2020ರಲ್ಲಿ ಭಾರತದಲ್ಲಿ ''ಡಿಜಿಟಲ್‌ ವಹಿವಾಟು'' ಹೇಗಿರಲಿದೆ?!..ಗೂಗಲ್ ಸ್ಪೆಷಲ್ ರಿಪೋರ್ಟ್!!

ಭಾರತದಲ್ಲಿ ಡಿಜಿಟಲ್‌ ವಹಿವಾಟು ನಡೆಸುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಚೀನಾಕ್ಕೆ ಹೋಲಿಸಿದರೆ ಮೂವರಲ್ಲಿ ಒಬ್ಬ ಮತ್ತು ಅಮೆರಿಕಕ್ಕೆ ಹೋಲಿಸಿದರೆ ನಾಲ್ವರಲ್ಲಿ ಒಬ್ಬರು ಮಾತ್ರ ಡಿಜಿಟಲ್‌ ವಹಿವಾಟು ನಡೆಸುತ್ತಿದ್ದಾರೆ.

|

ಭಾರತದಲ್ಲಿ ಡಿಜಿಟಲ್‌ ವಹಿವಾಟು ನಡೆಸುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಚೀನಾಕ್ಕೆ ಹೋಲಿಸಿದರೆ ಮೂವರಲ್ಲಿ ಒಬ್ಬ ಮತ್ತು ಅಮೆರಿಕಕ್ಕೆ ಹೋಲಿಸಿದರೆ ನಾಲ್ವರಲ್ಲಿ ಒಬ್ಬರು ಮಾತ್ರ ಡಿಜಿಟಲ್‌ ವಹಿವಾಟು ನಡೆಸುತ್ತಿದ್ದಾರೆ. ಆದರೂ ದೇಶದಲ್ಲಿ ಅಂತರ್ಜಾಲ ವಹಿವಾಟು ಕೂಡ ಹೆಚ್ಚಾಗುತ್ತಿದೆ ಎಂದು ಗೂಗಲ್ ತಿಳಿಸಿದೆ.!!

ಹೌದು, ಬೋಸ್ಟನ್‌ ಕನ್ಸಲ್ಟಿಂಗ್ ಗ್ರೂಪ್‌ ಮತ್ತು ಗೂಗಲ್‌ ನಡೆಸಿರುವ ಜಂಟಿ ಅಧ್ಯಯನದ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ದೇಶದಲ್ಲಿ ಇಂಟರ್‌ನೆಟ್ ಬಳಕೆಯ ಪ್ರಮಾಣ ತೀರ್ವಗತಿಯಲ್ಲಿ ಹೆಚ್ಚಾಗುತ್ತಿದೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಡಿಜಿಟಲ್‌ ವಹಿವಾಟು ನಡೆಸುವವರ ಸಂಖ್ಯೆ ಬಳಕೆದಾರರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ತಿಳಿಸಿದೆ.!!

2020ರಲ್ಲಿ ಭಾರತದಲ್ಲಿ ''ಡಿಜಿಟಲ್‌ ವಹಿವಾಟು'' ಹೇಗಿರಲಿದೆ?!.

ಆದರೆ, 2020ರ ವೇಳೆಗೆ ಭಾರತದಲ್ಲಿ ಆನ್‌ಲೈನ್ ವಹಿವಾಟು 6.4 ಲಕ್ಷ ಕೋಟಿಗೆ ತಲುಪಲಿದೆ ಎಂದು ಗೂಗಲ್ ಅಂದಾಜು ಮಾಡಿದ್ದು, ಅಧ್ಯಯನದ ಪ್ರಕಾರ ಭಾರತೀಯ ಡಿಜಿಟಲ್ ಪಾವತಿ ಉದ್ಯಮವು 2020 ರ ಹೊತ್ತಿಗೆ ಶೇ. 15% GDPಗೆ ಸಮನಾಗಿರಲಿದೆ ಎಂದು ತಿಳಿಸಿದೆ.! ಹಾಗಾದರೆ, ಭವಿಷ್ಯದ ಭಾರತದಲ್ಲಿ ಆನ್‌ಲೈನ್ ಉದ್ಯಮದ ಸ್ಥಿತಿಗತಿಗಳೇನು ಎಂಬ ಪೂರ್ಣಮಾಹಿತಿಯನ್ನು ಮುಂದೆ ತಿಳಿಯಿರಿ.!!

ಡಿಜಿಟಲ್ ವಹಿವಾಟು ಹೆಚ್ಚಳ.!!

ಡಿಜಿಟಲ್ ವಹಿವಾಟು ಹೆಚ್ಚಳ.!!

ಮೊದಲೇ ಹೇಳಿದಂತೆ ದೇಶದಲ್ಲಿ ಅಂತರ್ಜಾಲ ವಹಿವಾಟು ಕೂಡ ಹೆಚ್ಚಾಗುತ್ತಿದೆ. 2020ರ ವೇಳೆಗೆ ಭಾರತದಲ್ಲಿ ಆನ್‌ಲೈನ್ ವಹಿವಾಟಿನ ಮೊತ್ತವು ಶೇ 2.5 ರಷ್ಟು ಏರಿಕೆಯಾಗಿ ಆನ್‌ಲೈನ್ ವಹಿವಾಟು 6.4 ಲಕ್ಷ ಕೋಟಿಗೆ ತಲುಪಲಿದೆ ಎಂದು ಗೂಗಲ್ ಜಂಟಿ ಅಧ್ಯಯನದಲ್ಲಿ ತಿಳಿಸಲಾಗಿದೆ.!!

ಆನ್‌ಲೈನ್‌ ವಹವಾಟು ಪ್ರಮಾಣ?

ಆನ್‌ಲೈನ್‌ ವಹವಾಟು ಪ್ರಮಾಣ?

ದೇಶದಲ್ಲಿ ಪ್ರಸ್ತುತ 40 ಕೋಟಿ ಜನಸಂಖ್ಯೆಯಷ್ಟು ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಅಂತರ್ಜಾಲ ಬಳಸುತ್ತಿದ್ದರೂ ಆನ್‌ಲೈನ್‌ನಲ್ಲಿ ಖರೀದಿ ನಡೆಸದೇ ಇರುವವರು ಶೇ 75 ರಿಂದ 80% ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ.!

ವಹಿವಾಟು ಹೆಚ್ಚಳಕ್ಕೆ ಕಾರಣಗಳೆನು?

ವಹಿವಾಟು ಹೆಚ್ಚಳಕ್ಕೆ ಕಾರಣಗಳೆನು?

ಭಾರತದಲ್ಲಿ ಇ-ಕಾಮರ್ಸ್, ಪ್ರಯಾಣ, ಹೋಟೆಲ್‌, ಹಣಕಾಸು ಸೇವೆಗಳು ಮತ್ತು ಡಿಜಿಟಲ್‌ ಪಾವತಿ ಬಳಕೆ ವೇಗ ಹೆಚ್ಚಾಗಿರುವುದರಿಂದ ಖರೀದಿ ಪ್ರಮಾಣದಲ್ಲಿಯೂ ಏರಿಕೆ ಕಂಡುಬರಲಿದೆ ಎಂದು ವರದಿಯ ಅಂಶಗಳು ತಿಳಿಸಿವೆ.! ಹಾಗಾಗಿ, ಭವಿಷ್ಯದಲ್ಲಿಯೂ ಡಿಜಿಟಲ್ ಪಾವತಿಗಳು ಹೆಚ್ಚಲಿವೆ ಎಂದು ಅಂದಾಜಿಸಲಾಗಿದೆ.!!

ಆನ್‌ಲೈನ್‌ ಬೆಳವಣಿಗೆ ನಿರೀಕ್ಷೆ?

ಆನ್‌ಲೈನ್‌ ಬೆಳವಣಿಗೆ ನಿರೀಕ್ಷೆ?

ದೇಶದಲ್ಲಿ ಪ್ರಸ್ತುತ ಇ-ಕಾಮರ್ಸ್ ವಹಿವಾಟು ₹ 1.12ಲಕ್ಷ ಕೋಟಿಯಷ್ಟಿದೆ. 2020ರ ವೇಳೆಗೆ ಇ-ಕಾಮರ್ಸ್ ವಹಿವಾಟು ₹ 2.56 ಕೋಟಿಯಷ್ಟಾಗಲಿದೆ. 70,400 ಕೋಟಿಯಷ್ಟು ಡಿಜಿಟಲ್‌ ಪಾವತಿಯಿದ್ದು, 2020ರ ವೇಳೆಗೆ ಈ ಸಂಖ್ಯೆ 2.56 ಲಕ್ಷ ಕೋಟಿಗೆ ಬೆಳಯಲಿದೆ ಎಂದು ಅಂದಾಜಿಸಲಾಗಿದೆ.!!

ಆನ್‌ಲೈನ್‌ ಷಾಪಿಂಗ್ ಒಲವು!!

ಆನ್‌ಲೈನ್‌ ಷಾಪಿಂಗ್ ಒಲವು!!

ಕಳೆದ ಕೆಲವು ವರ್ಷಗಳಿಂದೀಚೆಗೆ ಹೊಸ ರೀತಿಯ ಡಿಜಿಟಲ್‌ ಪಾವತಿ ಸೇವೆಗಳ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಗೂಗಲ್‌ ಇಂಡಿಯಾದ ಉದ್ಯಮದ ನಿರ್ದೇಶಕ ನಿತಿನ್ ಬವನ್‌ಕುಲೆ ಹೇಳಿದ್ದಾರೆ. ಪ್ರಸ್ತುತ ಅಂತರ್ಜಾಲ ಬಳಕೆದಾರರಲ್ಲಿ ಆನ್‌ಲೈನ್‌ ಷಾಪಿಂಗ್ ಮಾಡುವವರ ಅನುಪಾತ 5:1 ರಷ್ಟಿದ್ದು, ಈ ಸಂಖ್ಯೆ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.!!

ಫೇಸ್‌ಬುಕ್ ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡೋದು ಗೊತ್ತಾ?..ನಿಮಿಷದಲ್ಲಿ 1000 ಲೈಕು!!ಫೇಸ್‌ಬುಕ್ ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡೋದು ಗೊತ್ತಾ?..ನಿಮಿಷದಲ್ಲಿ 1000 ಲೈಕು!!

Best Mobiles in India

English summary
Google-BCG study reveals Indian digital payments industry to grow to $500 billion by 2020, contributing to 15% of GDP. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X