ನೂತನ ಲ್ಯಾಪ್‌ಟಾಪ್‌ ಸರಣಿ ಪರಿಚಯಿಸಿದ ಡೆಲ್‌: ಗಮನ ಸೆಳೆವ ಫೀಚರ್ಸ್‌!

|

ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಡೆಲ್‌ ಕಂಪೆನಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿದೆ. ತನ್ನ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳ ಮೂಲಕ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ. ಡೆಲ್‌ ಕಂಪೆನಿಯ ಲ್ಯಾಪ್‌ಟಾಪ್‌ಗಳು ತಮ್ಮ ಆಕರ್ಷಕ ಫೀಚರ್ಸ್‌ ಮತ್ತು ವಿನ್ಯಾಸದ ಜೊತೆಗೆ ಬೆಲೆಯ ವಿಚಾರದಿಂದಲೂ ಗಮನಸೆಳೆದಿವೆ. ಸದ್ಯ ಇದೀಗ ಡೆಲ್‌ ಕಂಪೆನಿ ತನ್ನ ಲ್ಯಾಟಿಟ್ಯೂಡ್‌ ಹಾಗೂ ಪ್ರಿಸಿಶನ್ ಸರಣಿಯಲ್ಲಿ ಹೊಸ ಲ್ಯಾಪ್‌ಟಾಪ್‌ಗಳನ್ನು ಭಾರತದಲ್ಲಿ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳು ಕಮರ್ಷಿಯಲ್‌ ಲ್ಯಾಪ್‌ಟಾಪ್‌ಗಳಾಗಿವೆ.

ಡೆಲ್‌

ಹೌದು, ಡೆಲ್‌ ಕಂಪೆನಿ ಭಾರತದಲ್ಲಿ ಲ್ಯಾಟಿಟ್ಯೂಡ್‌ ಮತ್ತು ಪ್ರಿಸಿಶನ್ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳು 14 ಇಂಚಿನ ಮತ್ತು 15 ಇಂಚಿನ ಮಾದರಿಯ ಆಯ್ಕೆಗಳಲ್ಲಿ ಬರಲಿವೆ. ಜೊತೆಗೆ ಅತ್ಯಂತ ಶಕ್ತಿಶಾಲಿ 14 ಇಂಚಿನ ಮೊಬೈಲ್ ವರ್ಕ್‌ಸ್ಟೇಷನ್ (MWS) ಮತ್ತು ಚಿಕ್ಕದಾದ 15-ಇಂಚಿನ MWS ಮತ್ತು ವಿಶ್ವದಲ್ಲಿಯೇ ಚಿಕ್ಕದಾದ 14 ಇಂಚಿನ 16:10 ಬ್ಯುಸಿನೆಸ್‌ PC ಹೊಂದಿದೆ ಎಂದು ಹೇಳಿಕೊಂಡಿದೆ. ಈ ಹೊಸ ಯಂತ್ರಗಳು ಲ್ಯಾಪ್‌ಟಾಪ್ ಮತ್ತು 2-ಇನ್-1 ಫಾರ್ಮ್ ಫ್ಯಾಕ್ಟರ್‌ಗಳಲ್ಲಿ ಲಭ್ಯವಿದೆ.

ಡೆಲ್‌ ಕಂಪೆನಿ

ಡೆಲ್‌ ಕಂಪೆನಿ ಪರಿಚಯಿಸಿರುವ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳು ಕಮರ್ಷಿಯಲ್‌ ಲ್ಯಾಪ್‌ಟಾಪ್‌ಗಳಾಗಿವೆ. ಈ ಬ್ಯುಸಿನೆಸ್‌ ಲ್ಯಾಪ್‌ಟಾಪ್‌ಗಳು 12 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ಗಳನ್ನು ಹೊಂದಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳು 5G ನೆಟ್‌ವರ್ಕ್‌ ಬೆಂಬಲಿಸಲಿದ್ದು, ಇಂಟೆಲ್‌ Wi-Fi 6E ಸೇರಿದಂತೆ ಇತ್ತೀಚಿನ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ಗಳು ಮೆಟಾಲಿಕ್‌ ಗ್ರ್ಯಾಫೈಟ್‌ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿವೆ. ಇನ್ನುಳಿದಂತೆ ಈ ಹೊಸ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್‌ ಲ್ಯಾಟಿಟ್ಯೂಡ್ 9430

ಡೆಲ್‌ ಲ್ಯಾಟಿಟ್ಯೂಡ್ 9430

ಲ್ಯಾಟಿಟ್ಯೂಡ್ 9430 ಲ್ಯಾಪ್‌ಟಾಪ್‌ ಅಲ್ಟ್ರಾ ಪ್ರೀಮಿಯಂ PC ಆಗಿದೆ. ಇದು ವಿಶ್ವದ ಅತ್ಯಂತ ಚಿಕ್ಕ 14 ಇಂಚಿನ 16:10 ಡಿಸ್‌ಪ್ಲೇಯನ್ನು ನೀಡುತ್ತದೆ ಎಂದು ಡೆಲ್ ಹೇಳಿಕೊಂಡಿದೆ. ಇನ್ನು ಇದರ 14 ಇಂಚಿನ ಬ್ಯುಸಿನೆಸ್‌ PC ಯಲ್ಲಿ ಅತ್ಯುತ್ತಮ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ ಲ್ಯಾಪ್‌ಟಾಪ್ FHD ಕ್ಯಾಮೆರಾವನ್ನು ಒಳಗೊಂಡಿದೆ. ಇದು ಹೊಸ ಮೆಟಾಲಿಕ್ ಗ್ರ್ಯಾಫೈಟ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.

ಡೆಲ್ ಲ್ಯಾಟಿಟ್ಯೂಡ್ 7430

ಡೆಲ್ ಲ್ಯಾಟಿಟ್ಯೂಡ್ 7430

ಡೆಲ್ ಲ್ಯಾಟಿಟ್ಯೂಡ್ 7430 ಲ್ಯಾಪ್‌ಟಾಪ್ 14.00 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11 ax, ಬ್ಲೂಟೂತ್ ಸೇರಿವೆ. ಜೊತೆಗೆ ಇದು 3 USB ಪೋರ್ಟ್‌ಗಳು, USB 3.2 Gen 1, HDMI ಪೋರ್ಟ್, ಮಲ್ಟಿ ಕಾರ್ಡ್ ಸ್ಲಾಟ್, ಹೆಡ್‌ಫೋನ್ ಮತ್ತು ಮೈಕ್ ಕಾಂಬೋ ಜ್ಯಾಕ್ ಪೋರ್ಟ್‌ಗಳೊಂದಿಗೆ ಬರುತ್ತದೆ.

ಡೆಲ್‌ ಲ್ಯಾಟಿಟ್ಯೂಡ್ 7330

ಡೆಲ್‌ ಲ್ಯಾಟಿಟ್ಯೂಡ್ 7330

ಲ್ಯಾಟಿಟ್ಯೂಡ್ 7330 ಅಲ್ಟ್ರಾಲೈಟ್ ಕಾನ್ಫಿಗರೇಶನ್ 16:9 ಡಿಸ್‌ಪ್ಲೇ ಹೊಂದಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಚಿಕ್ಕ ಮತ್ತು ಹಗುರವಾದ 13.3 ಇಂಚಿನ ಪ್ರೀಮಿಯಂ ಬ್ಯುಸಿನೆಸ್‌ ಲ್ಯಾಪ್‌ಟಾಪ್‌ ಆಗಿದೆ ಎಂದು ಡೆಲ್‌ ಕಂಪೆನಿ ಹೇಳಿದೆ. ಏಕೆಂದರೆ ಈ ಲ್ಯಾಪ್‌ಟಾಪ್‌ ಕೇವಲ 0.967 ಕೆಜಿ ತೂಕವನ್ನು ಹೊಂದಿದೆ.

ಡೆಲ್‌ ಪ್ರಿಸಿಶನ್ 5470

ಡೆಲ್‌ ಪ್ರಿಸಿಶನ್ 5470

ಡೆಲ್‌ ಪ್ರಿಸಿಶನ್ 5470 ಅತ್ಯಂತ ಚಿಕ್ಕ, ತೆಳುವಾದ ಮತ್ತು ಅತ್ಯಂತ ಶಕ್ತಿಶಾಲಿ 14-ಇಂಚಿನ ಮೊಬೈಲ್ ವರ್ಕ್‌ಸ್ಟೇಷನ್ ಹೊಂದಿದೆ. ಇದು 12ನೇ Gen ಇಂಟೆಲ್ ಕೋರ್ i9 ಪ್ರೊಸೆಸರ್‌ ಹೊಂದಿದೆ. ಹಾಗೆಯೇ 64GB DDR5 ಮೆಮೊರಿ ಮತ್ತು 4TB ಸ್ಟೊರೇಜ್‌ ಅನ್ನು ಹೊಂದಿದೆ. ಇದು ಎನ್‌ವಿಡಿಯಾ RTX A1000 ಗ್ರಾಫಿಕ್ಸ್‌ ಆಯ್ಕೆಯನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ನ ಕೂಲಿಂಗ್ ವ್ಯವಸ್ಥೆಯು ಕಾಂಪ್ಯಾಕ್ಟ್ ಸಿಸ್ಟಮ್‌ನ ಮಿತಿಯೊಳಗೆ ಹೊಂದಿಕೊಳ್ಳುವ ಹೊಸ ಥರ್ಮಲ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಬಳಸುತ್ತದೆ.

ಡೆಲ್‌ ಪ್ರಿಸಿಶನ್ 5570

ಡೆಲ್‌ ಪ್ರಿಸಿಶನ್ 5570

ಡೆಲ್‌ ಪ್ರಿಸಿಶನ್ 5570 ಲ್ಯಾಪ್‌ಟಾಪ್‌ ಕೂಡ 14-ಇಂಚಿನ ಮೊಬೈಲ್ ವರ್ಕ್‌ಸ್ಟೇಷನ್ ಹೊಂದಿದೆ. ಇದು 12ನೇ Gen ಇಂಟೆಲ್ ಕೋರ್ i9 ಪ್ರೊಸೆಸರ್‌ ಹೊಂದಿದೆ. ಹಾಗೆಯೇ 64GB DDR5 ಮೆಮೊರಿ ಮತ್ತು 4TB ಸ್ಟೊರೇಜ್‌ ಅನ್ನು ಹೊಂದಿದೆ. ಆದರೆ ಇದು ಹೆಚ್ಚುವರಿಯಾಗಿ NVIDIA RTX A2000 ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ.

ಡೆಲ್‌ ಪ್ರಿಸಿಶನ್ 3470

ಡೆಲ್‌ ಪ್ರಿಸಿಶನ್ 3470

ಪ್ರಿಸಿಶನ್ ವರ್ಕ್‌ಸ್ಪೇಸ್‌ 3470 ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಐಚ್ಛಿಕ ಎನ್‌ವಿಡಿಯಾ T550 DDR6 ಗ್ರಾಫಿಕ್ಸ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಕಸ್ಟಮೈಸ್ ಮಾಡಬಹುದಾದ ಥರ್ಮಲ್ ಟೇಬಲ್‌ಗಳೊಂದಿಗೆ ಸುಧಾರಿತ ಉಷ್ಣ ನಿರ್ವಹಣೆಯೊಂದಿಗೆ ಬರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ 4GB ಆಯ್ಕೆಯನ್ನು ಹೊಂದಿದೆ.

ವಿಶೇ‍ಷತೆ ಏನು?

ವಿಶೇ‍ಷತೆ ಏನು?

ಡೆಲ್‌ ಕಂಪೆನಿ ಪರಿಚಯಿಸಿರುವ ಲ್ಯಾಟಿಟ್ಯೂಡ್‌ ಮತ್ತು ಪ್ರಿಸಿಶನ್ ಸರಣಿಯ ಲ್ಯಾಪ್‌ಟಾಪ್‌ಗಳು ಹೊಸ ಮಾದರಿಯ ಫೀಚರ್ಸ್‌ಗಳನ್ನು ಹೊಂದಿವೆ. ಇವುಗಳು ಅತಿ ಚಿಕ್ಕ ಡಿಸ್‌ಪ್ಲೇ ಮತ್ತು ತೆಳುವಾದ ಮಾದರಿಯನ್ನು ಹೊಂದಿರುವುದು ಇದರ ವಿಶೇಷವಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಹೈಬ್ರಿಡ್ ಕೆಲಸದ ಪರಿಣತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರತಿಬಿಂಬಿಸುತ್ತವೆ. ಅಲ್ಲದೆ ಈ ಎರಡು ಮಾದರಿಯ ಲ್ಯಾಪ್‌ಟಾಪ್‌ಗಳು ಗ್ರಾಹಕರು ತಮ್ಮ ಐಟಿಯನ್ನು ಸರಳೀಕರಿಸಲು ಮತ್ತು ಅತ್ಯುತ್ತಮ ಉದ್ಯೋಗಿ ಅನುಭವದೊಂದಿಗೆ ಕೆಲಸವನ್ನು ಮಾಡುವುದಕ್ಕೆ ಸಹಾಯ ಮಾಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ತೆರಿಗೆಯನ್ನು ಹೊರತುಪಡಿಸಿ ಡೆಲ್ ಲ್ಯಾಟಿಟ್ಯೂಡ್ 9430 ಲ್ಯಾಪ್‌ಟಾಪ್‌ 1,45,990ರೂ.ಬೆಲೆಯಿಂದ ಪ್ರಾರಂಭವಾಗಲಿದೆ.
ಇನ್ನು ಡೆಲ್ ಲ್ಯಾಟಿಟ್ಯೂಡ್ 7430 ಲ್ಯಾಪ್‌ಟಾಪ್‌ ಬೆಲೆ 94,990ರೂ.ಗಳಿಂದ ಪ್ರಾರಂಭವಾಗುತ್ತದೆ.
ಡೆಲ್‌ ಲ್ಯಾಟಿಟ್ಯೂಡ್‌ 7330 ಅಲ್ಟ್ರಾಲೈಟ್‌ ಬೆಲೆ 99,990ರೂ.ಗಳಿಂದ ಪ್ರಾರಂಭವಾಗುತ್ತದೆ
ಡೆಲ್‌ ಪ್ರಿಸಿಶನ್ 5470 ಲ್ಯಾಪ್‌ಟಾಪ್‌ನ ಬೆಲೆ 1,46,990ರೂ.ಗಳಿಂದ ಆರಂಭವಾಗಲಿದೆ.
ಡೆಲ್‌ ಪ್ರಿಸಿಶನ್ 5570 ಲ್ಯಾಪ್‌ಟಾಪ್‌ ಬೆಲೆ 1,42,990ರೂ.ಗಳಿಂದ ಪ್ರಾರಂಭವಾಗಲಿದೆ.
ಡೆಲ್‌ ಪ್ರಿಸಿಶನ್ 3470 ಲ್ಯಾಪ್‌ಟಾಪ್‌ನ ಬೆಲೆ 79,990ರೂ.ಗಳಿಂದ ಶುರುವಾಗಲಿದೆ.

Best Mobiles in India

English summary
The new commercial laptops have been launched in the 14-inch and 15-inch form factors.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X