿಗೂ ನಂಬಲೂ ಅಸಾಧ್ಯ. ಆದರೆ ನೀವೀಗ ನಂಬಲೇ ಬೇಕು. ಮಾಂಟ್ರಿಯಲ್‌ ಕೆನಡಾದ ವೈರ್‌ಲೆಸ್ ವೆಬ್‌ ಆಕ್ಸೆಸ್ ಪ್ರಾಡಕ್ಟ್‌ ಮತ್ತು ಸರ್ವೀಸ್‌ ಅಭಿವೃದ್ದಿಯ "ಡಾಟಾವಿಂಡ್" ಕಂಪನಿಯು PC7SC ಟ್ಯಾಬ್ಲೆಟ್ ಒಂದನ್ನು ಲಾಂಚ್‌ ಮಾಡಿದೆ. ಇದು ಕೇವಲ 2999 ರೂಗೆ ಗ್ರಾಹಕರ ಕೈಗೆ ದೊರೆಯಲಿದೆ.

ಓದಿರಿ: ಇಂಟರ್ನೆಟ್ ಇಲ್ಲದೆಯೇ ಫೋನ್‌ನಲ್ಲಿ ಮಾಹಿತಿ ಪಡೆಯಿರಿ

ಸಂತೋಷದ ವಿಷಯ ಏನಪ್ಪಾ ಅಂದ್ರೆ ಟ್ಯಾಬ್ಲೆಟ್‌ ಖರೀದಿಸಿದ ನಂತರ ಒಂದು ವರ್ಷಗಳ ಕಾಲ ಉಚಿತ ಇಂಟರ್ನೆಟ್ ಸೇವೆಯನ್ನು ಟ್ಯಾಬ್ಲೆಟ್‌ನಲ್ಲಿ ಎಷ್ಟು ಬೇಕಾದರೂ ಬಳಸಬಹುದಾಗಿದೆ. ಹಾಗಾದರೆ ತಡಮಾಡದೇ ಈ ಟ್ಯಾಬ್ಲೆಟ್‌ ಕೊಳ್ಳಲು ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯರಿ.

 ಡಾಟಾವಿಂಡ್‌ ಕಂಪನಿಯ ಟ್ಯಾಬ್ಲೆಟ್‌

ಡಾಟಾವಿಂಡ್‌ ಕಂಪನಿಯ ಟ್ಯಾಬ್ಲೆಟ್‌

PC7SC ಟ್ಯಾಬ್ಲೆಟ್‌ ಅನ್ನು ಡಾಟಾವಿಂಡ್‌ ಕಂಪನಿಯು ಅಭಿವೃದ್ದಿ ಪಡಿಸಿದ್ದು ಕೇವಲ 2999 ರೂಪಾಯಿಗಳಿಗೆ ಕೊಳ್ಳಬಹುದಾಗಿದೆ.

1 ವರ್ಷ ಉಚಿತ ಇಂಟರ್ನೆಟ್‌

1 ವರ್ಷ ಉಚಿತ ಇಂಟರ್ನೆಟ್‌

ಈ ಟ್ಯಾಬ್ಲೆಟ್ ಖರೀದಿಸಿದವರಿಗೆ ಉಚಿತವಾಗಿ ಒಂದು ವರ್ಷ ಅನ್‌ಲಿಮಿಟೆಡ್‌ ಇಂಟರ್ನೆಟ್‌ ಸೌಲಭ್ಯ ದೊರೆಯಲಿದೆ. ಇಂಟರ್ನೆಟ್‌ ಸೌಲಭ್ಯವನ್ನು ರಿಲಾಯನ್ಸ್‌ ಕಂಮ್ಯೂನಿಕೇಷನ್‌ ಮತ್ತು ಟೆಲಿನಾರ್ ನೆಟ್‌ವರ್ಕ್‌ ನೀಡಲಿವೆ.

ಸುನೀತ್‌ ಸಿಂಗ್‌ ತುಳಿ -ಡಾಟಾವಿಂಡ್‌ನ ಅಧ್ಯಕ್ಷ ಮತ್ತು ಸಿಇಒ

ಸುನೀತ್‌ ಸಿಂಗ್‌ ತುಳಿ -ಡಾಟಾವಿಂಡ್‌ನ ಅಧ್ಯಕ್ಷ ಮತ್ತು ಸಿಇಒ

ಕಂಪನಿ ಸಿಇಒ ಸುನೀತ್‌ ಸಿಂಗ್‌, 'ಡಾಟಾವಿಂಡ್'‌ ಕಂಪನಿಯ ಹೊಸ ಶ್ರೇಣಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳು 1 ವರ್ಷ ಉಚಿತ ಅನ್‌ಲಿಮಿಟೆಡ್‌ ಇಂಟರ್ನೆಟ್‌ ಸೇವೆಯಿಂದ ಪ್ರಾಯೋಜಿತವಾಗಿವೆ ಎಂದಿದ್ದಾರೆ.

ಡಾಟಾವಿಂಡ್‌ ಕಂಪನಿ ಸ್ನಾಪ್‌ಡೀಲ್‌ನೊಂದಿಗೆ ಸಹಭಾಗಿತ್ವ ಹೊಂದಿದೆ.

ಡಾಟಾವಿಂಡ್‌ ಕಂಪನಿ ಸ್ನಾಪ್‌ಡೀಲ್‌ನೊಂದಿಗೆ ಸಹಭಾಗಿತ್ವ ಹೊಂದಿದೆ.

ಡಾಟಾವಿಂಡ್‌ ಕಂಪನಿಯು ತನ್ನ ಪ್ರಾಡಕ್ಟ್‌ PC7SC ಮಾರಾಟ ಮಾಡಲು ಸ್ನಾಪ್‌ಡೀಲ್‌ ಆನ್‌ಲೈನ್‌ ಮಾರಾಟ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿದೆ.ಈ ಟ್ಯಾಬ್ಲೆಟ್‌ ಅನ್ನು ಸ್ನಾಪ್‌ ಡೀಲ್‌ನಲ್ಲಿ ಕೊಳ್ಳಬಹುದಾಗಿದೆ.

ಟ್ಯಾಬ್ಲೆಟ್‌ PC7SC

ಟ್ಯಾಬ್ಲೆಟ್‌ PC7SC

ಟ್ಯಾಬ್ಲೆಟ್ ಇಂಟರ್ನೆಟ್ ಸ್ಪೀಡ್‌ ವೇಗ 3G ಮತ್ತು 4G.

ಟ್ಯಾಬ್ಲೆಟ್‌ PC7SC

ಟ್ಯಾಬ್ಲೆಟ್‌ PC7SC

17.78 ಡಿಸ್‌ಪ್ಲೇ ರೆಸಲ್ಯೂಶನ್ (800*480)

ಟ್ಯಾಬ್ಲೆಟ್‌ PC7SC

ಟ್ಯಾಬ್ಲೆಟ್‌ PC7SC

512MB RAM ಮತ್ತು 4GB ಆಂತರಿಕ ಶೇಖರಣ ಸಾಮರ್ಥ್ಯ ( 32GB ವರೆಗೂ ಎಕ್ಸ್ಪೆಂಡೇಬಲ್‌ ಮಾಡಬಹುದು).

ಟ್ಯಾಬ್ಲೆಟ್‌ PC7SC

ಟ್ಯಾಬ್ಲೆಟ್‌ PC7SC

1.3Ghz ಕೋರ್‌ ಪ್ರೊಸೆಸರ್‌ ಜೊತೆಗೆ ಮಿಡಿಯಾ ಕೋರ್‌

ಟ್ಯಾಬ್ಲೆಟ್‌ PC7SC

ಟ್ಯಾಬ್ಲೆಟ್‌ PC7SC

ಆಂಡ್ರಾಯ್ಡ್‌ 4.4.2 ಒಎಸ್‌

ಟ್ಯಾಬ್ಲೆಟ್‌ PC7SC

ಟ್ಯಾಬ್ಲೆಟ್‌ PC7SC

2400mAh ಬ್ಯಾಟರಿ
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

Most Read Articles
Best Mobiles in India

English summary
DataWind, The wireless web access products and service developer founded in Montreal Canada has unveiled their latest gadget, the PC 7SC tablet at a retail price of Rs. 2,999. The tablet comes with free internet access for one year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X