'ದೀಪಾವಳಿ ವಿಥ್‌ ಮಿ ಸೇಲ್' ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌!

|

ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ಶಿಯೋಮಿ ಕಂಪೆನಿ ತನ್ನ ಗ್ರಾಹಕರನ್ನು ಸೆಳೆಯುವುದಕ್ಕಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ಶಿಯೋಮಿ ಕಂಪೆನಿ "ದೀಪಾವಳಿ ವಿಥ್ ಮಿ" ಸೇಲ್‌ ಆಯೋಜಿಸಿದೆ. ಈ ಸೇಲ್‌ ಇದೇ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 7 ರವರೆಗೆ ನಡೆಯಲಿದೆ. ಈ ಸೇಲ್‌ ಶಿಯೋಮಿ ಕಂಪನಿಯ ಅಧಿಕೃತ ವೆಬ್‌ಸೈಟ್ Mi.com ಮತ್ತು ರಿಟೇಲ್ ಪಾಲುದಾರರಲ್ಲಿ ಲೈವ್ ಆಗಿರುತ್ತದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ದೀಪಾವಳಿ ವಿಥ್‌ ಮಿ ಸೇಲ್‌ ಆಯೋಜಿಸಿದೆ. ಈ ಸೇಲ್‌ ಮಿ ವಿಐಪಿ ಕ್ಲಬ್ ಸದಸ್ಯರಿಗೆ ಈಗಾಗಲೇ ಲೈವ್‌ ಆಗಿದೆ. ಇನ್ನು 'ದೀಪಾವಳಿ ವಿತ್ ಮಿ' ಸೇಲ್‌ನಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಜೊತೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ಹೆಚ್ಚುವರಿ ರಿಯಾಯಿತಿ ಕೂಡ ದೊರೆಯಲಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ದೀಪಾವಳಿ ವಿಥ್‌ ಮಿ ಸೇಲ್‌: ಡಿಸ್ಕೌಂಟ್‌ ಕೂಪನ್‌ ಡೀಲ್ಸ್‌

ದೀಪಾವಳಿ ವಿಥ್‌ ಮಿ ಸೇಲ್‌: ಡಿಸ್ಕೌಂಟ್‌ ಕೂಪನ್‌ ಡೀಲ್ಸ್‌

ಶಿಯೋಮಿ ಕಂಪನಿ ರಿವಾರ್ಡ್ ಮಿ ಕಾರ್ಯಕ್ರಮದ ಅಡಿಯಲ್ಲಿ Mi.com ನಲ್ಲಿ ರೂ. 3500 ಹೆಚ್ಚುವರಿ ಎಕ್ಸ್‌ಚೇಂಜ್ ಬಂಪ್-ಅಪ್ ಆಫರ್ ನೀಡುತ್ತಿದೆ. ಜೊತೆಗೆ 5000 ವರೆಗಿನ ರಿಯಾಯಿತಿ ಕೂಪನ್ ಅನ್ನು ಸಹ ಬಳಕೆದಾರರು ಪಡೆಯಬಹುದಾಗಿದೆ. ಇದಲ್ಲದೆ ಬಳಕೆದಾರರು "ಸ್ಪಿನ್ ದಿ ವೀಲ್" ಮೂಲಕ ತಮ್ಮ ಆಫರ್‌ ಅನ್ನು ಚೆಕ್‌ ಮಾಡಬಹುದು.ಹಾಗೂ ಸೇಲ್‌ನ ಮಾರಾಟದ ಸಮಯದಲ್ಲಿ 1 ಕೋಟಿ ಮೌಲ್ಯದ ಕೂಪನ್‌ಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ. ಇನ್ನು ಈ ಸೇಲ್‌ ಸಮಯದಲ್ಲಿ ಕಂಪನಿಯು ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಜಾಕ್‌ಪಾಟ್ ಡೀಲ್‌ಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಶಿಯೋಮಿ ಇಂಡಿಯಾ ಗ್ರಾಹಕರಿಗೆ ರಿಯಾಯಿತಿ ಮತ್ತು ಕ್ಯಾಶ್ ಬ್ಯಾಕ್ ನೀಡಲು SBI ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ.

ರೆಡ್ಮಿ ನೋಟ್ 10 ಸರಣಿಯಲ್ಲಿ ಹೆಚ್ಚಿನ ರಿಯಾಯಿತಿ!

ರೆಡ್ಮಿ ನೋಟ್ 10 ಸರಣಿಯಲ್ಲಿ ಹೆಚ್ಚಿನ ರಿಯಾಯಿತಿ!

ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರಾಂಡ್‌ ಅಡಿಯಲ್ಲಿ ಅತಿ ಹೆಚ್ಚು ಮಾರಾಟವಾದ ನೋಟ್ 10 ಸರಣಿಯ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಇದರಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿಯಲ್ಲಿ ಸಿಗಲಿವೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ರೆಡ್ಮಿ 10 ಪ್ರೈಮ್

ರೆಡ್ಮಿ 10 ಪ್ರೈಮ್

ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್‌ ದೀಪಾವಳಿ ವಿಥ್‌ ಮಿ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದು 4GB RAM + 64GB ರೂಪಾಂತರದ ಆಯ್ಕೆ ರಿಯಾಯಿತಿ ದರದಲ್ಲಿ 10,799ರೂ.ಗಳಿಗೆ ಲಭ್ಯವಾಗಲಿದೆ. ಜೊತೆಗೆ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 1200ರೂ. ರಿಯಾಯಿತಿ ಒಳಗೊಂಡಿದೆ. ಇದಲ್ಲದೆ ರೆಡ್ಮಿ 10 ಪ್ರೈಮ್ 6GB RAM+128GB ಆಯ್ಕೆಯು ಡಿಸ್ಕೌಂಟ್‌ನಲ್ಲಿ 13,249ರೂ ಬೆಲೆಗೆ ಲಭ್ಯವಾಗಲಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುವಾಗ 1,250ರೂ. ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ರೆಡ್ಮಿ ನೋಟ್ 10 ಎಸ್

ರೆಡ್ಮಿ ನೋಟ್ 10 ಎಸ್

ಇನ್ನು ರೆಡ್ಮಿ ನೋಟ್ 10 ಎಸ್ ಸ್ಮಾರ್ಟ್‌ಫೋನ್‌ 6GB RAM+64GB ಆಯ್ಕೆಗೆ 11,749ರೂ. ಬೆಲೆ ಹೊಂದಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 1,250 ರಿಯಾಯಿತಿಯನ್ನು ಒಳಗೊಂಡಿದೆ. ಇದಲ್ಲದೆ 6GB RAM+128GB ಆವೃತ್ತಿಯನ್ನು 14,749ರೂ ಬೆಲೆಗೆ ಖರೀದಿಸಬಹುದಾಗಿದೆ. ಇದರಲ್ಲಿ SBI ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 1,750ರೂ. ರಿಯಾಯಿತಿ ಒಳಗೊಂಡಿದೆ.

ರೆಡ್ಮಿ ನೋಟ್ 10 ಪ್ರೊ

ರೆಡ್ಮಿ ನೋಟ್ 10 ಪ್ರೊ

ಇನ್ನು ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ ಕೂಡ ದೀಪಾವಳಿ ವಿಥ್‌ ಮಿ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯಲಿದೆ. ಇದು 6GB RAM +128GB ಆಯ್ಕೆಗೆ 15,249ರೂ. ಬೆಲೆಗೆ ದೊರೆಯಲಿದೆ. ಜೊತೆಗೆ ಕ್ರೆಡಿಟ್‌ ಕಾರ್ಡ್‌ ಬಳಸಿ ಖರೀದಿಸಿದರೆ 2,750ರೂ. ಡಿಸ್ಕೌಂಟ್‌ ಸಿಗಲಿದೆ. ಈ ಸ್ಮಾರ್ಟ್‌ಫೋನ್‌ 8GB RAM+128GB ರೂಪಾಂತರದ ಆಯ್ಕೆ ರಿಯಾಯಿತಿ ದರದಲ್ಲಿ 17,749ರೂ.ಗಳಿಗೆ ದೊರೆಯಲಿದೆ. ಇದು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಿಗೆ ಮಾತ್ರ 1,250ರೂ. ರಿಯಾಯಿತಿ ಹೊಂದಿದೆ.

Best Mobiles in India

English summary
Here’s a look at all the discounts that the brand will be offering.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X