'ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಬಿಲ್ 2022'; ನಿಮ್ಮ ಡೇಟಾ ರಕ್ಷಣೆಗೆ ಸರ್ಕಾರದ ದೃಢ ಹೆಜ್ಜೆ!

|

ಸರ್ಕಾರವು ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಆಗಾಗ್ಗೆ ಪರಿಚಯಿಸಿಕೊಂಡು ಬರುತ್ತಿದೆ. ಈ ಮೂಲಕ ಹೊಸ ಸೇವೆ ನೀಡುವುದರ ಜೊತೆಗೆ ಕೆಲವು ವಿಷಯಗಳಿಗೆ ಕಡಿವಾಣ ಸಹ ಹಾಕಲಾಗುತ್ತಿದೆ. ಇದರ ಭಾಗವಾಗಿ ಈಗ ಸರ್ಕಾರ 'ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2022' ಬಗ್ಗೆ ಪ್ರಸ್ತಾಪಿಸಿದೆ. ಈ ಮೂಲಕ ಬಳಕೆದಾರರ ಡೇಟಾಗೆ ಭದ್ರತೆ ಹೆಚ್ಚಾಗಲಿದೆ.

ಸುಪ್ರಿಂ ಕೋರ್ಟ್

ಹೌದು, 2017 ರಿಂದ ಸುಪ್ರಿಂ ಕೋರ್ಟ್ ಗೌಪ್ಯತೆ ಪ್ರತಿಯೊಬ್ಬ ಭಾರತೀಯ ನಾಗರಿಕನ ಮೂಲಭೂತ ಹಕ್ಕು ಎಂದು ತೀರ್ಪು ನೀಡಿದ ನಂತರ ಈ ಎಲ್ಲಾ ಬೆಳವಣಿಗೆಗಳು ಕಂಡು ಬರುತ್ತಿವೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಡಿಸೆಂಬರ್ 17, 2022 ರೊಳಗೆ ಕರಡು ಮಸೂದೆಯ ಕುರಿತು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ. ಹಾಗೆಯೇ ಈ ಪ್ರತಿಕ್ರಿಯೆಗಾಗಿ ನೀವು ಸಹ MyGov ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಹೊಸ ಡೇಟಾ ಗೌಪ್ಯತೆ

ಸರ್ಕಾರವು ಹೊಸ ಡೇಟಾ ಗೌಪ್ಯತೆ ಮಸೂದೆಯಾದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2022 ಯ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಇದಕ್ಕೂ ಮೊದಲು ಸರ್ಕಾರ 'ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ'ಯನ್ನು ಪರಿಚಯಿಸಿ ಹಿಂತೆಗೆದುಕೊಂಡಿತ್ತು. ಇದೇ ಮಸೂದೆ ಈಗ ಹೊಸ ಸ್ವರೂಪವನ್ನು ಪಡೆದುಕೊಂಡಿದ್ದು, ಶೀಘ್ರದಲ್ಲೇ ಈ ಸಂಬಂಧ ಹೆಚ್ಚು ಸಮಗ್ರ ಕಾನೂನು ಚೌಕಟ್ಟಿನ ವಿಷಯವನ್ನು ಮಂಡಿಸಲಾಗುವುದು ಎಂದು ಸರ್ಕಾರ ಹೇಳಿದೆ. ಹಾಗಿದ್ರೆ ಈ ಕಾನೂನು ಏನೆನೆಲ್ಲಾ ವಿಷಯಗಳನ್ನು ಒಳಗೊಂಡಿರಲಿದೆ ಎಂಬ ವಿಷಯವನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಯಾವುದೇ ಕಂಪೆನಿ

ಯಾವುದೇ ಕಂಪೆನಿಗಳು ವೈಯಕ್ತಿಕ ಡೇಟಾವನ್ನು ವರ್ಗಾಯಿಸುವ ಮುನ್ನ ಆ ದೇಶಗಳ ಪಟ್ಟಿಯನ್ನು ಲಿಸ್ಟ್‌ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಅದರಂತೆ ಪಟ್ಟಿಯಲ್ಲಿ ಉಲ್ಲೇಖ ಮಾಡಲಾದ ದೇಶಗಳಲ್ಲಿರುವ ಸರ್ವರ್‌ಗಳಿಗೆ ಬಳಕೆದಾರರ ಡೇಟಾವನ್ನು ರವಾನೆ ಮಾಡಲು ಕಂಪೆನಿಗಳಿಗೆ ಈ ಮೂಲಕ ಅನುಮತಿ ದೊರೆಯುತ್ತದೆ.

ಮಸೂದೆ

ಈ ಮಸೂದೆ ಪ್ರಕಾರ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿ ಹಿನ್ನೆಲೆ ಡೇಟಾವನ್ನು ಪ್ರಕ್ರಿಯೆಗೊಳಿಸುವುದಕ್ಕೆ ಸರ್ಕಾರವು ರಾಜ್ಯ ಏಜೆನ್ಸಿಗಳಿಗೆ ವಿನಾಯಿತಿ ನೀಡಲಿದೆ.

ಅನುಸರಣೆ

ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಡೇಟಾ ಪ್ರೊಟೆಕ್ಷನ್ ಬೋರ್ಡ್ ಅನ್ನು ಸ್ಥಾಪಿಸಲಿದ್ದು, ಈ ಬೋರ್ಡ್‌ ಮೂಲಕ ದೂರುಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ, ಕೆಲಸದ ಹಂಚಿಕೆ, ದೂರುಗಳ ಸ್ವೀಕೃತಿ, ವಿಚಾರಣೆಗಾಗಿ ವ್ಯಕ್ತಿಗಳ ಗುಂಪು ರಚನೆ, ನಿರ್ಧಾರಗಳ ಘೋಷಣೆ ಈ ಮಂಡಳಿ ಮೂಲಕವೇ ಜರುಗುತ್ತವೆ.

ಕಾನೂನಿನ ನಿಬಂಧನೆ

ಕಂಪೆನಿಗಳು ಕಾನೂನಿನ ನಿಬಂಧನೆಗಳ ಅನುಸರಣೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಸ್ವತಂತ್ರ ಡೇಟಾ ಆಡಿಟರ್ ಅನ್ನು ನೇಮಿಸಬೇಕಿದೆ.

ಡೇಟಾ ಸಂರಕ್ಷಣಾ ಮಂಡಳಿ

ಇನ್ನು ಡೇಟಾ ಸಂರಕ್ಷಣಾ ಮಂಡಳಿಯು ಅನುಚಿತ ವರ್ತನೆಗಳಿಗೆ ದಂಡ ವಿಧಿಸಬಹುದಾದ ಅಧಿಕಾರವನ್ನು ಪಡೆದಿರುತ್ತದೆ. ಅಂತೆಯೇ ಡೇಟಾ ಉಲ್ಲಂಘನೆಯನ್ನು ತಡೆಗಟ್ಟಲು ಸಮಂಜಸವಾದ ಭದ್ರತಾ ಸುರಕ್ಷತೆಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾದರೆ 2.5 ಶತಕೋಟಿ ರೂಪಾಯಿಗಳವರೆಗೆ ದಂಡ ವಿಧಿಸಬಹುದು ಎಂದು ಕರಡು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಬಳಕೆದಾರರ ಡೇಟಾ

ಬಳಕೆದಾರರ ಡೇಟಾವನ್ನು ಸಂಗ್ರಹಿಸಿ ನಂತರ ಆ ಸಂಸ್ಥೆ ಕಾರ್ಯನಿರ್ವಹಿಸದಿದ್ದರೆ ಡೇಟಾವನ್ನು ಉಳಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಬಳಕೆದಾರರು ಇದರಲ್ಲಿ ತಮ್ಮ ವೈಯಕ್ತಿಕ ಡೇಟಾವನ್ನು ಸರಿಪಡಿಸುವ ಮತ್ತು ಅಳಿಸುವ ಹಕ್ಕನ್ನು ಪಡೆಯಲಿದ್ದಾರೆ.

 ಮಸೂದೆ

ಪ್ರಮುಖ ವಿಷಯ ಎಂದರೆ ಈ ಮಸೂದೆಯಲ್ಲಿ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ಹಾನಿ ಉಂಟುಮಾಡುವ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ಯಾವುದೇ ಕಂಪೆನಿ ಹಾಗೂ ಸಂಸ್ಥೆಗೆ ಅನುಮತಿ ಇರುವುದಿಲ್ಲ. ಹಾಗೆಯೇ ಈ ಮೂಲಕ ಜಾಹೀರಾತುನಲ್ಲಿ ಕಾಣಿಸಿಕೊಳ್ಳುವ ಮಕ್ಕಳನ್ನು ಗುರಿಯಾಗಿಸುವಂತಿಲ್ಲ. ಹಾಗೆಯೇ ಮಕ್ಕಳ ಯಾವುದೇ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಮೊದಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರಲಿದೆ.

ಆನ್‌ಲೈನ್‌

ಈ ಹೊಸ ಕಾನೂನಿನ ಪ್ರಕಾರ ಆನ್‌ಲೈನ್‌ನಲ್ಲಿ ಸಂಗ್ರಹಿಸಿದ ವೈಯಕ್ತಿಕ ಡೇಟಾ ಹಾಗೂ ಆಫ್‌ಲೈನ್ ಡೇಟಾವನ್ನು ಡಿಜಿಟೈಸ್ ಮಾಡಲಾಗುತ್ತದೆ.

Best Mobiles in India

English summary
Govt has been introducing several regulations on technology issues from time to time. Meanwhile, the government is now moving to implement the Digital Data Protection Bill 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X