ವಿಮಾನಯಾನದಲ್ಲಿ ಏರ್‌ಪ್ಲೇನ್ ಮೋಡ್ ಯಾಕೆ ಆನ್‌ ಮಾಡಬೇಕು; ಇಲ್ಲಿದೆ ವಿವರ!

|

ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ಸೌಲಭ್ಯಗಳು ಲಭ್ಯ ಇದ್ದು, ಅವುಗಳನ್ನು ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಸಾಮಾನ್ಯ. ಅದಾಗ್ಯೂ ಕೆಲವು ಪ್ರಮುಖ ಸೌಲಭ್ಯಗಳು ವಿವಿಧ ರೀತಿಯಲ್ಲಿ ಅನುಕೂಲಕ್ಕೆ ಬರಲಿದ್ದು, ಅವುಗಳಲ್ಲಿ ಪ್ರಮುಖವಾದುದು ಎಂದರೆ ಏರ್‌ಪ್ಲೇನ್ ಮೋಡ್. ಈ ಏರ್‌ಪ್ಲೇನ್ ಮೋಡ್ ಫೀಚರ್ಸ್‌ ಬಳಕೆ ಮಾಡಿಕೊಂಡು ನಿಮ್ಮ ಫೋನ್‌ ಅನ್ನು ವೇಗವಾಗಿ ಚಾರ್ಜ್‌ ಆಗುವಂತೆ ಮಾಡಬಹುದು ಅಥವಾ ಕರೆ, ಹಾಗೂ ಇನ್ನಿತರೆ ಚಟುವಟಿಕೆಯಿಂದ ದೂರ ಇರಬಹುದು. ಆದರೆ, ಇದೆಲ್ಲಕ್ಕೂ ಮಿಗಿಲಾದ ಸೇವೆ ಬಗ್ಗೆ ಗೊತ್ತಾ!?

ವಿಮಾನಯಾನದಲ್ಲಿ ಏರ್‌ಪ್ಲೇನ್ ಮೋಡ್ ಯಾಕೆ ಆನ್‌ ಮಾಡಬೇಕು; ಇಲ್ಲಿದೆ ವಿವರ!

ಹೌದು, ಹೆಸರೇ ಸೂಚಿಸುವಂತೆ ಏರ್‌ಪ್ಲೇನ್ ಮೋಡ್ ಎಂಬುದು ವಿಮಾನಯಾನದ ಸಮಯದಲ್ಲಿ ಬಹುಮುಖ್ಯವಾಗಿ ಬಳಕೆ ಮಾಡಲಾಗುವ ಸೌಲಭ್ಯವಾಗಿದೆ. ಅಂತೆಯೇ ನೀವು ವಿಮಾನದಲ್ಲಿ ಸಂಚರಿಸುವ ವೇಳೆ ಅಲ್ಲಿನ ಸಿಬ್ಬಂದಿ ನಿಮ್ಮ ಮೊಬೈಲ್‌ ಅನ್ನು ಏರ್‌ಪ್ಲೇನ್ ಮೋಡ್‌ಗೆ ಇರಿಸಿ ಎಂದೂ ಸಹ ಕೇಳಿರಬಹುದು. ಹಾಗಿದ್ರೆ ಈ ಏರ್‌ಪ್ಲೇನ್ ಮೋಡ್‌ನಲ್ಲಿ ಮೊಬೈಲ್‌ ಅನ್ನು ಯಾಕೆ ಇರಿಸಬೇಕು?, ಇದರಿಂದ ಆಗುವ ಇನ್ನಿತರೆ ಪ್ರಯೋಜನ ಏನು ಎಂಬಿತ್ಯಾದಿ ವಿವರ ಇಲ್ಲಿದೆ ಓದಿರಿ.

ಏರ್‌ಪ್ಲೇನ್ ಮೋಡ್ ಎಂದರೇನು?
ನಿಮ್ಮ ಫೋನ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೆಟ್‌ವರ್ಕ್ ಸೆಟ್ಟಿಂಗ್‌ಗಳ ಮೂಲಕ ಏರ್‌ಪ್ಲೇನ್ ಮೋಡ್ ಅನ್ನು ಸಾಮಾನ್ಯವಾಗಿ ಪ್ರವೇಶಿಸಬಹುದು. ಅದು ಥೇಟ್ ಏರ್‌ಪ್ಲೇನ್ ಐಕಾನ್ ಅನ್ನೇ ಹೊಂದಿರುತ್ತದೆ. ಏರ್‌ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಲು ಅದರ ಮೇಲೆ ಟ್ಯಾಪ್ ಮಾಡಿದರೆ ಸಾಕು.

ಏರ್‌ಪ್ಲೇನ್ ಮೋಡ್ ಆನ್‌ ಮಾಡಿದ್ರೆ ಏನಾಗುತ್ತೆ?
ನೀವು ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿದಾಗ, ನಿಮ್ಮ ಡಿವೈಸ್‌ ಸೆಲ್ಯುಲಾರ್ ಸಂಕೇತಗಳನ್ನು ರವಾನಿಸುವುದನ್ನು ನಿಲ್ಲಿಸುತ್ತದೆ. ಪರಿಣಾಮ ನಿಮ್ಮ ಸೆಲ್ಯುಲಾರ್ ನೆಟ್‌ವರ್ಕ್‌ನಿಂದ ನೀವು ಕರೆಗಳು ಅಥವಾ ಸಂದೇಶವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ನಿಮ್ಮ ವೈ ಫೈ ಸಹ ಈ ಆಯ್ಕೆಯನ್ನು ಆಫ್‌ ಆಗುತ್ತದೆ. ಅದಾಗ್ಯೂ ನೀವು ವೈಫೈ ನೆಟ್‌ವರ್ಕ್‌ಗೆ ಪ್ರವೇಶವನ್ನು ಹೊಂದಿದ್ದರೆ, ನೀವು ವೈಫೈ ಅನ್ನು ಮತ್ತೆ ಆನ್ ಮಾಡಬಹುದು ಮತ್ತು ಏರ್‌ಪ್ಲೇನ್ ಮೋಡ್‌ನಲ್ಲಿದ್ದರೂ ಸಹ ನಿಮ್ಮ ಡಿವೈಸ್‌ನಲ್ಲಿ ಇಂಟರ್ನೆಟ್ ಬಳಸುವುದನ್ನು ಮುಂದುವರಿಸಬಹುದು.

ವಿಮಾನಯಾನದಲ್ಲಿ ಏರ್‌ಪ್ಲೇನ್ ಮೋಡ್ ಯಾಕೆ ಆನ್‌ ಮಾಡಬೇಕು; ಇಲ್ಲಿದೆ ವಿವರ!

ವಿಮಾನದಲ್ಲಿದ್ದಾಗ ಏರ್‌ಪ್ಲೇನ್ ಮೋಡ್ ಯಾಕೆ ಆನ್‌ ಮಾಡಬೇಕು?
ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್‌ಗಳಿಂದ ಹೊರಸೂಸುವ ಸಿಗ್ನಲ್‌ಗಳು ವಿಮಾನದ ಸಂವಹನ ವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸುತ್ತವೆ. ಸೆಲ್ಯುಲಾರ್ ಸಂಪರ್ಕವನ್ನು ಹೊಂದಿರುವ ಎಲೆಕ್ಟ್ರಾನಿಕ್ ಡಿವೈಸ್‌ಗಳು ಶಕ್ತಿಯುತ ರೇಡಿಯೋ ತರಂಗಗಳನ್ನು ಮತ್ತು ವಿದ್ಯುತ್ಕಾಂತೀಯ ಹಸ್ತಕ್ಷೇಪವನ್ನು ಹೊರಸೂಸುತ್ತವೆ. ಇದು ವಿಮಾನದ ಸಂಚಾರಕ್ಕೆ ಭಾರೀ ಅಡಚಣೆ ಉಂಟು ಮಾಡುತ್ತದೆ.

ಹಾಗೆಯೇ ಪೈಲಟ್‌ ತಮ್ಮ ನಿಯಂತ್ರಣವನ್ನು ಕಳೆದುಕೊಂಡು ಲ್ಯಾಂಡಿಂಗ್‌ ಮಾಡುವಾಗ ಅಥವಾ ಟೇಕ್ಆಫ್‌ ಮಾಡುವಾಗ ಭಾರೀ ತೊಂದರೆ ಎದುರಿಸಬೇಕಾಗುತ್ತದೆ. ಈ ಮೂಲಕ ಅವರು ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ ಸಂಪರ್ಕ ಕಡಿತವಾಗುತ್ತದೆ.

ಪ್ರತಿದಿನ ಲಕ್ಷಾಂತರ ಜನರು ವಿಮಾನದಲ್ಲಿ ಪ್ರಯಾಣಿಸುವುದರಿಂದ ಆ ಎಲ್ಲಾ ಫೋನ್ ಸಿಗ್ನಲ್‌ಗಳ ಸಾಮೂಹಿಕ ಪರಿಣಾಮವು ತುಂಬಾ ಅಗಾಧವಾಗಿರುತ್ತದೆ. ಪಿದರಿಂದಾಗಿ ಫ್ಲೈಟ್ ಅಟೆಂಡೆಂಟ್‌ಗಳು ಯಾವಾಗಲೂ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಲು ಕೇಳುತ್ತಾರೆ.

ವಿಮಾನಯಾನದಲ್ಲಿ ಏರ್‌ಪ್ಲೇನ್ ಮೋಡ್ ಯಾಕೆ ಆನ್‌ ಮಾಡಬೇಕು; ಇಲ್ಲಿದೆ ವಿವರ!

ಇದರೊಂದಿಗೆ ಸಾಮಾನ್ಯವಾಗಿ ದಿನನಿತ್ಯವೂ ಹಲವಾರು ಜನರು ಮನೆಯಲ್ಲಿರುವಾಗಲೂ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ನಿಖರ ಕಾರಣ ಎಂದರೆ ವೇಗದ ಚಾರ್ಜ್‌ಗಾಗಿ. ಹೌದು, ನಿಮ್ಮ ಸ್ಮಾರ್ಟ್‌ ಡಿವೈಸ್‌ ಅನ್ನು ಏರ್‌ಪ್ಲೇನ್ ಮೋಡ್‌ ನಲ್ಲಿ ಇರಿಸಿ ಚಾರ್ಜ್‌ಗೆ ಇಡುವುದರಿಂದ ಬೇಗ ಚಾರ್ಜ್ ಆಗುವುದರೊಂದಿಗೆ ದೀರ್ಘವಾದ ಬ್ಯಾಟರಿ ಬ್ಯಾಕಪ್‌ ನೀಡುವುದರಲ್ಲಿ ಸಂಶಯವಿಲ್ಲ.

ಹಾಗೆಯೇ ದಿನನಿತ್ಯವೂ ಜಂಜಾಟದಲ್ಲೇ ಮುಳುಗಿ ಸ್ವಲ್ಪ ಕಾಲ ವಿರಾಮ ಬೇಕು ಎಂದರೆ ಏರ್‌ಪ್ಲೇನ್ ಮೋಡ್‌ ಅನ್ನು ಸಕ್ರಿಯಗೊಳಿಸಬಹುದು. ಇದರಿಂದ ನಿಮ್ಮ ಸ್ಮಾರ್ಟ್‌ಡಿವೈಸ್ ಗೆ ಬರುವ ಕರೆಗಳು ಹಾಗೂ ಮೆಸೆಜ್‌ ಜೊತೆಗೆ ಇನ್ನಿತರೆ ಮಾಹಿತಿ ಆ ವೇಳೆ ಬಾರದೆ ಇರುವುದರಿಂದ ನೆಮ್ಮದಿಯಾಗಿ ನಿಮ್ಮ ಸಮಯ ಕಳೆಯಬಹುದು. ಜೊತೆಗೆ ಅನವಶ್ಯಕ ಕರೆಗಳಿಂದ ಪಾರಾಗಬಹುದು.

Best Mobiles in India

English summary
Airplane mode must be turned on while flying. Detailed information about this is given in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X