ಇಡೀ ಟೆಕ್‌ ವಲಯದ ಕಣ್ಣು ಈ ಸ್ಮಾರ್ಟ್‌ವಾಚ್‌ ಮೇಲಿದೆ? ಅಂತಹದ್ದೇನಿದೆ ಇದರಲ್ಲಿ!

|

ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಡಿಜೋ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಪಡೆದುಕೊಂಡಿದೆ. ತನ್ನ ಆಕರ್ಷಕ ಸ್ಮಾರ್ಟ್‌ವಾಚ್‌ಗಳ ಮೂಲಕ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ಇದೀಗ ಹೊಸ ಡಿಜೋ ವಾಚ್‌ ಡಿ ಪ್ರೊ ವಾಚ್‌ ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಇದೇ ಜನವರಿ 9 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇನ್ನು ಸ್ಮಾರ್ಟ್‌ವಾಚ್‌ ನವೀನ ಮಾದರಿಯ ಡಿಸೈನ್‌ ಹಾಗೂ ಯುವಜನತೆಯ ಆಶಯಕ್ಕೆ ಪೂರಕವಾದ ಫೀಚರ್ಸ್‌ಗಳನ್ನು ಹೊಂದಿದೆ ಎನ್ನಲಾಗಿದೆ.

ಡಿಜೋ

ಹೌದು, ಡಿಜೋ ಕಂಪೆನಿ ಭಾರತದಲ್ಲಿ ಹೊಸ ಡಿಜೋ ವಾಚ್ ಡಿ ಪ್ರೊ ಪರಿಚಯಿಸಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ವಾಚ್‌ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಇದರ ಟೀಸರ್‌ನಲ್ಲಿ ಬಯಲಾಗಿದೆ. ಅದರಂತೆ ಈ ಸ್ಮಾರ್ಟ್‌ವಾಚ್‌ ಬಲಭಾಗದಲ್ಲಿರುವ ಕಿರೀಟದಂತಹ ಫಿಸಿಕಲ್‌ ಬಟನ್‌ನೊಂದಿಗೆ ಸ್ಕ್ವೇರ್‌ ಡಯಲ್‌ನೊಂದಿಗೆ ಬರಲಿದೆ. ಇದು 1.85 ಇಂಚಿನ ಬಿಗ್‌ ಡಿಸ್‌ಪ್ಲೇ ಹೊಂದಿರಲಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ವಾಚ್‌

ಡಿಜೋ ವಾಚ್‌ ಡಿ ಪ್ರೊ ಸ್ಮಾರ್ಟ್‌ವಾಚ್‌ ಯುವಜನತೆಯ ಆಶಯಕ್ಕೆ ತಕ್ಕಂತ ವಿನ್ಯಾಸವನ್ನು ಹೊಂದಿದೆ. ಇದಕ್ಕೆ ಅನುಗುಣವಾಗಿ ಈ ಸ್ಮಾರ್ಟ್‌ವಾಚ್‌ 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 1.85 ಇಂಚಿನ ಬಿಗ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಮೃದುವಾದ ಅನಿಮೇಷನ್‌ನೊಂದಿಗೆ ಬರಲಿದೆ ಎಂದು ಟೀಸ್‌ ಮಾಡಲಾಗಿದೆ. ಇನ್ನು ಡಿಜೋ ವಾಚ್ D ಪ್ರೊ ಡಿಜೋ ಬ್ರ್ಯಾಂಡ್‌ ಸ್ವಾಮ್ಯದ D1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4x RAM ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

ಸ್ಮಾರ್ಟ್‌ವಾಚ್‌

ಡಿಜೋ ವಾಚ್‌ ಡಿ ಪ್ರೊ ಸ್ಮಾರ್ಟ್‌ವಾಚ್‌ DIZO OS ನೊಂದಿಗೆ ಡೈನಾಮಿಕ್, ಇಂಟರ್‌ ಆಕ್ಟಿವ್ ಮತ್ತು ಜಪ್ಪಿ ಆಪರೇಟಿಂಗ್ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಮೇಲ್ವಿಚಾರಣೆ ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್‌ ಮಾಡಲಿದೆ. ಅಲ್ಲದೆ ಇದು ಸಿಂಗಲ್ ಚಿಪ್‌ಸೆಟ್ ಕಾಲಿಂಗ್‌ ಅನ್ನು ಕೂಡ ಬೆಂಬಲಿಸಲಿದೆ. ಇನ್ನು ಸ್ಮಾರ್ಟ್‌ವಾಚ್ ಡಿ ಪ್ರೊನಲ್ಲಿನ DIZO OS ಹೊಸ-ಹೊಸ ಪವರ್‌ ಫುಲ್‌ ಫೀಚರ್ಸ್‌ಗಳನ್ನು ನೀಡಲಿದೆ ಎಂದು ಹೇಳಲಾಗಿದೆ.

ವಾಚ್

ಇದರಲ್ಲಿ ಪ್ರಮುಖವಾಗಿ ವಾಚ್ ಫೇಸ್ ಕಸ್ಟಮೈಸೇಶನ್‌ಗಾಗಿ ಆರ್ಟ್ ಫಿಲ್ಟರ್, ಗಾಳಿಯ ವೇಗ, ಆರ್ದ್ರತೆ ಮತ್ತು UV ಸೂಚ್ಯಂಕ ಮತ್ತು ಮುಂದಿನ 3 ಗಂಟೆಗಳ ವೆದರ್‌ ಅಪ್ಡೇಟ್‌ ನೀಡುವ ಫೀಚರ್ಸ್‌ ಒಳಗೊಂಡಿರಲಿದೆ. ಇದಲ್ಲದೆ ಸ್ಮಾರ್ಟ್ ಡೋಂಟ್ ಡಿಸ್ಟರ್ಬ್ ಮೋಡ್, ನೀವು ನಿದ್ರಿಸುವಾಗ ಸ್ವಯಂಚಾಲಿತವಾಗಿ ಆನ್ ಆಗುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇದೇ ಜನವರಿ 9 ರಂದು ಲಾಂಚ್‌ ಆಗಲಿದೆ. ಬಿಡುಗಡೆಯ ನಂತರ ಇದರ ಬೆಲೆ ವಿವರಗಳು ಬಹಿರಂಗವಾಗಲಿದೆ.

ಡಿಜೋ

ಇದಲ್ಲದೆ ಡಿಜೋ ಕಂಪೆನಿ ಇತ್ತೀಚಿಗೆ ಡಿಜೊ ವಾಚ್‌ ಆರ್‌ ಟಾಕ್‌ ಗೋ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಎರಡು ಭೌತಿಕ ಬಟನ್‌ಗಳನ್ನು ಹೊಂದಿದೆ. ಇದರಲ್ಲಿ ಒಂದು ಹೋಮ್‌ ಬಟನ್‌ ಮತ್ತು ಇನ್ನೊಂದು ಬಟನ್‌ ಸ್ಪೋರ್ಟ್ಸ್‌ ಮೋಡ್‌ಗಳಿಗೆ ಪ್ರವೇಶ ನೀಡಲಿದೆ. ಇದು 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 10 ದಿನಗಳ ಬ್ಯಾಕ್‌ಅಪ್‌ ನೀಡಲಿದೆ ಎಂದು ಹೇಳಿದೆ. ಇದು 7H ಟೆಂಪರ್ಡ್ ಗ್ಲಾಸ್ ಲೇಯರ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ.

Best Mobiles in India

English summary
DIZO Watch D Pro With Custom Chip To Launch In India On January 9

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X