ಹೇಗಿದೆ ಗೊತ್ತಾ ವಾಚ್ ಆರ್ ಟಾಕ್ ಗೋ ಸ್ಮಾರ್ಟ್‌ವಾಚ್‌? ಕಡಿಮೆ ಬೆಲೆ, ಜಬರ್ದಸ್ತ್‌ ಫೀಚರ್ಸ್‌!

|

ಡಿಜೊ ಕಂಪೆನಿ ಸ್ಪೋರ್ಟ್ಸ್‌ಪ್ರಿಯರಿಗೆ ಸೂಕ್ತವಾದ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಸ್ಟೈಲಿಶ್‌ ಲುಕ್‌ ಹಾಗೂ ಆಕರ್ಷಕ ಫೀಚರ್ಸ್‌ಗಳ ಕಾರಣಕ್ಕೆ ಡಿಜೋ ಸ್ಮಾರ್ಟ್‌ವಾಚ್‌ಗಳು ಗಮನಸೆಳೆದಿವೆ. ಸದ್ಯ ಇದೀಗ ಸ್ಪೋರ್ಟ್ಸ್‌ಪ್ರಿಯರಿಗಾಗಿ ಹೊಸ ವಾಚ್‌ ಆರ್‌ ಟಾಕ್‌ ಗೋ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು ವಾಚ್‌ ಆರ್‌ ಟಾಕ್‌ನ ಮತ್ತೊಂದು ರೂಪಾಂತರವಾಗಿದೆ. ಇದು ಬ್ಲೂಟೂತ್‌ ಕಾಲಿಂಗ್‌, ಹೆಲ್ತ್‌ ಟ್ರ್ಯಾಕಿಂಗ್‌ಗಾಗಿ ಡಯಲ್‌ ಸೆನ್ಸಾರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಡಿಜೊ

ಹೌದು, ಡಿಜೊ ಕಂಪೆನಿ ಹೊಸ ಡಿಜೊ ವಾಚ್‌ ಆರ್‌ ಟಾಕ್‌ ಗೋ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಎರಡು ಭೌತಿಕ ಬಟನ್‌ಗಳನ್ನು ಹೊಂದಿದೆ. ಇದರಲ್ಲಿ ಒಂದು ಹೋಮ್‌ ಬಟನ್‌ ಮತ್ತು ಇನ್ನೊಂದು ಬಟನ್‌ ಸ್ಪೋರ್ಟ್ಸ್‌ ಮೋಡ್‌ಗಳಿಗೆ ಪ್ರವೇಶ ನೀಡಲಿದೆ. ಇದು 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 10 ದಿನಗಳ ಬ್ಯಾಕ್‌ಅಪ್‌ ನೀಡಲಿದೆ ಎಂದು ಹೇಳಿದೆ. ಹಾಗಾದ್ರೆ ಡಿಜೊ ವಾಚ್‌ ಆರ್‌ ಟಾಕ್‌ ಗೋ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ವಾಚ್‌

ಡಿಜೊ ವಾಚ್ ಆರ್ ಟಾಕ್ ಗೋ ಸ್ಮಾರ್ಟ್‌ವಾಚ್‌ 1.39 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 360×360 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 550 ನಿಟ್ಸ್ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, ಇದು 7H ಟೆಂಪರ್ಡ್ ಗ್ಲಾಸ್ ಲೇಯರ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಅಲ್ಯೂಮಿನಿಯಂ ರಿಮ್‌ನೊಂದಿಗೆ ರೌಂಡ್ ಡಯಲ್ ಅನ್ನು ಹೊಂದಿದ್ದು, 'ಡಿಜೊ' ಮತ್ತು 'ಬಿ ಡಿಫರೆಂಟ್' ಕೆತ್ತನೆಗಳನ್ನು ಹೊಂದಿದೆ. ಇದಲ್ಲದೆ ಈ ವಾಚ್‌ನಲ್ಲಿ ಎರಡು ಔತಿಕ ಬಟನ್‌ಗಳನ್ನು ನೀಡಲಾಗಿದೆ. ಇದರಲ್ಲಿ ಒಂದು ಬಟನ್‌ ಹೋಮ್‌ ಬಟನ್‌ ಆಗಿದ್ದರೆ, ಮತ್ತೊಂದು ಬಟನ್‌ ಸ್ಪೋರ್ಟ್ಸ್‌ ಮೋಡ್‌ಗಳನ್ನು ಪ್ರವೇಶಿಸಲು ಅವಕಾಶ ನೀಡಲಿದೆ. ಇದು ಸ್ಥಿರ ಸಂಪರ್ಕ ಮತ್ತು ಕಡಿಮೆ ವಿದ್ಯುತ್ ಬಳಕೆಗಾಗಿ ಸಿಂಗಲ್-ಚಿಪ್ ಬ್ಲೂಟೂತ್ ಕಾಲ್‌ಗೆ ಬೆಂಬಲವನ್ನು ಕೂಡ ನೀಡಲಿದೆ.

ಬ್ಲೂಟೂತ್‌

ಇನ್ನು ಡಿಜೊ ವಾಚ್‌ ಆರ್‌ ಟಾಕ್‌ ಗೋ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಸಮಯದಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಸಹ ಬೆಂಬಲಿಸಲಿದೆ. ಇದಲ್ಲದೆ ಈ ವಾಚ್‌ ಹೆಲ್ತ್‌ಗೆ ಸಂಬಂಧಿಸಿದಂತೆ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಡ್ಯುಯಲ್ ಹೆಲ್ತ್ ಸೆನ್ಸರ್, 24×7 ಹೃದಯ ಬಡಿತ ಟ್ರ್ಯಾಕಿಂಗ್, SpO2 ಸೆನ್ಸಾರ್‌ ಮತ್ತು ಸ್ಲಿಪ್‌ ಟ್ರ್ಯಾಕಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಜಿಮ್ನಾಸ್ಟಿಕ್ಸ್, ಯೋಗ, ಹೈಕಿಂಗ್, ನೃತ್ಯ, ಸೈಕ್ಲಿಂಗ್, ವಾಕಿಂಗ್ ಸೇರಿದಂತೆ 110 ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ.

ವಾಚ್

ವಾಚ್ ಆರ್ ಟಾಕ್ ಗೋ ಮೂಲಕ ಬಳಕೆದಾರರು ತಮ್ಮ ದೈಹಿಕ ಚಟುವಟಿಕೆಗಳನ್ನು ಉತ್ತಮವಾಗಿ ಟ್ರ್ಯಾಕ್ ಮಾಡಬಹುದು. ಇದು ಅವಧಿ ಟ್ರ್ಯಾಕಿಂಗ್‌ ಅನ್ನು ಕೂಡ ಹೊಂದಿದ್ದು, ನೀರು ಕುಡಿಯುವುದು ಮತ್ತು ಕುಳಿತುಕೊಳ್ಳುವ ರಿಮೈಂಡರ್‌ಗಳನ್ನು ಕೂಡ ನೀಡಲಿದೆ. ಜೊತೆಗೆ ಇದು ಉಸಿರಾಟದ ವ್ಯಾಯಾಮವನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ ರೂಟ್ ಟ್ರ್ಯಾಕಿಂಗ್, ಅಲಾರಾಂ, ಮ್ಯೂಸಿಕ್‌/ಕ್ಯಾಮೆರಾ ಕಂಟ್ರೋಲ್‌, ಫೈಂಡ್‌ ಫೋನ್ , ವೆದರ್‌ ಅಪ್ಡೇಟ್‌ ಮತ್ತು GPS ನಂತಹ ಫೀಚರ್ಸ್‌ ಹೊಂದಿದೆ. ಇನ್ನು ಈ ಸ್ಮಾರ್ಟ್ ವಾಚ್ 300mAh ಬ್ಯಾಟರಿಯನ್ನು ಹೊಂದಿದೆ, ಇದು 10 ದಿನಗಳ ಬ್ಯಾಕ್‌ಅಪ್‌ ನೀಡಲಿದೆ. ಇದರ ಫುಲ್‌ ಚಾರ್ಜಿಂಗ್‌ ಸಮಯ 2 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಡಿಜೊ ವಾಚ್‌ ಆರ್‌ ಟಾಕ್‌ ಗೋ 3,999ರೂ. ಬೆಲೆಯನ್ನು ಹೊಂದಿದೆ. ಈ ವಾಚ್‌ ಫ್ಲಿಪ್‌ಕಾರ್ಟ್ ಮೂಲಕ ನವೆಂಬರ್ 30 ರಿಂದ ಲಭ್ಯವಿರುತ್ತದೆ. ಆದರೆ ಇದು ಲಾಂಚ್‌ ಆಫರ್‌ ನಲ್ಲಿ 3,499ರೂ. ಬೆಲೆಗೆ ಖರೀದಿಸಬಹುದು. ಇದು ಥಂಡರ್ ಬ್ಲೂ, ಕ್ಲಾಸಿಕ್ ಬ್ಲ್ಯಾಕ್ ಮತ್ತು ಸಿಲ್ವರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

Best Mobiles in India

English summary
Dizo Watch R Talk Go Launched in India: Price and Features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X