ದೀಪಾವಳಿ ಹಬ್ಬಕ್ಕೆ ಜೊತೆಯಾದ ಗೂಗಲ್‌: ಸರ್ಚ್‌ಇಂಜಿನ್‌ನಲ್ಲಿ ಬೆಳಗಲಿದೆ ದೀಪ!

|

ದೀಪಾವಳಿ ಹಬ್ಬ ಇನ್ನೇನು ಸನಿಹದಲ್ಲಿದ್ದು, ಭಾರತೀಯರ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಹಲವಾರು ದೈತ್ಯ ಇ-ಕಾಮರ್ಸ್‌ ತಾಣಗಳು ಭಾರತೀಯರ ಈ ಹಬ್ಬವನ್ನು ಸಡಗರದಿಂದ ಸಂಭ್ರಮಿಸಲು ಗ್ಯಾಜೆಟ್‌ಗಳ ಮೇಲೆ ಭರ್ಜರಿ ಆಫರ್‌ ನೀಡಿವೆ. ಇದೆಲ್ಲಕ್ಕಿಂತ ಮಿಗಿಲಾಗಿ ಗೂಗಲ್‌ ಸಹ ಭಾರತೀಯರ ಈ ಹಬ್ಬಕ್ಕೆ ಜೊತೆಯಾಗಿದೆ.

ಸರ್ಚ್‌‌ ಇಂಜಿನ್‌

ಹೌದು, ಪ್ರಮುಖ ಸರ್ಚ್‌‌ ಇಂಜಿನ್‌ ಸೈಟ್‌ ಆಗಿರುವ ಗೂಗಲ್‌ ದೀಪಾವಳಿ ಹಿನ್ನೆಲೆ ಭಾರತೀಯರನ್ನು ತನ್ನದೇ ಆದ ರೀತಿಯಲ್ಲಿ ಸಂಭ್ರಮಿಸುವಂತೆ ಮಾಡುತ್ತಿದೆ. ಗೂಗಲ್ ದೇಶದ ಬಳಕೆದಾರರಿಗೆ ದೀಪಾವಳಿ ಸರ್ಪ್ರೈಸ್ ನೀಡಿದೆ. ಈ ಮೂಲಕ ಭಾರತದಲ್ಲಿನ ಬಳಕೆದಾರರು ಗೂಗಲ್‌ ಸರ್ಚ್‌ಪೇಜ್‌ನಲ್ಲಿ 'Diwali' ಎಂದು ಎಂಟ್ರಿ ಮಾಡಿದರೆ ನಿಮಗೊಂದು ಅಚ್ಚರಿ ಅನುಭವ ಆಗಲಿದೆ.

ಗೂಗಲ್‌

ಈ ಸಂಬಂಧ ಗೂಗಲ್‌ ಟ್ವೀಟ್‌ ಮಾಡಿದ್ದು, ದೀಪಾವಳಿ ಹಿನ್ನೆಲೆ ನಮ್ಮ ಸರ್ಚ್‌ ಬಾಕ್ಸ್‌ನಲ್ಲಿ ‘Diwali' ಎಂದು ಸರ್ಚ್ ಮಾಡಿ, ಆಶ್ಚರ್ಯಕರ ಅನುಭವವನ್ನು ಪಡೆಯಿರಿ ಎಂದು ಹೇಳಿದೆ.

ಆಶ್ಚರ್ಯ

ಹಾಗಿದ್ರೆ ಮತ್ಯಾಕೆ ತಡ ಬನ್ನಿ ಆ ಆಶ್ಚರ್ಯವನ್ನು ಈ ಲೇಖನದ ಜೊತೆಗೆ ತಿಳಿದುಕೊಳ್ಳೋಣ. ಗೂಗಲ್ ಇಂಡಿಯಾದ ವೆಬ್‌ಸೈಟ್‌ನಲ್ಲಿನ ಸರ್ಚ್ ಟೆಕ್ಸ್ಟ್ ಬಾಕ್ಸ್‌ನಲ್ಲಿ 'Diwali' ಎಂದು ಟೈಪ್‌ ಮಾಡಿ ಸರ್ಚ್‌ ಕೊಟ್ಟರೆ ಅಲ್ಲಿ ನಿಮಗೆ ದೀಪಾವಳಿ ಸಂಬಂಧಿತ ಲೇಖನಗಳು ಪ್ರಕಟ ಆಗುತ್ತವೆ. ಇದಕ್ಕೂ ಮಿಗಿಲಾಗಿ 'Diwali' ಪದದ ಕೆಳಗೆ ಫೆಸ್ಟಿವಲ್‌ ಎಂದು ಕಾಣಿಸುತ್ತದೆ. ಇದು ಆರಂಭಿಕ ಸಂತೋಷ ಉಂಟುಮಾಡಿದರೆ, ಇನ್ನೂ ಹೆಚ್ಚಿನ ಆಕರ್ಷಣೆಯನ್ನು ಈ 'Diwali' ಪದದ ಪಕ್ಕದಲ್ಲಿರುವ ದೀಪದ ಐಕಾನ್‌(ಬಟ್ಟಲು) ಹೊಂದಿದೆ.

ದೀಪದ ಐಕಾನ್‌ ಮೇಲೆ ಕ್ಲಿಕ್‌ ಮಾಡಿ, ಆಶ್ಚರ್ಯ ನೋಡಿ

ದೀಪದ ಐಕಾನ್‌ ಮೇಲೆ ಕ್ಲಿಕ್‌ ಮಾಡಿ, ಆಶ್ಚರ್ಯ ನೋಡಿ

'Diwali' ಪದದ ಎಡ ಭಾಗದಲ್ಲಿ ನಕ್ಷತ್ರಗಳಿಂದ ಸುತ್ತುವರಿದಿರುವ ದೀಪದ ಐಕಾನ್‌ ಚಿತ್ರ ನಿಮಗೆ ವಿಶೇಷ ಅನುಭವ ನೀಡಲಿದೆ. ಇದೇ ಕಾರಣಕ್ಕೆ ಗೂಗಲ್‌ ನೀವು ಆಶ್ಚರ್ಯ ಚಕಿತರಾಗಿತ್ತೀರಿ ಎಂದು ಹೇಳಿದೆ. ಈ ದೀಪದ ಮೇಲೆ ನೀವು ಕ್ಲಿಕ್‌ ಮಾಡಿದರೆ ಅದ್ಭುತ ಆನಂದ ಪಡೆಯಬಹುದು. ಈ ದೀಪದ ಐಕಾನ್‌ಅನ್ನು ಕ್ಲಿಕ್‌ ಮಾಡಿದಾಕ್ಷಣ ಅದು ಉರಿಯುತ್ತಿರುವಂತೆ ಗೋಚರಿಸುತ್ತದೆ. ಇದಿಷ್ಟೇ ಅಲ್ಲದೆ, ಡಿಸ್‌ಪ್ಲೇ ನಲ್ಲಿ ಅಲ್ಲಲ್ಲಿ ದೀಪದ ಐಕಾನ್‌ಗಳು ಕಾಣುತ್ತವೆ. ಅವುಗಳನ್ನೂ ಸಹ ನೀವೇ ಬೆಳಗಿಸಬಹುಹುದಾಗಿದೆ. ಹಾಗೆಯೇ ದೀಪದ ಐಕಾನ್‌ ಮೇಲೆ ಕರ್ಸರ್‌ ಇಟ್ಟು ಡಿಸ್‌ಪ್ಲೇ ನ ಎಲ್ಲಾ ಕಡೆ ಚಲಿಸುವಂತೆ ಮಾಡಬಹುದು. ಇದು ಅತ್ಯಾಕರ್ಷಕ ನೋಟವನ್ನು ನೀಡುತ್ತದೆ.

ಮೊಬೈಲ್‌ನಲ್ಲಿ Diwali, Diwali 2022 ಎಂದು ಹುಡುಕಿ!

ಮೊಬೈಲ್‌ನಲ್ಲಿ Diwali, Diwali 2022 ಎಂದು ಹುಡುಕಿ!

Diwali 2022 ಎಂದು ಹುಡುಕಿದಾಗ ಈ ಅನಿಮೇಷನ್ ಪುಟ ತೆರೆದುಕೊಳ್ಳಲಿದೆ. ಈ ಅನುಭವವನ್ನು ಆಂಡ್ರಾಯ್ಡ್‌ ಹಾಗೂ ಆಪಲ್‌ ಬಳಕೆದಾರರು ತಮ್ಮ ಗೂಗಲ್‌ ಆಪ್‌ನಲ್ಲಿ ಪಡೆಯಬಹುದಾಗಿದೆ. ಪ್ರಮುಖ ವಿಷಯ ಎಂದರೆ Diwali ಅಥವಾ Diwali 2022 ಎಂಬ ಎರಡೂ ಕೀವರ್ಡ್ಸ್‌ಗಳಲ್ಲಿ ಇದೇ ರೀತಿಯ ಅನಿಮೇಷನ್‌ ಪುಟ ತೆರೆದುಕೊಳ್ಳಲಿದೆ. ಈ ಆನಿಮೇಷನ್‌ನ ಮೂಲಕ ನಿಮ್ಮ ಮೊಬೈಲ್‌ ಅನ್ನೇ ದೀಪವನ್ನಾಗಿ ಪರಿವರ್ತಿಸಬಹುದಾಗಿದೆ. ಇಲ್ಲಿ ಪ್ರಕಾಶಮಾನವಾಗಿ ಉರಿಯುವ ದೀಪವನ್ನು ಬೆರಳಿನಿಂದ ಟ್ಯಾಪ್‌ ಮಾಡಿಕೊಂಡು ಡಿಸ್ಪ್ಲೇಯನ್ನು ಬೆಳಗಬಹುದು.

ನಿಮ್ಮ ಡಿಸ್‌ಪ್ಲೇಯನ್ನು ಬೆಳಗಿಸುವ ಸುಲಭ ಮಾರ್ಗ ಇಲ್ಲಿದೆ...

ನಿಮ್ಮ ಡಿಸ್‌ಪ್ಲೇಯನ್ನು ಬೆಳಗಿಸುವ ಸುಲಭ ಮಾರ್ಗ ಇಲ್ಲಿದೆ...

ನಿಮ್ಮ ಗೂಗಲ್‌ ಆಪ್‌ನಲ್ಲಿ ಅಥವಾ ಲ್ಯಾಪ್‌ಟಾಪ್‌, ಪಿಸಿಯಲ್ಲಿ ಸರ್ಜ್‌ ಬಾಕ್ಸ್‌ಗೆ ಹೋಗಿ, ಅಲ್ಲಿ Diwali ಅಥವಾ Diwali 2022 ಎಂದು ಟೈಪ್‌ ಮಾಡಿ. ಇದಾದ ನಂತರ ಫಲಿತಾಂಶ ವಿಭಾಗದಲ್ಲಿ Diwali ಎಂದು ಕಾಣುತ್ತದೆ ಅದನ್ನು ಗಮನಿಸಿ. ಅದರ ಪಕ್ಕದಲ್ಲೇ ಇರುವ ದೀಪದ ಐಕಾನ್‌ ಚಿತ್ರವನ್ನು ಕ್ಲಿಕ್‌ ಮಾಡಿ. ಅದನ್ನು ಡಿಸ್‌ಪ್ಲೇ ನ ಇತರೆಡೆ ಡ್ರ್ಯಾಗ್‌ ಮಾಡಿ ಹಾಗೂ ಅಲ್ಲಲ್ಲಿ ಕಾಣುವ ಇತರೆ ದೀಪದ ಐಕಾನ್‌ ಗಳು ನೀವು ಡ್ರ್ಯಾಗ್‌ ಮಾಡುತ್ತಿರುವ ದೀಪದಿಂದ ಬೆಳಗುತ್ತವೆ. ನಂತರ ಇಡೀ ಪರದೆ ಸುಂದರ ನೋಟದಿಂದ ಕಂಗೊಳಿಸುತ್ತದೆ.

Best Mobiles in India

English summary
The festival of Diwali will be celebrated on October 24, and the countdown has begun for the celebration of Indians. Meanwhile, Google has given one of the surprising features to Indian users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X