ನಿಮ್ಮನ್ನು ಇನ್ನಷ್ಟು ರಂಜಿಸುವ ವಾಟ್ಸಾಪ್‌ನ ಹೊಸ ಫೀಚರ್ಸ್‌ ಇದು!?

By Ningaraju C
|

ಹಲವು ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್‌ ಅಗ್ರಸ್ಥಾನದಲ್ಲಿದೆ. ಅದರಂತೆ ಜಗತ್ತಿನ ಹಲವು ದೇಶದ ಜನರು ಇದನ್ನು ಬಳಕೆ ಮಾಡುತ್ತಿದ್ದು, ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಗೆ ಮಾಡುವ ಉದ್ದೇಶದಿಂದ ನಿರಂತರವಾಗಿ ವಾಟ್ಸಾಪ್‌ನಲ್ಲಿ ನವೀಕರಣ ಪ್ರಕ್ರಿಯೆಗಳು ಜರುಗುತ್ತಲೇ ಇವೆ. ಇದರ ನಡುವೆ ಈಗ ವಾಟ್ಸಾಪ್‌ ಆಕರ್ಷಕ ಫೀಚರ್ಸ್‌ ಒಂದನ್ನು ಪರಿಚಯಿಸಿದ್ದು, ಈ ಫೀಚರ್ಸ್ ನಿಮ್ಮನ್ನು ಮೋಜಿನ ಲೋಕಕ್ಕೆ ಕರೆದೊಯ್ಯುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ಇನ್ಮುಂದೆ ನೀವು ಡಿಜಿಟಲ್ ಅವತಾರ್‌ ಫೀಚರ್ಸ್‌ ಬಳಕೆ ಮಾಡಬಹುದಾಗಿದೆ. ವಿವಿಧ ಭಾವನೆಗಳು ಮತ್ತು ಕ್ರಿಯೆಗಳನ್ನು ತೋರಿಸುವ 36 ಕಸ್ಟಮ್ ಸ್ಟಿಕ್ಕರ್‌ಗಳಲ್ಲಿ ಬಳಕೆದಾರರು ಒಂದನ್ನು ಆಯ್ಕೆ ಮಾಡಬಹುದಾಗಿದೆ. ಈ ಡಿಜಿಟಲ್ ಅವತಾರದಲ್ಲಿ ಕೇಶವಿನ್ಯಾಸ, ಮುಖದ ಗುಣಲಕ್ಷಣ ಮತ್ತು ವಸ್ತ್ರಗಳನ್ನು ಕಸ್ಟಮೈಸ್‌ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಬಗೆಗಿನ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯೋಣ ಬನ್ನಿ.

ವಾಟ್ಸಾಪ್‌ನಲ್ಲಿ ಡಿಜಿಟಲ್ ಅವತಾರ್‌

ವಾಟ್ಸಾಪ್‌ನಲ್ಲಿ ಡಿಜಿಟಲ್ ಅವತಾರ್‌

ಡಿಜಿಟಲ್ ಅವತಾರವು ವಾಟ್ಸಾಪ್‌ ಬಳಕೆದಾರರಿಗೆ ನವೀನ ಅನುಭವ ನೀಡಲಿದೆ. ಫೇಸ್‌ಬುಕ್‌ನಲ್ಲಿ ಕೆಲವರು ಈಗಾಗಲೇ ಈ ಫೀಚರ್ಸ್‌ ಅನ್ನು ಬಳಕೆ ಮಾಡಿರಬಹುದು. ಅದೇ ರೀತಿ ಈಗ ವಾಟ್ಸಾಪ್‌ನಲ್ಲೂ ಈ ಅವತಾರ್ ಫೀಚರ್ಸ್‌ ಪರಿಚಯಿಸಲಾಗುತ್ತಿದ್ದು, ಇದನ್ನು ಪ್ರೊಫೈಲ್ ಫೋಟೋವಾಗಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

ಮೋಜಿನ ಮಾರ್ಗ

ಮೋಜಿನ ಮಾರ್ಗ

ವಾಟ್ಸಾಪ್‌ ಮೆಸೆಜ್‌ಗಳ ಜೊತೆಗೆ ಫೋಟೋ, ವಿಡಿಯೋ ಹಾಗೂ ಫೈಲ್‌ಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಅದರಂತೆ ಅವತಾರ್‌ ಅನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಬಳಕೆ ಮಾಡಿಕೊಳ್ಳಬಹುದಾಗಿದೆ. ನಿಮ್ಮ ನೈಜ ಫೋಟೋವನ್ನು ಬಳಸದೆಯೇ ನಿಮ್ಮನ್ನು ಪ್ರತಿನಿಧಿಸಲು ಈ ಅವತಾರ್‌ ಫೋಟೋವನ್ನು ಬಳಕೆ ಮಾಡುವ ಮೂಲಕ ನೀವು ಮೋಜಿನ ಒಂದು ಭಾಗವಾಗಬಹುದಾಗಿದೆ.

ನಿಮ್ಮಿಷ್ಟದಂತೆ ರೂಪಿಸಿಕೊಳ್ಳಬಹುದು

ನಿಮ್ಮಿಷ್ಟದಂತೆ ರೂಪಿಸಿಕೊಳ್ಳಬಹುದು

ಈ ಅವತಾರ್‌ ಅನ್ನು ನಿಮ್ಮಿಷ್ಟದ ಹಾಗೆ ರೂಪಿಸಿಕೊಳ್ಳಬಹುದಾಗಿದೆ. ಅಂದರೆ ಲೈಟಿಂಗ್, ಶೇಡಿಂಗ್, ಹೇರ್ ಸ್ಟೈಲ್ ಟೆಕ್ಸ್ಚರ್‌ಗಳು ಮತ್ತು ಹೆಚ್ಚಿನ ಆಯ್ಕೆಯಲ್ಲಿ ನಿಮ್ಮಿಷ್ಟದ ಶೈಲಿಯ ವರ್ಧನೆ ಈ ಫೀಚರ್ಸ್‌ನಲ್ಲಿ ಸಾಧ್ಯವಾಗುತ್ತದೆ. ಅದರಂತೆ ಮುಂದಿನ ದಿನಗಳಲ್ಲಿ ಈ ಶೈಲಿಗಳ ಸಂಬಂಧ ಹೆಚ್ಚಿನ ಫೀಚರ್ಸ್‌ಗಳ ಬಳಕೆಗೆ ಅವಕಾಶ ನೀಡಲಾಗುವುದು ಎಂದು ವಾಟ್ಸಾಪ್‌ ತಿಳಿಸಿದೆ.

ನಿಮ್ಮ ಡಿಜಿಟಲ್ ಅವತಾರವನ್ನು ಹೇಗೆ ರಚಿಸುವುದು?

ನಿಮ್ಮ ಡಿಜಿಟಲ್ ಅವತಾರವನ್ನು ಹೇಗೆ ರಚಿಸುವುದು?

ಈ ಕೂತೂಹಲ ಬಹುಪಾಲು ಮಂದಿಗೆ ಈಗ ಮೂಡಿರಬಹುದು. ವಾಟ್ಸಾಪ್‌ ಓಪನ್‌ ಮಾಡಿದ ನಂತರ ಅಲ್ಲಿ ಸ್ಟಿಕ್ಕರ್‌ಗಳ ವಿಭಾಗಕ್ಕೆ ಹೋಗುವ ಮೂಲಕ ನಿಮ್ಮ ಸ್ವಂತ ಡಿಜಿಟಲ್ ಅವತಾರವನ್ನು ರಚಿಸಿಕೊಳ್ಳಬಹುದಾಗಿದೆ. ಪ್ರಮುಖವಾಗಿ ಐಒಎಸ್ ಬಳಕೆದಾರರು ತಮ್ಮ ಚಾಟ್ ವಿಭಾಗ ಓಪನ್‌ ಮಾಡುವ ಮೂಲಕ ಅದರಲ್ಲಿ ಕಾಣಿಸಿಕೊಳ್ಳುವ ಕೀಬೋರ್ಡ್ ಅನ್ನು ತೆರೆದರೆ ಅಲ್ಲಿ ಸ್ಟಿಕ್ಕರ್‌ಆಯ್ಕೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಆಂಡ್ರಾಯ್ಡ್‌ ಬಳಕೆದಾರರು ಚಾಟ್‌ಬಾಕ್ಸ್‌ನಲ್ಲಿರುವ ಎಮೋಜಿ ಚಿಹ್ನೆಯನ್ನು ಟ್ಯಾಪ್ ಮಾಡುವ ಮೂಲಕ ಅಲ್ಲಿ ಸ್ಟಿಕ್ಕರ್‌ಗಳ ವಿಭಾಗಕ್ಕೆ ತಲುಪಬಹುದು.

ಅವತಾರ್‌

ಈ ಅವತಾರ್‌ ಆಯ್ಕೆ ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತಿದ್ದು, ಒಂದು ವೇಳೆ ನಿಮ್ಮ ವಾಟ್ಸಾಪ್‌ನಲ್ಲಿ ಇನ್ನೂ ಈ ಫೀಚರ್ಸ್‌ ಕಾಣಿಸುತ್ತಿಲ್ಲ ಎಂದರೆ ಆಪ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಿ. ಈ ಮೂಲಕ ನಿಮ್ಮ ಅವತಾರ್‌ ಫೋಟೋವನ್ನು ನಿಮ್ಮ ಪ್ರೊಫೈಲ್‌ಗೆ ಇರಿಸಬಹುದು ಹಾಗೂ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಕಳುಹಿಸಬಹುದು.

ಮೆಟಾ ಸಂಸ್ಥಾಪಕ ಹೇಳಿದ್ದೇನು?

ಮೆಟಾ ಸಂಸ್ಥಾಪಕ ಹೇಳಿದ್ದೇನು?

ಈ ಫೀಚರ್ಸ್ ಸಂಬಂಧ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಮಾಹಿತಿ ನೀಡಿದ್ದು, ಕಂಪೆನಿಯು ಡಿಜಿಟಲ್ ಅವತಾರಗಳನ್ನು ವಾಟ್ಸಾಪ್‌ ಗೆ ತರುತ್ತಿದೆ. ಈ ಮೂಲಕ ವಾಟ್ಸಾಪ್‌ನಲ್ಲಿ ಜನರು ತಮ್ಮ ವೈಯಕ್ತೀಕರಿಸಿಕೊಂಡ ಅವತಾರಗಳನ್ನು ಪ್ರೊಫೈಲ್ ಫೋಟೋಗಳಾಗಿ ಬಳಸಬಹುದು ಅಥವಾ ಹಲವಾರು ವಿಭಿನ್ನ ಭಾವನೆಗಳು ಮತ್ತು ಕ್ರಿಯೆಗಳನ್ನು ಪ್ರತಿಬಿಂಬಿಸುವ 36 ಕಸ್ಟಮ್ ಸ್ಟಿಕ್ಕರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು ಎಂದಿದ್ದಾರೆ.

ವಾಟ್ಸಾಪ್‌

ಹಾಗೆಯೇ ನಾವು ವಾಟ್ಸಾಪ್‌ಗೆ ಅವತಾರಗಳನ್ನು ತರುತ್ತಿದ್ದು, ನೀವು ನಿಮ್ಮ ಅವತಾರವನ್ನು ಚಾಟ್‌ಗಳಲ್ಲಿ ಸ್ಟಿಕ್ಕರ್‌ನಂತೆ ಬಳಸಬಹುದು. ನಮ್ಮ ಎಲ್ಲಾ ಆಪ್‌ಗಳಲ್ಲಿ ಇನ್ನಷ್ಟು ರೀತಿಯ ವಿನ್ಯಾಸಗಳು ಶೀಘ್ರದಲ್ಲೇ ಬಳಕೆಗೆ ಬರಲಿವೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ

Best Mobiles in India

English summary
Digital avatars for WhatsApp users: How to create one.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X