ಡೆಲ್‌ ಕಂಪೆನಿಯಿಂದ ಆರು ಹೊಸ ಲ್ಯಾಪ್‌ಟಾಪ್‌ ಅನಾವರಣ! ಭಾರಿ ಸಂಚಲನ!

|

ವಿಶ್ವದ ಅತಿದೊಡ್ಡ ಟೆಕ್‌ ಶೋ ಎನಿಸಕೊಂಡಿರುವ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES 2023) ಪ್ರಾರಂಭಕ್ಕೆ ಒಂದು ದಿನವಷ್ಟೇ ಬಾಕಿ ಉಳಿದಿದೆ. ಜನವರಿ 5 ರಂದು ಪ್ರಾರಂಭವಾಗಲಿರುವ CES 2023ನಲ್ಲಿ ಟೆಕ್‌ ವಲಯದ ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮ ವಿಭಿನ್ನ ಮಾದರಿಯ ಡಿವೈಸ್‌ಗಳನ್ನು ಅನಾವರಣಗೊಳಿಸಲಿವೆ. ಇದೀಗ ಡೆಲ್‌ ಕಂಪೆನಿ CES 2023 ಪ್ರಾರಂಭಕ್ಕೂ ಮುನ್ನವೇ ಡೆಲ್ ಆರು ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಲ್ಯಾಪ್‌ಟಾಪ್‌ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಡೆಲ್‌

ಹೌದು, ಡೆಲ್‌ ಕಂಪೆನಿ CES 2023 ಪ್ರಾರಂಭಕ್ಕೂ ಮುನ್ನವೇ ಆರು ಹೊಸ ಲ್ಯಾಪ್‌ಟಾಪ್‌ಗಳ ಮೂಲಕ ಹೊಸ ಬಿರುಗಾಳಿಯನ್ನೂ ಎಬ್ಬಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳನ್ನು ಡೆಲ್‌ G15, ಡೆಲ್‌ G16, ಡೆಲ್‌ ಅಲೈನ್‌ವೇರ್‌ m18, ಅಲೈನ್‌ವೇರ್‌ m16, ಅಲೈನ್‌ವೇರ್‌ x16 ಮತ್ತು ಅಲೈನ್‌ವೇರ್‌ x14 ಎಂದು ಹೆಸರಿಸಲಾಗಿದೆ. ಹಾಗಾದ್ರೆ ಡೆಲ್‌ ಕಂಪೆನಿ ಹೊಸದಾಘಿ ಪರಿಚಯಿಸಿರುವ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್‌ G15 ಲ್ಯಾಪ್‌ಟಾಪ್‌ ಫೀಚರ್ಸ್‌ ಹೇಗಿದೆ?

ಡೆಲ್‌ G15 ಲ್ಯಾಪ್‌ಟಾಪ್‌ ಫೀಚರ್ಸ್‌ ಹೇಗಿದೆ?

ಡೆಲ್‌ G15 ಲ್ಯಾಪ್‌ಟಾಪ್‌ 15 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, FHD ಬ್ಯಾಕ್‌ಲಿಟ್ LED ಡಿಸ್‌ಪ್ಲೇ ಹೊಂದಿರುವ ಎರಡು ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ FHDಡಿಸ್‌ಪ್ಲೇ 250 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಆದರೆ LED ಡಿಸ್‌ಪ್ಲೇ 300ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಮತ್ತು 165Hz ಸ್ಕ್ರೀನ್ ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ 13 ನೇ-ಜನ್ ಇಂಟೆಲ್ ಕೋರ್ i9 ಪ್ರೊಸೆಸರ್ ಹೊಂದಿದ್ದು, ವಿಂಡೋಸ್‌ 11 ಹೋಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 32GB RAM ಮತ್ತು 2TB ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6 ಅನ್ನು ಬೆಂಬಲಿಸಲಿದೆ.

ಡೆಲ್‌ G16 ಲ್ಯಾಪ್‌ಟಾಪ್‌ ಫೀಚರ್ಸ್‌ ಹೇಗಿದೆ?

ಡೆಲ್‌ G16 ಲ್ಯಾಪ್‌ಟಾಪ್‌ ಫೀಚರ್ಸ್‌ ಹೇಗಿದೆ?

ಈ ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇ ಹೊಂದಿದ್ದು, QHD+ ಬ್ಯಾಕ್‌ಲಿಟ್ LED ಡಿಸ್‌ಪ್ಲೇ ಸೇರಿದಂತೆ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 13 ನೇ-ಜನ್ ಇಂಟೆಲ್ ಕೋರ್ i9 ಪ್ರೊಸೆಸರ್ ವೇಗವನ್ನು ಪಡೆದಿದ್ದು, ವಿಂಡೋಸ್‌ 11 ಹೋಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 32GB RAM ಮತ್ತು 2TB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6 ಮತ್ತು RTX ಎತರ್‌ನೆಟ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ 56Whr ಬ್ಯಾಟರಿ ಮತ್ತು 86Whr ಬ್ಯಾಟರಿ ಆಯ್ಕೆಗಳಲ್ಲಿ ಬರಲಿದೆ.

ಅಲೈನ್‌ವೇರ್‌ m18 ಫೀಚರ್ಸ್‌ ಹೇಗಿದೆ?

ಅಲೈನ್‌ವೇರ್‌ m18 ಫೀಚರ್ಸ್‌ ಹೇಗಿದೆ?

ಅಲೈನ್‌ವೇರ್‌ m18 ಲ್ಯಾಪ್‌ಟಾಪ್‌ ಕೂಡ QHD+ ಮತ್ತು FHD+ ಡಿಸ್‌ಪ್ಲೇಯ ಎರಡು ಆಯ್ಕೆಗಳಲ್ಲಿ ಬರಲಿದೆ. ಇದು 18 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಎರಡೂ ಡಿಸ್‌ಪ್ಲೇ ಮಾದರಿಗಳು ಡೈನಾಮಿಕ್ ಡಿಸ್ಪ್ಲೇ ಸ್ವಿಚಿಂಗ್ ಟೆಕ್ನಾಲಜಿಯನ್ನು ಹೊಂದಿವೆ. ಇದು NVIDIA GeForce RTX 4090 ಗ್ರಾಫಿಕ್ ಮತ್ತು 64GB RAM ಮತ್ತು 4TB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ 13 ನೇ-ಜನ್ ಇಂಟೆಲ್ ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಡಾಲ್ಬಿ ವಿಷನ್‌, ಡಾಲ್ಬಿ ಅಟ್ಮೋಸ್‌, ಫುಲ್‌ಹೆಚ್‌ಡಿ IR ಕ್ಯಾಮೆರಾವನ್ನು ಒಳಗೊಂಡಿದೆ.

ಅಲೈನ್‌ವೇರ್‌ m16 ಫೀಚರ್ಸ್‌

ಅಲೈನ್‌ವೇರ್‌ m16 ಫೀಚರ್ಸ್‌

ಅಲೈನ್‌ವೇರ್‌ m16 ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ QHD+ ಪ್ಯಾನೆಲ್ ಮತ್ತು FHD+ ಪ್ಯಾನೆಲ್ ಎಂಬ ಎರಡು ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಎರಡು ಡಿಸ್‌ಪ್ಲೇ ಮಾದರಿಗಳು ಕೂಡ ಡೈನಾಮಿಕ್ ಡಿಸ್ಪ್ಲೇ ಸ್ವಿಚಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿವೆ. ಇದು 13 ನೇ-ಜನ್ ಇಂಟೆಲ್ ಕೋರ್ ಪ್ರೊಸೆಸರ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ 1-ಲೇನ್‌ ಬ್ಯಾಕ್‌ಲಿಟ್ ಕೀಬೋರ್ಡ್, ಪ್ರತಿ-ಕೀ AlienFX ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು CherryMX ಅಲ್ಟ್ರಾ ಲೋ-ಪ್ರೊಫೈಲ್ ಮೆಕ್ಯಾನಿಕಲ್ ಕೀಬೋರ್ಡ್ ಅನ್ನು ಪಡೆದಿದೆ.

ಅಲೈನ್‌ವೇರ್‌ x16 ಫೀಚರ್ಸ್‌

ಅಲೈನ್‌ವೇರ್‌ x16 ಫೀಚರ್ಸ್‌

ಅಲೈನ್‌ವೇರ್‌ x16 ಲ್ಯಾಪ್‌ಟಾಪ್‌ ಮೂರು ರೂಪಾಂತರಗಳಲ್ಲಿ ಲಭ್ಯವಿರುವ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು i9, i7 i5 ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುವ 13 ನೇ-ಜನ್ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ FHD IR ಕ್ಯಾಮೆರಾ, ವೈಫೈ 6E, ಬ್ಲೂಟೂತ್ 5.3 ಮತ್ತು ಗೇಮಿಂಗ್‌ಗಾಗಿ ಏಲಿಯನ್‌ವೇರ್ ಕಮಾಂಡ್ ಸೆಂಟರ್ 6.0 ಗೆ ಬೆಂಬಲವನ್ನು ಸಹ ಹೊಂದಿದೆ. ಇದು 90Whr ಬ್ಯಾಟರಿಯೊಂದಿಗೆ ಬರುತ್ತದೆ.

ಅಲೈನ್‌ವೇರ್‌ x14 ಫೀಚರ್ಸ್‌

ಅಲೈನ್‌ವೇರ್‌ x14 ಫೀಚರ್ಸ್‌

ಅಲೈನ್‌ವೇರ್‌ x14 ಲ್ಯಾಪ್‌ಟಾಪ್‌ 14 ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 13 ನೇ-ಜನ್ ಇಂಟೆಲ್ ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದು FHD IR ಕ್ಯಾಮೆರಾ, ವೈಫೈ 6E, ಬ್ಲೂಟೂತ್ 5.3 ಮತ್ತು ಗೇಮಿಂಗ್‌ಗಾಗಿ ಏಲಿಯನ್‌ವೇರ್ ಕಮಾಂಡ್ ಸೆಂಟರ್ 6.0 ಗೆ ಬೆಂಬಲವನ್ನು ಸಹ ಹೊಂದಿದೆ. ಇದು 80.5Whr ಬ್ಯಾಟರಿಯೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಡೆಲ್‌ ಕಂಪೆನಿಯ ಈ ಆರು ಲ್ಯಾಪ್‌ಟಾಪ್‌ಗಳು ಭಿನ್ನ ಮಾದರಿಯ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿವೆ. ಇದರ ಡೆಲ್‌ G15 ಬೆಲೆ $ 849 (ಅಂದಾಜು 70,356ರೂ.) ಹೊಂದಿದೆ. ಇದರ ಡೆಲ್‌ G16 ಲ್ಯಾಪ್‌ಟಾಪ್‌ ಬೆಲೆ $ 1,499 (ಅಂದಾಜು 1,24,221ರೂ) ನಿಂದ ಪ್ರಾರಂಭವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು 2023 ರ ಏಪ್ರಿಲ್‌ನಲ್ಲಿ US ಮತ್ತು ಕೆನಡಾದಲ್ಲಿ ಲಭ್ಯವಿರುತ್ತವೆ.
ಇನ್ನು ಅಲೈನ್‌ವೇರ್‌ m18 ಬೆಲೆ $2,899 (ಅಂದಾಜು 2,40,240ರೂ.) ಬೆಲೆ ಹೊಂದಿದೆ. ಇನ್ನು ಅಲೈನ್‌ವೇರ್‌ m16 ಲ್ಯಾಪ್‌ಟಾಪ್‌ ಬೆಲೆ $2,599 (ಅಂದಾಜು 2,15,377ರೂ.)ಗಳಿಂದ ಪ್ರಾರಂಭವಾಗುತ್ತವೆ. ಅದೇ ರೀತಿ, ಅಲೈನ್‌ವೇರ್‌ x16 ಬೆಲೆ $3,099 (ಅಂದಾಜು 2,56,811ರೂ.)ಮತ್ತು ಅಲೈನ್‌ವೇರ್‌ x14 ಲ್ಯಾಪ್‌ಟಾಪ್‌ ಬೆಲೆ $1,799 (ಅಂದಾಜು 1,49,081ರೂ )ಗಳಿಂದ ಪ್ರಾರಂಭವಾಗುತ್ತವೆ. ಈ ಎಲ್ಲಾ ಅಲೈನ್‌ವೇರ್‌ ಲ್ಯಾಪ್‌ಟಾಪ್‌ಗಳು ಈ ಆಕ್ಟೋಬರ್‌, ನವೆಂಬರ್‌ ತಿಂಗಳಿನಲ್ಲಿ ಸೇಲ್‌ ಆಗಲಿವೆ.

Best Mobiles in India

English summary
Dell launched six new gaming laptops ahead of CES 2023

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X