ಫೇಸ್‌ಬುಕ್‌ನಿಂದ ದೂರವಿದ್ದಷ್ಟು ಒಳ್ಳೆಯದು

By Suneel
|

ಪ್ರಸ್ತುತ ದಿನಗಳಲ್ಲಿ ಬಹುಸಂಖ್ಯಾತರು ಒಂದು ಟೈಮ್‌ ಊಟ ಬಿಟ್ಟರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್, ಇಸ್ಟಾಂಟ್‌ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಬಿಟ್ಟು ಇರುವುದಿಲ್ಲ ಎನ್ನುತಾರೆ. ಇದು ನಿಜವೂ ಹೌದು. ಗೆಳೆಯರ ಜೊತೆಗೆ ಗುಂಪಿನಲ್ಲಿದ್ದಾಗಲು ಇವುಗಳನ್ನು ಬಳಸುತ್ತಾ ಗೆಳೆಯರ ಮಾತಿಗೆ ಕಿವಿಗೊಡುವುದಿಲ್ಲ. ಕೆಲವೊಮ್ಮೆ ಒಮ್ಮೆಯೇ ಸಿಟ್ಟಿಗೇಳುತ್ತಾರೆ. ಇಂತಹ ಪ್ರಕ್ರಿಯೆಗಳನ್ನೇ ಪ್ರಮುಖವಾಗಿಸಿಕೊಂಡು ಅಧ್ಯಯನವೊಂದು ಹೊಸ ಹೇಳಿಕೆ ನೀಡಿದೆ.

ಓದಿರಿ: ಜಿಸ್ಯಾಟ್-15 ‌ನಿಂದ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ

ಫೇಸ್‌ಬುಕ್‌ ಬಳಕೆ ತ್ಯಜಿಸುವುದರಿಂದ ಹೆಚ್ಚು ಸಂತೋಷವಾಗಿರಬಹುದು ಎಂದು ಹೊಸ ಸಂಶೋಧನೆ ಒಂದು ಹೇಳಿದೆ. ಈ ಬಗ್ಗೆ ಕೆಲವು ವಿಶೇಷ ಮಾಹಿತಿಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ನೀಡುತ್ತಿದೆ.

ಫೇಸ್‌ಬುಕ್‌ ತ್ಯಜಿಸಿ

ಫೇಸ್‌ಬುಕ್‌ ತ್ಯಜಿಸಿ

ಖಿನ್ನತೆಗೆ ಒಳಗಾದವರು ಫೇಸ್‌ಬುಕ್‌ ಬಳಕೆ ತ್ಯಜಿಸುವುದರಿಂದ ಹೆಚ್ಚು ಸಂತೋಷವಾಗಿರಬಹುದು.

ಅಧ್ಯಯನ

ಅಧ್ಯಯನ

ಡೆನ್ಮಾರ್ಕ್‌ನ ಥಿಂಕ್‌ ಟ್ಯಾಂಕ್‌ ಹ್ಯಾಪಿನೆಸ್‌ ಸಂಶೋಧನಾ ಸಂಸ್ಥೆ ಫೇಸ್‌ಬುಕ್‌ ಬಳಕೆ ತ್ಯಜಿಸುವುದು ಹೆಚ್ಚು ಸಂತೋಷ ನೀಡುತ್ತದೆ ಎಂದು ಹೇಳಿದೆ.

ಅಧ್ಯಯನದ ವರದಿ

ಅಧ್ಯಯನದ ವರದಿ

ಸಾಮಾಜಿಕ ಜಾಲತಾಣ ಬಳಕೆಯಿಂದ ಯಾರು ದೂರ ಉಳಿದ್ದಿದ್ದರೋ, ಅವರು ಕಡಿಮೆ ಏಕಾಂಗಿ ತನ, ಕಡಿಮೆ ಚಿಂತೆ , ಹೆಚ್ಚು ಉತ್ಸುಕರಾಗಿರುವುದು, ಹೆಚ್ಚು ನಿರ್ಣಾಯಕ ಮನೋಭಾವನೆ ಹೊಂದಿರುವುದಾಗಿ ವರದಿ ಹೇಳಿದೆ.

ಅಧ್ಯಯನದಲ್ಲಿ ಭಾಗಿಯಾದವರು.

ಅಧ್ಯಯನದಲ್ಲಿ ಭಾಗಿಯಾದವರು.

ಅಧ್ಯಯನಕ್ಕೆ ಒಟ್ಟಾರೆ 1095 ಸ್ವಯಂ ಅಭ್ಯರ್ಥಿಗಳು ಭಾಗಿಯಾದ್ದು, ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಅಧ್ಯಯನ ಮೊದಲ ಹಂತ

ಅಧ್ಯಯನ ಮೊದಲ ಹಂತ

1095 ಜನರಲ್ಲಿ ಅರ್ಧದಷ್ಟು ಜನರನ್ನು ಫೇಸ್‌ಬುಕ್‌ ಬಳಕೆಯನ್ನು ಎಂದಿನಂತೆ ಮುಂದುವರೆಸಲು ಹೇಳಿದ್ದಾರೆ. ಉಳಿದ ಅರ್ಧದಷ್ಟು ಜನರನ್ನು ಫೇಸ್‌ಬುಕ್‌ ಬಳಕೆ ಮಾಡದಂತೆ ಉಳಿಯಲು ಹೇಳಿದ್ದಾರೆ.

ಅಧ್ಯಯನದಿಂದ ವರದಿಯಾದ ಫಲಿತಾಂಶ

ಅಧ್ಯಯನದಿಂದ ವರದಿಯಾದ ಫಲಿತಾಂಶ

ಒಂದು ವಾರದ ನಂತರ 1095 ಜನರಲ್ಲಿ ಫೇಸ್‌ಬುಕ್‌ ಬಳಕೆ ಮಾಡದೆ ಹಾಗೆ ಉಳಿದಿದ್ದವರಲ್ಲಿ ಶೇಕಡ 88 ರಷ್ಟು ಜನರು ನಾವು ಹೆಚ್ಚು ಸಂತೋಷದಿಂದ ಇದ್ದೆವು ಎಂದು ಹೇಳಿದ್ದಾರೆ.

ಸಂಶೋಧಕರು ಹೇಳಿದ್ದೇನು ?

ಸಂಶೋಧಕರು ಹೇಳಿದ್ದೇನು ?

ಈ ಅಧ್ಯಯನದಿಂದ ಫೇಸ್‌ಬುಕ್‌ ಬಳಕೆ ಮಾಡುವ ಹೆಚ್ಚು ಜನರು ಅಸೂಯೆಗೆ ಒಳಗಾಗುತ್ತಾರೆ ಎಂದಿದ್ದಾರೆ ಸಂಶೋಧಕರು.

ಮೇಯಿಕ್ ವಿಕಿಂಗ್‌- ಸಿಇಓ, ಹ್ಯಾಪಿನೆಸ್‌ ಸಂಶೋಧನಾ ಸಂಸ್ಥೆ

ಮೇಯಿಕ್ ವಿಕಿಂಗ್‌- ಸಿಇಓ, ಹ್ಯಾಪಿನೆಸ್‌ ಸಂಶೋಧನಾ ಸಂಸ್ಥೆ

ಮೇಯಿಕ್‌ ಮಿಕಿಂಗ್ ಫೇಸ್‌ಬುಕ್‌ ''ಎಲ್ಲರ ಬಗ್ಗೆಯೂ ನಿರಂತರ ಸುದ್ದಿ ಬಾಂಬ್‌ ದಾಳಿ ನೆಡೆಸುವ ಸಾಮಾಜಿಕ ಜಾಲತಾಣ'' ಎಂದಿದ್ದಾರೆ.

 ಸಾಫೀ ಅನ್ನೇ ಡಾರ್ನಿ

ಸಾಫೀ ಅನ್ನೇ ಡಾರ್ನಿ

ಫೇಸ್‌ಬುಕ್‌ ಬಳಸದೇ ಇತರ ಕೆಲಸಗಳಲ್ಲಿ ತೊಡಗಿ ನಾನು ಹೆಚ್ಚು ಶಾಂತವಾಗಿದ್ದೇನೆ ಎಂದು ಅಧ್ಯಯನದಲ್ಲಿ ಭಾಗಿಯಾಗಿದ್ದ ಸಾಫೀ ಅನ್ನೇ ಡಾರ್ನಿ ಹೇಳಿದ್ದಾರೆ.

Most Read Articles
Best Mobiles in India

English summary
A study by Denmark-based think tank Happiness Research Institute says quitting Facebook can actually make you happy. It found that those who had abstained from the social networking website reported feeling more enthusiastic, less lonely, less worried and more decisive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more