ಡಿಜೊ ಟ್ರಿಮ್ಮರ್ ಕಿಟ್ ಪ್ರೊ ಲಾಂಚ್; ಏನಿದರ ಫೀಚರ್ಸ್‌?

|

ವೇಗದ ಬದುಕಿನ ಶೈಲಿಯಲ್ಲಿ ಹಲವಾರು ದೈನಂದಿನ ಬಳಕೆಯ ಗ್ಯಾಜೆಟ್‌ಗಳು ಮಹತ್ವ ಪಡೆದುಕೊಂಡಿವೆ. ಅದರಲ್ಲೂ ಸ್ಮಾರ್ಟ್‌ಹೋಮ್‌ ಗ್ಯಾಜೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಪ್ರಮುಖ ಕಂಪೆನಿಗಳು ಕೈಗೆಟುಕುವ ಬೆಲೆಯಿಂದ ಹೈ ಎಂಡ್‌ ರೇಂಜ್‌ ವರೆಗೂ ದೈನಂದಿನ ಬಳಕೆಯ ಗ್ಯಾಜೆಟ್‌ಗಳನ್ನು ಪರಿಚಯಿಸಿವೆ. ಇದರ ನಡುವೆ ಭಾರತದಲ್ಲಿ ಡಿಜೊ ಟ್ರಿಮ್ಮರ್ ಕಿಟ್ ಪ್ರೊ (Dizo Trimmer Kit Pro) ಲಾಂಚ್‌ ಮಾಡಲಾಗಿದೆ.

ಟ್ರಿಮ್ಮರ್

ಹೌದು, ರಿಯಲ್‌ಮಿಯ ಸಬ್‌ ಬ್ರಾಂಡ್‌ ಆದ ಟೆಕ್‌ಲೈಫ್‌ ಭಾರತದಲ್ಲಿ ಪುರುಷರಿಗಾಗಿ ನೂತನ ಶೈಲಿಯ ಹಾಗೂ ವಿವಿಧ ಫೀಚರ್ಸ್‌ ಇರುವ ಡಿಜೊ ಟ್ರಿಮ್ಮರ್ ಕಿಟ್ ಪ್ರೊ 5-ಇನ್-1 ಅನ್ನು ಅನಾವರಣಗೊಳಿಸಲಾಗಿದೆ. ಈ ಹಿಂದೆ ಟೆಕ್‌ಲೈಫ್ 4-ಇನ್-1 ಕಿಟ್‌ ಅನ್ನು ಅನಾವರಣ ಮಾಡಲಾಗಿತ್ತು. ಆದರೆ ಈಗ ಲಾಂಚ್‌ ಮಾಡಲಾಗಿರುವ ಟ್ರಿಮ್ಮರ್ ಹಲವು ಫೀಚರ್ಸ್‌ ಪಡೆದಿದೆ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್‌ ಏನು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಡಿಜೊ ಟ್ರಿಮ್ಮರ್ ಕಿಟ್ ಪ್ರೊ ಫೀಚರ್ಸ್

ಡಿಜೊ ಟ್ರಿಮ್ಮರ್ ಕಿಟ್ ಪ್ರೊ ಫೀಚರ್ಸ್

ಈ ನೂತನ ಟ್ರಿಮ್ಮರ್ ಐದು ಆಯ್ಕೆಗಳಲ್ಲಿ ಕಂಡುಬಂದಿದ್ದು, ಇದರಲ್ಲಿ ಶೇವರ್‌, ಬಿಯರ್ಡ್‌ ಹಾಗೂ ಹೆಡ್‌ ಹೇರ್‌ ಟ್ರಿಮ್ಮರ್‌, ನಾಯ್ಸ್‌ ಹಾಗೂ ಇಯರ್‌ ಹೇರ್‌ ರಿಮೂವರ್‌ ಫೀಚರ್ಸ್‌ ಪಡೆದಿದೆ. ಇದಿಷ್ಟೇ ಅಲ್ಲದೆ, ಈ ಕಿಟ್‌ ಜೊತೆಗೆ 10mm-20mm ಹಾಗೂ 0.5mm-10mm ನ ಎರಡು ಬಾಚಣಿಕೆಗಳನ್ನೂ ನೀಡಲಾಗುತ್ತದೆ.

ಕಾರ್ಯಕ್ಷಮತೆ ಹೇಗಿರಲಿದೆ?

ಕಾರ್ಯಕ್ಷಮತೆ ಹೇಗಿರಲಿದೆ?

ಡಿಜೊ ಟ್ರಿಮ್ಮರ್ ಕಿಟ್ ಗ್ರೇಡ್ 420 ಸ್ಟೇನ್‌ಲೆಸ್ ಸ್ಟೀಲ್ ಬ್ಲೇಡ್‌ಗಳ ಆಯ್ಕೆ ಪಡೆದಿದೆ. ಈ ಮೂಲಕ ಇದು 50% ತೀಕ್ಷ್ಣವಾಗಿ ಕೆಲಸ ಮಾಡುತ್ತದೆ. ಹಾಗೆಯೇ ಟ್ರಿಮ್ಮರ್ 15% ನಿಶ್ಯಬ್ದವಾಗಿದ್ದು, ಕಿರಿಕಿರಿಯ ಅನುಭವ ಉಂಟಾಗುವುದಿಲ್ಲ ಇದರ ಜೊತೆಗೆ ಪ್ರಮುಖ ಫೀಚರ್ಸ್‌ ಒಂದನ್ನು ಇದು ಒಳಗೊಂಡಿದೆ. ಅದುವೇ ಆರಾಮದಾಯಕ ಅನುಭವಕ್ಕಾಗಿ ತಾಪಮಾನ ಕಂಟ್ರೋಲರ್‌ ಆಯ್ಕೆ. ಈ ಮೂಲಕ ಹವಾಮಾನಕ್ಕೆ ತಕ್ಕಂತೆ ಟ್ರಿಮ್ಮರ್ ಬಿಸಿಯಾದ ಅನುಭವ ನೀಡಬೇಕೋ ಅಥವಾ ತಣ್ಣನೆಯ ಅನುಭವ ನೀಡಬೇಕೋ ಎಂಬುದನ್ನು ಸೆಟ್‌ ಮಾಡಿಕೊಳ್ಳಬಹುದು.

ನೀರಿನಿಂದ ತೊಳೆಯಬಹುದು

ನೀರಿನಿಂದ ತೊಳೆಯಬಹುದು

ಈ ಹಿಂದೆ ಅನಾವರಣ ಆಗಿರುವ ಬಹುಪಾಲು ಟ್ರಿಮ್ಮರ್‌ಗಳಿಗೆ ಸಾಮಾನ್ಯವಾಗಿ ನೀರು ತಗುಲಿದರೆ ಹಾಳಾಗಲಿವೆ. ಆದರೆ, ಸ್ನಾನ ಮಾಡುವಾಗಲೂ ಸಹ ಬಳಕೆ ಮಾಡಿಕೊಳ್ಳಬಹುದಾದ ಫೀಚರ್ಸ್‌ ಅನ್ನು ಈ ಟ್ರಿಮ್ಮರ್‌ ಪಡೆದಿದೆ. PX5 ರೇಟಿಂಗ್‌ಗೆ ಬೆಂಬಲ ಇದಕ್ಕಿದ್ದು ನೀರಿನಿಂದ ತೊಳೆಯಬಹುದಾಗಿದೆ. ಇನ್ನು ಪೋರ್ಟಬಲ್ ಫಾರ್ಮ್ ಫ್ಯಾಕ್ಟರ್ ಹಾಗೂ ಮ್ಯಾಟ್ ಫಿನಿಶ್‌ ಡಿಸೈನ್‌ ಪಡೆದಿದ್ದು, ನೋಡಲು ತುಂಬಾ ಆಕರ್ಷಕವಾಗಿ ಕಾಣಲಿದೆ. ಹಾಗೆಯೇ ಈ ಟ್ರಿಮ್ಮರ್ ಟ್ರಾವೆಲ್ ಲಾಕ್ ಫೀಚರ್ಸ್‌ ಹೊಂದಿದ್ದು ಇದನ್ನು ಮತ್ತೇ ಸಕ್ರಿಯಗೊಳಿಸಲು ಪವರ್‌ ಬಟನ್‌ ಅನ್ನು ಧೀರ್ಘವಾಗಿ ಪ್ರೆಸ್‌ ಮಾಡಿದರೆ ಸಾಕು ಆನ್‌ ಆಗುತ್ತದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ ಟ್ರಿಮ್ಮರ್ 1,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, USB ಟೈಪ್-ಸಿ ಪೋರ್ಟ್‌ಗೆ ಬೆಂಬಲ ನೀಡಲಿದೆ. ಜೊತೆಗೆ ಕೇವಲ 5 ನಿಮಿಷಗಳ ಕಾಲ ಚಾರ್ಜಿಂಗ್‌ ಮಾಡಿದರೆ 15 ನಿಮಿಷಗಳ ವರೆಗೆ ಬಳಕೆ ಮಾಡಬಹುದಾಗಿದೆ. ಇದೆಲ್ಲವೂ ಸೇರಿದಂತೆ ಒಂದು ಪೂರ್ಣ ಚಾರ್ಜ್‌ನಲ್ಲಿ 280 ನಿಮಿಷಗಳ ರನ್‌ಟೈಮ್ ನೀಡಲಿದೆ ಹಾಗೆಯೇ ಬಳಕೆ ಮಾಡದೆ ಇಟ್ಟರೆ ಬರೋಬ್ಬರಿ 3.5 ತಿಂಗಳವರೆಗೆ ಚಾರ್ಜಿಂಗ್ ಇರಲಿದೆ. ಇದರೊಂದಿಗೆ ಟ್ರಿಮ್ಮರ್‌ನಲ್ಲಿ ಸಣ್ಣ ಡಿಸ್‌ಪ್ಲೇ ನೀಡಲಾಗಿದ್ದು, ಇದರಲ್ಲಿ ಬ್ಯಾಟರಿ ಶಕ್ತಿ ಎಷ್ಟಿದೆ ಎಂಬ ಸೂಚನೆಯನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಡಿಜೊ ಟ್ರಿಮ್ಮರ್ ಕಿಟ್ ಪ್ರೊ 1,799ರೂ. ಗಳ ಬೆಲೆ ಪಡೆದಿದೆ. ಆದರೆ, ಆರಂಭಿಕರ ಕೊಡುಗಯಾಗಿ 1,499ರೂ. ಗಳಿಗೆ ಡಿವೈಸ್ ಖರೀದಿ ಮಾಡಬಹುದಾಗಿದೆ. ಇನ್ನು ಇದೇ ತಿಂಗಳ (ಅಕ್ಟೋಬರ್) 20 ರಿಂದ ಇ- ಕಾಮರ್ಸ್ ಸೈಟ್‌ ಆದ ಫ್ಲಿಪ್‌ಕಾರ್ಟ್‌ನಲ್ಲಿ ಕೊಂಡುಕೊಳ್ಳಬಹುದಾಗಿದೆ.

Best Mobiles in India

English summary
A number of daily use gadgets have gained importance in the fast-paced lifestyle. Meanwhile, Techlife a sub-brand of Realme unveiled a new trimmer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X