ಗೂಗಲ್ ನ ಸೆಲ್ಫ್ ಡ್ರೈವಿಂಗ್ ಕಾರುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ

|

ಗೂಗಲ್ ನ ಡ್ರೈವರ್ ಲೆಸ್ ಕಾರುಗಳು ಬಿಡುಗಡೆಗೊಂಡ ನಂತರ ಅವು ಯಾರಿಗೂ ಆಕ್ಸಿಡೆಂಟ್ ಮಾಡದಂತೆ ಚಲಿಸುವಾಗ, ಭಯಾನಕ ಟ್ರಾಫಿಕ್ ನಲ್ಲೂ ಸುಲಭದಲ್ಲಿ ಚಲಿಸುವಾಗ ಖಂಡಿತ ನೀವು ಧನ್ಯವಾದ ಸಲ್ಲಿಸುತ್ತೀರಿ. ಈ ಗೂಗಲ್ ಕಾರುಗಳನ್ನು ಸದ್ಯ Waymo ಕಾರುಗಳು ಎಂದು ಕರೆಯಲಾಗುತ್ತಿದೆ. ಮುಂದಿರುವ ರೋಡು ಮತ್ತು ಇತರೆ ಎಲ್ಲದನ್ನೂ ನೋಡುವುದಕ್ಕಾಗಿ ಹೀಗೆ ಕರೆಯಲಾಗುತ್ತಿದೆ. ಈ ಕಾರುಗಳು ಗೂಗಲ್ ನ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಇಂಜಿನಿಯರ್ ಗಳ ಜಾಣ್ಮೆಗೆ ಹಿಡಿದ ಕೈಗನ್ನಡಿಯಾಗಿದೆ.

ಗೂಗಲ್ ನ ಸೆಲ್ಫ್ ಡ್ರೈವಿಂಗ್ ಕಾರುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ

ಇಷ್ಟೆಲ್ಲ ಕಥೆ ಯಾಕೆ ಹೇಳುತ್ತಿದ್ದೇವೆ ಎಂದು ಆಶ್ಚರ್ಯವಾಗುತ್ತಿದೆಯಾ? ಪ್ರತಿ ಬಾರಿ ನೀವು ಆನ್ ಲೈನ್ ನಲ್ಲಿ ಏನನ್ನಾದರೂ ಲಾಗಿನ್ ಮಾಡುವಾಗ ಅಥವಾ ಕೆಲಸ ಮಾಡುವಾಗ ಕ್ಯಾಪ್ಚಾ ಬರುತ್ತದೆ. ಗೂಗಲ್ ಪ್ರತಿದಿನ ಸಾವಿರಾರು ವೆಬ್ ಸೈಟ್ ಗಳಿಗೆ ಕ್ಯಾಪ್ಚಾವನ್ನು ಸಪ್ಲೈ ಮಾಡುತ್ತದೆ. ನಾವು ಮಾತನಾಡುತ್ತಿರುವ ಗೂಗಲ್ ನ ಡ್ರೈವರ್ ಇಲ್ಲದ ಕಾರು ಕೂಡ ಇದೇ ರೀತಿಯ ತಂತ್ರಗಾರಿಕೆಯನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಕಾರಿನ ಚಾಲನೆ ಅಳವಡಿಸಲಾಗಿರುವ ಕ್ಯಾಪ್ಚಾ ತಂತ್ರಗಾರಿಕೆಯಿಂದ ಕಾರ್ಯ ನಿರ್ವಹಿಸುತ್ತದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಾರ್ಯ ನಿರ್ವಹಿಸಲು ನಿಮ್ಮ ಜ್ಞಾನ ಕೂಡ ಮುಖ್ಯವಾಗುತ್ತದೆ.

ಕ್ಯಾಪ್ಚಾವನ್ನು ಗೂಗಲ್ ಹೇಗೆ ಬಳಸುತ್ತದೆ ಎಂದು ತಿಳಿಸುವ ಮುನ್ನ ಈ ಕ್ಯಾಪ್ಚಾ ಬಗೆಗಿನ ಇತಿಹಾಸವನ್ನು ತಿಳಿದುಕೊಳ್ಳೋಣ. ಗೂಗಲ್ ಇದನ್ನು ಆರಂಭಿಸಿದ್ದು ಹೇಗೆ ಎಂಬುದು ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿದೆ.

ಕ್ಯಾಪ್ಚಾ ಇತಿಹಾಸ ಹೀಗಿದೆ:

ಕ್ಯಾಪ್ಚಾ ಇತಿಹಾಸ ಹೀಗಿದೆ:

ಸದ್ಯ ಕಾಪ್ಚಾವನ್ನು ಬಳಸುತ್ತಿರುವಂತೆ ಮೊದಲು ಕ್ಯಾಪ್ಚಾ ಬಳಕೆ ಇರಲಿಲ್ಲ. ಅಂದಾಜು 2000 ನೇ ಇಸವಿ ಆರಂಭವದಲ್ಲಿ ಇದನ್ನು ಕಾರ್ನೆಗಿ ಮೆಲಾನ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದರು ಮತ್ತು ಈ ತಂಡವನ್ನು ಕಂಪ್ಯೂಟರ್ ವಿಜ್ಞಾನಿಯಾಗಿದ್ದು ಲೂಯಿಸ್ ವೊನ್ ಅಹಾನ್ ಅಥವಾ ಬಿಗ್ ಲೋ ಮುನ್ನೆಡೆಸಿದ್ದರು.

ಮನುಷ್ಯರು ಮಾಡುವಂತೆ ರೋಬೊಟ್ ಗಳು ಅಕ್ಷರಗಳ ಗುಂಪನ್ನು ಓದುವುದಕ್ಕೆ ಸಾಧ್ಯವಿಲ್ಲ ಅದಕ್ಕೊಂದು ಪರಿಹಾರ ಬೇಕು ಎಂಬ ನಿಟ್ಟಿನಲ್ಲಿ ಆರಂಭವಾದ ಅಧ್ಯಯನವು ಕ್ಯಾಪ್ಚಾ ಸಂಶೋಧನೆಗೆ ಕಾರಣವಾಯ್ತು. ಲಾಜಿಕ್ ಗಳ ವಿಚಾರದಲ್ಲಿ ಬೋಟ್ಸ್ ಬಹಳ ಬುದ್ಧಿವಂತರಾಗಿದ್ದರು.ಮನುಷ್ಯರು ಅಬ್ಸ್ಟ್ರಾಕ್ಟ್ ಗಳ ವಿಚಾರದಲ್ಲಿ ಬುದ್ಧಿ ಇರುವವರು ಮತ್ತು ಪ್ರಿಂಟ್ ಆಗಿರುವ ಅಕ್ಷರಗಳು, ಇಮೇಜ್ ಗಳು ,ಇಮೇಜ್ ಗಳನ್ನು ಸುಲಭದಲ್ಲಿ ಗುರುತಿಸಿಬಿಡುತ್ತಾರೆ. ವೆಬ್ ಸೈಟ್ ನಲ್ಲಿ ಪ್ರವೇಶ ಪಡೆಯಲು ಮನುಷ್ಯರಿಗೆ ಗೊಂದಲಕ್ಕೀಡು ಮಾಡುವಂತ ಸಂಕೇತಗಳನ್ನು ಅವರು ಕಂಡುಹಿಡಿಯುತ್ತಾರೆ.

ಅದೇ ಕಾರಣಕ್ಕೆ ಹುಟ್ಟಿದ ಕ್ಯಾಪ್ಚಾ ಸದ್ಯ ವಿಶ್ವದಾದ್ಯಂತ ಭದ್ರತಾ ದೃಷ್ಟಿಕೋನದಲ್ಲಿ ಬಳಸಲಾಗುತ್ತಿದೆ. ಹೆಚ್ಚು ಕಡಿಮೆ ಎಲ್ಲಾ ಆನ್ ಲೈನ್ ಪೋರ್ಟಲ್ ಗಳು ಬಳಸುತ್ತವೆ.

 ಗೂಗಲ್ ಬುಕ್ಸ್ ಪ್ರೊಜೆಕ್ಟ್ ಗೆ ಇದನ್ನು ಬಳಸಿದೆ.

ಗೂಗಲ್ ಬುಕ್ಸ್ ಪ್ರೊಜೆಕ್ಟ್ ಗೆ ಇದನ್ನು ಬಳಸಿದೆ.

2009 ರಲ್ಲಿ ತನ್ನ ಪುಸ್ತಕದ ಸ್ಕ್ಯಾನಿಂಗ್ ಪ್ರೊಜೆಕ್ಟ್ ಗಾಗಿ ಈ ತಂತ್ರಗಾರಿಕೆಯನ್ನು ಗೂಗಲ್ ಬಳಸಿದೆ. ಯಾಕೆಂದರೆ ಈ ತಂತ್ರಗಾರಿಕೆಯಿಂದ ಗೂಗಲ್ ಸಾಕಷ್ಟು ಪ್ರಭಾವಿತವಾಗಿತ್ತು. ಇದೇ ಕಾರಣಕ್ಕೆ ಟೆಕ್ಸ್ಟ್ ಅಥವಾ ಪಝಲ್ ಗೇಮ್ ನಂತೆ ಇದು ಗೋಚರಿಸುತ್ತದೆ. ನಿಮಗೆ ತಿಳಿದಿರುವಂತೆ ಕ್ಯಾಪ್ಚಾ ಅನ್ನುವುದು ನಂಬರ್ ಮತ್ತು ಟೆಕ್ಸ್ಟ್ ಗಳ ಮಿಶ್ರಣವಾಗಿರುತ್ತದೆ. ನೀವು ಅದನ್ನು ಗುರುತಿಸಿ ಬರೆಯಬೇಕಾಗುತ್ತದೆ.

ಕ್ಯಾಪ್ಚಾ ಸಹಾಯದಿಂದಾಗಿ 2011 ರಲ್ಲಿ ಗೂಗಲ್ ಅದೆಷ್ಟೋ ಮಿಲಿಯನ್ ಗಟ್ಟಲೆ ಪುಸ್ತಕವನ್ನು ಡಿಜಿಟೈಜ್ ಮಾಡಲು ಗೂಗಲ್ ಸಾಧ್ಯವಾಯಿತು. ಬುಕ್ ಸ್ಕ್ಯಾನಿಂಗ್ ಪ್ರೊಜೆಕ್ಟ್ ಮುಗಿಯುತ್ತಾ ಬಂದಂತೆ ಗೂಗಲ್ ಎಐ ತಂತ್ರಗಾರಿಕೆಯ ಮುಂದಿನ ಅವತರಣಿಕೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಿತು ಮತ್ತು ನೀವು ಈಗಾಗಲೇ ಓದಿರಬಹುದು ಗೂಗಲ್ ಬೆಕ್ಕುಗಳನ್ನು ತನ್ನಷ್ಟಕ್ಕೆ ತಾನೇ ಎಐ ತಂತ್ರಗಾರಿಕೆ ಮೂಲಕ ಕಂಪ್ಯೂಟರ್ ಗಳು ಗುರುತಿಸುವಂತೆ ಮಾಡುವ ಪ್ರಯತ್ನದಲ್ಲಿದೆ ಎಂಬ ಸುದ್ದಿಯನ್ನು.

ಇದೀಗ ಗೂಗಲ್ ಎಐ ಮೂಲಕ ಡಾಬರ್ ಮೆನ್ ನಿಂದ ಹಿಡಿದು ಗೋಲ್ಡನ್ ರಿಟ್ರೀವರ್ ವರೆಗೆ ಯಾವುದು ಎಂಬುದನ್ನು ಎಐ ಮೂಲಕ ಗುರುತಿಸುವ ತಂತ್ರಗಾರಿಕೆಯನ್ನು ಅಳವಡಿಸಿದೆ. 2012 ರಲ್ಲಿ ಕ್ಯಾಪ್ಚಾ ಮಾದರಿಯನ್ನು ಗೂಗಲ್ ಸ್ವಲ್ಪ ಬದಲಾವಣೆ ಮಾಡಿತ್ತು ಮತ್ತು ಅದರಲ್ಲಿ ಇಮೇಜ್ ಗಳನ್ನು ಸೇರಿಸುವುದಕ್ಕೆ ಪ್ರಯತ್ನಿಸಿ ರಿಕ್ಯಾಪ್ಚಾ ಕೋಡ್ ಗಳನ್ನು ನಸೇರಿಸಿತು. ಮೊದಲು ಟೆಕ್ಸ್ಟ್ ನಿಂದ ಆರಂಭವಾದ ಇದು ನಂತರ ಮನುಷ್ಯರು ಎಲ್ಲಿದ್ದಾರೆ ಗುರುತಿಸಿ ಎಂಬ ಮಟ್ಟಕ್ಕೆ ಈ ತಂತ್ರಗಾರಿಕೆ ಬೆಳೆದು ನಿಂತಿತು. 2014 ರಲ್ಲಿ ಮಾಡ್ಯುಫೈಯ್ಡ್ ವರ್ಷನ್ ನ್ನು ಗೂಗಲ್ ಪುನಃ ಪರಿಚಯಿಸಿತು.

ಇಮೇಜ್ ಗಳು ರ್ಯಾಡಂ ಆಗಿ ಇರುತ್ತದ್ದವು ಅಂತರ್ಜಾಲದ ಬಳಕೆದಾರರಿಗೆ ಅದೇ ರೀತಿಯ ಇಮೇಜ್ ನ್ನು ಗುರುತಿಸುವುದಕ್ಕೆ ತಿಳಿಸಲಾಗುತ್ತಿತ್ತು. ಬೆಕ್ಕು, ಮರಗಳು, ರಿಯಲ್ ಮನುಷ್ಯರು ಯಾರು ಇತ್ಯಾದಿ ರೀತಿಯಲ್ಲಿ ಇದರ ತಂತ್ರಗಾರಿಕೆ ಇರುತ್ತಿತ್ತು.

ಚಾಲಕ ರಹಿತ ಕಾರು

ಚಾಲಕ ರಹಿತ ಕಾರು

ಇತ್ತೀಚಿನ ವರ್ಷಗಳಲ್ಲಿ ಚಾಲಕ ರಹಿತ ಕಾರುಗಳ ಅನ್ವೇಷಣೆಯಲ್ಲಿ ಗೂಗಲ್ ನಿರತವಾಗಿದ್ದು ಇದೇ ಕ್ಯಾಪ್ಚಾ ತಂತ್ರಗಾರಿಕೆಯನ್ನು ಅದರಲ್ಲಿ ಅಳವಡಿಸಲಾಗುತ್ತಿದೆ. ಎಐ ಮತ್ತು ಮಷೀನ್ ಲರ್ನೀಂಗ್ ಸಿಸ್ಟಮ್ ಗಳನ್ನು ಇದರಲ್ಲಿ ಅಳವಡಿಸಲಾಗುತ್ತಿದೆ. ರೋಡಿನಲ್ಲಿ ವೆಹಿಕಲ್ ಗಳು ಎಲ್ಲಿವೆ, ಮನುಷ್ಯರು ಎಲ್ಲಿದ್ದಾರೆ, ರೋಡಿನ ಆಕಾರ, ಪ್ರಸ್ತುತ ಸ್ಥಿತಿಗತಿಯನ್ನು ಸ್ವಯಂಚಾಲಿತವಾಗಿ ಕಾರು ಗುರುತಿಸಿ ಚಾಲನೆಗೊಳ್ಳಲು ಅಳವಡಿಸಲಾಗುತ್ತಿರುವ ತಂತ್ರಜ್ಞಾನ ಇದಾಗಿದೆ.

ಈ ಕಲ್ಪನೆಗೆ ಸಾಕಾರ ರೂಪ ಸಿಕ್ಕಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಆದರೆ ಅದರ ರೂಪುರೇಷೆ ಈಗಾಗಲೇ ಸಂಪೂರ್ಣಗೊಂಡಿದ್ದು ಮನುಷ್ಯನ ಅನ್ವೇಷಣೆಯ ಮಿತಿ ಎಲ್ಲೆ ಮೀರುವಂತಿದೆ ಎಂದರೆ ಅತಿಶಯೋಕ್ತಿ ಆಗಲಾರದು.

Best Mobiles in India

Read more about:
English summary
Do you know you are training Google self-driving cars so they don’t kill people? Yes, by solving captcha

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X