ಟ್ಯಾಬ್ಲೆಟ್ ಕಾಲಕ್ಕೆ ಅಂತ್ಯ ಹಾಡಿದ ಸ್ಮಾರ್ಟ್‌ಫೋನ್!

|

ಲ್ಯಾಪ್‌ಟಾಪ್‌ಗಳಿಗೆ ಪರ್ಯಾಯವಾಗಿ ಹುಟ್ಟಿದ ಟ್ಯಾಬ್ ಸಾಧನ ಅಂತ್ಯ ಕಂಡಿದೆಯೇ? ಹೌದು, ಇಂತಹದೊಂದು ಪ್ರಶ್ನೆ ಇದೀಗ ಹುಟ್ಟಿದೆ. ಲ್ಯಾಪ್‌ಟಾಪ್‌, ಡೆಸ್ಕ್ ಟಾಪ್‌ ಕಂಪ್ಯೂಟರ್‌ಗೆ ಪರ್ಯಾಯ ಆಗಲಿದೆ ಎಂದೇ ಬಿಂಬಿಸಲಾಗಿದ್ದ ಒಂದು ಕಾಲದ ಜನಪ್ರಿಯ ಸಾಧನ ''ಟ್ಯಾಬ್ಲೆಟ್‌'' ನಿಧಾನವಾಗಿ ಜನರಿಂದ ಮರೆಯಾಗುತ್ತಿದೆ. ಸುಲಭವಾಗಿ ಸಾಗಿಸಬಹುದಾದ ಗಾತ್ರದಿಂದಾಗಿ ಟೆಕ್‌ ಪ್ರಿಯರನ್ನು ಸೆಳೆದಿದ್ದ ಟ್ಯಾಬ್ಲೆಟ್ ಇನ್ನೇನು ಕೆಲವೇ ವರ್ಷಗಳಲ್ಲಿ ನಮ್ಮಿಂದ ಮರೆಯಾಗಲಿದೆ.

ಟ್ಯಾಬ್ಲೆಟ್ ಕಾಲಕ್ಕೆ ಅಂತ್ಯ ಹಾಡಿದ ಸ್ಮಾರ್ಟ್‌ಫೋನ್!

ಹೌದು, ನೀವು ಎಲ್ಲಾದರೂ ತಿರುಗಾಡುವಾಗ ಎಷ್ಟು ಜನರ ಕೈಯಲ್ಲಿ ಟ್ಯಾಬ್ಲೆಟ್‌ ಇದೆ ಎನ್ನುವುದನ್ನು ಗಮನಿಸಿದ್ದರೆ ಇಂತಹ ಅನುಭವ ನಿಮಗೂ ಆಗುತ್ತದೆ. ಜಗತ್ತಿನಲ್ಲಿ ಎಲ್ಲಿ ನೋಡಿದರೂ ಸ್ಮಾರ್ಟ್‌ಫೋನ್‌ಗಳೇ ಕಾಣುತ್ತಿರುವುದರಿಂದ ಟ್ಯಾಬ್ಲೆಟ್ ಎಂಬುದು ಈಗ ಜನಪ್ರಿಯ ಸಾಧನವಾಗಿ ಉಳಿದಿಲ್ಲ. ಹಾಗಾಗಿ, ಇನ್ನೇನು ಕೆಲವೇ ವರ್ಷಗಳಲ್ಲಿ ಟ್ಯಾಬ್ಲೆಟ್‌ಗಳ ಉತ್ಪಾದನೆಯನ್ನು ಬಿಡಿ, ಅವುಗಳನ್ನು ಉಪಯೋಗಿಸುವವರನ್ನು ಸಹ ನೋಡಲಾಗುವುದಿಲ್ಲ ಎಂದು ಟೆಕ್ ತಜ್ಞರು ಅಂದಾಜಿಸಿದ್ದಾರೆ.

ಲ್ಯಾಪ್‌ಟಾಪ್‌ ದೊಡ್ಡದಾಗಿರುವುದರಿಂದ ಅದಕ್ಕೆಂದೇ ಪ್ರತ್ಯೇಕ ಬ್ಯಾಗ್‌ ಬೇಕು. ಹಾಗಾಗಿ, ಇದಕ್ಕೆ ಪರ್ಯಾಯವಾಗಿ ಟ್ಯಾಬ್ಲೆಟ್‌ ಹುಟ್ಟಿಕೊಂಡಿತು. ಆದರೆ, ಇದು ಹೆಚ್ಚು ಜನಪ್ರಿಯವಾಗಲಿಲ್ಲ. ಅದರ ಹುಟ್ಟಿನಂತೆಯೇ ಅದರ ಸಾವು ಕೂಡ ಸಮೀಪಿಸಿತು. ಕಿಬೋರ್ಡ್ ಇಲ್ಲದೇ ಟೈಪಿಂಗ್‌ ಮಾಡುವುದು ರಗಳೆ, ಟ್ಯಾಬ್‌ನಲ್ಲಿ ಕಚೇರಿ ಕೆಲಸಗಳನ್ನು ಮಾಡುವುದು ಕಷ್ಟ ಎಂಬುದು ತಿಳಿದಾಗಲೇ ಟ್ಯಾಬ್ ಬಳಕೆಯನ್ನು ಜನ ನಿಲ್ಲಿಸಿದರು. ಇದೀಗ ಇದರ ಅಂತ್ಯ ಹಾಡಲು ಸ್ಮಾರ್ಟ್‌ಫೋನ್ ಮುಂದಾಗಿದೆ.

ಟ್ಯಾಬ್ಲೆಟ್ ಕಾಲಕ್ಕೆ ಅಂತ್ಯ ಹಾಡಿದ ಸ್ಮಾರ್ಟ್‌ಫೋನ್!

ಸ್ಮಾರ್ಟ್‌ಫೋನ್‌ ಪರದೆಯೇ ಹಿಗ್ಗುತ್ತಿರುವುದರಿಂದ ಟ್ಯಾಬ್‌ ಬಳಕೆ ಕುಗ್ಗುತ್ತಿದೆ. ಟ್ಯಾಬ್‌ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ, ಸ್ಮಾರ್ಟ್‌ಫೋನ್‌ಗಳು ಹಾಗಿಲ್ಲ. ಸುಲಭವಾಗಿ ಜೇಬಿನಲ್ಲಿಲ್ಲಿ ಇಳಿದುಬಿಡುತ್ತವೆ. ಇನ್ನು ಟ್ಯಾಬ್‌ಗಳಲ್ಲಿ ಕಾಣುತ್ತಿದ್ದ ಫೀಚರ್ಸ್‌ಗಿಂತಲೂ ಹೆಚ್ಚು ಫೀಚರ್ಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುತ್ತಿದೆ. ಇನ್ನಿ ಫೋಲ್ಡಿಂಗ್‌ ಫೋನ್‌ಗಳು ಬಂದರಂತೂ ಆಗ ಮತ್ತಷ್ಟು ಸರಳವಾಗಿ, ಟ್ಯಾಬ್‌ ಮೇಲಿನ ಸ್ವಲ್ಪ ಅವಲಂಬನೆ ಕೂಡ ಮರೆಯಾಗಲಿದೆ.

ವೈರಲ್ ಸುದ್ದಿ!..ಮೊಬೈಲ್ ಚಟ ಬಿಡಸಲು ಕಾನೂನನ್ನೇ ತರುತ್ತಿದೆ ಈ ದೇಶ!ವೈರಲ್ ಸುದ್ದಿ!..ಮೊಬೈಲ್ ಚಟ ಬಿಡಸಲು ಕಾನೂನನ್ನೇ ತರುತ್ತಿದೆ ಈ ದೇಶ!

ಕೆಲವೇ ಗ್ರಾಹಕರು, ಸಣ್ಣ ಉದ್ದಿಮೆ ನಡೆಸುವವರು ಮತ್ತು ಪಾಯಿಂಟ್‌ ಆಫ್‌ ಸೇಲ್‌ಗಳಲ್ಲಿ ಬಳಕೆಯಾಗುತ್ತಿರುವ ಈ ಟ್ಯಾಬ್ಲೆಟ್ ಉತ್ಪಾದನೆ ಕೂಡ ಮರೆಯಾಗುತ್ತಿದೆ. ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಸೇರಿ ವಿಶ್ವದ ಶೇ. 85 ರಷ್ಟು ಟ್ಯಾಬ್ಲಟ್ ಮಾರುಕಟ್ಟೆಯನ್ನು ಹೊಂದಿದ್ದು, ಚೀನಾ ಕಂಪೆನಿಗಳು ಟ್ಯಾಬ್ಲೆಟ್ ಉತ್ಪಾದನೆಯಲ್ಲಿ ಅಷ್ಟೇನು ತಲೆಕೆಡಿಸಿಕೊಂಡಿಲ್ಲ. ಹಾಗಾಗಿ, ಹೆಚ್ಚಿನ ಗಾತ್ರದ ಪರದೆ ಇರುವ ಸ್ಮಾರ್ಟ್‌ಫೋನ್‌ಗಳು ಟ್ಯಾಬ್ಲೆಟ್‌ ಅಗತ್ಯತೆಯನ್ನು ಕೊಲ್ಲುತ್ತಿವೆ ಎಂದು ಹೇಳಬಹುದು.

Best Mobiles in India

English summary
Just four years after the introduction of Apple's iPad, tablets already are losing some of their allure to desktop PCs and smartphones, which users seem to. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X